50 ವರ್ಷಗಳ ಹಿಂದಿನ 120 ಗಂಟೆಗಳ ಹಸಿವಿನ ಕರಾಳ ಅನುಭವ ಹಂಚಿಕೊಂಡ ಇನ್ಫೋಸಿಸ್ ನಾರಾಯಣ ಮೂರ್ತಿ

ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಾರಾಯಣ ಮೂರ್ತಿ 50 ವರ್ಷಗಳ ಹಿಂದೆ ಯುರೋಪಿನಲ್ಲಿ ತಮಗಾದ ಹಸಿವಿನ ಅನುಭವ ಹಂಚಿಕೊಂಡಿದ್ದಾರೆ. 
 

Infosys founder Narayana Murthy Shares His Hitchhiking Experience 50 Years Ago Recounts Experience of Hunger anu

ನ್ಯೂಯಾರ್ಕ್ (ಏ.4): ಇನ್ಫೋಸಿಸ್ ಸಂಸ್ಥಾಪಕ ಎನ್.ನಾರಾಯಣ ಮೂರ್ತಿ 50 ವರ್ಷಗಳ ಹಿಂದೆ ಯುರೋಪಿಗೆ ತೆರಳಿದ್ದ ಸಂದರ್ಭದಲ್ಲಿ ಸತತ120 ಗಂಟೆಗಳ ಕಾಲ ಹಸಿವಿನಿಂದ ಒದ್ದಾಡಿದ್ದ ಪ್ರಸಂಗವನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಮೆರಿಕದ ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಆಯೋಜಿಸಿದ್ದ ಆಹಾರ ಭದ್ರತೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಹಳೆಯ ಪ್ರಸಂಗವನ್ನು ಮೂರ್ತಿ ಮೆಲುಕು ಹಾಕಿದ್ದಾರೆ. ಈ ಕಾರ್ಯಕ್ರಮವನ್ನು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಮಿಷನ್ ಮಂಗಳವಾರ ಆಯೋಜಿಸಿತ್ತು. ಸರ್ಕಾರದ ಆರ್ಥಿಕ ನೀತಿಗಳು, ಮುಂದಾಲೋಚನೆಯ ಯಶಸ್ಸಿನ ಕಾರಣಕ್ಕೆ ಹಾಗೂ ಭಾರತೀಯ ಉದ್ಯಮಿಗಳ ಮತ್ತು ನಾಗರಿಕರ ಕಠಿಣ ಪರಿಶ್ರಮದಿಂದ ಭಾರತ ಉತ್ತಮ ಆರ್ಥಿಕ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಬಹುರಾಷ್ಟ್ರೀಯ ಕಂಪನಿಗಳಿಂದ ವಿದೇಶಿ ನೇರ ಹೂಡಿಕೆ ಕೂಡ ಭಾರತದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಭಾರತ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ  (PMGKAY) ಎಂಬ ವಿಶ್ವದ ಅತೀದೊಡ್ಡ ಆಹಾರ ಭದ್ರತೆ ಕಾರ್ಯಕ್ರಮವನ್ನು ಮುನ್ನಡೆಸುತ್ತಿದೆ. ಈ ಯೋಜನೆಯಿಂದ 800 ಮಿಲಿಯನ್ ಗಿಂತಲೂ ಅಧಿಕ ಜನರಿಗೆ ಪ್ರಯೋಜನವಾಗಿದೆ ಎಂದು ನಾರಾಯಣ ಮೂರ್ತಿ ಈ ಸಂದರ್ಭದಲ್ಲಿ ತಿಳಿಸಿದರು. ಇನ್ನು ಈ ಕಾರ್ಯಕ್ರಮದ ಭಾಗವಾಗಿರುವ ಶಾಲಾಮಕ್ಕಳಿಗೆ ಆಹಾರ ಒದಗಿಸುವ ಪಿಎಂ ಪೋಷನ್ (ಪೋಷನ್ ಶಕ್ತಿ ನಿರ್ಮಾನ್ ) ಯೋಜನೆ 118 ಶತಕೋಟಿ ಮಕ್ಕಳಿಗೆ ನೇರವಾಗಿ ಪ್ರಯೋಜನ ನೀಡುತ್ತಿದೆ ಎಂದು ತಿಳಿಸಿದರು.

ಮೊಮ್ಮಗನಿಗೆ 243 ಕೋಟಿ ಮೌಲ್ಯದ ಇನ್ಫಿ ಷೇರು ಉಡುಗೊರೆ ಕೊಟ್ಟ ನಾರಾಯಣಮೂರ್ತಿ, 4ತಿಂಗಳ ಮಗುವೀಗ ಮಿಲಿಯನೇರ್!

ಇನ್ನು ಈ ಕಾರ್ಯಕ್ರಮದಲ್ಲಿ ಅಕ್ಷಯ ಪಾತ್ರ ಯೋಜನೆ ಬಗ್ಗೆ ಪ್ರಸ್ತಾಪಿಸಿದ ನಾರಾಯಣ ಮೂರ್ತಿ, ಇದು ಭಾರತ ಸರ್ಕಾರದ ಶಾಲಾ ಮಕ್ಕಳಿಗೆ ಆಹಾರ ಒದಗಿಸುವ ಯೋಜನೆಯ ಹೆಮ್ಮೆಯ ಸೇರ್ಪಡೆಯಾಗಿದೆ ಎಂದು ತಿಳಿಸಿದರು. ಇಸ್ಕಾನ್​ನ ಅಕ್ಷಯ ಪಾತ್ರ 400 ಕೋಟಿ ಊಟ ಸರಬರಾಜು ಮಾಡಿದ ಮೈಲಿಗಲ್ಲು ಸ್ಥಾಪಿಸಿದೆ ಎಂದು ನಾರಾಯಣ ಮೂರ್ತಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

ಅಕ್ಷಯ ಪಾತ್ರ ಫೌಂಡೇಷನ್  400 ಕೋಟಿ ಊಟ ಸರಬರಾಜು ಮಾಡಿದ ಮೈಲಿಗಲ್ಲು ಸ್ಥಾಪಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಹಾರ ಭದ್ರತೆ ಹಾಗೂ ಪೌಷ್ಟಿಕಾಂಶ ವಿಚಾರದಲ್ಲಿ ಭಾರತದ ನಿತಿಗಳು, ಯೋಜನೆಗಳು ಹಾಗೂ ಸಾಧನೆಗಳನ್ನು ಅನಾವರಣ ಮಾಡಲಾಯಿತು. ಹಾಗೆಯೇ ಶೂನ್ಯ ಹಸಿವಿನ ಗುರಿಯನ್ನು ಹೊಂದುವ ನಿಟ್ಟಿನಲ್ಲಿ ಭಾರತ ಕಾರ್ಯಪ್ರವೃತ್ತವಾಗಿದೆ ಎಂಬ ವಿಚಾರವನ್ನು ತಿಳಿಸಲಾಯಿತು.

'ನಿಮ್ಮಲ್ಲಿ ಬಹುತೇಕರಿಗೆ ಹಸಿವಿನ ಅನುಭವ ಆಗದೇ ಇರಬಹುದು. ಆದರೆ, ನನಗೆ ಈ ಅನುಭವ ಆಗಿದೆ. 50 ವರ್ಷಗಳ ಹಿಂದೆ ಯುರೋಪಿನ ನಿಶಾ ಎಂಬ ಪ್ರದೇಶದಲ್ಲಿ 120 ಗಂಟೆಗಳ ಕಾಲ ಸತತ ಹಸಿವಿನಿಂದ ಬಳಲಿದ್ದೆ. ಈ ನಗರ ಬಲ್ಗೇರಿಯಾ ಹಾಗೂ ಆಗಿನ ಯುಗೊಸ್ಲಾವಿಯ ಹಾಗೂ ಈಗಿನ ಸರ್ಬಿಯಾದ ನಡುವೆ ಇದೆ' ಎಂದು ಮೂರ್ತಿ ತಿಳಿಸಿದರು. 

ಬೆಂಗಳೂರಿನಲ್ಲಿ ಮಗಳು ಅಕ್ಷತಾ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ನಾರಾಯಣ ಮೂರ್ತಿ; ಸರಳತೆ ಮೆಚ್ಚಿದ ನೆಟ್ಟಿಗರು

'ಇಲ್ಲಿರುವ ಬಹುತೇಕ ಭಾರತೀಯರಿಗೆ ಹಾಗೂ ನನಗೆ ಭಾರತ ಸರ್ಕಾರದಿಂದ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಶಿಕ್ಷಣ ಸಿಕ್ಕಿದೆ. ಹೀಗಾಗಿ ನಾಗರಿಕ ಸಮಾಜದ ಭಾಗವಾಗಿರುವ ನಾವು ನಮ್ಮ ದೇಶಕ್ಕೆ ಋಣಿಯಾಗಿರೋದು ಅಗತ್ಯ. ಅದಕ್ಕಾಗಿ ಅಸಹಾಯಕ ಹಾಗೂ ಬಡಮಕ್ಕಳಿಗೆ ಶಿಕ್ಷಣ ಉತ್ತಮ ಶಿಕ್ಷಣ ಸಿಗುವಂತೆ ಮಾಡುವ ಮೂಲಕ ಭವಿಷ್ಯದ ತಲೆಮಾರಿಗೆ ನೆರವಾಗಬೇಕು' ಎಂದು ನಾರಾಯಣಮೂರ್ತಿ ಒತ್ತಾಯಿಸಿದ್ದಾರೆ. 

ಅಸಹಾಯಕ ಜನರ ಮೊಗದಲ್ಲಿ ನಗು ತರುವುದೇ ನಿಜವಾದ ಯಶಸ್ಸು. ಈ ವಿಷಯದಲ್ಲಿ ಅಕ್ಷಯ ಪಾತ್ರ ಯಶಸ್ಸು ಸಾಧಿಸಿದೆ. ಈ ಮಾದರಿಯನ್ನು ವಿಶ್ವಸಂಸ್ಥೆ ಕೂಡ ಅನುಸರಿಸಬಹುದು ಎಂದು ಈ ಸಂದರ್ಭದಲ್ಲಿ ಮೂರ್ತಿ ಸಲಹೆ ನೀಡಿದರು. 

Latest Videos
Follow Us:
Download App:
  • android
  • ios