Asianet Suvarna News Asianet Suvarna News

ಬೆಂಗಳೂರಿನಲ್ಲಿ ಮಗಳು ಅಕ್ಷತಾ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ನಾರಾಯಣ ಮೂರ್ತಿ; ಸರಳತೆ ಮೆಚ್ಚಿದ ನೆಟ್ಟಿಗರು

ಇನ್ಫೋಸಿಸ್‌ನ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಕುಟುಂಬ ತಮ್ಮ ಸರಳ ಜೀವನಕ್ಕೆ ಹೆಸರುವಾಸಿಯಾಗಿದೆ. ಹಾಗೆಯೇ ಇತ್ತೀಚಿಗೆ ಬೆಂಗಳೂರಿನಲ್ಲಿ ಮಗಳು ಅಕ್ಷತಾ ಜೊತೆ ನಾರಾಯಣ ಮೂರ್ತಿ ಐಸ್ ಕ್ರೀಮ್ ಸವಿಯುತ್ತಿರುವ ಫೋಟೋ ವೈರಲ್ ಆಗಿದೆ. ಇಬ್ಬರ ಸರಳತೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

Narayana Murthy enjoys ice cream with daughter Akshata Akshata Murty in Bengaluru, photo viral Vin
Author
First Published Feb 13, 2024, 10:20 AM IST

ನಾರಾಯಣ ಮೂರ್ತಿ ಅವರು 695000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಬಿಲಿಯನೇರ್ ಸಂಸ್ಥಾಪಕರಾಗಿದ್ದಾರೆ. ನಾರಾಯಣ ಮೂರ್ತಿ, ತಮ್ಮ ಬುದ್ಧಿವಂತಿಕೆ, ಲೋಕೋಪಕಾರ ಮತ್ತು ಸಿದ್ಧಾಂತಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ವ್ಯತ್ಯಸ್ಥ ಅಭಿಪ್ರಾಯಗಳು ಮತ್ತು ವ್ಯವಹಾರದ ವಿಚಾರಕ್ಕಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ ಇತ್ತೀಚಿಗೆ ಅವರು ಟ್ರೆಂಡಿಂಗ್‌ನಲ್ಲಿರೋದು ತಮ್ಮ ಸರಳತೆಯಿಂದಾಗಿ.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಮಗಳು,  ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿಯೊಂದಿಗೆ ಬೆಂಗಳೂರಿನ ಜನಪ್ರಿಯ ಐಸ್‌ಕ್ರೀಂ ಜಾಯಿಂಟ್‌ನಲ್ಲಿ ಐಸ್‌ಕ್ರೀಂ ಸವಿಯುವ ಫೋಟೋ ವೈರಲ್ ಆಗಿದೆ.

ಅಳಿಯನೊಂದಿಗೆ ನಿಕಟ ಸಂಬಂಧವಿದೆ, ಅದು ಅಲ್ಲಿಯೇ ನಿಲ್ಲುತ್ತದೆ ಎಂದ ಇನ್ಫಿ ನಾರಾಯಣಮೂರ್ತಿ

ಜಯನಗರದಲ್ಲಿ ಐಸ್‌ಕ್ರೀಂ ಸವಿದ ನಾರಾಯಣಮೂರ್ತಿ-ಅಕ್ಷತಾ ಮೂರ್ತಿ
ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಕುಟುಂಬ ತಮ್ಮ ಸರಳ ಜೀವನಕ್ಕೆ ಹೆಸರುವಾಸಿಯಾಗಿದೆ. ಮಕ್ಕಳಾದ ಅಕ್ಷತಾ ಮೂರ್ತಿ, ರೋಹನ್ ಮೂರ್ತಿ ಸಹ ತಮ್ಮ ಸಿಂಪ್ಲಿಸಿಟಿ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಯಾವಾಗಲೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಓಡಾಡಿಕೊಂಡಿರುತ್ತಾರೆ. ಹಾಗೆಯೇ ಇತ್ತೀಚಿಗೆ ಬೆಂಗಳೂರಿನಲ್ಲಿ ಮಗಳು ಅಕ್ಷತಾ ಜೊತೆ ನಾರಾಯಣ ಮೂರ್ತಿ ಐಸ್ ಕ್ರೀಮ್ ಸವಿಯುತ್ತಿರುವ ಫೋಟೋ ಟ್ರೆಂಡಿಂಗ್‌ನಲ್ಲಿದೆ.

ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರ ತಂದೆ ಮತ್ತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಜಯನರದ ಐಸ್‌ಕ್ರೀಂ ಜಾಯಿಂಟ್‌ನಲ್ಲಿ ಐಸ್‌ಕ್ರೀಂ ಸವಿಯುತ್ತಿದ್ದು ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್‌ನಲ್ಲಿ ಹಲವಾರು ಮಂದಿ ತಂದೆ-ಮಗಳು ಐಸ್‌ಕ್ರೀಂ ಸವಿಯುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ತಂದೆ ಮತ್ತು ಮಗಳು ತಮ್ಮ ಕ್ಯಾಶುಯಲ್ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಅನೇಕರು ಇವರಿಬ್ಬರ ಸರಳತೆಯನ್ನು ಶ್ಲಾಘಿಸುತ್ತಿದ್ದರೆ, ಕೆಲವರು ಇನ್ನೂ ಬಿಲಿಯನೇರ್‌ನ '70-ಗಂಟೆಗಳ ಕೆಲಸದ ವಾರ' ಕಾಮೆಂಟ್‌ ಬಗ್ಗೆಯೇ ಮಾತನಾಡಿದ್ದಾರೆ. 'ಈ ಕುಟುಂಬದ ಸರಳತೆ ಕಲ್ಪನೆಗೂ ಮೀರಿದೆ. ಮೂರ್ತಿಯವರ ವಾರಕ್ಕೆ 70 ಗಂಟೆಗಳ ಕೆಲಸದ ವಾದಗಳನ್ನು ನಾನು ಪೂರ್ಣ ಹೃದಯದಿಂದ ಒಪ್ಪುತ್ತೇನೆ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಭಾರತ್ ಕೀ ಬೇಟಿ ಅವಳ ಪಾಲನೆ ಮತ್ತು ಮೌಲ್ಯ ವ್ಯವಸ್ಥೆ ಎಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ' ಎಂದು ಅಕ್ಷತಾ ಮೂರ್ತಿಯನ್ನು ಹೊಗಳಿದ್ದಾರೆ.

ವಿಮಾನದಲ್ಲಿ ಸಹಪ್ರಯಾಣಿಕನಿಗೆ ನಾರಾಯಣ ಮೂರ್ತಿ ನೀಡಿದ್ರು ಅತ್ಯಮೂಲ್ಯ ಟಿಪ್ಸ್;ವೈರಲ್ ಆಯ್ತು ಲಿಂಕ್ಡ್ಇನ್ ಪೋಸ್ಟ್

ಅಕ್ಷತಾ ಮೂರ್ತಿ ಅವರು ಕಳೆದ ವಾರ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿಯವರ 'An Uncommon Love: The Early Life of Sudha and Narayana Murthy' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರ ತಾಯಿ ಮತ್ತು ಲೋಕೋಪಕಾರಿ ಸುಧಾ ಮತ್ತು ತಂದೆ ನಾರಾಯಣ ಮೂರ್ತಿ ಅವರೊಂದಿಗೆ ಭಾಗವಹಿಸಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರ್ತಿ ಅವರು 1970ರ ದಶಕದ ಆರಂಭದ ಭೇಟಿಯ ನೆನಪುಗಳನ್ನು ಮೆಲುಕು ಹಾಕಿದರು. 

Follow Us:
Download App:
  • android
  • ios