ಉದ್ಯೋಗ ಕಡಿತದ ಭೀತಿ ನಡುವೆಯೇ ಸರ್ಪ್ರೈಸ್; ಉದ್ಯೋಗಿಗಳಿಗೆ 5.11ಲಕ್ಷಕ್ಕೂ ಅಧಿಕ ಷೇರು ಹಂಚಿದ ಇನ್ಫೋಸಿಸ್
ಇನ್ಫೋಸಿಸ್ ಉದ್ಯೋಗಿಗಳಿಗೆ ಕಂಪನಿ ಷೇರು ಭಾಗ್ಯ ಕರುಣಿಸಿದೆ.ಅರ್ಹ ಉದ್ಯೋಗಿಗಳಿಗೆ ಕಂಪನಿ 5.11ಲಕ್ಷಕ್ಕೂ ಹೆಚ್ಚಿನ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿದೆ.ಎರಡು ಯೋಜನೆಗಳ ಮೂಲಕ ಮೇ 12ರಂದು ಈ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.
ಬೆಂಗಳೂರು (ಮೇ16): ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಉತ್ತೇಜಿಸಲು ಬೋನಸ್,ವೇತನ ಹೆಚ್ಚಳ,ಗಿಫ್ಟ್ ಗಳನ್ನು ನೀಡುವುದು ಕಾಮನ್. ಈ ಉಡುಗೊರೆಗಳು ಉದ್ಯೋಗಿಗಳಿಗೆ ಖುಷಿ ನೀಡುವ ಜೊತೆಗೆ ಇನ್ನೂ ಉತ್ತಮ ಕಾರ್ಯನಿರ್ವಹಣೆ ತೋರಲು ನೆರವು ನೀಡುತ್ತವೆ.ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇವೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದಿಟ್ಟಿರುವ ಇನ್ಫೋಸಿಸ್ ಇತ್ತೀಚೆಗೆ ಅರ್ಹ ಉದ್ಯೋಗಿಗಳಿಗೆ 5.11ಲಕ್ಷಕ್ಕೂ ಹೆಚ್ಚಿನ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿದೆ.ಇದರಲ್ಲಿ 1,04,335 ಷೇರುಗಳನ್ನು 2015ರ ಸ್ಟಾಕ್ ಇನ್ಸೆಂಟಿವ್ ಕಾಂಪೆನ್ಸೇಷನ್ಸ್ ಪ್ಲ್ಯಾನ್ ಅಡಿಯಲ್ಲಿ ನೀಡಿದ್ದರೆ, 4,07,527 ಷೇರುಗಳನ್ನು ಎಕ್ಸ್ಪ್ಯಾಂಡೆಡ್ ಸ್ಟಾಕ್ ಓನರ್ ಶಿಪ್ ಪ್ರೋಗ್ರಾಮ್ ಅಡಿಯಲ್ಲಿ ನೀಡಲಾಗಿದೆ. ಈ ಎರಡೂ ಕಾರ್ಯಕ್ರಮದಡಿ ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ಮೇ 12ರಂದು ಉದ್ಯೋಗಿಗಳಿಗೆ ನೀಡಿದೆ.ಭಾನುವಾರ ಎಕ್ಸ್ ಚೇಂಜ್ ಫೈಲಿಂಗ್ ವೇಳೆ ಇನ್ಫೋಸಿಸ್ ಈ ಮಾಹಿತಿಯನ್ನು ನೀಡಿದೆ. ಉದ್ಯೋಗಿಗಳಿಗೆ 5.11ಲಕ್ಷ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡೋ ಮೂಲಕ ಇನ್ಫೋಸಿಸ್ ಸಬ್ ಸ್ಕ್ರೈಬ್ಡ್ ಷೇರು ಬಂಡವಾಳ 20,74,93,73,460ರೂ.ಗೆ ಏರಿಕೆಯಾಗಿದೆ. ಇದನ್ನು ಪ್ರತಿ ಈಕ್ವಿಟಿ ಷೇರಿಗೆ 5ರೂ.ನಂತೆ 415 ಕೋಟಿ ಈಕ್ವಿಟಿ ಷೇರುಗಳಾಗಿ ವಿಂಗಡಿಸಲಾಗಿದೆ. ಆದರೆ, ಎಷ್ಟು ಮಂದಿ ಉದ್ಯೋಗಿಗಳಿಗೆ ಈಕ್ವಿಟಿ ಷೇರುಗಳನ್ನು ಎಷ್ಟೆಷ್ಟು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಮಾತ್ರ ಇಲ್ಲ.
ಇನ್ಫೋಸಿಸ್ ಸಂಪತ್ತು ಷೇರು ಮಾರುಕಟ್ಟೆಯಲ್ಲಿ ಸುಮಾರು 5.16ಲಕ್ಷ ರೂ.ನಷ್ಟಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಪ್ರಸ್ತುತ ಇನ್ಫೋಸಿಸ್ ನ ಒಂದು ಷೇರಿನ ಮೌಲ್ಯ 1,268ರೂ. ಇದೆ. ಇನ್ನು ಇನ್ಫೋಸಿಸ್ ಸಂಸ್ಥೆಯಲ್ಲಿ ಸುಮಾರು ಮೂರೂವರೆ ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಫೋಸಿಸ್ ಜನವರಿ -ಮಾರ್ಚ್ ತ್ರೈಮಾಸಿಕದಲ್ಲಿ 6,128 ಕೋಟಿ ರೂ. ಲಾಭ ಗಳಿಸಿದೆ. ಹಾಗೆಯೇ ಪ್ರತಿ ಷೇರಿಗೆ 17.50ರೂ. ಡಿವಿಡೆಂಡ್ ಘೋಷಿಸಿತ್ತು.
ಮತ್ತೊಮ್ಮೆ ಭಾರೀ ಕುಸಿತ ದಾಖಲಿಸಿದ ಅದಾನಿ ಗ್ರೂಪ್ ಷೇರುಗಳು, ಕಾರಣವೇನು ಗೊತ್ತಾ?
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಕುಟುಂಬ ಕಂಪನಿಯಲ್ಲಿ ಶೇ.3.6 ಷೇರುಗಳನ್ನು ಹೊಂದಿದೆ.ಇದರಲ್ಲಿ ನಾರಾಯಣ ಮೂರ್ತಿ ಶೇ.0.40, ಅವರ ಪತ್ನಿ ಸುಧಾ ಮೂರ್ತಿ ಶೇ.0.82, ಮಗ ರೋಹನ್ ಶೇ.1.45 ಹಾಗೂ ಮಗಳು ಅಕ್ಷತಾ ಶೇ. 0.93 ಷೇರುಗಳನ್ನು ಹೊಂದಿದ್ದಾರೆ.ಅಕ್ಷತಾ ಮೂರ್ತಿ ಅವರ ಪತಿ ರಿಷಿ ಸುನಕ್ ಕಳೆದ ಅಕ್ಟೋಬರ್ ನಲ್ಲಿ ಬ್ರಿಟನ್ (Britian) ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಸುನಕ್ ಬ್ರಿಟನ್ ಪ್ರಜೆಯಾಗಿದ್ದು,ಅಕ್ಷತಾ ಮಾತ್ರ ಭಾರತದ ಪೌರತ್ವ (Citizenship) ತೊರೆದಿಲ್ಲ. ಹೀಗಾಗಿ ಅವರು ಇಂಗ್ಲೆಂಡ್ ಪೌರತ್ವ ಹೊಂದಿಲ್ಲ.ಈ ಸಂಬಂಧ ಹಲವು ಸಂದರ್ಭಗಳಲ್ಲಿ ಇಂಗ್ಲೆಂಡ್ ನಲ್ಲಿ ಅಕ್ಷತಾ ಟೀಕೆಗೆ ಗುರಿಯಾಗಿದ್ದಾರೆ ಕೂಡ.
ಉದ್ಯೋಗಿಗಳನ್ನು ವಜಾಗೊಳಿಸಿದ್ದ ಇನ್ಫೋಸಿಸ್
ಈ ವರ್ಷದ ಫೆಬ್ರವರಿಯಲ್ಲಿ ಇನ್ಫೋಸಿಸ್ ಆಂತರಿಕ ಮೌಲ್ಯ ಮಾಪನ ಪರೀಕ್ಷೆಯಲ್ಲಿ ಪಾಸ್ ಆಗದ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿತ್ತು.ಮೂಲಗಳ ಪ್ರಕಾರ, ಇಸ್ಫೋಸಿಸ್ ತನ್ನ 600 ಜನ ಹೊಸ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ವರದಿಯಾಗಿತ್ತು. 8 ತಿಂಗಳ ಹಿಂದೆ ನೇಮಕವಾಗಿದ್ದ ಹೊಸ ಉದ್ಯೋಗಿಗಳಿಗೆ ನಡೆಸುವ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ 600 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಳಲಾಗಿತ್ತು.
LIC ಬೆಂಬಲಿತ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್; ಕೇವಲ ಒಂದೇ ವರ್ಷದಲ್ಲಿ ಶೇ.300 ರಿಟರ್ನ್!
ಇನ್ಫೋಸಿಸ್ ತರಬೇತಿ ಬಳಿಕ ಉದ್ಯೋಗ ಸಿಗದೆ ಹೊರಬಂದಿರುವ ಕೆಲವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ತರಬೇತಿ ಬಳಿಕ ಹಲವರನ್ನು ಕಂಪನಿ ಕೆಲಸದಲ್ಲಿ ಮುಂದುವರಿಸಿದೆ. ಕಾರಣ ಕೆಲ ಬ್ಯೂಸಿನೆಸ್ ಪ್ರಾಜೆಕ್ಟ್ ಇದ್ದಕಾರಣ ಕಂಪನಿಗೆ ಉದ್ಯೋಗಿಗಳ ಅವಶ್ಯಕತೆ ಇತ್ತು. ಆದರೆ ಯಾರಿಗೆಲ್ಲಾ ಪ್ರಾಜೆಕ್ಟ್ ಸಿಕ್ಕಿಲ್ಲ ಅಂತವರನ್ನು ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ. 6 ತಿಂಗಳ ಒಳಗೆ ಪರೀಕ್ಷೆ ಪಾಸ್ ಮಾಡಲೂ ಸೂಚಿಸಿದ್ದಾರೆ ಎಂದು ತಿಳಿಸಿದ್ದರು.