Asianet Suvarna News Asianet Suvarna News

ಮೇಡ್‌ ಇನ್‌ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!

ವಿಸ್ಕಿಸ್ ಆಫ್ ದಿ ವರ್ಲ್ಡ್, ಭಾರತದಲ್ಲಿ ತಯಾರಾದ ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2023 ವಿಸ್ಕಿಯನ್ನು ಜಗತ್ತಿನ ಅತ್ಯುತ್ತಮ ವಿಸ್ಕಿ ಎಂದು ಹೆಸರಿಸಿಸಿದೆ. ಬ್ಲೈಂಡ್‌ ಟೇಸ್ಟಿಂಗ್‌ ಸ್ಪರ್ಧೆಯಲ್ಲಿ ಭಾರತದಲ್ಲಿ  ಭಾರತೀಯ ಪೀಟೆಡ್ ಕ್ಲಾಸ್ ವಿಸ್ಕಿ 100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ಸೋಲಿಸಿ ಈ ಮನ್ನಣೆ ಪಡೆದುಕೊಂಡಿದೆ.
 

Indri Diwali Collectors Edition 2023 Indian whisky is awarded the best in the world san
Author
First Published Oct 2, 2023, 5:43 PM IST

ನವದೆಹಲಿ (ಅ.2): ಭಾರತದಲ್ಲಿ ತಯಾರಿಸಿದ ವಿಸ್ಕಿಯನ್ನು ವಿಸ್ಕಿಸ್ ಆಫ್ ದಿ ವರ್ಲ್ಡ್ ವಿಶ್ವದ ಅತ್ಯುತ್ತಮ ವಿಸ್ಕಿ ಬ್ರಾಂಡ್ ಎಂದು ಆಯ್ಕೆ ಮಾಡಿದೆ. ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಶನ್ 2023 ಪ್ರಪಂಚದಾದ್ಯಂತದ ಅತಿ ದೊಡ್ಡ ವಿಸ್ಕಿ ಟೇಸ್ಟಿಂಗ್‌ ಸ್ಪರ್ಧೆಗಳಲ್ಲಿ ಒಂದಾದ 'ಡಬಲ್ ಗೋಲ್ಡ್ ಬೆಸ್ಟ್ ಇನ್ ಶೋ' ಪ್ರಶಸ್ತಿಯನ್ನು ಪಡೆದುಕೊಂಡಿದೆ, ಇದರಲ್ಲಿ ಪ್ರಪಂಚದಾದ್ಯಂತದ 100 ಕ್ಕೂ ಹೆಚ್ಚು ವಿಧದ ವಿಸ್ಕಿಗಳು ಪ್ರತಿವರ್ಷ ಸ್ಪರ್ಧೆ ಮಾಡುತ್ತದೆ. ವಿಸ್ಕೀಸ್‌ ಆಫ್‌ ದ ವರ್ಲ್ಡ್‌, ಹಲವು ವಿಭಾಗಗಳಲ್ಲಿ ಕಠಿಣವಾದ ಬ್ಲೈಂಡ್‌ ಟೆಸ್ಟಿಂಗ್‌ ಅನ್ನು ಅನುಸರಿಸುತ್ತದೆ.  ಆಲ್ಕೋ-ಬೆವ್ ಉದ್ಯಮದಲ್ಲಿ ಕೆಲವು ಉನ್ನತ ಟೇಸ್ಟ್‌ ಟೆಸ್ಟ್‌ಗಳು ಮತ್ತು ಪ್ರಭಾವಿಗಳ ಸಮಿತಿಯು ಪ್ರತಿ ವರ್ಗದಲ್ಲಿ ಒಂದು ವಿಸ್ಕಿಯನ್ನು ಅತ್ಯುತ್ತಮ ವಿಸ್ಕಿ ಎಂದು ಘೋಷಣೆ ಮಾಡುತ್ತದೆ. ಅಮೇರಿಕನ್ ಸಿಂಗಲ್ ಮಾಲ್ಟ್‌ಗಳು, ಸ್ಕಾಚ್ ವಿಸ್ಕಿಗಳು, ಬೌರ್ಬನ್ಸ್, ಕೆನಡಿಯನ್ ವಿಸ್ಕಿಗಳು, ಆಸ್ಟ್ರೇಲಿಯನ್ ಸಿಂಗಲ್ ಮಾಲ್ಟ್‌ಗಳು ಮತ್ತು ಬ್ರಿಟಿಷ್ ಸಿಂಗಲ್ ಮಾಲ್ಟ್‌ಗಳ ನೂರಾರು ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ನಡುವೆ ಭಾರತೀಯ ಪೀಟೆಡ್ ಕ್ಲಾಸ್ ವಿಸ್ಕಿ ಜಗತ್ತಿನ ಶ್ರೇಷ್ಠ ವಿಸ್ಕಿ ಎನ್ನುವ ಮನ್ನಣೆ ಪಡೆದಿದೆ.

"ಇಂದ್ರಿ ಪ್ರಪಂಚದಾದ್ಯಂತದ ಅತ್ಯುತ್ತಮ ವಿಸ್ಕಿಗಳಲ್ಲಿ ಸ್ಥಾನ ಗಳಿಸಿದೆ. ಇಂದ್ರಿ ದಿವಾಳಿ ಕಲೆಕ್ಟರ್ಸ್ ಆವೃತ್ತಿ 2023 ಪ್ರತಿಷ್ಠಿತ ವಿಸ್ಕಿಸ್ ಆಫ್ ದಿ ವರ್ಲ್ಡ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ, ಡಬಲ್ ಗೋಲ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಗೆಲುವು ಪ್ರಪಂಚದಾದ್ಯಂತದ ಭಾರತೀಯ ಸಿಂಗಲ್ ಮಾಲ್ಟ್‌ಗಳು ಉತ್ತಮ ಗುಣಮಟ್ಟ ಮತ್ತು ಬೆಳೆಯುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. " ಎಂದು ಭಾರತೀಯ ವಿಸ್ಕಿಯ ತಯಾರಕರಾದ ಇಂದ್ರಿ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ದಿವಾಳಿ ಕಲೆಕ್ಟರ್ಸ್ ಎಡಿಶನ್ ತಯಾರಿಕೆಯ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಇಂದ್ರಿ, "ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2023 ಭಾರತದಲ್ಲಿ ರಚಿಸಲಾದ ಸಾಂಪ್ರದಾಯಿಕ ತಾಮ್ರದ ಪಾತ್ರೆ ಸ್ಟಿಲ್‌ಗಳಲ್ಲಿ ಬಟ್ಟಿ ಇಳಿಸಿದ ಆರು-ಸಾಲು ಬಾರ್ಲಿಯಿಂದ ತಯಾರಿಸಲಾದ ಪೀಟೆಡ್ ಇಂಡಿಯನ್ ಸಿಂಗಲ್ ಮಾಲ್ಟ್ ಆಗಿದೆ. ಉತ್ತರ ಭಾರತದ ಅತೀ ಉಷ್ಣತೆಯ ಹವಾಮಾನದಲ್ಲಿ ಬಹಳ ದೀರ್ಘಕಾಲದವರೆಗೆ ಪಿಎಕ್ಸ್‌ ಶೆರ್ರಿ ಕ್ಯಾಸ್ಕ್‌ಗಳಲ್ಲಿ ಎಚ್ಚರಿಕೆಯಿಂದ ಇಟ್ಟು ಇದನ್ನು ಪಕ್ವ ಮಾಡಲಾಗಿದೆ. ಒಣಗಿದ ಹಣ್ಣುಗಳು, ಟೋಸ್ಟ್‌ ಮಾಡಿರುವ ನಟ್ಸ್‌ಗಳು, ಸೂಕ್ಷ್ಮ ಮಸಾಲೆಗಳು, ಓಕ್, ಕಹಿ ಚಾಕೊಲೇಟ್‌ನಂಥ ಅಂಶಗಳನ್ನು ಇದರಲ್ಲಿ ಮಿಶ್ರ ಮಾಡಲಾಗಿದ್ದು, ಸುವಾಸನೆಯುಕ್ತವಾಗಿರುತ್ತದೆ ಎಂದು ಹೇಳಿದೆ.

ಕುಡಿಯೋದೇ ನಮ್ ವೀಕ್ನೆಸ್‌..! ಜಗತ್ತಿನ ಟಾಪ್ 10 ಸ್ಕಾಚ್‌ ವಿಸ್ಕಿ ಖರೀದಿಸುವುದರಲ್ಲಿ ಭಾರತ ನಂ.1..!

ಇಂದ್ರಿಯ ಸಿಂಗಲ್ ಮಾಲ್ಟ್ ಟ್ರಿನಿ ಈ ಹಿಂದೆ ಟೋಕಿಯೋ ವಿಸ್ಕಿ ಮತ್ತು ಸ್ಪಿರಿಟ್ಸ್ ಸ್ಪರ್ಧೆ 2023, ಫಿಫ್ಟಿ ಬೆಸ್ಟ್ ವರ್ಲ್ಡ್ ವಿಸ್ಕಿಸ್ 2022 ಪ್ರಶಸ್ತಿ, ಲಾಸ್ ವೇಗಾಸ್‌ನಲ್ಲಿ ನಡೆದ ಅಂತರಾಷ್ಟ್ರೀಯ ವಿಸ್ಕಿ ಸ್ಪರ್ಧೆ, ಮತ್ತು ವಿಸ್ಕಿ ಅಡ್ವೊಕೇಟ್ ಟಾಪ್ 20 ವಿಸ್ಕಿ ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು.

 

ಒಂದು ಕೈಲಿ ವಿಸ್ಕಿ, ಮತ್ತೊಂದು ಕೈಲಿ ಡಾಲರ್ : ನಿದ್ದೆಗೆ ಜಾರಿದ ಬಿಂದಾಸ್ ಕಿಡ್ ಫೋಟೋ ಶೂಟ್ ವೈರಲ್

Follow Us:
Download App:
  • android
  • ios