ಕುಡಿಯೋದೇ ನಮ್ ವೀಕ್ನೆಸ್..! ಜಗತ್ತಿನ ಟಾಪ್ 10 ಸ್ಕಾಚ್ ವಿಸ್ಕಿ ಖರೀದಿಸುವುದರಲ್ಲಿ ಭಾರತ ನಂ.1..!
ಬೆಂಗಳೂರು: ಬಾರ್ಲಿ, ಗೋಧಿ, ರೈ ಮತ್ತು ಜೋಳದಂತಹ ಧಾನ್ಯಗಳ ಸಂಯೋಜನೆಯಿಂದ ಬಟ್ಟಿ ಇಳಿಸಿದ ಒಂದು ಸ್ಪಿರಿಟ್‌ನಿಂದ ವಿಸ್ಕಿ ತಯಾರಿಸಲಾಗುತ್ತದೆ. ಆದರೆ ಸ್ಕಾಚ್ ವಿಸ್ಕಿಯನ್ನು ಸಾಂಪ್ರದಾಯಿಕವಾಗಿ ನೀರು ಮತ್ತು ಮಾಲ್ಟೆಡ್ ಬಾರ್ಲಿಯಿಂದ ಮಾತ್ರ ತಯಾರಿಸಲಾಗುತ್ತದೆ. ಸ್ಕಾಚ್ ವಿಸ್ಕಿ ಖರೀದಿಸುವ ಟಾಪ್ 10 ದೇಶಗಳು ಯಾವುವು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
Note: * ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಮರೆಯದಿರೋಣ
* ಕೆಳಗಿನ ಅಂಕಿ ಅಂಶಗಳು 750 ಎಂ ಎಲ್‌ನ ಫುಲ್ ಬಾಟಲ್ ಮಾಹಿತಿಯಾಗಿದೆ
1. ಭಾರತ: 219 ಮಿಲಿಯನ್ ಬಾಟಲ್
ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮದ್ಯಪಾನಿಗರ ಸಂಖ್ಯೆ ಕೂಡಾ ದೊಡ್ಡ ಪ್ರಮಾಣದಲ್ಲಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 21 ಕೋಟಿ 90 ಲಕ್ಷ ಸ್ಕಾಚ್ ಫುಲ್ ಬಾಟಲ್‌ಗಳು ಮಾರಾಟವಾಗುತ್ತವೆ. ಈ ಮೂಲಕ ಸ್ಕಾಚ್ ವಿಸ್ಕಿ ಮಾರಾಟದಲ್ಲಿ ಭಾರತ ನಂ.1 ಸ್ಥಾನದಲ್ಲಿದೆ.
2. ಫ್ರಾನ್ಸ್: 205 ಮಿಲಿಯನ್ ಬಾಟಲ್
ಪಶ್ಚಿಮ ಯೂರೋಪ್‌ನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಫ್ರಾನ್ಸ್. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಫ್ರಾನ್ಸ್‌ನಲ್ಲೂ ಸ್ಕಾಚ್ ವಿಸ್ಕಿ ಕುಡಿಯುವವರ ಸಂಖ್ಯೆ ಹೆಚ್ಚೇ ಇದೆ. ಫ್ರಾನ್ಸ್‌ನಲ್ಲಿ ಪ್ರತಿ ವರ್ಷ 20 ಕೋಟಿ 5 ಲಕ್ಷ ಸ್ಕಾಚ್ ವಿಸ್ಕಿ ಮಾರಾಟವಾಗುತ್ತದೆ.
3. ಅಮೆರಿಕ: 137 ಮಿಲಿಯನ್ ಬಾಟಲ್
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಕಾಚ್ ವಿಸ್ಕಿ ಪ್ರತಿ ವರ್ಷ 13 ಕೋಟಿ 70 ಲಕ್ಷ ಬಾಟಲ್‌ಗಳು ಮಾರಾಟವಾಗುತ್ತಿದೆ. ಈ ಮೂಲಕ ಅಮೆರಿಕ ಅತಿಹೆಚ್ಚು ವಿಸ್ಕಿ ಮಾರುಕಟ್ಟೆಯಲ್ಲಿ 3ನೇ ಸ್ಥಾನ ಪಡೆದಿದೆ.
4. ಬ್ರೆಜಿಲ್: 93 ಮಿಲಿಯನ್ ಬಾಟಲ್
ದಕ್ಷಿಣ ಅಮೆರಿಕದ ಅತಿದೊಡ್ಡ ದೇಶವೆನಿಸಿಕೊಂಡಿರುವ ಬ್ರೆಜಿಲ್, ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ. ಫುಟ್ಬಾಲ್ ಕ್ರೇಜ್ ಹೆಚ್ಚಿರುವ ಬ್ರೆಜಿಲ್‌ನಲ್ಲಿ ಪ್ರತಿ ವರ್ಷ 9 ಕೋಟಿ 30 ಲಕ್ಷ ಸ್ಕಾಚ್ ವಿಸ್ಕಿ ಬಾಟಲ್ ಮಾರಾಟವಾಗುತ್ತವೆ.
5. ಜಪಾನ್: 75 ಮಿಲಿಯನ್
ಜಗತ್ತಿನ ಕೆಲವೇ ಕೆಲವು ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಜಪಾನ್‌ನಲ್ಲೂ ಸ್ಕಾಚ್ ವಿಸ್ಕಿ ಕುಡುಕರ ಸಂಖ್ಯೆ ಕಡಿಮೆಯೇನಿಲ್ಲ. ಜಪಾನ್‌ನಲ್ಲಿ 7 ಕೋಟಿ 50 ಲಕ್ಷ ಸ್ಕಾಚ್ ವಿಸ್ಕಿಗಳು ಪ್ರತಿ ವರ್ಷ ಮಾರಾಟವಾಗುತ್ತವೆ.
6. ಜರ್ಮನಿ: 67 ಮಿಲಿಯನ್ ಬಾಟಲ್
ಜಗತ್ತಿನ ಮತ್ತೊಂದು ಶ್ರೀಮಂತ ದೇಶ ಎನಿಸಿಕೊಂಡಿರುವ ಜರ್ಮನಿಯಲ್ಲೂ ಮದ್ಯಪ್ರಿಯರಿಗೇನು ಕಡಿಮೆಯಿಲ್ಲ. ಜರ್ಮನಿಯಲ್ಲಿ ಪ್ರತಿ ವರ್ಷ ಬರೋಬ್ಬರಿ 6 ಕೋಟಿ 70 ಲಕ್ಷ ಫುಲ್ ಬಾಟಲ್ ಸ್ಕಾಚ್ ವಿಸ್ಕಿ ಮಾರಾಟವಾಗುತ್ತದೆ.
7. ಸ್ಪೇನ್: 67 ಮಿಲಿಯನ್ ಬಾಟಲ್
ಗೂಳಿ ಕಾಳಗಕ್ಕೆ ಹೆಸರು ವಾಸಿಯಾಗಿರುವ ಸ್ಪೇನ್‌ನಲ್ಲಿ ಪ್ರತಿ ವರ್ಷ ಜರ್ಮನಿಯಷ್ಟೇ ಸ್ಕಾಚ್ ವಿಸ್ಕಿ ಮಾರಾಟವಾಗುತ್ತದೆ. ಸ್ಪೇನ್‌ನಲ್ಲಿ ಕೂಡಾ ಪ್ರತಿ ವರ್ಷ 6 ಕೋಟಿ 70 ಲಕ್ಷ ಸ್ಕಾಚ್ ವಿಸ್ಕಿ ಮಾರಾಟವಾಗುತ್ತದೆ.
8. ಪೋಲೆಂಡ್: 49 ಮಿಲಿಯನ್ ಬಾಟಲ್
ಯೂರೋಪ್‌ನ ಕೇಂದ್ರ ಭಾಗದಲ್ಲಿರುವ ಪೋಲೆಂಡ್, ಯೂರೋಪಿನ 5ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ. ಪೋಲೆಂಡ್‌ನಲ್ಲಿ ಪ್ರತಿ ವರ್ಷ 4 ಕೋಟಿ 90 ಲಕ್ಷ ಸ್ಕಾಚ್ ವಿಸ್ಕಿ ಬಾಟಲ್ ಮಾರಾಟವಾಗುವ ಮೂಲಕ 8ನೇ ಸ್ಥಾನ ಪಡೆದುಕೊಂಡಿದೆ
9. ಮೆಕ್ಸಿಕೊ:
ಉತ್ತರ ಅಮೆರಿಕದ ದಕ್ಷಿಣದಲ್ಲಿರುವ ಸ್ವತಂತ್ರ ರಾಷ್ಟ್ರ ಮೆಕ್ಸಿಕೋ ಕೂಡಾ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ದೇಶಗಳಲ್ಲಿ ಒಂದು ಎನಿಸಿದೆ. ಮೆಕ್ಸಿಕೊದಲ್ಲಿ ಪ್ರತಿ ವರ್ಷ 4 ಕೋಟಿ 80 ಲಕ್ಷ ಸ್ಕಾಚ್ ವಿಸ್ಕಿ ಮಾರಾಟವಾಗುತ್ತದೆ.
10. ದಕ್ಷಿಣ ಆಫ್ರಿಕಾ:
ಜೀವವೈವಿದ್ಯತೆಯ ತಾಣ ಎನಿಸಿಕೊಂಡಿರುವ ದಕ್ಷಿಣ ಆಫ್ರಿಕಾದಲ್ಲಿ ಮದ್ಯಪ್ರಿಯರ ಸಂಖ್ಯೆಗೇನು ಕೊರತೆಯಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ವರ್ಷ 3 ಕೋಟಿ 90 ಲಕ್ಷ ಸ್ಕಾಚ್ ವಿಸ್ಕಿ ಮಾರಾಟವಾಗುತ್ತದೆ.