ಭಾರತೀಯರ ಆದಾಯದಲ್ಲಿ ಭಾರೀ ಏರಿಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 10:57 AM IST
Indians Per Capita Income Rice
Highlights

ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯರ ಸರಾಸರಿ ತಲಾದಾಯ 79882 ರು.ಗೆ ಏರಿದೆ. ಇದು ಆ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಉತ್ತಮ ರೀತಿಯಲ್ಲಿ ಪ್ರಗತಿ ಕಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. 

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯರ ಸರಾಸರಿ ತಲಾದಾಯ 79882 ರು.ಗೆ ಏರಿದೆ. ಇದು ಆ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಉತ್ತಮ ರೀತಿಯಲ್ಲಿ ಪ್ರಗತಿ ಕಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. 

2011 - 12 ಮತ್ತು 2014 -  15ರ ಅವಧಿಯಲ್ಲಿ ಭಾರತೀಯರ ಸರಾಸರಿ ತಲಾದಾಯ 67 ,594 ರು. ಇತ್ತು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 4 ವರ್ಷಗಳಲ್ಲಿ ಅಂದರೆ 2014 - 15 ಮತ್ತು 2017 - 18 ರ ಅವಧಿಯಲ್ಲಿ ಈ ಪ್ರಮಾಣ 79,882 ರು.ಗೆ ತಲುಪಿದೆ ಎಂದು ಕೇಂದ್ರ ಸಾಂಖಿಕ ಖಾತೆ ಸಚಿವ ವಿಜಯ್ ಗೋಯಲ್ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ. 

2013 - 14ರಲ್ಲಿ ನಾಗರಿಕರ ತಲಾ ದಾಯ ಶೇ.4. 6ರಷ್ಟು ಏರಿಕೆ ಕಂಡು 68572 ರು.ಗೆ ತಲುಪಿತ್ತು. 2014 - 15ರಲ್ಲಿ ಶೇ.6.2ರಷ್ಟು ಏರಿಕೆ ಕಂಡು 72805 ರು.ಗೆ,2015 -  16ರಲ್ಲಿ ಶೇ.6.9 ರಷ್ಟು ಏರಿಕೆ ಕಂಡು 77826 ರು.ಗೆ ಮತ್ತು 2016 -  17ರಲ್ಲಿ ಶೇ.5.7ರಷ್ಟು ಏರಿಕೆ ಕಂಡು 82229  ರು. ಗೆ ತಲುಪಿತ್ತು ಎಂದು ವರದಿ ಹೇಳಿದೆ.

loader