ಸ್ವಿಸ್‌ ಬ್ಯಾಂಕಲ್ಲಿರುವ ಭಾರತೀಯರ ಹಣ 6,625 ಕೋಟಿ ರು.ಗೆ ಕುಸಿತ

ಮೋದಿ ಪ್ರಧಾನಿಯಾದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಹಣ ಹಂತ ಹಂತವಾಗಿ ಕಡಿಮೆಯಾಗಲಾರಂಭಿಸಿದೆ. ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಠೇವಣಿ ಸತತ 2ನೇ ವರ್ಷವೂ ಕುಸಿತ ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Indians money in Swiss banks down by six per cent in 2019 says Bank data

ನವದೆಹಲಿ(ಜೂ.26): ಕಪ್ಪು ಹಣದ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಫಲ ನೀಡಲು ಆರಂಭಿಸಿವೆ. ‘ಕಾಳಧನಿಕರ ಸ್ವರ್ಗ’ ಎಂದೇ ಕುಖ್ಯಾತಿಗೀಡಾಗಿರುವ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಠೇವಣಿ ಸತತ 2ನೇ ವರ್ಷವೂ ಕುಸಿತ ಕಂಡಿದ್ದು, ಶೇ.6ರಷ್ಟು ಇಳಿಕೆಯೊಂದಿಗೆ 6,625 ಕೋಟಿ ರು.ಗೆ ಕುಸಿದಿದೆ ಎಂದು ಸ್ವತಃ ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕು ಮಾಹಿತಿ ನೀಡಿದೆ.

1987ರ ನಂತರ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಮೂರನೇ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಆದರೆ ಇದರಲ್ಲಿ ಕಪ್ಪು ಹಣ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಜತೆಗೆ ಭಾರತೀಯರು, ಅನಿವಾಸಿ ಭಾರತೀಯರು ಅಥವಾ ಇನ್ನಿತರರು ಮತ್ತೊಂದು ದೇಶದ ಹೆಸರಿನಲ್ಲಿ ಇಟ್ಟಿರಬಹುದಾದ ಹಣದ ವಿವರವೂ ಇಲ್ಲ.

ಲಾಕ್ ಡೌನ್ ಸಡಿಲಿಕೆ ನಂತರ ಚಿನ್ನದ ಕತೆ ಏನಾಗಿದೆ?

ಮಾಹಿತಿ ವಿನಿಮಯ ಸಂಬಂಧ ಭಾರತ- ಸ್ವಿಜರ್ಲೆಂಡ್‌ ನಡುವೆ ಒಪ್ಪಂದವಿದೆ. 2018ರಿಂದ ಪ್ರತಿ ವರ್ಷ ಸ್ವಿಜರ್ಲೆಂಡ್‌ ಮಾಹಿತಿ ನೀಡುತ್ತಿದೆ. 2018ರಲ್ಲಿ ಭಾರತೀಯರು ಇಟ್ಟಿರುವ ಹಣ ಶೇ.11ರಷ್ಟು ಕುಸಿತವಾಗಿತ್ತು. ದಶಕದ ಹಿಂದೆ ಅಂದರೆ 2007ರಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರು ಹೊಂದಿದ್ದ ಹಣ 9,000 ಕೋಟಿ ರು. ತಲುಪಿತ್ತು.

Latest Videos
Follow Us:
Download App:
  • android
  • ios