ಲಾಕ್ ಡೌನ್ ಸಡಿಲಿಕೆ ನಂತರ ಚಿನ್ನದ ಕತೆ ಏನಾಗಿದೆ?
ಕೊರೋನಾ ಸಮರದ ನಡುವೆ ಚಿನ್ನದ ದರ/ ವಾರದಿಂದ ಏರಿಕೆ ಹಾದಿಯಲ್ಲಿ ಬಂಗಾರ/ ಲಾಕ್ ಡೌನ್ ಸಡಿಲಿಕೆ ಪರಿಣಾಮ/ ಬೆಳ್ಳಿ ದರ ಕೊಂಚ ಇಳಿಕೆ
ನವದೆಹಲಿ(ಜೂ. 24) ಕೊರೋನಾ ವೈರಸ್ ಹಾವಳಿ ನೀಡುತ್ತಿದ್ದರು ಲಾಕ್ ಡೌನ್ ಸಡಿಲಿಕೆ ಪರಿಣಾಮ ಚಿನ್ನದ ದರದ ಮೇಲೆ ಆಗಿದೆ.
ಸಂಪೂರ್ಣ ಲಾಕ್ ಡೌನ್ ವೇಳೆ ಇಳಿಕೆಯ ಹಾದಿಗೆ ಮರಳಿದ್ದ ಚಿನ್ನ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ. ಎಂಸಿಎಕ್ಸ್ ಗೋಲ್ಡ್ ಪ್ಯೂಚರ್ಸ್ ಶೇ. 0.04 ಅಥವಾ 19 ರೂ . ಏರಿಕೆ ಕಂಡಿದ್ದು 48,251 ರೂ. ನಲ್ಲಿ ವಹಿವಾಟು ನಡೆಸಿದೆ. ಆದರೆ ಸಿಲ್ವರ್ ಪ್ಯೂಚರ್ಸ್ 0.16 ಇಳಿಕೆ ಅಂದರೆ 80 ರೂ. ಕೆಳಗೆ ಬಂದಿದ್ದು ಕೆಜಿಗೆ 48,704 ರೂ. ನಲ್ಲಿ ವಹಿವಾಟು ನಡೆಸಿದೆ.
ವಿಶ್ವದ ಎಲ್ಲ ಸೆಂಟ್ರಲ್ ಬ್ಯಾಂಕ್ ಗಳು ತೆಗೆದುಕೊಂಡ ಕ್ರಮಗಳು ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ. ಬಡ್ಡಿ ದರ ಕಡಿತ ಮಾಡಿದ್ದು ಇತ್ತ ಚಿನ್ನದ ದರ ಏರಿಕೆಗೆ ಕಾರಣವಾಗಿದೆ.
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 46,810 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510ರೂ. ಆಗಿದೆ. ಇನ್ನೂ ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 46,660 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,510 ರೂ. ಆಗಿದೆ. ಕಚ್ಚಾ ತೈಲದ ದರ ಇಳಿಕೆ ಸಹ ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡುವಂತೆ ಮಾಡಿದೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"