Asianet Suvarna News Asianet Suvarna News

20ಕ್ಕೂ ಹೆಚ್ಚು ಜಾಗತಿಕ ಸಂಸ್ಥೆಗಳಿಗೆ ಭಾರತೀಯರೇ ಬಾಸ್‌: ಇಂಡಿಯನ್ ಸಿಇಒಗಳ ಉದ್ದ ಪಟ್ಟಿಗೆ ಭೇಷ್ ಎಂದ ಮಸ್ಕ್

ಭಾರತೀಯ ಸಂಜಾತ ಸಿಇಒಗಳ ಪಟ್ಟಿಯೊಂದನ್ನು ಟ್ವಿಟ್ಟರ್‌ ಪೇಜೊಂದು ಪೋಸ್ಟ್ ಮಾಡಿದ್ದು, ಇದಕ್ಕೆ ಟ್ವಿಟ್ಟರ್‌ ಮುಖ್ಯಸ್ಥ ಎಲಾನ್ ಮಸ್ಕ್‌ ಕೂಡ ಶಹಭಾಷ್ ಎಂದಿದ್ದಾರೆ. ಆ ಟ್ವಿಟ್ ಈಗ ವೈರಲ್ ಆಗಿದೆ. 

Indians are the boss of more than 20 global companies Twitter CEO Elon Musk is also appreciative long list of Indian CEOs akb
Author
First Published Aug 27, 2023, 2:59 PM IST

ನವದೆಹಲಿ: ಭಾರತೀಯರ ಸಾಮರ್ಥ್ಯ ಹಾಗೂ ಬುದ್ಧಿಮತ್ತೆ ಬಗ್ಗೆ ಪದೇ ಪದೇ ಹೇಳುವ ಅಗತ್ಯವಿಲ್ಲ, ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯರು ಉನ್ನತ ಹುದ್ದೆಯಲ್ಲಿದ್ದು, ಪಾರುಪತ್ಯ ಮೆರೆಯುತ್ತಿದ್ದಾರೆ. ಜಗತ್ತಿನ ವಿವಿಧೆಡೆ ವಾಸ ಮಾಡುವ ಭಾರತೀಯರು ಆಯಾ ದೇಶಗಳ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ ಅಪಾರ. ಅಷ್ಟೇ ಏಕೆ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಗತ್ತಿನಿಂದ ಮೆರೆಯುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ನಾಯಕತ್ವವನ್ನು ಹೊತ್ತು ಭಾರತೀಯರೊಬ್ಬರು ದಾಖಲೆ ಬರೆದಿರುವುದು ಈಗ ಸೂರ್ಯ ಮುಳುಗುವಷ್ಟೇ ಸತ್ಯ. ಹೀಗಿರುವಾಗ ಟ್ವಿಟ್ಟರ್‌ನಲ್ಲಿ ಭಾರತೀಯ ಸಂಜಾತ ಸಿಇಒಗಳ ಪಟ್ಟಿಯೊಂದನ್ನು ಟ್ವಿಟ್ಟರ್‌ ಪೇಜೊಂದು ಪೋಸ್ಟ್ ಮಾಡಿದ್ದು, ಇದಕ್ಕೆ ಟ್ವಿಟ್ಟರ್‌ ಮುಖ್ಯಸ್ಥರು ಶಹಭಾಷ್ ಎಂದಿದ್ದಾರೆ. ಆ ಟ್ವಿಟ್ ಈಗ ವೈರಲ್ ಆಗಿದೆ. 

World of Statistics ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ಅಂಕಿಅಂಶವಿರುವ ವಿಚಾರ ಪೋಸ್ಟ್ ಆಗಿದ್ದು, ಇದರಲ್ಲಿ ಭಾರತೀಯ ಸಂಜಾತ ಸಿಇಒಗಳ ದೊಡ್ಡ ಲಿಸ್ಟೇ ಇದೆ. ಇದಕ್ಕೆ ಜಗತ್ತಿನ ಹಲವು ಗಣ್ಯರು ಕಾಮೆಂಟ್ ಮಾಡಿದ್ದಾರೆ. ಸ್ವತ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್‌ ಇದು ಇಂಪ್ರೆಸಿವ್ ಎಂದು ಕಾಮೆಂಟ್ ಮಾಡಿದ್ದಾರೆ. 

ಅಮೆರಿಕ ಅಧ್ಯಕ್ಷೀಯ ಹುದ್ದೆ ರೇಸ್‌ಗೆ ಮತ್ತೊಬ್ಬ ಭಾರತೀಯ: ರಿಪಬ್ಲಿಕ್‌ನಿಂದ ಹಿರ್ಷವರ್ಧನ್ ಸ್ಪರ್ಧೆ

ಪಟ್ಟಿಯಲ್ಲಿರುವ ಭಾರತೀಯ ಸಂಜಾತ ಸಿಇಒಗಳು ಹಾಗೂ ಸಂಸ್ಥೆಗಳು ಇಲ್ಲಿವೆ. 

ಅಲ್ಪಾಬೆಟ್ ಗೂಗಲ್ ಸಿಇಒ - ಸುಂದರ್ ಪಿಚ್ಚೈ (Sundar Pichai)
ಮೈಕ್ರೋಸಾಫ್ಟ್ ಸಿಇಒ - ಸತ್ಯ ನಡೆಲ್ಲಾ (Satya Nadella)
ಯೂಟ್ಯೂಬ್ ಸಿಇಒ - ನೀಲ್ ಮೋಹನ್ (Neal Mohan)
ಅಡೋಬ್ ಸಿಇಒ - ಶಂತನು ನಾರಯೇನ್ (Shantanu Narayen)
ವಿಶ್ವ ಬ್ಯಾಂಕ್ ಸಿಇಒ  - ಅಜಯ್ ಬಂಗಾ ( Ajay Banga)
ಐಬಿಎಂ ಸಿಇಒ - ಅರವಿಂದ್ ಕೃಷ್ಣಾ (Arvind Krishna) 
ಅಲ್ಬರ್ಟ್‌ಸನ್‌ ಸಿಒಒ - ವಿವೇಕ್ ಶಂಕರನ್ ( Vivek Sankaran) 
ನೆಟ್ ಆಪ್ ಸಿಇಒ -   ಜಾರ್ಜ್ ಕುರಿಯನ್ (George Kurian)
ಪಾಲೋ ಅಲ್ಟೋ ನೆಟ್‌ವರ್ಕ್‌ ಸಿಇಒ  ನಿಕೇಶ್ ಅರೋರಾ (Nikesh Arora)
ಅರಿಸ್ಟಾ ನೆಟ್‌ವರ್ಕ್ ಸಿಇಒ - ಜಯಶ್ರೀ ಉಳ್ಳಾಲ್ ( Jayshree Ullal)
ನೋವರ್ತಿಸ್‌ ಸಿಇಒ - ವಸಂತ್ ವಾಸ್  ನರಸಿಂಹನ್ ಎಂ.ಡಿ. Vasant (Vas) Narasimhan, M.D.
ಸ್ಟಾರ್‌ಬಕ್ಸ್ ಸಿಇಒ - ಲಕ್ಷಣ್ ನರಸಿಂಹನ್ (Laxman Narasimhan)
ಮೈಕ್ರಾನ್ ಟೆಕ್ನಾಲಾಜಿ ಸಿಇಒ  - ಸಂಜಯ್  ಮೆಹ್ರೋತ್ರಾ (Sanjay Mehrotra)
ಹನಿವೆಲ್ ಸಿಇಒ  - ವಿಮಲ್ ಕಪೂರ್ (Vimal Kapur)
ಫ್ಲೆಕ್ಸ್ ಸಿಇಒ - ರೇವತಿ ಅದ್ವೈತಿ (Revathi Advaithi)
ವೇ ಫೇರ್ ಸಿಇಒ - ನೀರಜ್ ಶಾ (Niraj Shah)
ಚಾನೆಲ್ ಸಿಇಒ - ಲೀಲಾ ನಾಯರ್ (Leena Nair)
ಒನ್ಲಿಫ್ಯಾನ್‌ ಸಿಇಒ ಅಮ್ರಪಾಲಿ ಗ್ಯಾನ್ (  Amrapali Gan)
ಮೊಟ್ರೋಲಾ ಮೊಬಿಲಿಟಿ ಸಿಇಒ  - ಸಂಜಯ್ ಝಾ (Sanjay Jhā)
ಕಾಗ್ನಿಜೆಂಟ್ ಸಿಇಒ - ರವಿಕುಮಾರ್ ಎಸ್  (Ravi Kumar S)
ವಿಮಿಯೋ ಸಿಇಒ -  ಅಂಜಲಿ ಸೂದ್ (Anjali Sud)

ಭಾರತದ ಸೈನಿಕರ ಪಥಸಂಚಲನಕ್ಕೆ ಫ್ರೆಂಚ್‌ ಅಧ್ಯಕ್ಷ ಫಿದಾ, ಹೆಮ್ಮೆಯ ಕ್ಷಣ ಎಂದ ಭಾರತೀಯರು!

ಇಷ್ಟು ದೊಡ್ಡ ಭಾರತೀಯ ಸಂಜಾತ ಸಿಇಒಗಳ ಲಿಸ್ಟ್ ನೋಡಿ ಸ್ಪೇಸ್‌ಎಕ್ಸ್‌ ಉದ್ಯಮಿ ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರೆನಿಸಿರುವ ಎಲನ್ ಮಸ್ಕ್ ಕೂಡ ಅಚ್ಚರಿ ಪಟ್ಟಿದ್ದಾರೆ. ಅವರ ಜೊತೆ ಇನ್ನು ಕೆಲವು ಸೆಲೆಬ್ರಿಟಿಗಳು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಮೂಲತಃ ಭಾರತೀಯರಾದರೂ ಇದರಲ್ಲಿ ಕೆಲವರ ರಾಷ್ಟ್ರೀಯತೆ ಬೇರೆ ಇದ್ದು, ಈ ಹಿನ್ನೆಲೆಯಲ್ಲಿ ಕೆಲವರು ಇವರು ಭಾರತೀಯರಲ್ಲ ಎಂದಿದ್ದಾರೆ. ಹಾಗೆಯೇ ಒಬ್ಬರು ಚಂದ್ರನ ಸೌತ್‌ ಪೋಲ್‌ಗೂ ಈಗ ಭಾರತೀಯರೇ ಸಿಇಒ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಭಾರತೀಯರು ಶ್ರಮಜೀವಿಗಳು ಇದೇ ಅವರನ್ನು ಈ ಹಂತಕ್ಕೆ ಬೆಳೆಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತೀಯರು ಇಡೀ ವಿಶ್ವವನ್ನೇ ಅಳುತ್ತಿದ್ದಾರೆ. ಗರ್ವ ಹಾಗೂ ಹೆಮ್ಮೆಯಿಂದ ಹೇಳಿಕೊಳ್ಳಿ ನಾವು ಭಾರತೀಯರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Follow Us:
Download App:
  • android
  • ios