ಬಿಸಿನೆಸ್ ಕ್ಲಾಸ್ ಸೀಟು ಲೋಪ, ಭಾರತೀಯ ದಂಪತಿಗೆ 2 ಲಕ್ಷ ಪರಿಹಾರ ನೀಡುವಂತೆ ಸಿಂಗಾಪುರ ಏರ್ ಲೈನ್ಸ್ ಗೆ ಕೋರ್ಟ್ ಸೂಚನೆ
ಸಿಂಗಾಪುರ ಏರ್ ಲೈನ್ಸ್ ಬಿಸಿನೆಸ್ ಕ್ಲಾಸ್ ಸೀಟಿನಲ್ಲಿ ತಾಂತ್ರಿಕ ಸಮಸ್ಯೆಯಿರುವ ಬಗ್ಗೆ ದೂರು ನೀಡಿದ್ದ ಭಾರತೀಯ ಮೂಲದ ದಂಪತಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ನವದೆಹಲಿ (ಮೇ 1): ಬಿಸಿನೆಸ್ ಕ್ಲಾಸ್ ಸೀಟುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಭಾರತೀಯ ದಂಪತಿಗೆ 2,13,585ರೂ. ಪರಿಹಾರ ನೀಡುವಂತೆ ಸಿಂಗಾಪುರ ಏರ್ ಲೈನ್ಸ್ ಗೆ ಆದೇಶಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ತೆಲಂಗಾಣದ ಪೊಲೀಸ್ ಮುಖ್ಯಸ್ಥ ರವಿ ಗುಪ್ತಾ ತನ್ನ ಪತ್ನಿಯ ಜೊತೆಗೆ ಹೈದರಾಬಾದ್ ನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದರು. ಈ ವಿಮಾನ ಸಿಂಗಾಪುರದ ಮೂಲಕ ಹಾದುಹೋಗುತ್ತಿತ್ತು. ಅವರು ಪ್ರತಿ ಬಿಸಿನೆಸ್ ಸೀಟಿಗೆ 66,750ರೂ. ಪಾವತಿಸಿದ್ದರು. ಅಂದಹಾಗೇ ಈ ಘಟನೆ ನಡೆದಿರೋದು ಕಳೆದ ತಿಂಗಳ ಮೇನಲ್ಲಿ. ತಾವು ಬುಕ್ ಮಾಡಿದ ವಿಮಾನದ ಸೀಟುಗಳಲ್ಲಿ ಅಟೋಮ್ಯಾಟಿಕ್ ಆಗಿ ಒರಗುವ ಸೌಲಭ್ಯ ಕಾರ್ಯನಿರ್ವಹಿಸುತ್ತಿಲ್ಲ ಎಂದು ಈ ದಂಪತಿ ಆರೋಪಿಸಿದ್ದರು. ಈ ಘಟನೆ ಕಳೆದ ವರ್ಷದ ಮೇನಲ್ಲಿ ನಡೆದಿತ್ತು.
ಭಾರತೀಯ ದಂಪತಿ ಬುಕ್ ಮಾಡಿದ ಸೀಟುಗಳು ಮ್ಯಾನುವಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಅವುಗಳ ಅಟೋಮ್ಯಾಟಿಕ್ ಫೀಚರ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದ ದಂಪತಿ ತಮ್ಮ ಐದು ಗಂಟೆಗಳ ಪ್ರಯಾಣದಲ್ಲಿ ಕಿರಿಕಿರಿ ಅನುಭವಿಸಿದರು. ಈ ಬಗ್ಗೆ ಅವರು ಏರ್ ಲೈನ್ಸ್ ಗೆ ದೂರು ನೀಡಿದಾಗ ಅವರಿಗೆ 10,000 ನಿರಂತರ ಫ್ಲೈಯರ್ ಮೈಲ್ಸ್ ಅಥವಾ ಪ್ರತಿ ಸೀಟಗೆ ಲಾಯಲ್ಟಿ ಪಾಯಿಂಟ್ಸ್ ನೀಡೋದಾಗಿ ತಿಳಿಸಿದ್ದರು. ಆದರೆ, ಪೊಲೀಸ್ ಅಧಿಕಾರಿ ದಂಪತಿ ಏರ್ ಲೈನ್ಸ್ ನೀಡಿದ ಈ ಕೊಡುಗೆ ತಿರಸ್ಕರಿಸಿದರು. ಅಲ್ಲದೆ, ಸಿಂಗಾಪುರ ಏರ್ ಲೈನ್ಸ್ ವಿರುದ್ಧ ಕೋರ್ಟ್ ನಲ್ಲಿ ದೂರು ದಾಖಲಿಸಿದರು.
ವೀಲ್‌ಚೇರ್ ಸೇವೆ ಇಲ್ಲದೆ ವೃದ್ಧ ಸಾವು, ಏರ್‌ಇಂಡಿಯಾಗೆ 30 ಲಕ್ಷ ದಂಡ ವಿಧಿಸಿದ ಡಿಜಿಸಿಎ!
ಕೋರ್ಟಿಗೆ ಸಲ್ಲಿಕೆ ಮಾಡಿದ ದಾಖಲೆಗಳಲ್ಲಿ ಗುಪ್ತಾ, ಬಿಸಿನೆಸ್ ಕ್ಲಾಸ್ ಸೌಲಭ್ಯಕ್ಕೆ ಹಣ ಪಾವತಿಸಿದ್ರೂ ಕಡಿಮೆ ದರ್ಜೆಯ ಎಕಾನಾಮಿಕ್ ಕ್ಲಾಸ್ ನಲ್ಲಿ ಪ್ರಯಾಣಿಸಿದ ಅನುಭವವಾಗುವಂತೆ ಸಿಂಗಾಪುರ ಏರ್ ಲೈನ್ಸ್ ಮಾಡಿದೆ ಎಂದು ಆರೋಪಿಸಿದರು. ಅಲ್ಲದೆ, ಪ್ರಯಾಣದುದ್ದಕ್ಕೂ ಎಚ್ಚರವಾಗಿರುವಂತೆಯೇ ಈ ಘಟನೆ ಮಾಡಿದೆ ಎಂದು ಆರೋಪಿಸಿದರು.
ಪ್ರಯಾಣದಲ್ಲಿ ಸೀಟ್ ತೊಂದರೆಯಿಂದ ಮಾನಸಿಕ ಯಾತನೆ ಅನುಭವಿಸಿದ ದಂಪತಿಗೆ 2,13,585ರೂ. ಪರಿಹಾರ ನೀಡುವಂತೆ ತೆಲಂಗಾಣದ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಸಿಂಗಾಪುರ ಏರ್ ಲೈನ್ಸ್ ಗೆ ಆದೇಶಿಸಿದೆ.
'ಮಿಸ್ಟರ್ ಹಾಗೂ ಮಿಸೆಸ್ ಸೀಟುಗಳಲ್ಲಿನ ಅಟೋಮ್ಯಾಟಿಕ್ ರಿಕ್ಲೈನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೈದರಾಬಾದ್ ನಿಂದ ಸಿಂಗಾಪುರದ ತನಕದ ಅವರ ವಿಮಾನದಲ್ಲಿ ಮ್ಯಾನುವಲ್ ರಿಕ್ಲೈನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಿಂಗಾಪುರದಿಂದ ಪರ್ಥ್ ಗೆ ಸಂಪರ್ಕ ಕಲ್ಪಿಸುವ ಅವರ ವಿಮಾನದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ' ಎಂದು ಸಿಂಗಾಪುರ ಏರ್ ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
'ಹೈದರಾಬಾದ್ ನಿಂದ ಸಿಂಗಾಪುರಕ್ಕೆ ಸಂಪರ್ಕ ಕಲ್ಪಿಸುವ ವಿಮಾನದ ಅವಧಿ ನಾಲ್ಕು ಗಂಟೆಗಳು. ಈ ವಿಮಾನ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರಿಂದ ಭರ್ತಿಯಾಗಿದ್ದ ಕಾರಣ ವಿಮಾನದ ಸಿಬ್ಬಂದಿಗೆ ಗ್ರಾಹಕರಿಗೆ ಬಿಸಿನೆಸ್ ಕ್ಲಾಸ್ ನಲ್ಲಿ ಬೇರೆ ಸೀಟಿನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸಿಬ್ಬಂದಿ ಆಗಾಗ ಈ ಗ್ರಾಹಕರ ಸೀಟುಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದರು ಹಾಗೂ ಅಗತ್ಯವಿದ್ದಾಗ ಮ್ಯಾನ್ಯುವಲ್ ರಿಕ್ಲೈನ್ ಸೀಟು ವ್ಯವಸ್ಥೆ ಮಾಡಿದ್ದರು. ಈ ತಾಂತ್ರಿಕ ಸಮಸ್ಯೆಯಿಂದ ಉಂಟಾದ ತೊಂದರೆಗೆ ನಾವು ಮಿಸ್ಟರ್ ಹಾಗೂ ಮಿಸೆಸ್ ಗುಪ್ತ ಅವರ ಕ್ಷಮೆ ಕೇಳುತ್ತೇವೆ.
ಇಂಡಿಗೋ ವಿಮಾನದಲ್ಲಿ ನೀಡೋ ಉಪ್ಪಿಟ್ಟಲ್ಲಿ ಮ್ಯಾಗಿಗಿಂತ ಹೆಚ್ಚು ಸೋಡಿಯಂ ಇದೆಯೆಂಂದ ಹೆಲ್ತ್ ಇನ್‌ಫ್ಲುಯೆನ್ಸರ್!
ಈ ಹಿಂದೆ ವೀಲ್‌ಚೇರ್ ಸೇವೆ ಇಲ್ಲದ ಕಾರಣದಿಂದಾಗಿ 80 ವರ್ಷದ ವೃದ್ಧ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಆಗಮನ ಪ್ರದೇಶದಲ್ಲಿ ಕುಸಿದು ಬಿದ್ದು ಸಾವು ಕಂಡ ಘಟನೆಯಲ್ಲಿ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮುಂಬೈನಲ್ಲಿ ವಿಮಾನ ಇಳಿದ ಕೂಡಲೇ ಹೊರಗಡೆ ಹೋಗುವ ಸಲುವಾಗಿ ವೀಲ್‌ಚೇರ್ ವ್ಯವಸ್ಥೆ ಮಾಡುವಂತೆ ವೃದ್ಧ ಪ್ರಯಾಣಿಕರು ಕೇಳಿಕೊಂಡಿದ್ದರು. 80 ವರ್ಷದ ವೃದ್ಧ ಪ್ರಯಾಣಿಕನ ಪತ್ನಿ ಅದಾಗಲೇ ವೀಲ್‌ಚೇರ್ ಬಳಕೆ ಮಾಡುತ್ತಿದ್ದ ಕಾರಣಕ್ಕಾಗಿ, ಅವರಿಗೆ ಕೆಲ ಸಮಯ ಕಾಯುವಂತೆ ಹೇಳಿದ್ದರು. ವೀಲ್‌ಚೇರ್‌ಗೆ ಸಾಕಷ್ಟು ಬೇಡಿಕೆ ಇರುವ ಕಾರಣ ಸಿಗುವುದು ಸ್ವಲ್ಪ ತಡವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಪತ್ನಿಯನ್ನು ಕರೆದುಕೊಂಡು ವೃದ್ಧರು ನಡೆದುಕೊಂಡೇ ಹೋಗಲು ತೀರ್ಮಾನ ಮಾಡಿದ್ದರು ಆದರೆ, ಇಮಿಗ್ರೇಷನ್ ಸಮೀಪ ಬರುವಾಗಲೇ ಅವರು ಅಲ್ಲಿಯೇ ಕುಸಿದು ಬಿದ್ದು ಸಾವು ಕಂಡಿದ್ದಾರೆ.