ಹತ್ತು ವರ್ಷಕ್ಕೊಮ್ಮೆ ಕಡ್ಡಾಯವಾಗಿ  ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ನಾಗರಿಕರಿಗೆ ಸೂಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದೀಗ ಈ ಬಗ್ಗೆ  ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟನೆ ನೀಡಿದ್ದು10 ವರ್ಷಕ್ಕೊಮ್ಮೆ ಆಧಾರ್ ಅಪ್ಡೇಟ್ ಕಡ್ಡಾಯವಲ್ಲ, ಆದರೆ ಮಾಡಿದ್ರೆ ಉತ್ತಮ ಎಂದು ತಿಳಿಸಿದೆ. 

ನವದೆಹಲಿ (ನ.11): ಆಧಾರ್ ಕಾರ್ಡ್ ಗೆ ಸಂಬಂಧಿಸಿ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂಬ ಮಾಧ್ಯ,ಮ ವರದಿಗಳನ್ನು ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರಾಕರಿಸಿದೆ. ಹತ್ತು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ನಾಗರಿಕರಿಗೆ ಮನವಿ ಮಾಡಿದೆ ಎಂದು ಅನೇಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಗೆಜೆಟೆಡ್ ಅಧಿಸೂಚನೆಯಲ್ಲಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂಥ ವರದಿಗಳನ್ನು ತಿರಸ್ಕರಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದೆ. 'ಆಧಾರ್ ಕಾರ್ಡ್ ಬಳಕೆದಾರರು ಸಾಧ್ಯವಾದರೆ ಆಧಾರ್ ಗೆ ಸೇರ್ಪಡೆಯಾದ ದಿನಾಂಕದಿಂದ ಪ್ರತಿ ಹತ್ತು ವರ್ಷ ಪೂರ್ಣಗೊಂಡ ಬಳಿಕ ಗುರುತು ದೃಢೀಕರಣ (ಪಿಒಐ) ಹಾಗೂ ವಿಳಾಸ ದೃಢೀಕರಣ (ಪಿಒಎ) ದಾಖಲೆಗಳನ್ನು ಸಲ್ಲಿಕೆ ಮಾಡಿ ಕನಿಷ್ಠ ಒಮ್ಮೆಯಾದ್ರೂ ಆಧಾರ್‌ ನಲ್ಲಿ ಅಗತ್ಯ ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಂದರೆ ಈ ಹಿಂದೆ ಮಾಧ್ಯಮ ವರದಿಗಳಲ್ಲಿ ತಿಳಿಸಿರುವಂತೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಕಡ್ಡಾಯವೇನಲ್ಲ. ಬದಲಿಗೆ ಆಧಾರ್ ಕಾರ್ಡ್ ಬಳಕೆದಾರರಿಗೆ ಅಗತ್ಯವೆನಿಸಿದ್ರೆ ಮಾಡಬಹುದು ಅಷ್ಟೇ. 

ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದ್ರಿಂದ ಕೇಂದ್ರ ಗುರುತು ಮಾಹಿತಿ ಭಂಡಾರದಲ್ಲಿ (CIDR)ಆಧಾರ್ ಸಂಬಂಧಿ ಮಾಹಿತಿಗಳ ನಿಖರತೆಯ ಬಗ್ಗೆ ಭರವಸೆ ಇರುತ್ತದೆ ಎಂದು ಗಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು ಗಜೆಟ್ ಅಧಿಸೂಚನೆಯಲ್ಲಿ 10 ವರ್ಷಗಳ ಬಳಿಕ ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕು ಎಂಬುದು ಅಸಮರ್ಪಕವಾಗಿದೆ. ಆದರೂ ನಾಗರಿಕರು ಪ್ರತಿ 10 ವರ್ಷಗಳಿಗೊಮ್ಮೆ ಸಾಧ್ಯವಾದರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು. 

ಐಸಿಐಸಿಐ ಮಾಜಿ ಸಿಇಒ ಚಂದ್ರ ಕೊಚ್ಚಾರ್ ವಜಾಗೊಳಿಸಿದ್ದು ಸರಿ: ಬಾಂಬೆ ಹೈಕೋರ್ಟ್

10 ವರ್ಷಗಳ ಹಿಂದೆ ಆಧಾರ್ ಕಾರ್ಡ್ (Aadhaar Card) ಪಡೆದಿರೋರು ಆ ನಂತರದಲ್ಲಿ ಇಲ್ಲಿಯ ತನಕ ಮಾಹಿತಿಗಳನ್ನು ಅಪ್ಡೇಟ್ (Update) ಮಾಡದಿದ್ರೆ ಗುರುತು (Identity) ಹಾಗೂ ವಿಳಾಸ ದೃಢೀಕರಣ (Address Proofs) ದಾಖಲೆಗಳನ್ನು ಅಪ್ಡೇಟ್ ಮಾಡುವಂತೆ ಭಾರತೀಯ ನಾಗರಿಕರಿಗೆ ಕಳೆದ ತಿಂಗಳು ಆಧಾರ್ ಕಾರ್ಡ್ ವಿತರಿಸುವ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮನವಿ ಮಾಡಿತ್ತು. 

ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಹೇಗೆ?
ಆಧಾರ್ ಕಾರ್ಡ್ ಅಪ್ಡೇಟ್ ಗಾಗಿ ಯುಐಡಿಎಐ (UIDAI) ಹೊಸ ವೈಶಿಷ್ಟ್ಯವನ್ನು ತನ್ನ ವೆಬ್ ಸೈಟ್ ನಲ್ಲಿ ಅಭಿವೃದ್ಧಿಪಡಿಸಿದೆ. myAadhaar portal ಅಥವಾ ಯಾವುದೇ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಸೌಲಭ್ಯ ಬಳಸಿಕೊಳ್ಳಬಹುದು. 

ಭಾರತದ ಮೊದಲ ಸಾವರಿನ್ ಗ್ರೀನ್ ಬಾಂಡ್ ಯೋಜನೆಗೆ ವಿತ್ತ ಸಚಿವೆ ಅಂಕಿತ; ಏನಿದರ ವಿಶೇಷತೆ?

ಆಧಾರ್ ಕಾರ್ಡ್ ಅಪ್ಡೇಟ್ ಗೆ ಈ ಕೆಳಗಿನ ಹಂತಗಳನ್ನು ಅನುಸರಿಸಿ
ಹಂತ 1: ಆಧಾರ್ ಸ್ವ-ಸೇವಾ ಪೋರ್ಟಲ್ ಗೆ ಭೇಟಿ ನೀಡಿ ಹಾಗೂ ಅಪ್ಡೇಟ್ ಗಾಗಿ ಮುಂದುವರಿಯಿರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಿ.
ಹಂತ 3: ಈ ಬಳಿಕ ನಿಮಗೆ ಅಪ್ಡೇಟ್ (Update) ಮಾಡಲು ಅನೇಕ ಆಯ್ಕೆಗಳು ಕಾಣಸಿಗುತ್ತವೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನೀವು ಅಪ್ಡೇಟ್ ಮಾಡಲು ಬಯಸಿದ ಒಂದು ಆಯ್ಕೆಯನ್ನು ಆರಿಸಿ. ಒಂದು ವೇಳೆ ಏನಾದ್ರೂ ವಿಳಾಸ ಬದಲಾವಣೆ (address change) ಮಾಡಬೇಕಾದ ಅಗತ್ಯವಿದ್ರೆ ವಿಳಾಸ ಆಯ್ಕೆ ಆಯ್ದುಕೊಂಡು ಮಾಹಿತಿಗಳು ಹಾಗೂ ದಾಖಲೆಗಳನ್ನು ಸೇರಿಸಿ. ಅಲ್ಲಿ ಕೇಳುವ ದಾಖಲೆಗಳನ್ನು (documents) ಸೇರ್ಪಡೆ ಮಾಡಿ ಸಲ್ಲಿಕೆ (submit) ಮೇಲೆ ಕ್ಲಿಕ್ ಮಾಡಿ.