Asianet Suvarna News Asianet Suvarna News

2024ನೇ ಸಾಲಿನಲ್ಲೂ ಜಾಗತಿಕ ಆರ್ಥಿಕತೆಯಲ್ಲಿ ಭಾರತ ಬೆಸ್ಟ್ ಪರ್‌ಫಾರ್ಮರ್‌ : ಐಎಂಎಫ್ ಮೆಚ್ಚುಗೆ

2024ನೇ ಹಣಕಾಸು ಸಾಲಿನಲ್ಲೂ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯ ಸ್ಥಾನ ಉಳಿಸಿಕೊಳ್ಳಲಿದೆ ಎಂದು ಐಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. 

India to remain fastest growing economies in 2024 IMF anu
Author
First Published May 14, 2024, 11:21 AM IST | Last Updated May 14, 2024, 11:21 AM IST

ನವದೆಹಲಿ (ಮೇ 14): 2024ನೇ ಸಾಲಿನಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ. ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಅದ್ವಿತೀಯ ಪ್ರದರ್ಶನ ತೋರಿದ್ದು, 2024ನೇ ಸಾಲಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಪಟ್ಟವನ್ನು ಉಳಿಸಿಕೊಳ್ಳಲಿದೆ ಎಂದು ಐಎಂಎಫ್ ಹೆಳಿದೆ. ಜಾಗತಿಕ ಆರ್ಥಿಕತೆಯ ವಿಸ್ತರಣೆಯಲ್ಲಿ ಏಷ್ಯಾ ಈ ಹಿಂದಿನಂತೆ ಈಗಲೂ ನಿರ್ಣಾಯಕ ಪಾತ್ರ ವಹಿಸಲಿದ್ದು, ಈ ವರ್ಷದ ಜಾಗತಿಕ ಬೆಳವಣಿಗೆ ಶೇ.60ರಷ್ಟು ಕೊಡುಗೆ ನೀಡಲಿದೆ ಎಂದು ಐಎಂಎಫ್ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಒಕಮುರ ಅಭಿಪ್ರಾಯ ಪಟ್ಟಿದ್ದಾರೆ. ವಿವಿಧ ಸವಾಲುಗಳ ಹೊರತಾಗಿಯೂ ಏಷ್ಯಾ ಸ್ಥಿರತೆ ತೋರಿದೆ. ಅದರಲ್ಲೂ ಹಣದುಬ್ಬರ ನಿರ್ವಹಣೆಯಲ್ಲಿ, 2024ರಲ್ಲಿ ಬಹುತೇಕ ರಾಷ್ಟ್ರಗಳು ಕೇಂದ್ರೀಯ ಬ್ಯಾಂಕುಗಳ ನಿಗದಿತ ಗುರಿ ಮುಟ್ಟಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಕೋವಿಡ್ -19 ಬಳಿಕದ ಅವಧಿಯಲ್ಲಿ ಜಾಗತಿಕ ಆರ್ಥಿಕತೆ ಸಾಕಷ್ಟು ಹೊಡೆತಗಳನ್ನು ಅನುಭವಿಸಿದರೂ ಅನಿರೀಕ್ಷಿತ ಪ್ರತಿರೋಧವನ್ನು ತೋರುವ ಮೂಲಕ ಮತ್ತೆ ಪುಟ್ಟಿದೆದ್ದಿದೆ. ಪ್ರಸಕ್ತ ಸಾಲಿನಲ್ಲಿ ಜಾಗತಿಕ ಬೆಳವಣಿಗೆ ಶೇ.3.1ರಷ್ಟು ತಲುಪಲಿದೆ ಎಂದು ಐಎಂಎಫ್ ಇತ್ತೀಚಿನ ವಿಶ್ವ ಆರ್ಥಿಕಾ  ಮೇಲ್ನೋಟ ತಿಳಿಸಿದೆ.

ಏಷ್ಯಾ ಭರವಸೆಯ ಬೆಳವಣಿಗೆ ಪಥದಲ್ಲಿ ಸಾಗುತ್ತಿದ್ದರೂ ಅದರ ಹೊರತಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್ -19 ಪೆಂಡಾಮಿಕ್ ಹಾಗೂ ಉಕ್ರೇನ್-ರಷ್ಯಾ ಸಂಘರ್ಷದ ಸಮಯದಲ್ಲಿ ಜಗತ್ತಿನಾದ್ಯಂತ ಸರ್ಕಾರಗಳು ವಿಶಿಷ್ಟ ಬೆಂಬಲವನ್ನು ನೀಡಿದವು. ಆದರೆ, ಈಗ ಸಂಪನ್ಮೂಲಗಳ ಕೊರತೆ, ಅಧಿಕ ಸಾಲದ ಮಟ್ಟ ಹಾಗೂ ಸಾಲದ ಸೇವೆಗಳ ವೆಚ್ಚದಲ್ಲಿ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತಿವೆ. ಈ ಸವಾಲುಗಳ ಹಂತದಲ್ಲಿ ಹೆಚ್ಚುತ್ತಿರುವ ವೆಚ್ಚದ ಬೇಡಿಕೆಗಳು ಹಾಗೂ ಭವಿಷ್ಯದ ಶಾಕ್ ಗಳಿಗೆ ತಡೆಯೊಡ್ಡಲು ದೇಶೀಯ ಆದಾಯ ಸಂಗ್ರಹಣೆಯ ಮಹತ್ವವನ್ನು ಒಕಮುರ ಒತ್ತಿ ಹೇಳಿದ್ದಾರೆ. 

ಭಾರತದ ಆರ್ಥಿಕ ಶಿಸ್ತಿಗೆ ಐಎಂಎಫ್‌ ಮುಕ್ತ ಪ್ರಶಂಸೆ

ಭಾರತದ ಆರ್ಥಿಕ ಮೇಲ್ನೋಟ
ಪ್ರಮುಖ ಆರ್ಥಿಕತೆಗಳ ನಡುವೆ ಭಾರತ ಅದ್ವಿತೀಯ ನಿರ್ವಹಣೆ ತೋರಿದ್ದು, 2024ರಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಲಿರುವ ಆರ್ಥಿಕತೆಯ ಸ್ಥಾವನ್ನು ಉಳಿಸಿಕೊಳ್ಳಲಿದೆ ಎಂದು ಐಎಂಎಫ್ ತಿಳಿಸಿದೆ. ಇತ್ತೀಚಿನ ಐಎಂಎಫ್ 'ವಿಶ್ವ ಆರ್ಥಿಕ ಮುನ್ನೋಟದಲ್ಲಿ 2024ನೇ ಸಾಲಿನ ಭಾರತದ ಪ್ರಗತಿ ಅಂದಾಜು ದರವನ್ನು ಶೇ.6.8ಕ್ಕೆ ಹೆಚ್ಚಿಸಲಾಗಿತ್ತು. ದೇಶೀಯ ಬೇಡಿಕೆ ಹೆಚ್ಚಳ ಹಾಗೂ ಉದ್ಯೋಗ ಮಾಡುವ ವಯಸ್ಸಿನ ಜನಸಂಖ್ಯೆ ಹೆಚ್ಚಳವನ್ನು ಈ ಪ್ರಗತಿಗೆ ಪೂರಕ ನಿರ್ಣಾಯಕ ಅಂಶಗಳನ್ನಾಗಿ ಪರಿಗಣಿಸಲಾಗಿತ್ತು. 
ಜಾಗತಿಕ ಉದ್ಯೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದಲ್ಲಿ ಭಾರತ ಹಾಗೂ ಆಫ್ರಿಕಾ ಸಹರ ಉಪ ಭಾಗದ ಪಾತ್ರಕ್ಕೆ ಐಎಂಎಫ್ ಹೆಚ್ಚಿನ ಒತ್ತು ನೀಡಿದೆ. 

ಭಾರತದ ಆರ್ಥಿಕ ನಿರ್ವಹಣೆ
ಭಾರತದ ಅಧಿಕೃತ ಅಂಕಿಅಂಶಗಳು ಆರ್ಥಿಕತೆ ಅತ್ಯುತ್ತಮ ನಿರ್ವಹಣೆ ತೋರುತ್ತಿರೋದನ್ನು ಸೂಚಿಸುತ್ತಿವೆ. 2023-24ನೇ ಹಣಕಾಸು ಸಾಲಿನ ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತ ಶೇ.8.4ರಷ್ಟು ಪ್ರಗತಿ ದಾಖಲಿಸಿದೆ. ಭಾರತದ ಆರ್ಥಿಕತೆ ಮೇಲ್ಮುಖ ಬೆಳವಣಿಗೆ ಮುಂದುವರಿಸಿದ್ದು 2022-23 ಹಾಗೂ 2021-22ನೇ ಹಣಕಾಸು ಸಾಲುಗಳಲ್ಲಿ ಕ್ರಮವಾಗಿ ಶೇ.7.2 ಹಾಗೂ ಶೇ.8.7ರಷ್ಟು ಬೆಳವಣಿಗೆ ದರ ದಾಖಲಿಸಿವೆ. 

Maldives: ಆರ್ಥಿಕ ದುಸ್ಥಿತಿಗೆ ತಲುಪಿದ ಮಾಲ್ಡೀವ್ಸ್‌: ಬೇಲ್ಔಟ್ ಸಾಲಕ್ಕಾಗಿ IMF ಮೊರೆ, ದಿವಾಳಿ ಎಂದು ಘೋಷಣೆ

ಲೋಕಸಭೆ ಚುನಾವಣೆಯ ವರ್ಷದಲ್ಲೂ ಭಾರತ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ ಎಂದು ಐಎಂಎಫ್‌ ಇತ್ತೀಚೆಗೆ ಭಾರತವನ್ನು ಪ್ರಶಂಸಿಸಿತ್ತು. ಭಾರತದ ಆರ್ಥಿಕತೆ ಚೆನ್ನಾಗಿದೆ. ವಿಶ್ವದಲ್ಲಿ ಪ್ರಕಾಶಮಾನ ವಾಗಿ ಮುಂದುವರಿಯುತ್ತಿದೆ. ಜಿಡಿಪಿ ದರ ಶೇ.6.8ರಷ್ಟಿದ್ದು, ಅದು ಅತ್ಯುತ್ತಮವಾಗಿದೆ. ಹಣ ದುಬ್ಬರ ಇಳಿಯುತ್ತಿದೆ. ನಿಗದಿತ ಗುರಿಗೆ ಹಣದುಬ್ಬರ ಇಳಿಯು ವಂತೆ ಮಾಡಬೇಕಾಗಿದೆ. ಸಮಗ್ರ ಆರ್ಥಿಕತೆ ಕೂಡ ಚೆನ್ನಾಗಿದೆ ಎಂದು ಐಎಂಎಫ್‌ ಹೇಳಿತ್ತು. 

2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.7.5ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್‌ ಏಪ್ರಿಲ್ ನಲ್ಲಿ ಅಂದಾಜಿಸಿತ್ತು. ವಿಶೇಷವೆಂದರೆ ತನ್ನ ಈ ಹಿಂದಿನ ವರದಿಯಲ್ಲಿ ಅದು ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.3ರಷ್ಟು ಇರಬಹುದು ಎಂದು ಹೇಳಿತ್ತು. ಅದಕ್ಕೆ ಹೋಲಿಸಿದರೆ ಇದೀಗ ಭಾರೀ ಪ್ರಗತಿ ದರ ಭಾರೀ ಏರಿಕೆಯ ಸುಳಿವನ್ನು ಅದು ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡೀ ದಕ್ಷಿಣ ಏಷ್ಯಾ ವಲಯ ಶೇ.6.0ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ ಎಂದು ವರದಿ ಹೇಳಿದೆ. 

Latest Videos
Follow Us:
Download App:
  • android
  • ios