ಭಾರತದ ಆರ್ಥಿಕ ಶಿಸ್ತಿಗೆ ಐಎಂಎಫ್‌ ಮುಕ್ತ ಪ್ರಶಂಸೆ

ಭಾರತದ ಆರ್ಥಿಕತೆ ಚೆನ್ನಾಗಿದೆ. ವಿಶ್ವದಲ್ಲಿ ಪ್ರಕಾಶಮಾನವಾಗಿ ಮುಂದುವರಿಯುತ್ತಿದೆ. ಜಿಡಿಪಿ ದರ ಶೇ.6.8ರಷ್ಟಿದ್ದು, ಅದು ಅತ್ಯುತ್ತಮವಾಗಿದೆ. ಹಣ ದುಬ್ಬರ ಇಳಿಯುತ್ತಿದೆ. ನಿಗದಿತ ಗುರಿಗೆ ಹಣದುಬ್ಬರ ಇಳಿಯು ವಂತೆ ಮಾಡಬೇಕಾಗಿದೆ. ಸಮಗ್ರ ಆರ್ಥಿಕತೆ ಕೂಡ ಚೆನ್ನಾಗಿದೆ: ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್

IMF Praises India's Economic Discipline During Lok Sabha Elections 2024 grg

ವಾಷಿಂಗ್ಟನ್(ಏ.20):  ಲೋಕಸಭೆ ಚುನಾವಣೆಯ ವರ್ಷದಲ್ಲೂ ಭಾರತ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಪ್ರಶಂಸೆಯನ್ನು ವ್ಯಕ್ತಪಡಿಸಿದೆ. 

ಭಾರತದ ಆರ್ಥಿಕತೆ ಚೆನ್ನಾಗಿದೆ. ವಿಶ್ವದಲ್ಲಿ ಪ್ರಕಾಶಮಾನ ವಾಗಿ ಮುಂದುವರಿಯುತ್ತಿದೆ. ಜಿಡಿಪಿ ದರ ಶೇ.6.8ರಷ್ಟಿದ್ದು, ಅದು ಅತ್ಯುತ್ತಮವಾಗಿದೆ. ಹಣ ದುಬ್ಬರ ಇಳಿಯುತ್ತಿದೆ. ನಿಗದಿತ ಗುರಿಗೆ ಹಣದುಬ್ಬರ ಇಳಿಯು ವಂತೆ ಮಾಡಬೇಕಾಗಿದೆ. ಸಮಗ್ರ ಆರ್ಥಿಕತೆ ಕೂಡ ಚೆನ್ನಾಗಿದೆ ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೋದಿ 3ನೇ ಅವಧಿಯಲ್ಲಿ ಭಾರತ ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ: ಪ್ರಲ್ಹಾದ್‌ ಜೋಶಿ

ಚುನಾವಣೆ ವರ್ಷದಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ನನ್ನ ಪ್ರಕಾರ ಹೆಗ್ಗುರುತು. ಏಕೆಂದರೆ, ಚುನಾವಣೆ ವರ್ಷದಲ್ಲಿ ದೇಶಗಳು ಆರ್ಥಿಕ ದುಸ್ಸಾಹಸಕ್ಕೆ ಇಳಿಯುತ್ತವೆ ಎಂದು ಅವರು ಹೇಳಿದ್ದಾರೆ.

ಭಾರತ ಕಳೆದ ಹಲವು ವರ್ಷಗಳಿಂದ ಹಲವಾರು ಬಗೆಯ ಆಘಾತಗಳನ್ನು ಎದುರಿಸಿದೆ. ಆದಾಗ್ಯೂ ಶರವೇಗದಲ್ಲಿ ಪ್ರಗತಿ ಹೊಂದುತ್ತಿರುವ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗಿ ಬಳಕೆ ಹಾಗೂ ಸಾರ್ವಜನಿಕ' ರದಿಯಿ ಭಾರತ ಈ ಪ್ರಗತಿ ಹೊಂದಬಹುದು ಅವರು ಹೇಳಿದ್ದಾರೆ. 

ಷೇರುಮಾರುಕಟ್ಟೆಯಲ್ಲಿ ಹೆಚ್ಚಾಗ್ತಿದೆ ಮಹಿಳೆಯರ ಪಾತ್ರ , ಹೇಗಿದೆ ಸಕ್ಸಸ್ ರೇಟ್?

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಸರ್ಕಾರಗಳು ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತವೆ. ಆದರೆ ಚುನಾವಣೆಗೂ ಮುನ್ನ ಮಂಡಿಸಲಾದ ಕೇಂದ್ರ ಬಜೆಟ್ ನಲ್ಲಿ ಇಂತಹ ಯಾವುದೇ ಘೋಷಣೆಗಳೂ ಇರಲಿಲ್ಲ ಎಂಬುದು ಗಮನಾರ್ಹ.

ಸೆನ್ಸೆಕ್ಸ್ 599 ಅಂಕ ಜಿಗಿತ: 

ಸತತ ನಾಲ್ಕು ದಿನಗಳಿಂದ ಪತನವಾಗುತ್ತಿದ್ದ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ಏರಿಕೆ ಹಾದಿ ಹಿಡಿಯಿತು. ಬಾಂಬೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) 599.34 ಅಂಕ ಏರಿಕೆಯಿಂದ 73,088.33ಕ್ಕೆ ತಲುಪಿತು. ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ (ನಿಫ್ಟಿ) 151.15 ಅಂಕ ಜಿಗಿತದಿಂದ 22, 147.00ರಲ್ಲಿ ಸ್ಥಿರ ಗೊಂಡಿತು. ಬಜಾಜ್ ಫಿನಾನ್ಸ್, ಮಾರುತಿ, ವಿಪ್ರೋ, ಭಾರ್ತಿ ಏರ್‌ಟೆಲ್ ಲಾಭ ಗಳಿಸಿದವು.

Latest Videos
Follow Us:
Download App:
  • android
  • ios