ಟ್ರಂಪ್ ಸರ್ಕಾರಕ್ಕೆ ಸೈಲೆಂಟಾಗಿ ಗುದ್ದು ಕೊಟ್ಟ ಮೋದಿ ಸರ್ಕಾರ| ಭಾರತಕ್ಕೆ ನೀಡಿದ್ದ ಜಿಎಸ್‌ಪಿ ಸ್ಥಾನವನ್ನು ರದ್ದುಗೊಳಿದ್ದ ಅಮೆರಿಕ| ಭಾರತದಿಂದ ಆಮದಾಗುವ ವಸ್ತುಗಳಿಗೆ ಅಧಿಕ ಸುಂಕ| ಅಮೆರಿಕದ ಮೇಲೆ ಪ್ರತೀಕಾರದ ಸುಂಕ ವಿಧಿಸಿದ ಭಾರತ| ಅಮೆರಿಕದ 29 ವಸ್ತುಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು|
ನವದೆಹಲಿ(ಜೂ.14): ಭಾರತಕ್ಕೆ ನೀಡಿದ್ದ ಜಿಎಸ್‌ಪಿ ಸ್ಥಾನವನ್ನು ರದ್ದುಗೊಳಿಸಿರುವ ಅಮೆರಿಕ, ಭಾರತದಿಂದ ಆಮದಾಗುವ ವಸ್ತುಗಳಿಗೆ ಅಧಿಕ ಸುಂಕ ವಿಧಿಸಲು ನಿರ್ಧರಿಸಿದೆ.
ಇದಕ್ಕೆ ಪ್ರತಿಯಾಗಿ ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಭಾರತ, ಅಮೆರಿಕದಿಂದ ಆಮದಾಗುವ 29 ವಸ್ತುಗಳಿಗೆ ಅಧಿಕ ಸುಂಕ ವಿಧಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
ಇದೇ ಜೂ.16ರಿಂದ ನೂತನ ಸುಂಕ ನೀತಿ ಜಾರಿಗೆ ಬರಲಿದ್ದು, ಅಮೆರಿಕದ 29 ವಸ್ತುಗಳ ಮೇಲಿನ ತೆರಿಗೆ ವಿನಾಯ್ತಿಯನ್ನು ಭಾರತ ರದ್ದುಗೊಳಿಸಿದೆ.
ಭಾರತಕ್ಕೆ ಈ ಹಿಂದೆ ನೀಡಲಾಗಿದ್ದ ತೆರಿಗೆ ವಿನಾಯ್ತಿಯನ್ನು ರದ್ದುಗೊಳಿಸಿ ಬೀಗಿದ್ದ ಟ್ರಂಪ್ ಸರ್ಕಾರ, ಇದೀಗ ಭಾರತದ ಪ್ರತಿಕಾರದ ಸುಂಕಕ್ಕೆ ಹೈರಾಣಾದಂತಿದೆ.
ಪ್ರಮುಖವಾಗಿ ಬಾದಾಮಿ, ಆಕ್ರೋಡು ಹಾಗೂ ದ್ವಿದಳ ಧಾನ್ಯಗಳ ಮೇಲಿನ ತೆರಿಗೆ ವಿನಾಯ್ತಿ ರದ್ದುಗೊಳಿಸಲಾಗಿದ್ದು, ಇದರಿಂದಾಗಿ ಅಮೆರಿಕ 217 ಮಿಲಿಯನ್ ಡಾಲರ್ ಅಧಿಕ ಸುಂಕ ವಿಧಿಸಬೇಕಾದ ಪರಿಸ್ಥಿತಿ ಎದುರಾಗಿದೆ.
