Asianet Suvarna News Asianet Suvarna News

ಇರಾನ್ ತೈಲ ನಿರ್ಬಂಧ ವಿನಾಯ್ತಿ ಮುಂದುವರಿಕೆಗೆ ಯುಎಸ್ ನಕಾರ: ಏನ್ಮಾಡಲಿದೆ ಭಾರತ?

ಇರಾನ್ ತೈಲದ ಮೇಲಿನ ನಿರ್ಬಂಧ ವಿನಾಯ್ತಿ ಇಲ್ಲ ಎಂದ ಅಮೆರಿಕ| ನಿರ್ಬಂಧ ವಿನಾಯ್ತಿ ಮುಂದುವರೆಸಲು ಅಮೆರಿಕ ಸ್ಪಷ್ಟ ನಕಾರ| ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ| ಅಮೆರಿಕದ ನಿರ್ಧಾರ ವಿಶ್ಲೇಷಿಸುತ್ತಿರುವುದಾಗಿ ಹೇಳಿದ ಭಾರತ| ಭಾರತ ಸೇರಿದಂತೆ ಒಟ್ಟು 8 ರಾಷ್ಟ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ|

India Studying Implications After US Move Against Iran Oil
Author
Bengaluru, First Published Apr 22, 2019, 8:31 PM IST

ವಾಷಿಂಗ್ಟನ್(ಏ.22): ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಈ ಹಿಂದೆ ನೀಡಲಾಗಿದ್ದ ನಿರ್ಬಂಧ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ಸ್ಪಷ್ಟವಾಗಿ ನಿರಾಕರಿಸಿದೆ.

ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಈ ಹಿಂದೆ ಘೋಷಿಸಿತ್ತು.

ಆದರೆ ಈ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ನಿರಾಕರಿಸಿದ್ದು, ಭಾರತದ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ಈ ನಿರ್ಧಾರದಿಂದಾಗಿ ಬೀರಬಹುದಾದ ಪರಿಣಾಮದ ಕುರಿತು ವಿಶ್ಲೇಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳಾದ ಚೀನಾ, ಜಪಾನ್, ದ.ಕೋರಿಯಾ, ಭಾರತ ಸೇರಿದಂತೆ ಎಲ್ಲಾ ಪ್ರಮುಖ 8 ರಾಷ್ಟ್ರಗಳಿಗೆ ಈ ನಡೆಯಿಂದ ದೊಡ್ಡ ನಿರಾಳತೆ ಸಿಕ್ಕಂತಾಗಿತ್ತು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios