Asianet Suvarna News Asianet Suvarna News

Inflation: ಪ್ರಸಕ್ತ ಆರ್ಥಿಕ ಸಾಲಿನ ದ್ವಿತೀಯಾರ್ಧದಲ್ಲಿ ಹಣದುಬ್ಬರ ತಗ್ಗುವ ನಿರೀಕ್ಷೆ: ಆರ್ ಬಿಐ ಗವರ್ನರ್

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಎಲ್ಲರ ನೆಮ್ಮದಿ ಕೆಡಿಸಿದೆ. ಈ ನಡುವೆ ಹಣದುಬ್ಬರದ ಕುರಿತು ಮಾತನಾಡಿರುವ ಆರ್ ಬಿಐ ಗವರ್ನರ್, ಪ್ರಸಕ್ತ ಆರ್ಥಿಕ ಸಾಲಿನ ದ್ವಿತೀಯಾರ್ಧದಲ್ಲಿ ಹಣದುಬ್ಬರ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 
 

Inflation May Ease Gradually in Second Half of Fiscal Says RBI Governor Shaktikanta Das
Author
Bangalore, First Published Jul 9, 2022, 5:43 PM IST

ನವದೆಹಲಿ (ಜು.9): ಭಾರತದಲ್ಲಿ ಹಣದುಬ್ಬರ (Inflation) ಪ್ರಸಕ್ತ ಆರ್ಥಿಕ ಸಾಲಿನ ದ್ವಿತೀಯಾರ್ಧದಲ್ಲಿ ಕ್ರಮೇಣ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ (RBI) ಗವರ್ನರ್ (Governor) ಶಕ್ತಿಕಾಂತ್ ದಾಸ್ (Shaktikanta Das) ಶನಿವಾರ (ಜು.9) ಅಭಿಪ್ರಾಯ ಪಟ್ಟಿದ್ದಾರೆ.ಬಲಿಷ್ಠ ಹಾಗೂ ಸುಸ್ಥಿರ ಪ್ರಗತಿಗಾಗಿ ಹಣದುಬ್ಬರ ತಡೆಗೆ ಆರ್ ಬಿಐ (RBI) ಸೂಕ್ತ ಕ್ರಮ ಕೈಗೊಳ್ಳೋದನ್ನು ಮುಂದುವರಿಸಲಿದೆ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಕೌಟಿಲ್ಯ ಎಕಾನಾಮಿಕ್ ಕಾನ್ ಕ್ಲೇವ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ದಾಸ್, ಹಣದುಬ್ಬರ ತಡೆಗೆ ಆರ್ ಬಿಐ ಕೈಗೊಂಡಿರುವ ಆರ್ಥಿಕ ಕ್ರಮಗಳಿಂದಾಗಿ ಮುಂದಿನ ದಿನಗಳಲ್ಲಿ ಹಣದುಬ್ಬರ ತಗ್ಗುವ ನಿರೀಕ್ಷೆಯಿದೆ ಎಂದರು. 2022-23ನೇ ಆರ್ಥಿಕ ಸಾಲಿನ ದ್ವಿತೀಯಾರ್ಧದಲ್ಲಿ ಹಣದುಬ್ಬರ ತಗ್ಗಬಹುದು ಎಂಬುದು ನಮ್ಮ ಈಗಿನ ಅಂದಾಜು ಆಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಥೂಲ ಆರ್ಥಿಕತೆ (macroeconomy) ಹಾಗೂ ಹಣಕಾಸಿನ ಸ್ಥಿರತೆ (Monetary Satbility) ನಿರ್ವಹಣೆಯಲ್ಲಿ ಬೆಲೆ ಸ್ಥಿರತೆ (Price Stability) ನಿರ್ಣಾಯಕ ಪಾತ್ರ ವಹಿಸುತ್ತದೆ. ಸ್ಥೂಲ ಆರ್ಥಿಕತೆಯ ಸ್ಥಿರತೆಗೆ ಆರ್ ಬಿಐ (RBI) ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಆಮ್ನೆಸ್ಟಿಇಂಡಿಯಾ ಮಾಜಿ ಸಿಇಒ Aakar Patelಗೆ 61 ಕೋಟಿ ದಂಡ

ಹಣದುಬ್ಬರದ ಒತ್ತಡ ಹಾಗೂ ಘಟಿಸುತ್ತಿರುವ ಬೆಳವಣಿಗೆಗಳನ್ನು ಆಧಾರಿಸಿ ಹಣಕಾಸು ನೀತಿ ಸಮಿತಿಯು ಏಪ್ರಿಲ್ ಹಾಗೂ ಜೂನ್ ಸಭೆಯಲ್ಲಿ 2022-23ನೇ ಆರ್ಥಿಕ ಸಾಲಿನ ಹಣದುಬ್ಬರವನ್ನು ಎರಡು ಹಂತಗಳಲ್ಲಿ ಶೇ. 6.7 ಕ್ಕೆ ಅಂದಾಜಿಸಿದೆ. ಇನ್ನು ಏರಿಕೆಯಾಗುತ್ತಿರುವ ಆಹಾರ ಪದಾರ್ಥಗಳ ಬೆಲೆಗಳನ್ನು ಪರಿಗಣಿಸಿ ಮೇ ಹಾಗೂ ಜೂನ್ ನಲ್ಲಿ ಹಣಕಾಸು ನೀತಿ ಸಮಿತಿ (MPC) ರೆಪೋ ದರವನ್ನು ಕ್ರಮವಾಗಿ  40  ಹಾಗೂ 50 ಬೇಸಿಸ್ ಪಾಯಿಂಟ್ ಗಳಷ್ಟು (Basis Points) ಏರಿಕೆ ಮಾಡಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಇನ್ನು ಜಾಗತಿಕ ಪ್ರಗತಿ ಬಗ್ಗೆ ಮಾತನಾಡಿದ ದಾಸ್, ಆರ್ಥಿಕ ಪರಸ್ಥಿತಿಗಳು ಬಿಗಿಗೊಳ್ಳುತ್ತಿವೆ. ಇದಕ್ಕೆ ಹಣಕಾಸು ನೀತಿಗಳು ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಕಾರಣವಾಗಿದೆ ಎಂದರು. ಜಗತ್ತಿನಾದ್ಯಂತ ನಿಂತುಬ್ಬರದ  (stagflation) ಭೀತಿ ಎದುರಾಗಿದೆ. ಇನ್ನು ಜಗತ್ತಿನ ಕೆಲವು ಭಾಗಗಳಲ್ಲಿ ಆರ್ಥಿಕ ಹಿಂಜರಿತದ (recession) ಭೀತಿಯೂ ಎದುರಾಗಿದೆ ಎಂದರು. 

ಜಾಗತೀಕರಣದ ಪ್ರಯೋಜನಗಳು ನಿರ್ದಿಷ್ಟ ಅಪಾಯಗಳು ಹಾಗೂ ಸವಾಲುಗಳನ್ನು ಕೂಡ ಒಳಗೊಂಡಿವೆ. ಆಹಾರ, ಇಂಧನ, ಅಗತ್ಯವಸ್ತುಗಳ ಬೆಲೆಗಳ ಮೇಲೆ ಜಾಗತಿಕ ಬೆಳವಣಿಗೆಗಳು ಪರಿಣಾಮ ಬೀರುತ್ತಿವೆ. ಇತ್ತೀಚಿನ ಬೆಳವಣಿಗೆಗಳು ಜಾಗತಿಕ ಅಂಶಗಳನ್ನು ದೇಶೀಯ ಹಣದುಬ್ಬರ ಹಾಗೂ ಸ್ಥೂಲ ಆರ್ಥಿಕ ಅಭಿವೃದ್ಧಿಗಳ ವಿಚಾರಗಳಲ್ಲಿ ಕೂಡ ಪರಿಗಣಿಸಬೇಕಾದ ಅಗತ್ಯವಿದೆ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.  

ಗೋಧಿ ಹಿಟ್ಟಿನ ರಫ್ತಿಗೆ ನಿರ್ಬಂಧ
ಕೇಂದ್ರ ಸರ್ಕಾರ ಗೋಧಿ ಹಿಟ್ಟು (Wheat flour), ಮೈದಾ (Maida) ಮತ್ತು ರವೆ (Semolina) ರಫ್ತಿನ ನಿಗ್ರಹಕ್ಕೆ ಮುಂದಾಗಿದೆ. ಜುಲೈ 12ರ ಬಳಿಕ ಇವುಗಳ ರಫ್ತಿಗೆ ಅಂತರ್ ಸಚಿವಾಲಯ ಸಮಿತಿಯ (IMC) ಅನುಮತಿ ಪಡೆಯೋದು ಕಡ್ಡಾಯ. ಮೇ 13ರಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ  (DGDT) ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವ ಕಾರಣ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. 

ಇನ್ನು 5 ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್‌ ನಿಷೇಧ: ಸಚಿವ Nitin Gadkari

ಮೇನಲ್ಲಿ ಶೇ. 7.04 ಚಿಲ್ಲರೆ ಹಣದುಬ್ಬರ 
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿತ್ತು.  ಏಪ್ರಿಲ್ ಗಿಂತ ಮೇನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದ್ದರೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟಕ್ಕಿಂತ ಹೆಚ್ಚಿದೆ. ಏಪ್ರಿಲ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.79ರಷ್ಟಿತ್ತು.ಚಿಲ್ಲರೆ ಹಣದುಬ್ಬರ (Retail inflation) ಮೇನಲ್ಲಿ ಕುಸಿತ ಕಂಡಿದೆ. ಏಪ್ರಿಲ್ ನಲ್ಲಿ ಶೇ.7.79ರಷ್ಟಿದ್ದ ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ.7.04ಕ್ಕೆ ಇಳಿಕೆಯಾಗಿದೆ. ಈ ಮೂಲಕ ಬೆಲೆಯೇರಿಕೆ ಬಿಸಿಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಕೊಂಚ ಮಟ್ಟಿನ ನಿರಾಳತೆ ಸಿಕ್ಕಿದ್ದರು ಕೂಡ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟಕ್ಕಿಂತ ಚಿಲ್ಲರೆ ಹಣದುಬ್ಬರ ಹೆಚ್ಚಿದೆ.

Follow Us:
Download App:
  • android
  • ios