ನವದೆಹಲಿ(ಜೂ.04): ಕರ್ನಾಟಕದ ಮಂಗಳೂರು, ಉಡುಪಿ ಜಿಲ್ಲೆಯ ಪಾದೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಭೂಗತ ತೈಲ ಸಂಗ್ರಾಹಾರಗಳಿಂದ ದೇಶಕ್ಕೆ ಬರೋಬ್ಬರಿ 5000 ಕೋಟಿ ರು. ವಿದೇಶಿ ವಿನಿಮಯ ಉಳಿತಾಯವಾಗಿದೆ.

ಜಗತ್ತಿನಲ್ಲಿ ತೈಲ ಬೆಲೆ ಕುಸಿತ; ಭಾರತಕ್ಕೆ ಲಾಭವಿದೆಯೇ?

53 ಲಕ್ಷ ಟನ್‌ನಷ್ಟುತುರ್ತು ಇಂಧನ ಸಂಗ್ರಹಕ್ಕೆ ಈ ಮೂರೂ ಕಡೆ ಪೆಟ್ರೋಲಿಯಂ ಸಚಿವಾಲಯ ಭೂಗತ ಸಂಗ್ರಹಾಗಾರ ಹೊಂದಿದೆ. ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 2 ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಾಗ ಕೇಂದ್ರ ಸರ್ಕಾರ ಅಗ್ಗದ ಬೆಲೆಗೆ ತೈಲ ಖರೀದಿಸಿ ಈ ತೈಲ ಸಂಗ್ರಹಾಗಾರಗಳಿಗೆ ತುಂಬಿದೆ. ಆ ವೇಳೆ ಮಂಗಳೂರು ಹಾಗೂ ಪಾದೂರಿನ ಸಂಗ್ರಾಹಾಗಾರಗಳು ಅರ್ಧದಷ್ಟುಖಾಲಿ ಇದ್ದವು. ವಿಶಾಖಪಟ್ಟಣದಲ್ಲಿ ಕೆಲವೇ ಪ್ರಮಾಣದ ಸಂಗ್ರಹಕ್ಕೆ ಜಾಗವಿತ್ತು. ಕೇಂದ್ರ ಸರ್ಕಾರದ ಆ ನಿರ್ಧಾರದಿಂದಾಗಿ 5000 ಕೋಟಿ ರು. ನಷ್ಟುವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್‌ ಮಾಡಿದೆ.

ಮಂಗಳೂರು, ಪಾದೂರು, ವಿಶಾಖಪಟ್ಟಣ ಪೈಕಿ ಪಾದೂರು ಘಟಕವೇ ದೊಡ್ಡದು. ಈ ಮೂರೂ ಘಟಕಗಳಲ್ಲಿ 53 ದಶಲಕ್ಷ ಟನ್‌ ತೈಲ ಸಂಗ್ರಹಿಸಬಹುದು. 9.5 ದಿನ ದೇಶದ ಬೇಡಿಕೆ ಈಡೇರಿಸಬಲ್ಲದು.