*ಐಪಿಪಿಬಿಯಲ್ಲಿ ಡಿಜಿಟಲ್ ಉಳಿತಾಯ ಖಾತೆ ತೆರೆದ 12 ತಿಂಗಳೊಳಗೆ ಕೆವೈಸಿ ಮಾಹಿತಿ ನೀಡೋದು ಕಡ್ಡಾಯ* ಕೆವೈಸಿ ಮಾಹಿತಿ ನವೀಕರಿಸದ ಹಿನ್ನೆಲೆಯಲ್ಲಿ ಖಾತೆ ಮುಚ್ಚಲ್ಪಟ್ಟರೆ 150ರೂ.+ಜಿಎಸ್ಟಿ *2022ರ ಮಾರ್ಚ್ 5ರಿಂದ ಜಾರಿಗೆ ಬರಲಿದೆ ಈ ನಿಯಮ

Business Desk:ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ( IPPB) ಡಿಜಿಟಲ್ ಉಳಿತಾಯ ಖಾತೆ (Digital Savig Sccount) ಹೊಂದಿದ್ದೀರಾ? ಮಾರ್ಚ್ 5ರ ಬಳಿಕ ಈ ಖಾತೆ ಮುಚ್ಚಲ್ಪಟ್ಟರೆ (Close) 150ರೂ.+ ಜಿಎಸ್ ಟಿ (GST) ಶುಲ್ಕ ಪಾವತಿಸಬೇಕಾಗುತ್ತದೆ. ಏಕೆಂದ್ರೆ ಡಿಜಿಟಲ್ ಉಳಿತಾಯ ಖಾತೆ ಮುಚ್ಚೋದಕ್ಕೂ ಶುಲ್ಕ ವಿಧಿಸಲು ಐಪಿಪಿಬಿ ನಿರ್ಧರಿಸಿದೆ. ಕೆವೈಸಿ (KYC) ನವೀಕರಣಗೊಳ್ಳದ ಹಿನ್ನೆಲೆಯಲ್ಲಿ ಒಂದು ವರ್ಷದ ಬಳಿಕ ಡಿಜಿಟಲ್ ಉಳಿತಾಯ ಖಾತೆ ಮುಚ್ಚಲ್ಪಟ್ಟಿದ್ರೆ ಮಾತ್ರ ಈ ಶುಲ್ಕ ವಿಧಿಸಲಾಗುತ್ತದೆ. 

ಐಪಿಪಿಬಿ ಭಾರತೀಯ ಅಂಚೆಯ (Indian Post) ಒಂದು ವಿಭಾಗವಾಗಿದ್ದು, ಭಾರತೀಯ ಅಂಚೆ ಇಲಾಖೆ (Indian Postal Department) ಅಧೀನಕ್ಕೊಳಪಡುತ್ತದೆ. ಡಿಜಿಟಲ್ ಉಳಿತಾಯ ಖಾತೆ ಮುಚ್ಚೋದಕ್ಕೆ ಶುಲ್ಕ ವಿಧಿಸಲಾಗೋದು ಎಂಬ ಬಗ್ಗೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ವೆಬ್ಸೈಟ್ ನಲ್ಲಿ (Website) ಮಾಹಿತಿ ಹಂಚಿಕೊಂಡಿದೆ. 'ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಸೋದೇನೆಂದ್ರೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಡಿಜಿಟಲ್ ಉಳಿತಾಯ ಬ್ಯಾಂಕ್ ಖಾತೆ ಮುಚ್ಚಲು 150ರೂ. +ಜಿಎಸ್ಟಿ ಶುಲ್ಕ ವಿಧಿಸಲಿದ್ದು, 2022ರ ಮಾರ್ಚ್ 5ರಿಂದ ಜಾರಿಗೆ ಬರಲಿದೆ. ಈ ಶುಲ್ಕವೂ ಕೆವೈಸಿ ನವೀಕರಿಸಿದ ಒಂದು ವರ್ಷ ಅವಧಿಯಾದ ಡಿಜಿಟಲ್ ಉಳಿತಾಯ ಖಾತೆಗಳಿಗೆ ಮಾತ್ರ ಅನ್ವಯಿಸಲಿದೆ' ಎಂದು ತಿಳಿಸಿದೆ.

ಕೊರೋನಾ ಕಾಲದಲ್ಲಿ 10 ಪಟ್ಟು ಹೆಚ್ಚಾಯ್ತು ಅದಾನಿ ಆಸ್ತಿ, ಎಲಾನ್ ಮಸ್ಕ್‌ಗೇ ಟಕ್ಕರ್!

'ನಿರ್ಬಂಧರಹಿತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಡಿಜಿಟಲ್ ಉಳಿತಾಯ ಖಾತೆಯನ್ನು ಯಾವುದೇ ಐಪಿಪಿಬಿ ಶಾಖೆಗೆ ಭೇಟಿ ನೀಡಿ ಒಂದು ವರ್ಷದೊಳಗೆ ನಿಯಮಿತ ಉಳಿತಾಯ ಖಾತೆಗೆ ಉನ್ನತೀಕರಿಸಿ' ಎಂದು ಕೂಡ ಐಪಿಪಿಬಿ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.

ಏನಿದು ಡಿಜಿಟಲ್ ಉಳಿತಾಯ ಖಾತೆ?
ಆಧಾರ್ (Aadhar) ಹಾಗೂ ಪಾನ್ ಕಾರ್ಡ್ (Pan Card) ಹೊಂದಿರೋ 18 ವರ್ಷ ಮೇಲ್ಪಟ್ಟ ಯಾರು ಬೇಕಾದ್ರೂ ಈ ಖಾತೆ (Account) ತೆರೆಯಬಹುದು. ಶೂನ್ಯ ಬ್ಯಾಲೆನ್ಸ್ ನೊಂದಿಗೆ ಡಿಜಿಟಲ್ ಉಳಿತಾಯ ಖಾತೆ ತೆರೆಯಬಹುದಾಗಿದ್ದು, ಮಾಸಿಕ ಸರಾಸರಿ ಬ್ಯಾಲೆನ್ಸ್ (Balance) ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ. 2022ರ ಫೆಬ್ರವರಿ 1ರಿಂದ ಅನ್ವಯವಾಗುವಂತೆ ಈ ಖಾತೆ ಮೇಲೆ ಶೇ.2.25 ಬಡ್ಡಿದರ ನಿಗದಿಪಡಿಸಲಾಗಿದೆ.

PAN Aadhaar Link: ಪಾನ್ ಜತೆ ಆಧಾರ್ ಲಿಂಕ್ ಹೇಗೆ ಮಾಡುವುದು? ಮಾರ್ಚ್ 31 ಡೆಡ್‌ಲೈನ್!

ಗಮನಿಸಬೇಕಾದ ಅಂಶಗಳು
*ಡಿಜಿಟಲ್ (Digital) ಉಳಿತಾಯ ಖಾತೆ (Saving Account) ತೆರೆದ 12 ತಿಂಗಳೊಳಗೆ ಖಾತೆದಾರರು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. 
*ಕೆವೈಸಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಡಿಜಿಟಲ್ ಉಳಿತಾಯ ಖಾತೆಯನ್ನು ನಿಯಮಿತ ಉಳಿತಾಯ ಖಾತೆಗೆ ಉನ್ನತೀಕರಿಸಲಾಗುತ್ತದೆ. ಕೆವೈಸಿ ಪ್ರಕ್ರಿಯೆಗಳನ್ನು ಯಾವುದೇ ಅಂಚೆ ಕಚೇರಿ (Post office) ಅಥವಾ ಜಿಡಿಎಸ್ /ಪೋಸ್ಟ್ ಮ್ಯಾನ್ ನೆರವಿನೊಂದಿಗೆ ಪೂರ್ಣಗೊಳಿಸಬಹುದು.
*ಖಾತೆಯಲ್ಲಿ ವಾರ್ಷಿಕ ಗರಿಷ್ಠ 2 ಲಕ್ಷ ರೂ. ತನಕ ಠೇವಣಿಯಿಡಲು (Deposit) ಅವಕಾಶವಿದೆ.
*ಒಂದು ವೇಳೆ ಖಾತೆ ತೆರೆದು 12 ತಿಂಗಳೊಳಗೆ ಕೆವೈಸಿ (KYC) ಮಾಹಿತಿಗಳನ್ನು ಪೂರ್ಣಗೊಳಿಸದಿದ್ರೆ ಅಂಥ ಖಾತೆಯನ್ನು ಮುಚ್ಚಲಾಗುತ್ತದೆ. 
*ಖಾತೆ ತೆರೆದು 12 ತಿಂಗಳೊಳಗೆ ಕೆವೈಸಿ ಮಾಹಿತಿಗಳನ್ನು ಪೂರ್ಣಗೊಳಿಸಿದ ಬಳಿಕ ಡಿಜಿಟಲ್ ಉಳಿತಾಯ ಖಾತೆಯನ್ನು ಅಂಚೆ ಕಚೇರಿ ಉಳಿತಾಯ ಖಾತೆಗೆ (POSA) ಜೋಡಣೆ ಮಾಡಬಹುದು. 
*ಐಪಿಪಿಬಿ ಉಳಿತಾಯ ಖಾತೆಗಳಲ್ಲಿ 1ಲಕ್ಷ ರೂ. ತನಕದ ಬ್ಯಾಲೆನ್ಸ್ ಗೆ ಶೇ.2.25 ಬಡ್ಡಿದರ ನಿಗದಿಪಡಿಸಲಾಗಿದೆ. ಇನ್ನು 1ಲಕ್ಷ ರೂ.ನಿಂದ 2ಲಕ್ಷ ರೂ. ತನಕ ಶೇ.2.50 ಬಡ್ಡಿದರ ನಿಗದಿಪಡಿಸಲಾಗಿದೆ. 
*ಮೂಲ ಉಳಿತಾಯ ಖಾತೆಗಳಲ್ಲಿ ನಗದು ವಿತ್ ಡ್ರಾ (Withdraw) ಮಾಸಿಕ 4 ವಹಿವಾಟುಗಳ ತನಕ ಉಚಿತ. ಆ ಬಳಿಕ ಪ್ರತಿ ವಹಿವಾಟಿಗೆ ಕನಿಷ್ಠ25ರೂ. ವಿಧಿಸಲಾಗುತ್ತದೆ.