PAN Aadhaar Link: ಪಾನ್ ಜತೆ ಆಧಾರ್ ಲಿಂಕ್ ಹೇಗೆ ಮಾಡುವುದು? ಮಾರ್ಚ್ 31 ಡೆಡ್‌ಲೈನ್!
* ಕೇಂದ್ರ ಸರಕಾರದ ನಿಯಮದ ಪ್ರಕಾರ ಪಾನ್ ಜತೆಗೆ ಆಧಾರ್ ಲಿಂಕ್ ಕಡ್ಡಾಯವಾಗಿದೆ
* ಆಧಾರ್-ಪಾನ್ ಲಿಂಕ್ ಮಾಡುವುದು ತುಂಬ ಸರಳವಿದೆ
* 2022 ಮಾರ್ಚ್ 31ರೊಳಗೆ ಪಾನ್ ಮತ್ತು ಆಧಾರ್ ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು
Tech Desk: ನಿಮಗೆ ಎಲ್ಲರಿಗೂ ಗೊತ್ತಿರವಂತೆ ಪಾನ್ (Permanent Account Number-PAN) ಅನ್ನು ಆಧಾರ್ (Aadhaar) ಜತೆ ಲಿಂಕ್ ಮಾಡಬೇಕು ಎಂಬುದು ಕಡ್ಡಾಯವಾಗಿದೆ. ಯಾರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾರೋ ಅವರು ಕಡ್ಡಾಯವಾಗಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲೇಬೇಕು ಎಂದು ಕೇಂದ್ರ ಸರಕಾರ ಹೇಳಿದೆ. ಈಗಾಗಲೇ ಈ ಪ್ರಕ್ರಿಯೆ ಪೂರೈಸಲು ಗಡುವು ಕೂಡ ನೀಡಿದೆ. ಅದರಂತೆ, 2022 ಮಾರ್ಚ್ 31ರೊಳಗೇ ಎಲ್ಲರೂ ತಮ್ಮ ಪಾನ್ ಮತ್ತ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡಬೇಕು. ಒಂದು ವೇಳೆ, ಪಾನ್ ಜತೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆ ಕೇಳಬಹುದು.
ಹಾಗೊಮ್ಮೆ ಲಿಂಕ್ ಮಾಡದೇ ಇದ್ದರೆ, ನಿಮ್ಮ ಪಾನ್ ಅಸಿಂಧುಗೊಳ್ಳುತ್ತದೆ. ಹಾಗಾಗಿ, ಲಿಂಕ್ ಮಾಡುವುದು ಕಡ್ಡಾಯ ಹಾಗೂ ಮಹತ್ವದ್ದಾಗಿದೆ. ಆದರೆ, ಕೆಲವರಿಗೆ ಈ ಪಾನ್-ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ. ಅಂಥವರ ಬೇರೆಯವರ ಸಹಾಯ ಪಡೆದುಕೊಂಡು ಮಾಡುತ್ತಾರೆ. ಆದರೆ, ಇದೊಂದು ತುಂಬಳ ಸರಳ ಪ್ರಕ್ರಿಯೆಯಾಗಿದ್ದು, ಕಂಪ್ಯೂಟರ್ ಹಾಗೂ ಇಂಟರ್ನೆಟ್ ಜ್ಞಾನವಿದ್ದವರು ಯಾವುದೇ ತೊಂದರೆ ಇಲ್ಲದೇ ಮಾಡಬಹುದಾಗಿದೆ. ಒಂದು ವೇಳೆ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುವವರಿಗೆ ನಾವು ಆಧಾರ್ ಮತ್ತು ಪಾನ್ ಲಿಂಕ್ ಹೇಗೆ ಮಾಡುವುದು ಎಂಬುದರ ಬಗ್ಗೆ ತಿಳಿಸಿದ್ದೇವೆ ನೋಡಿ.
ಇದನ್ನೂ ಓದಿ: Poco M4 Pro 5G: ಫೆ.15ಕ್ಕೆ ಪೋಕೋದ ಹೊಸ ಸ್ಮಾರ್ಟ್‌ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ?
ಪಾನ್‌ಗೆ ಆಧಾರ್ ಲಿಂಕ್ ಹೀಗೆ ಮಾಡಿ: ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್ ಪೋರ್ಟಲ್ ಆಗಿರುವ www.incometaxindiaefiling.gov.in ಅನ್ನ ಬ್ರೌಸರ್‌ನಲ್ಲಿ ಟೈಪ್ ಮಾಡಿ. ಆಗ ಪೋರ್ಟಲ್ ತೆರೆದುಕೊಳ್ಳುತ್ತದೆ. ಆ ಬಳಿಕ ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಿ. ಒಂದೊಮ್ಮೆ ಈಗಾಗಲೇ ನೋಂದಣಿ ಮಾಡಿಕೊಂಡವರಾಗಿದ್ದರೆ ಯುಸರ್ ಐಡಿಯಾಗಿ ನಿಮ್ಮ ಪಾನ್ ಸಂಖ್ಯೆ ನಮೂದಿಸಿ. ಯುಸರ್ ಐಡಿ ಮತ್ತು ಪಾಸ್ವರ್ಡ್, ಡೇಟ್ ಆಫ್ ಬರ್ತ್ ನೋಂದಣಿ ಮಾಡುವ ಮೂಲಕ ಲಾಗಿನ್ ಆಗಬಹುದು. ಒಂದು ವೇಳೆ, ಅಕೌಂಟ್ ಇಲ್ಲದಿದ್ದರೆ ಮೊದಲಿಗೆ ಅಕೌಂಟ್ ಓಪನ್ ಮಾಡಿಕೊಳ್ಳಬೇಕಾಗುತ್ತದೆ.
ಇಷ್ಟಾಗುತ್ತಿದ್ದಂತೆ, ಪಾನ್ ಅನ್ನು ಆಧಾರ್ ಜತೆ ಲಿಂಕ್ ಮಾಡಿ ಎಂದು ಕೇಳುವ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಒಂದು ವೇಳೆ, ಯಾವುದೇ ರೀತಿಯ ಪಾಪ್ ಅಪ್ ವಿಂಡೋ ತೆರೆದುಕೊಳ್ಳದೇ ಇದ್ದರೆ, ಮೆನು ಬಾರ್‌ನಲ್ಲಿರುವ ಪ್ರೊಫೈಲ್ ಸೆಟ್ಟಿಂಗ್ಸ್ (Profile Settings)ಗೆ ಹೋಗಿ ಮತ್ತು ಲಿಂಕ್ ಆಧಾರ್ (Link Aadhar) ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಹೆಸರು, ಜನ್ಮ ದಿನಾಂಕ, ಲಿಂಗ, ಸೇರಿದಂತೆ ಇತರ ಮಾಹಿತಿಯನ್ನು ಪಾನ್‌ನಲ್ಲಿರುವಂತೆ ಕೊಡಿ.ಈಗ, ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ಪ್ಯಾನ್ ವಿವರಗಳನ್ನು ನೀವು ಪರದೆಯ ಮೇಲೆ ಪರಿಶೀಲಿಸಬೇಕು. ಹೊಂದಾಣಿಕೆಯಾಗದಿದ್ದಲ್ಲಿ, ನೀವು ಯಾವುದೇ ದಾಖಲೆಗಳಲ್ಲಿ ಅದೇ ಸರಿಪಡಿಸುವಿಕೆಯನ್ನು ಪಡೆಯಬೇಕು ಎಂಬುದನ್ನು ಗಮನಿಸಿ.
ಇದನ್ನೂ ಓದಿ: BSNL 197 Prepaid Plan: 150 ದಿನ ವ್ಯಾಲಿಡಿಟಿ, 2 ಜಿಬಿ ಡೇಟಾ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್!
ಒಂದು ವೇಳೆ ನೀವು ನೀಡಲಾಗಿರುವ ವಿವರಗಳು ಹೊಂದಾಣಿಕೆಯಾದರೆ, ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ ಮತ್ತು ಲಿಂಕ್ ನೌ(Link Now) ಬಟನ್ ಮೇಲೆ ಕ್ಲಿಕ್ ಮಾಡಿ. ಇಷ್ಟಾಗುತ್ತಿದ್ದಂತೆ ಪಾಪ್ ಅಪ್ ಮೆಸೆಜ್‌ವೊಂದು ಪರದೆಯ ಮೇಲೆ ಕಾಣಿಸಿಕೊಂಡು, ಪಾನ್ ಜತೆ ನಿಮ್ಮ ಆಧಾರವನ್ನು ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಇಷ್ಟು ಮಾತ್ರವಲ್ಲದೇ ನೀವು ಪಾನ್‌ಗೆ ಆಧಾರ್ ಲಿಂಕ್ ಮಾಡಲು www.utiitsl.com ಅಥವಾ www.egov-nsdl.co.in ತಾಣಗಳಿಗೂ ಭೇಟಿ ನೀಡಬಹುದು.
ಲಿಂಕ್ ಮಾಡದೇ ಇದ್ದರೆ ಏನಾಗುತ್ತದೆ?: ಕೇಂದ್ರ ಸರಕಾರದ ನಿಯಮಗಳ ಪ್ರಕಾರ ಪಾನ್ ಹಾಗೂ ಆಧಾರ್ ಲಿಂಕ್ ಮಾಡಲೇಬೇಕು. ಒಂದು ವೇಳೆ, ಆಧಾರ್ ಅನ್ನುಪಾನ್ ಜತೆ ಲಿಂಕ್ ಮಾಡದೇ ಇದ್ದರೆ ಪಾನ್ ತನ್ನ ಸಿಂಧುತ್ವವನ್ನು ಕಳೆದುಕೊಳ್ಳುತ್ತದೆ. ಜತೆಗೆ, 1 ಸಾವಿರ ರೂಪಾಯಿ ದಂಡ ಕೂಡ ಕೊಡಬೇಕಾಗುತ್ತದೆ. ಹಾಗಾಗಿ, ದಂಡ ಮತ್ತು ಪಾನ್ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ನಿಗದಿತ ದಿನಾಂಕದೊಳಗೆ ನಿಮ್ಮ ಆಧಾರ್ ಹಾಗೂ ಪಾನ್ ಲಿಂಕ್ ಮಾಡಿ.