ಪ್ರಸ್ತುತ ದಿನಗಳಲ್ಲಿ ಅನಿರೀಕ್ಷಿತ ದುರ್ಘಟನೆಗಳು ಹೆಚ್ಚುತ್ತಿದ್ದು, ಕುಟುಂಬದ ರಕ್ಷಣೆಗಾಗಿ ಅಂಚೆ ಕಚೇರಿಯ ವಿಮಾ ಯೋಜನೆ ಉಪಯುಕ್ತವಾಗಿದೆ. ವಾರ್ಷಿಕವಾಗಿ ಕೇವಲ 520 ರೂಪಾಯಿ ಪಾವತಿಸಿದರೆ 10 ಲಕ್ಷ ರೂಪಾಯಿ, 755 ರೂಪಾಯಿ ಪಾವತಿಸಿದರೆ 15 ಲಕ್ಷ ರೂಪಾಯಿ ವಿಮೆ ಪಡೆಯಬಹುದು. ಅಪಘಾತದಿಂದ ಸಾವು, ಅಂಗವೈಕಲ್ಯ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣಕ್ಕೆ ಸಹಾಯ, ಅಂತ್ಯಕ್ರಿಯೆ ವೆಚ್ಚಕ್ಕೂ ಈ ಯೋಜನೆಯಲ್ಲಿ ಅವಕಾಶವಿದೆ. 18 ರಿಂದ 65 ವರ್ಷ ವಯಸ್ಸಿನವರಾಗಿರಬೇಕು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ಹೊಂದಿರಬೇಕು.
ಜೀವಕ್ಕೆ ಭರವಸೆಯೇ ಇಲ್ಲದ ದಿನಗಳಿವೆ. ಯಾವಾಗ ಏನೂ ಬೇಕಾದರೂ ಆದೀತು ಎನ್ನುವ ಆತಂಕದಿಂದಲೇ ಜನರು ಬದುಕುತ್ತಿದ್ದಾರೆ. ಆರೋಗ್ಯವಂತ ಯುವಕರೇ ದಿಢೀರ್ ಹೃದಯಾಘಾತಕ್ಕೆ ಬಲಿಯಾಗುವುದನ್ನು ನೋಡುತ್ತಿದ್ದೇವೆ. ಇನ್ನು ಅಪಘಾತಗಳಿಗೋ ಲೆಕ್ಕವೇ ಇಲ್ಲ. ಇಂಥ ಸಂದರ್ಭಗಳಲ್ಲಿ ಅಚಾನಕ್ ಆಗಿ ಸಂಭವಿಸುವ ಈ ದುರ್ಘಟನೆಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇದಾಗಲೇ ಹಲವಾರು ವಿಮೆಗಳು ಚಾಲ್ತಿಯಲ್ಲಿವೆ. ಆದರೆ ಮಾಸಿಕ ಅಷ್ಟು ಹಣ ಕಟ್ಟುವುದೇ ದುಬಾರಿ ಎನ್ನಿಸುವುದು ಉಂಟು. ಆದರೆ ವರ್ಷಕ್ಕೆ ಕೇವಲ 520 ರೂಪಾಯಿ ಕಟ್ಟಿದರೆ 10 ಲಕ್ಷ ರೂಪಾಯಿ ವಿಮೆ, 755 ರೂಪಾಯಿ ಕಟ್ಟಿದ್ರೆ 15 ಲಕ್ಷ ರೂಪಾಯಿ ಜೊತೆಗೆ ಇನ್ನೂ ಏನೇನೋ ಸೌಲಭ್ಯಗಳು ಸಿಗುವ ಅಂಚೆ ಕಚೇರಿಯ ಈ ಯೋಜನೆಯ ಬಗ್ಗೆ ತಿಳಿದುಕೊಂಡರೆ ಒಳಿತು.
ಇದರ ಬಗ್ಗೆ ಒಂದೊಂದೇ ಡಿಟೇಲ್ಸ್ ಇಲ್ಲಿ ಕೊಡಲಾಗಿದೆ. ವರ್ಷಕ್ಕೆ ₹520 ಪಾವತಿಸಿದರೆ ನಿಮಗೆ 10 ಲಕ್ಷ ರೂಪಾಯಿ ಹಣ ಸಿಗಲಿದೆ. ಒಂದು ವೇಳೆ ಅಪಘಾತದಲ್ಲಿ ನೀವು ಸಾವನ್ನಪ್ಪಿದರೆ ಅಥವಾ ಅಂಗವಿಕರಲಾರದೂ ಈ ಹಣ ಸಿಗುತ್ತದೆ. ಇದು ಆಸ್ಪತ್ರೆ ಮತ್ತು ಹೊರರೋಗಿ ವೆಚ್ಚಗಳನ್ನು ಹಾಗೂ ಅಪಘಾತಗಳಿಗೆ ಸಂಬಂಧಿಸಿದ ಇತರ ಚಿಕಿತ್ಸೆಗಳನ್ನು ಸಹ ಒಳಗೊಂಡಿದೆ. ಇಷ್ಟು ಮಾತ್ರವಲ್ಲದೇ, ಇಬ್ಬರು ಮಕ್ಕಳಿಗೆ 1 ಲಕ್ಷ ರೂಪಾಯಿವರೆಗೆ ಶೈಕ್ಷಣಿಕ ವೆಚ್ಚಗಳ ಕವರೇಜ್, 10 ದಿನಗಳವರೆಗೆ 1 ಸಾವಿರ ರೂಪಾಯಿಗಳ ದೈನಂದಿನ ಆಸ್ಪತ್ರೆ ನಗದು ಪ್ರಯೋಜನ, ಕುಟುಂಬವು ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಸಾರಿಗೆ ವೆಚ್ಚಕ್ಕಾಗಿ 25 ಸಾವಿರ ರೂಪಾಯಿ, ಅಂತ್ಯಕ್ರಿಯೆಯ ವೆಚ್ಚಗಳಿಗಾಗಿ 5 ಸಾವಿರ ರೂಪಾಯಿಗಳೂ ಸಿಗುತ್ತವೆ. ಪಾಲಿಸಿದಾರ ಅಪಘಾತದಲ್ಲಿ ಮರಣ ಹೊಂದಿದಲ್ಲಿ, ನಾಮಿನಿಗೆ ₹10 ಲಕ್ಷ ರೂಪಾಯಿ ನೀಡಲಾಗುತ್ತದೆ.
ಪ್ರತಿ ತಿಂಗಳು 5 ಸಾವಿರ ಸೇವ್ ಮಾಡಿ- 8.50 ಲಕ್ಷ ಪಡೆದುಕೊಳ್ಳಿ: ಪೋಸ್ಟ್ ಆಫೀಸ್ ಈ ಯೋಜನೆ ನೋಡಿ...
ಅದೇ ರೀತಿ, ವರ್ಷಕ್ಕೆ 755 ರೂಪಾಯಿ ಪಾವತಿಸಿದರೆ, 15 ಲಕ್ಷ ರೂಪಾಯಿವರೆಗೆ ವಿಮಾ ಸುರಕ್ಷೆ ಸಿಗಲಿದೆ. ಇದು ಕೂಡ, 10 ಲಕ್ಷ ರೂಪಾಯಿ ವಿಮೆಯ ಎಲ್ಲಾ ನಿಯಮ ಒಳಗೊಂಡಿದೆ. ಶಾಶ್ವತ ಅಂಗವೈಕಲ್ಯ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 15 ಲಕ್ಷ ರೂ, ವೈದ್ಯಕೀಯ ವೆಚ್ಚಕ್ಕಾಗಿ 1 ಲಕ್ಷ ರೂ. ಸಾಮಾನ್ಯ ಚಿಕಿತ್ಸೆಗಾಗಿ ದಿನಕ್ಕೆ 1 ಸಾವಿರ ರೂ, ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ 1 ಲಕ್ಷ ರೂ.ವರೆಗೆ ಸಹಾಯಧನ ಹೀಗೆ ಹಲವು ಉಪಯೋಗಗಳನ್ನು ಒಳಗೊಂಡಿದೆ. ಅಂದಹಾಗೆ ಅಪಘಾತ ಎಂದರೆ ನೀವು ಡ್ರೈವ್ ಮಾಡುವ ಸಂದರ್ಭದಲ್ಲಿ ಮಾತ್ರವಲ್ಲ, ಬದಲಿಗೆ ನೀವು ಟ್ರೈನ್, ಬಸ್ ಅಥವಾ ಯಾವುದಾದರೂ ಸಾರಿಗೆಯಲ್ಲಿ ಹೋಗುವ ಸಂದರ್ಭದಲ್ಲಿ ಅಪಘಾತವಾದರೆ, ಎಲೆಕ್ಟ್ರಿಕ್ ಶಾಕ್ನಿಂದ ಸತ್ತರೆ, ಹಾವು ಕಡಿದು ಸತ್ತರೆ ಇಂಥ ಎಲ್ಲಾ ಅಪಘಾತಗಳಿಗೂ ವಿಮೆ ಸಿಗಲಿದೆ.
ಹಾಗಿದ್ದರೆ ಈ ಪಾಲಿಸಿ ಮಾಡಿಸಲು ಯಾರು ಅರ್ಹರು ಎಂದು ನೋಡುವುದಾದರೆ, ಪಾಲಿಸಿದಾರರಿಗೆ 18 ವರ್ಷ ತುಂಬಿರಬೇಕು. 65 ವರ್ಷದೊಳಗೆ ಇರಬೇಕು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ (IPPB) ಖಾತೆ ಹೊಂದಿರತಕ್ಕದ್ದು. ಇದನ್ನು 100 ರೂಪಾಯಿ ಕೊಟ್ಟಿ ಓಪನ್ ಮಾಡಬಹುದು. ಸಮೀಪದ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗೆ ಹೋಗಿ ಅಪಘಾತ ವಿಮಾ ಪಾಲಿಸಿಯನ್ನು ಖರೀದಿಸಬಹುದು. ಪ್ರತಿ ವರ್ಷ ಅಲ್ಲಿರುವ ನಿಮ್ಮ ಅಕೌಂಟ್ನಿಂದಲೇ ಬೇಕಿದ್ರೆ ದುಡ್ಡು ಕಟ್ ಮಾಡಿಸಿಕೊಳ್ಳಬಹುದು.
ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
