ಪ್ರತಿ ತಿಂಗಳು 5 ಸಾವಿರ ಸೇವ್ ಮಾಡಿ- 8.50 ಲಕ್ಷ ಪಡೆದುಕೊಳ್ಳಿ: ಪೋಸ್ಟ್ ಆಫೀಸ್ ಈ ಯೋಜನೆ ನೋಡಿ...
ಪ್ರತಿ ತಿಂಗಳು 5 ಸಾವಿರ ಸೇವ್ ಮಾಡಿದರೆ ಅಂತಿಮವಾಗಿ 8.50 ಲಕ್ಷ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ಈ ಯೋಜನೆಯ ಮಾಹಿತಿ ಇಲ್ಲಿದೆ.
ಇಂದು ಕಡಿಮೆ ದುಡ್ಡಿಗೆ ಹೆಚ್ಚು ಬಡ್ಡಿ ಕೊಡುವ ಹೆಸರಿನಲ್ಲಿ ವಂಚಿಸುವ ಹಲವು ಸಂಸ್ಥೆಗಳು ಹುಟ್ಟಿಕೊಂಡಿವೆ. ಇದಾಗಲೇ ಈ ಸಂಘ-ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡವರು ಇದ್ದಾರೆ. ಬ್ಯಾಂಕ್ಗಳಲ್ಲಿ ನೀವು ಠೇವಣಿ ಇಟ್ಟರೆ ಅದು ಸುರಕ್ಷಿತವೆನ್ನುವುದು ನಿಜವಾದರೂ, ಅದಕ್ಕಿಂತಲೂ ಹೆಚ್ಚು ಬಡ್ಡಿಯನ್ನು ಪಡೆಯುವುದರ ಜೊತೆಗೆ ನಿಮ್ಮ ಹಣಕ್ಕೆ ಅಷ್ಟೇ ಸುರಕ್ಷತೆಯನ್ನು ಒದಗಿಸುವುದು ಅಂಚೆ ಕಚೇರಿ. ಅಂಚೆ ಕಚೇರಿಯಲ್ಲಿ ಇದಾಗಲೇ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬ್ಯಾಂಕ್ಗಳಿಗೆ ಹೋಲಿಸಿದರೆ ಅಂಚೆ ಕಚೇರಿಯಲ್ಲಿ ಬಡ್ಡಿ ಹೆಚ್ಚಿಗೆ ಸಿಗುವ ಕಾರಣ, ಹಲವರು ಅಂಚೆ ಕಚೇರಿಯಲ್ಲಿ ಹಣದ ಹೂಡಿಕೆ ಮಾಡುತ್ತಿದ್ದಾರೆ.
ಒಂದೇ ಸಲ ಹಣವನ್ನು ಹೂಡಿಕೆ ಮಾಡುವುದು ಎಷ್ಟೋ ಜನರಿಗೆ ಸಾಧ್ಯವಾಗದ ಮಾತು. ಆದರೆ ಪ್ರತಿ ತಿಂಗಳೂ ಐದು ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ನಿವು ಎಂಟು ಲಕ್ಷದವರೆಗೆ ಗಳಿಸಬಹುದು. ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು ಬಹಳ ಜನಪ್ರಿಯವಾಗಿವೆ, ಇಲ್ಲಿ ಹೇಳುತ್ತಿರುವುದು, ಮರುಕಳಿಸುವ ಠೇವಣಿ ಅಂದರೆ ಪೋಸ್ಟ್ ಆಫೀಸ್ RD ಬಗ್ಗೆ. ಇದಾಗಲೇ ನೀವು ಕೆಲವು ಕಡೆಗಳಲ್ಲಿ RD ಇಡುತ್ತಿರಬಹುದು. ಆದರೆ ಅವುಗಳಿಗಿಂತಲೂ ಹೆಚ್ಚು ಸುರಕ್ಷೆ ಹಾಗೂ ಹೆಚ್ಚು ಬಡ್ಡಿ ಸಿಗುವುದು ಅಂಚೆ ಕಚೇರಿಯ RD ಯಲ್ಲಿ. ಈ ಯೋಜನೆಯಲ್ಲಿ, ನೀವು ಪ್ರತಿ ತಿಂಗಳು ಕೇವಲ 5000 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 8 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಸಂಗ್ರಹಿಸಬಹುದು. ಈ ಯೋಜನೆಯ ವಿಶೇಷತೆ ಎಂದರೆ ಜನರು ಕೂಡ ಸುಲಭವಾಗಿ ಸಾಲ ಪಡೆಯಬಹುದು.
ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
2023 ರಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆಯ ಮೇಲಿನ 6.7 ಪ್ರತಿಶತದಷ್ಟು ಬಡ್ಡಿದರ ಲಭ್ಯವಿದೆ, ಇದನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಆದರೆ ಯೋಜನೆಯ ಅಡಿಯಲ್ಲಿ, ವಾರ್ಷಿಕ ಆಧಾರದ ಮೇಲೆ ಪ್ರಯೋಜನಗಳನ್ನು ನೀಡಲಾಗುತ್ತದೆ. ಕೇವಲ ಆರ್‌ಡಿಯಿಂದ 8 ಲಕ್ಷ ರೂಪಾಯಿ ಸಂಗ್ರಹಿಸುವುದು ಹೇಗೆ ಎನ್ನುವುದನ್ನ ಇಲ್ಲಿ ವಿವರಿಸಲಾಗಿದೆ.
ತಿಂಗಳಿಗೆ 5 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಐದು ವರ್ಷಗಳಲ್ಲಿ, ನೀವು ಒಟ್ಟು 3 ಲಕ್ಷ ರೂಪಾಯಿಗಳನ್ನು ಇಟ್ಟಿರುತ್ತೀರಿ. ಇದಕ್ಕೆ ಶೇಕಡಾ 6.7 ರ ಬಡ್ಡಿ ದರದಲ್ಲಿ ನಿಮಗೆ ಹೆಚ್ಚುವರಿಯಾಗಿ 56,830 ರೂಪಾಯಿ ಸಿಗುತ್ತದೆ. ನೀವು ಐದು ವರ್ಷ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಇಟ್ಟಲ್ಲಿ ನಿಮಗೆ ಐದು ವರ್ಷಗಳ ಬಳಿಕ 3 ಲಕ್ಷದ 56 ಸಾವಿರದ 830 ರೂಪಾಯಿ ಸಿಗುತ್ತದೆ. ಒಮದು ವೇಳೆ ನೀವು ಈ ಹಣವನ್ನು ಹತ್ತು ವರ್ಷಗಳವರೆಗೆ ವಿಸ್ತರಿಸಿದರೆ, ನೀವು ಠೇವಣಿ ಮಾಡಿದ ಮೊತ್ತವು 6 ಲಕ್ಷ ರೂಪಾಯಿ ಆಗಿರುತ್ತದೆ. ಅದಕ್ಕೆ ಶೇಕಡಾ 6.7 ರ ದರದಲ್ಲಿ 2 ಲಕ್ಷದ 54 ಸಾವಿರ 272 ರೂಪಾಯಿಗಳು ಸಿಗುತ್ತವೆ. ಇದರ ಪ್ರಕಾರ ನಿಮಗೆ 10 ವರ್ಷಗಳಲ್ಲಿ ನಿಮ್ಮ ಒಟ್ಟು ಠೇವಣಿ ನಿಧಿ 8 ಲಕ್ಷದ 54 ಸಾವಿರದ 272 ರೂಪಾಯಿಗಳ ಸಿಗುತ್ತವೆ.
ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್ ಅಂಚೆ ಇಲಾಖೆಯ ಎಫ್‌ಡಿ!
ನೀವು ಯಾವುದೇ ಹತ್ತಿರದ ಅಂಚೆ ಕಚೇರಿಗೆ ಹೋಗುವ ಮೂಲಕ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. 100 ರೂ.ಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ಪೋಸ್ಟ್ ಆಫೀಸ್ ಆರ್‌ಡಿ ಮುಕ್ತಾಯದ ಅವಧಿ ಐದು ವರ್ಷಗಳು, ಆದರೆ ಈ ಅವಧಿ ಪೂರ್ಣಗೊಳ್ಳುವ ಮೊದಲು ನೀವು ಖಾತೆಯನ್ನು ಮುಚ್ಚಲು ಬಯಸಿದರೆ, ಈ ಸೌಲಭ್ಯವು ಈ ಉಳಿತಾಯ ಯೋಜನೆಯಲ್ಲಿಯೂ ಲಭ್ಯವಿದೆ. ಅದರಲ್ಲಿ ಸಾಲ ಸೌಲಭ್ಯವನ್ನೂ ನೀಡಲಾಗಿದೆ. ಖಾತೆಯು ಒಂದು ವರ್ಷದವರೆಗೆ ಸಕ್ರಿಯವಾದ ನಂತರ, ಠೇವಣಿ ಮೊತ್ತದ 50 ಪ್ರತಿಶತದವರೆಗೆ ಸಾಲವಾಗಿ ತೆಗೆದುಕೊಳ್ಳಬಹುದು. ಆದಾಗ್ಯೂ, ಸಾಲದ ಮೇಲಿನ ಬಡ್ಡಿ ದರವು ಬಡ್ಡಿ ದರಕ್ಕಿಂತ 2 ಶೇಕಡಾ ಹೆಚ್ಚಾಗಿದೆ.