Asianet Suvarna News Asianet Suvarna News

ಮೋದಿ ದೂರದೃಷ್ಟಿ ನಾಯಕತ್ವದಿಂದ ಭಾರತ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಕ್ಷಿಪ್ರ ದಾಪುಗಾಲು: ರಾಜೀವ್ ಚಂದ್ರಶೇಖರ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ತನ್ನ ಸೆಮಿ ಕಂಡಕ್ಟರ್‌ ಮಹತ್ವಾಕಾಂಕ್ಷೆಗಳನ್ನು ಸಾಧಿಸುವತ್ತ ಹೇಗೆ ಕ್ಷಿಪ್ರ ದಾಪುಗಾಲಿಡುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

india is making rapid strides toward achieving its semiconductor ambitions under pm s visionary leadership mos rajeev chandrasekhar ash
Author
First Published Jul 30, 2023, 1:37 PM IST

ಗಾಂಧಿನಗರ (ಜುಲೈ 30, 2023): ಗುಜರಾತ್‌ನಲ್ಲಿ ನಡೀತಿರುವ 3 ದಿನಗಳ ಸೆಮಿಕಾನ್‌-2023 ಸಮ್ಮೇಳನದ ಎರಡನೇ ದಿನ ದಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆಯ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಮಾತನಾಡಿದ್ದಾರೆ. ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್ 2023 ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರತದ ಬೆಳೆಯುತ್ತಿರುವ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂದು ಅವರು ಹೇಳಿದರು. ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ತನ್ನ ಸೆಮಿ ಕಂಡಕ್ಟರ್‌ ಮಹತ್ವಾಕಾಂಕ್ಷೆಗಳನ್ನು ಸಾಧಿಸುವತ್ತ ಹೇಗೆ ಕ್ಷಿಪ್ರ ದಾಪುಗಾಲಿಡುತ್ತಿದೆ ಎಂಬುದರ ಕುರಿತು ಮಾತನಾಡಿದರು.

ಮೂರು ದಿನಗಳ ಸೆಮಿಕಾನ್‌ ಇಂಡಿಯಾ 2023 ಸಮ್ಮೇಳನದ ಎರಡನೇ ದಿನವು ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದಿಂದ ಹಲವರು ಭಾಗವಹಿಸಿದ್ದರು. ನೆಕ್ಸ್ಟ್-ಜೆನ್ ಕಂಪ್ಯೂಟಿಂಗ್ ಕುರಿತು ನಡೆದ ಅಧಿವೇಶನದಲ್ಲಿ, ವೆಂಟಾನಾ ಮೈಕ್ರೋ ಸಿಸ್ಟಮ್ಸ್ ಸಿಇಒ ಬಾಲಾಜಿ ಬಕ್ತಾ ಅವರು ಡಿಜಿಟಲ್ ಸ್ವಾಯತ್ತತೆ ಮತ್ತು RISC-V ನಿಂದ ನಡೆಸಲ್ಪಡುವ ಸಾರ್ವಭೌಮ ಡೇಟಾಸೆಂಟರ್ ಮೂಲಸೌಕರ್ಯಗಳ ಸುತ್ತಲಿನ ನಿರ್ಣಾಯಕ ಅಂಶಗಳನ್ನು ಚರ್ಚಿಸಿದರು. ಇನ್ನು, ರಾಜಾ ಕೊಡೂರಿ, CEO, Mihira AI ಅವರು ಕಂಪ್ಯೂಟಿಂಗ್‌ನ ಭವಿಷ್ಯದ ಬಗ್ಗೆ ಹೇಳಿದರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಮಯ ಹಾಗೂ ಆರ್ಥಿಕ ಸಂಪನ್ಮೂಲಗಳ ಮೌಲ್ಯದ ಬಗ್ಗೆ ತಿಳಿಸಿದರು.

ಇದನ್ನು ಓದಿ: ಭಾರತ ಸೆಮಿಕಂಡಕ್ಟರ್‌ನ ‘ಕಂಡಕ್ಟರ್‌’; ಚಿಪ್ ಉತ್ಪಾದನಾ ಘಟಕ ಸ್ಥಾಪಿಸಿದರೆ ಶೇ.50 ಸಹಾಯಧನ: ಮೋದಿ ಘೋಷಣೆ

ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಸೇರಿದಂತೆ ವಿವಿಧ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು ಪ್ಯಾನಲ್ ಚರ್ಚೆಗಳನ್ನು ಆಯೋಜಿಸಲಾಗಿತ್ತು. ಭಾರತದಲ್ಲಿನ ಮೈಕ್ರಾನ್ಸ್ ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಪ್ಲಾಂಟ್‌ನ ಪೂರೈಕೆ ಸರಪಳಿಯ ತಂತ್ರ ಮತ್ತು ಮಾರ್ಗಸೂಚಿಯ ಬಗ್ಗೆ ಗುರುಶರಣ್ ಸಿಂಗ್, SVP, ಮೈಕ್ರೋನ್ ಟೆಕ್ನಾಲಜಿ; ಜೆಫ್ರಿ ಚುನ್, ಸಿಮ್ಟೆಕ್; ನೊಬೊರು ಯೋಶಿನಾಗ, ಡಿಸ್ಕೋ; ಮತ್ತು ರಾಜಾ ವಿನಯ್, ಏರ್ ಲಿಕ್ವಿಡ್ ಚರ್ಚಿಸಿದರು. ಇನ್ನು, ಭಾರತದಲ್ಲಿ ಸೆಮಿ ಕಂಡಕ್ಟರ್‌ ಪ್ಯಾಕೇಜಿಂಗ್‌ನ ಭವಿಷ್ಯದ ಕಾರ್ಯಕ್ಷಮತೆಯನ್ನು ಚಾಲನೆ ಮಾಡುವಲ್ಲಿ ಪ್ಯಾಕೇಜಿಂಗ್ ಸಂಶೋಧನೆ ಮತ್ತು ನಾವೀನ್ಯತೆಯ ಮಹತ್ವದ ಕುರಿತು ಡಾ. ಹೆಮ್ ಟಾಕಿಯಾರ್ ನೇತೃತ್ವದ ಸಮಿತಿ, ಮೈಕ್ರೋನ್ ಟೆಕ್ನಾಲಜಿ ಮತ್ತು ಇತರ ಗೌರವಾನ್ವಿತ ಗಣ್ಯರಾದ ಪ್ರೊ.ತುಮ್ಮಲ ರಾವ್, ಜಾರ್ಜಿಯಾ ಟೆಕ್; ಡಾ. ಸೂರ್ಯ ಭಟ್ಟಾಚಾರ್ಯ, IME ಸಿಂಗಾಪುರ; ದೇವನ್ ಅಯ್ಯರ್, ಆಮ್ಕೋರ್, ಮತ್ತು  ಅಮೃತ್ ಮನ್ವಾನಿ, ಸಹಸ್ರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 

ಪ್ಯಾನಲಿಸ್ಟ್‌ಗಳು ದೊಡ್ಡ ಪ್ರಮಾಣದ R&D ಯಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಮತ್ತು ಒಕ್ಕೂಟದ ಮಾದರಿ ಹಾಗೂ ಉದ್ಯಮ-ಸಂಬಂಧಿತ ಸಂಶೋಧನೆಯು ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದರ ಬಗ್ಗೆ ಚರ್ಚಿಸಿದರು. 

ಇದನ್ನೂ ಓದಿ: 2024ರ ಅಂತ್ಯ​ಕ್ಕೆ ಮೊದಲ ಸ್ವದೇಶಿ ನಿರ್ಮಿ​ತ ಸೆಮಿ​ ಕಂಡ​ಕ್ಟರ್‌ ಚಿಪ್‌: ಅಶ್ವಿನಿ ವೈಷ್ಣವ್‌

ಸೆಮಿಕಂಡಕ್ಟರ್‌ ಉತ್ಪಾದನಾ ಘಟಕ ಸ್ಥಾಪಿಸುವವರಿಗೆ ಶೇ. 50ರಷ್ಟು ಸಹಾಯಧನ ಘೋಷಿಸಿದ್ದ ಮೋದಿ
‘ಭಾರತ ‘ಸೆಮಿಕಂಡಕ್ಟರ್‌’ ವಲಯದ ‘ಕಂಡಕ್ಟರ್‌’ ಆಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಸೆಮಿಕಂಡಕ್ಟರ್‌ ಉತ್ಪಾದನಾ ಘಟಕ ಸ್ಥಾಪಿಸುವವರಿಗೆ ಶೇ.50ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ ಎಂದು ಶುಕ್ರವಾರ ಘೋಷಿಸಿದ್ದಾರೆ. 3 ದಿನಗಳ ಸೆಮಿಕಾನ್‌-2023 ಸಮ್ಮೇಳನಕ್ಕೆ ಚಾಲನೆ ನೀಡಿದ ಮೋದಿ, ‘ಭಾರತವು ‘ಸೆಮಿಕಂಡಕ್ಟರ್‌’ ವಲಯದ ‘ಕಂಡಕ್ಟರ್‌’ ರೀತಿ ಕೆಲಸ ಮಾಡುತ್ತಿದೆ. ಕಂಡಕ್ಟರ್‌ ಯಾವ ರೀತಿ ಟಿಕೆಟ್‌ನಲ್ಲಿರುವ ಬಾಕ್ಸ್‌ಗಳಿಗೆ (ನಿರ್ದಿಷ್ಟ ಪ್ರಯಾಣ ಸ್ಥಳದ ಸ್ಟೇಜ್‌ಗೆ) ಪೆನ್ನಿನಿಂದ ರಂಧ್ರ ಮಾಡುತ್ತಾನೋ ಆ ರೀತಿ ಭಾರತ ಕೂಡ ಸರಿಯಾದ ಹೆಜ್ಜೆಯನ್ನೇ ಇರಿಸಿದೆ. ಭಾರತವು ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್‌ನ ಅತಿದೊಡ್ಡ ಕಂಡಕ್ಟರ್‌ ಆಗಲಿದೆ. ಅಂದರೆ ಈ ವಲಯದ ಅತಿದೊಡ್ಡ ಉತ್ಪಾದಕ ಆಗಲಿದೆ’ ಎಂದು ಹೇಳಿದರು.

Follow Us:
Download App:
  • android
  • ios