ಮುಂದಿನ ವರ್ಷ ಡಿಸೆಂಬರ್‌ ವೇಳೆಗೆ ಸೆಮಿ ಕಂಡಕ್ಟರ್‌ ಚಿಪ್‌ ತಯಾರಾಗಲಿದೆ. ಇದು ಸ್ವದೇಶಿ ನಿರ್ಮಿತ ಮೊದಲ ಸೆಮಿಕಂಡಕ್ಟರ್‌ ಚಿಪ್‌ ಎನ್ನಿಸಿಕೊಳ್ಳಲಿದೆ ಎಂದು ಕೆಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು. 

ನವದೆಹಲಿ (ಜೂನ್ 24, 2023): ಭಾರ​ತದ ಮೊದ​ಲ ಸ್ವದೇಶಿ ಸೆಮಿ ಕಂಡಕ್ಟರ್‌ 2024ರ ಡಿಸೆಂಬರ್‌ಗೆ ಕೈಸೇ​ರುವ ಸಾಧ್ಯತೆ ಇದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಮೆ​ರಿಕ ಯಾತ್ರೆ ಫಲ​ವಾಗಿ ಅಮೆ​ರಿಕ ಕಂಪ​ನಿ​ಯಿಂದ ಸೆಮಿ ಕಂಡಕ್ಟರ್‌ ತಯಾರಿಕಾ ಘಟಕವು ಗುಜರಾತ್‌ನಲ್ಲಿ ಸ್ಥಾಪನೆ ಆಗ​ಲಿ​ದೆ. ಇದಕ್ಕೆ ಬೇಕಾದ ಎಲ್ಲ ಭೂಮಿ, ವಿನ್ಯಾಸ, ತೆರಿಗೆ ಸಂಗ್ರಹ ಹಾಗೂ ಇನ್ನಿತರೆ ಒಪ್ಪಂದಗಳು ಮುಗಿದಿವೆ. ಮುಂದಿನ ವರ್ಷ ಡಿಸೆಂಬರ್‌ ವೇಳೆಗೆ ಸೆಮಿ ಕಂಡಕ್ಟರ್‌ ಚಿಪ್‌ ತಯಾರಾಗಲಿದೆ. ಇದು ಸ್ವದೇಶಿ ನಿರ್ಮಿತ ಮೊದಲ ಸೆಮಿಕಂಡಕ್ಟರ್‌ ಚಿಪ್‌ ಎನ್ನಿಸಿಕೊಳ್ಳಲಿದೆ’ ಎಂದರು. 

ಇದಕ್ಕೆ ಗುಜರಾತ್‌ ಸರ್ಕಾರ 22 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಘಟಕ ನಿರ್ಮಾ​ಣಕ್ಕೆ ಒಟ್ಟು ವೆಚ್ಚ 67 ಸಾವಿರ ಕೋಟಿ ರೂ. ತಗುಲಲಿದೆ. ಇದರಿಂದಾಗಿ ಒಟ್ಟು 5 ಸಾವಿರ ನೇರ ಹುದ್ದೆಗಳು ಹಾಗೂ 15 ಸಾವಿರ ಪರೋಕ್ಷ ಹುದ್ದೆಗಳು ಸೃಷ್ಟಿ ಆಗ​ಲಿ​ವೆ’ ಎಂದೂ ಹೇಳಿದರು.

ಇದನ್ನು ಓದಿ: ವಂದೇ ಭಾರತ್‌ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!

ವಾಹನ, ಟಿವಿ, ಮೊಬೈಲ್‌ ಹಾಗೂ ಅನೇಕ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಚಿಪ್‌ ತೀರಾ ಅಗತ್ಯ. ಹೀಗಾಗಿ ಇದಕ್ಕೆ ವಿಶ್ವದಲ್ಲಿ ಭಾರಿ ಬೇಡಿಕೆ ಇದೆ. 

ಇದನ್ನೂ ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..