ಪ್ರಧಾನಿ ನರೇಂದ್ರ ಮೋದಿ ಜೊತೆ ವಿಶ್ವದ ದಿಗ್ಗಜ ಕಂಪನಿಗಳ ಸಿಇಒ, ಮುಖ್ಯಸ್ಥರು ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ನಡೆದ ಸಭೆ ಅತ್ಯಂತ ಯಶಸ್ವಿಯಾಗಿದ್ದು, ಭಾರತದಲ್ಲಿ ಹೂಡಿಕೆ ಹಾಗೂ ತಂತ್ರಜ್ಞಾನ ಆಧಾರಿತ ಗ್ರೀನ್ ಎನರ್ಜಿ ಬಳಕೆಗೆ ಹಲವು ಕಂಪನಿಗಳು ಆಸಕ್ತಿ ತೋರಿದೆ. ಈ  ಸಭೆ ಬಳಿಕ ಕಂಪನಿಗಳ ಮುಖ್ಯಸ್ಥರ ನೀಡಿದ ಪ್ರತಿಕ್ರಿಯೆ ಇಲ್ಲಿದೆ. 

ನವದೆಹಲಿ(ಫೆ.25): ಭಾರತ ಸುಸ್ಥಿರತೆ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದೆ. ಪೂರೈಕೆ ಸರಳಪಳಿಯಲ್ಲಿ ತಂತ್ರಜ್ಞಾನ ಬಳಕೆ ಮಾಡಲು ಬಯಸುತ್ತಿದೆ. ಇದರೊಂದಿಗೆ ಆರ್ಥಿಕತೆ ಚೇತರಿಕೆ, ಹೈಡ್ರೋಜನ್ ಉತ್ಪಾದನೆಯತ್ತವೂ ಗಮನಹರಿಸುತ್ತಿದೆ. ಹೀಗಾಗಿ ಭಾರತದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅತೀವ ಸಂತಸವಾಗುತ್ತಿದೆ ಎಂದು SAP CEO ಕ್ರಿಶ್ಚಿಯನ್ ಕ್ಲೈನ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಮಹತ್ವದ ಸಭೆ ಬಳಿಕ ಮಾಧ್ಯಮದ ಜೊತೆ ಕ್ಲೈನ್ ಪ್ರತಿಕ್ರಿಯೆ ನೀಡಿದ್ದಾರೆ. ಜರ್ಮನಿ ಹಾಗೂ ಭಾರತೀಯ ಕಂಪನಿಗಳಿಗೆ ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಆರ್ಥಿಕತೆಯನ್ನು ಮತ್ತಷ್ಟು ವೇಗದಲ್ಲಿ ಮುನ್ನಡೆಸುವುದು ಹೇಗೆ? ಉಭಯ ದೇಶಗಳು ತಂತ್ರಜ್ಞಾನದ ಮೂಲಕ ಪ್ರಮುಖ ಪಾತ್ರ ನಿರ್ವಹಸಲಿದೆ ಎಂದು ಮೋದಿ ಒತ್ತಿ ಹೇಳಿದರು ಎಂದು ಕ್ಲೈನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹಲವು ಪ್ರಮುಖ ಕಂಪನಿಗಳು ಸಿಇಒ ಹಾಗೂ ಚೇರ್ಮೆನ್‌ಗಳು ಪಾಲ್ಗೊಂಡಿದ್ದರು. ಮೋದಿ ಜೊತೆಗಿನ ಸಭೆ ಬಳಿಕ ಮಾತನಾಡಿದ SFC ಎನರ್ಜಿ ಸಿಇಒ ಡಾ. ಪೀಟರ್ ಪೊಡೆಸ್ಸರ್, ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಸೌರ ಶಕ್ತಿ ಹಾಗೂ ಗ್ರೀನ್ ಹೈಡ್ರೋಜನ್ ನೆಲೆ ನಿರ್ಮಿಸುತ್ತಿದೆ. ಇದರಿಂದ ಭಾರತ ಉತ್ಪಾದನೆ ಹಾಗೂ ಸಂಶೋಧನೆ-ಅಭಿವೃದ್ಧಿ ಜೊತೆಗೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ವಿಫುಲ ಅವಕಾಶವಿದೆ ಎಂದಿದ್ದಾರೆ.

Scroll to load tweet…

ದಾಖಲೆ ಬರೆದ ಏರೋ ಇಂಡಿಯಾ: ಅತೀ ದೊಡ್ಡ ರಕ್ಷಣಾ ಒಪ್ಪಂದಕ್ಕೆ ಸಹಿ

ಕಳೆದ 45 ವರ್ಷಗಳಿಂದ ಭಾರತದಲ್ಲಿ DHL ಕಾರ್ಯನಿರ್ವಹಿಸುತ್ತಿದೆ. ನಾವು ಭಾರತದಲ್ಲಿ ನಿಜವಾದ ಸಾಮರ್ಥ್ಯವನ್ನು ನೋಡುತ್ತಿದ್ದೇವೆ. ಭಾರತ ನಮಗೆ ಉತ್ತಮ ಹಾಗೂ ಅತೀ ಹೆಚ್ಚಿನ ಅವಕಾಶಗಳನ್ನು ನೀಡುವ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯಲ್ಲಿನ ವೇಗವನ್ನು ಭಾರತದಲ್ಲಿ ನೋಡುತ್ತಿದ್ದೇವೆ.DHLಗ್ರೂಪ್ ಸಿಇಒ ಡಟ್ಸೆ ಪೋಸ್ಟ್ ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತ ಅತೀ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಭಾರತ ಸದೃಢ ಹೆಜ್ಜೆ ಇಡುತ್ತಿದೆ. ಗ್ರೀನ್ ಎನರ್ಜಿ, ಮೂಲಭೂತ ಸೌಕರ್ಯ, ಆರೋಗ್ಯ ರಕ್ಷಣೆಯಲ್ಲಿ ಭಾರತ ಇತರ ಎಲ್ಲಾ ದೇಶಗಳಿಂದ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇದಕ್ಕೆ ಭಾರತದಲ್ಲಿರುವ ಅತೀ ದೊಡ್ಡ ಯುವ ಸಮೂಹದ ಕಾಣಿಕೆಯೂ ಇದೆ. ಇದರ ಜೊತೆ ಜೊತೆಗೆ ಭಾರತದ ಡಿಜಿಟಲ್ ಬಳಕೆ ಪೂರಕ ವಾತಾವರಣ ನಿರ್ಮಿಸುತ್ತಿದೆ ಎಂದು ಸೀಮೆನ್ಸ್ ಎಜಿ ಅಧ್ಯಕ್ಷ ಮತ್ತು ಸಿಇಒ ರೋಲ್ಯಾಂಡ್ ಬುಶ್ ಹೇಳಿದ್ದಾರೆ. 

ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್‌ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ