ಭಾರತವು  ಈಗ ಚೀನಾ ಸಾಲಿಗೆ ಸೇರಲು ಉತ್ಸುಕವಾಗಿದ್ದು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಆನ್‌ಲೈನ್ ಜಗತ್ತಿನಲ್ಲಿ ಉಪಸ್ಥಿತಿ ದೊಡ್ಡ ಪ್ರಮಾಣದಲ್ಲಿದೆ. 

ನವದೆಹಲಿ (ಏಪ್ರಿಲ್ 29, 2023): ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಭಾರತವು ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಚೀನಾವನ್ನು ಮೀರಿಸಿದೆ. ಚೀನಾಕ್ಕಿಂತ ಸ್ವಲ್ಪ ಹೆಚ್ಚಾಗುವುದರಿಂದ ನಿಜವಾಗಿಯೂ ಏನನ್ನೂ ಬದಲಾಯಿಸುವುದಿಲ್ಲ. ಆದರೆ, ಅದಕ್ಕಿಂತಲೂ ಮುಖ್ಯವಾದುದು ಭಾರತವು ವಿಶ್ವ ವೇದಿಕೆಗೆ ದೊಡ್ಡ ರೀತಿಯಲ್ಲಿ ಆಗಮಿಸಿದೆ. 

ಎರಡು ಶತಮಾನಗಳ ಹಿಂದೆ ನೆಪೋಲಿಯನ್‌: "ಚೀನಾ ಮಲಗಲಿ, ಏಕೆಂದರೆ ಆ ದೇಶ ಎಚ್ಚರವಾದಾಗ ಅದು ಜಗತ್ತನ್ನು ನಡುಗಿಸುತ್ತದೆ" ಎಂದು ಹೇಳಿದ್ದರು. ಅದರಂತೆ, ಚೀನಾ ಎಚ್ಚೆತ್ತುಕೊಂಡಿದ್ದು ಜಗತ್ತನ್ನು ನಡುಗಿಸಿದೆ. ಈಗ ಭಾರತವು ಚೀನಾ ರೀತಿ ಮತ್ತೊಂದು 1.4 ಶತಕೋಟಿ ಜನರನ್ನು ಸೇರಿಸಿದ್ದು, ಅದರಂತೆ ಚೀನಾ ಸಾಲಿಗೆ ಸೇರಲು ಉತ್ಸುಕವಾಗಿದೆ. ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಆನ್‌ಲೈನ್ ಜಗತ್ತಿನಲ್ಲಿ ಉಪಸ್ಥಿತಿ ದೊಡ್ಡ ಪ್ರಮಾಣದಲ್ಲಿದೆ. 

ಇದನ್ನು ಓದಿ: ರೈತರಿಗೆ ಗುಡ್‌ ನ್ಯೂಸ್‌: ವಿಶ್ವದ ಮೊದಲ ನ್ಯಾನೋ ಡಿಎಪಿ ಗೊಬ್ಬರ ಭಾರತದಲ್ಲಿ ಬಿಡುಗಡೆ

ಭಾರತದ ಜನಸಂಖ್ಯೆಯಲ್ಲಿ ಯುವ ವಯಸ್ಸಿನವರು ಹೆಚ್ಚಾಗಿದ್ದಾರೆ. ದಿ ಎಕನಾಮಿಸ್ಟ್ ಇತ್ತೀಚೆಗೆ ವರದಿ ಮಾಡಿದಂತೆ, ಚೀನಾದ ಜನಸಂಖ್ಯೆಯು 30-60 ವಯಸ್ಸಿನ ವ್ಯಾಪ್ತಿಯಲ್ಲಿ ಕೇಂದ್ರೀಕೃತವಾಗಿದ್ದರೆ, ಭಾರತದ ಜನತೆ ಹೆಚ್ಚಾಗಿ 0 ಮತ್ತು 40 ರ ನಡುವೆ ಇದ್ದಾರೆ. ಅಂದರೆ, ದೇಶದ 1.4 ಶತಕೋಟಿ ಜನರು ಜಾಗತಿಕ ಆರ್ಥಿಕತೆಗೆ ಪ್ರಮುಖ ಕೊಡುಗೆದಾರರಾಗುತ್ತಾರೆ ಮತ್ತು ಚೀನಾದಂತೆಯೇ ಜಾಗತಿಕ ರಾಜಕೀಯದ ವೇದಿಕೆಯಲ್ಲಿ ಪ್ರಮುಖ ಪಾಲುದಾರರಾಗುತ್ತಾರೆ ಎಂಬ ನಿರೀಕ್ಷೆ.
.
ಭಾರತವನ್ನು ಜಗತ್ತು ಇನ್ಮುಂದೆ ನಿರ್ಲಕ್ಷಿಸಲ್ಲ. ಇದಕ್ಕೆ ಕಾರಣಗಳು ಹೀಗಿದೆ..
ಭಾರತದ ಬೆಳವಣಿಗೆ ನಿಜಕ್ಕೂ ಅದ್ಭುತವಾಗಿದೆ
ಭಾರತದ ಆರ್ಥಿಕತೆಯ ಏರಿಕೆಯು ಚೀನಾದ ನೆರಳಿನಿಂದ ಮುಚ್ಚಿಹೋಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಭಾರತವು ಚೀನಾಕ್ಕಿಂತ ಸುಮಾರು 10 ವರ್ಷಗಳ ನಂತರ ತನ್ನ ಕ್ಷಿಪ್ರ ಬೆಳವಣಿಗೆಯ ಅವಧಿಯನ್ನು ಪ್ರಾರಂಭಿಸಿದೆ. ಮತ್ತು ಚೀನಾ ದಶಕಗಳಿಂದ ಶೇ. 10% ಕ್ಕಿಂತ ಬೆಳವಣಿಗೆ ಕಂಡಿದ್ದರೆ, ಭಾರತ ಸುಮಾರು 7% ರಷ್ಟು ಬೆಳವಣಿಗೆ ಕಂಡಿದೆ. ಇನ್ನು, ಜೀವನಮಟ್ಟಕ್ಕೆ ಸಂಬಂಧಿಸಿದಂತೆ, 2019 ರ ಹೊತ್ತಿಗೆ ಭಾರತವು ಚೀನಾಗಿಂತ 12 ವರ್ಷಗಳ ಕಾಲ ಹಿಂದಿದೆ.

ಇದನ್ನೂ ಓದಿ: ನಂ.1 ಶ್ರೀಮಂತನ ಉತ್ತರಾಧಿಕಾರಿ ಆಯ್ಕೆಗೆ ಪ್ರತಿ ತಿಂಗಳೂ 5 ಮಕ್ಕಳ ಸಂದರ್ಶನ! ಆಡಿಷನ್‌ ಪ್ರಕ್ರಿಯೆ ಹೀಗಿದೆ..

2007 ರಲ್ಲಿ ಚೀನಾ ಒಂದು ದೊಡ್ಡ ವ್ಯವಹಾರ ರಾಷ್ಟ್ರ ಎಂದು ಪಷ್ಟವಾಗಿತ್ತು. ಹಾಗೆ, 2023 ರಲ್ಲಿ ಭಾರತವು ದೊಡ್ಡ ವ್ಯವಹಾರ ರಾಷ್ಟ್ರವಾಗಿದೆ ಎಂದು ಸ್ಪಷ್ಟಪಡಿಸಬೇಕು. ಈ ಅದ್ಭುತ ಆರ್ಥಿಕ ಬೆಳವಣಿಗೆಯ ಮೊದಲ ಮತ್ತು ಪ್ರಮುಖ ಪರಿಣಾಮವೆಂದರೆ, ಒಂದು ಕಾಲದಲ್ಲಿ ಹತಾಶ ಬಡತನಕ್ಕೆ ಹೆಸರುವಾಸಿಯಾಗಿದ್ದ ಭಾರತವು ತನ್ನ ಬಡ ಜನರನ್ನು ಮೇಲೆತ್ತುವಲ್ಲಿ ಅಗಾಧವಾದ ದಾಪುಗಾಲುಗಳನ್ನಿಟ್ಟಿದೆ. 2018 ರಲ್ಲಿ ಭಾರತವು 2022 ರ ವೇಳೆಗೆ ತೀವ್ರ ಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ ಎಂದು ಭವಿಷ್ಯ ನುಡಿದಿತ್ತು. ಆದರೆ, ಕೋವಿಡ್‌ ಬಂದ ಕಾರಣ ಇದು ಸಾದ್ಯವಾಗಿಲ್ಲವಾದರೂ, ವಿಶ್ವಬ್ಯಾಂಕ್‌ನ ಹೆಚ್ಚು ವಾಸ್ತವಿಕ ಇತ್ತೀಚಿನ ಅಂದಾಜುಗಳ ಪ್ರಕಾರ ಬಡತನ ಅದ್ಭುತ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಸರ್ಕಾರದ ವರ್ಗಾವಣೆಗಳು ಭಾರತದ ಅಭಿವೃದ್ಧಿ ಹೊಂದುತ್ತಿರುವ ಸಂಪತ್ತನ್ನು ಕಡು ಬಡವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಒಪ್ಪಿಕೊಳ್ಳುತ್ತದೆ. ಈ ಕ್ಷಿಪ್ರ ಬೆಳವಣಿಗೆಯನ್ನು ಮುಂದುವರಿಸಬಹುದೇ ಎಂಬುದು ಮುಕ್ತ ಪ್ರಶ್ನೆಯಾಗಿದೆ. ಚೀನಾಕ್ಕಿಂತ ಭಿನ್ನವಾಗಿ, ಭಾರತವು ತನ್ನ ಪ್ರಸ್ತುತ ಮಟ್ಟಕ್ಕೆ ಕೈಗಾರಿಕೀಕರಣವಿಲ್ಲದೆ ಬೆಳೆದಿದೆ. ಅಂದರೆ, ಆರ್ಥಿಕತೆಯ ಉತ್ಪಾದನೆಯ ಪಾಲನ್ನು ಹೆಚ್ಚಿಸದೆ. 

ಇದನ್ನೂ ಓದಿ: ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!

ಈ ಕೆಳಗಿನ ಟ್ವೀಟ್‌ ಹಾಗೂ ವಿವರಣೆಗಳನ್ನೂ ಗಮನಿಸಿ..

ಇನ್ನು, ಭಾರತವು ಈಗ 2006ರ ಚೀನಾ ಆರ್ಥಿಕ ಬಿಕ್ಕಟ್ಟಿನ ಮುಂಚೆ ಇದ್ದಷ್ಟು ಶ್ರೀಮಂತವಾಗಿದೆ ಎಂಬುದ್ನು ತಿಳಿದುಕೊಳ್ಳಿ.

Scroll to load tweet…

ಅಲ್ಲದೆ, ಭಾರತವು ಕಳೆದ ದಶಕದಲ್ಲಿ ಮೂಲಸೌಕರ್ಯಕ್ಕಾಗಿ ತನ್ನ GDP ಯ ಶೇಕಡಾವಾರನ್ನು ಐದು ಪಟ್ಟು ಹೆಚ್ಚಿಸಿಕೊಂಡಿದೆ.

Scroll to load tweet…

ಇದನ್ನೂ ಓದಿ: ಗುಡ್‌ ನ್ಯೂಸ್‌: ಈ ವರ್ಷ 10 ಲಕ್ಷ ಭಾರತೀಯರಿಗೆ ಅಮೆರಿಕ ವೀಸಾ

ಈಗ ಭಾರತದಲ್ಲಿನ ರೈಲುಗಳು ಬದಲಾಗುತ್ತಿದ್ದು, ವಂದೇ ಭಾರತ್ ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಪಾನಿನ ಶಿಂಕನ್‌ಸೆನ್‌ನಂತೆಯೇ ಹೈಸ್ಪೀಡ್ ರೈಲುಗಳನ್ನು ಭಾರತವು ನಿರ್ಮಿಸುತ್ತಿದೆ.

Scroll to load tweet…

ಹಾಗೂ, ಕಳೆದ ಕೆಲವು ವರ್ಷಗಳಲ್ಲಷ್ಟೇ ಸುಮಾರು ಅರ್ಧ ಶತಕೋಟಿ ಹೆಚ್ಚು ಭಾರತೀಯ ಜನರು ಇಂಟರ್ನೆಟ್ ಪ್ರವೇಶವನ್ನು ಪಡೆದಿದ್ದಾರೆ.

Scroll to load tweet…

ಭಾರತವು ಚೀನಾಕ್ಕಿಂತ ಸುಮಾರು 1.5 ಪಟ್ಟು ಯುವ ಜನಸಂಖ್ಯೆ ಹೊಂದಿದೆ ಮತ್ತು ಚೀನಾದ ಒಟ್ಟು ಜನಸಂಖ್ಯೆಗಿಂತ 1.5 ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

Scroll to load tweet…

2021 ರಲ್ಲಿ ಭಾರತದಲ್ಲಿ ಕೇವಲ 1% ಐಫೋನ್‌ಗಳನ್ನು ತಯಾರಿಸಲಾಗುತ್ತಿತ್ತು ಮತ್ತು ಈಗ ಅದು 7% ಆಗಿದೆ ಎಂಬುದರ ಬಗ್ಗೆಯೂ ಅರಿವಿರಲಿ.

Scroll to load tweet…

ಇದನ್ನೂ ಓದಿ: ತಿರುಪತಿಗೆ ಇನ್ನು ವಂದೇ ಭಾರತ್‌ ರೈಲು: ಇಂದು ಪ್ರಧಾನಿ ಮೋದಿ ಚಾಲನೆ