Asianet Suvarna News Asianet Suvarna News

ಮುಂದಿನ 25 ವರ್ಷಗಳಲ್ಲಿ ಭಾರತ 25 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ: ಕೆ.ವಿ.ಕಾಮತ್

ಈ ತಿಂಗಳ ಪ್ರಾರಂಭದಲ್ಲಿ ಭಾರತ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಗುರುತಿಸಿಕೊಂಡಿತ್ತು. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಇನ್ನಷ್ಟು ವೇಗವಾಗಿ ಬೆಳವಣಿಗೆ ಹೊಂದುವ ಜೊತೆಗೆ 25 ವರ್ಷಗಳಲ್ಲಿ ಭಾರತ 25 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆದು ನಿಲ್ಲುವ ನಿರೀಕ್ಷೆಯಿದೆ ಎಂದು ಬ್ಯಾಂಕರ್ ಕೆ.ವಿ.ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 

India Expected To Be 25 Trillion dollar Economy In 25 Years Banker KV Kamath
Author
First Published Sep 21, 2022, 12:35 PM IST

ಮುಂಬೈ (ಸೆ.21): ಮುಂದಿನ 25  ವರ್ಷಗಳಲ್ಲಿ ಭಾರತ 25 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಪ್ರಸಿದ್ಧ ಬ್ಯಾಂಕರ್ ಹಾಗೂ ಹಣಕಾಸಿನ ಮೂಲಸೌಕರ್ಯ ಹಾಗೂ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಮಂಗಳವಾರ ಹೇಳಿದ್ದಾರೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಕಾಮತ್, ಅಂಥ ಆಸ್ತಿಗಳಲ್ಲಿ ಯಾವುದೇ ಮೌಲ್ಯ ಕಾಣಿಸುತ್ತಿಲ್ಲ ಎಂದಿದ್ದಾರೆ. ಮಾರ್ನಿಂಗ್ ಸ್ಟಾರ್ ಹೂಡಿಕೆ ಸಮ್ಮೇಳನದಲ್ಲಿ ಭಾಗವಹಿಸಿದ ಕಾಮತ್, ಭಾರತದ ಆರ್ಥಿಕತೆ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಈ ತಿಂಗಳ ಪ್ರಾರಂಭದಲ್ಲಿ ಭಾರತ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಗಳಿಸಿತ್ತು. ಇಂಗ್ಲೆಂಡ್ ಹಿಂದಿಕ್ಕಿ ಭಾರತ ಈ ಸ್ಥಾನಕ್ಕೇರಿತ್ತು. ಸದ್ಯ ಭಾರತ ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆಯಾಗಿದ್ದು, ಅಮೆರಿಕ, ಚೀನಾ, ಜಪಾನ್ ಹಾಗೂ ಜರ್ಮನಿಯಿಂದ ಹಿಂದಿದೆ. ಭಾರತದ ಕಾರ್ಪೋರೇಟ್ ಕ್ಷೇತ್ರ ಇಂದು ಹಿಂದಿಗಿಂತ ಅಸಾಧ್ಯವಾದ ಸಾಧನೆಗಳನ್ನು ಮಾಡಿದೆ ಎಂದು ಕಾಮತ್ ಹೇಳಿದರು. ನಾವೀಗ ಶೇ.8-10 ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದ್ದೇವೆ. 25 ವರ್ಷಗಳಲ್ಲಿ ನಮ್ಮ ಆರ್ಥಿಕತೆ ಎಲ್ಲಿರುತ್ತದೆ ಎಂಬುದನ್ನು ನೀವೇ ನೋಡಿ' ಎಂದು ಹೇಳಿದರು.
ಪ್ರಸ್ತುತ ಭಾರತದ (India) ಆರ್ಥಿಕತೆ (Economy)  3.5 ಟ್ರಿಲಿಯನ್ ಇದ್ದು, ಶೇ.8ರಷ್ಟು ಬೆಳವಣಿಗೆ ದರ ಹೊಂದಿದೆ. ಇದು ಪ್ರತಿ  ವರ್ಷಗಳಲ್ಲಿ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಮುಂದಿನ 9 ವರ್ಷಗಳಲ್ಲಿ ಭಾರತದ ಜಿಡಿಪಿ (GDP) ಶೇ.10-11ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ವಿಶ್ವದ ಎರಡನೇ ಅತೀದೊಡ್ಡ ಆರ್ಥಿಕತೆಯಾಗಿ (Economy) ಮೂಡಿಬರುವ ಸಾಧ್ಯತೆಯಿದೆ ಎಂಬ ವಿಶ್ವಾಸವನ್ನು ಕಾಮತ್ ವ್ಯಕ್ತಪಡಿಸಿದ್ದಾರೆ.

ನಾವು ನಮ್ಮ ಸಂಪನ್ಮೂಲಗಳ ಪ್ರಯೋಜನ ಪಡೆದುಕೊಳ್ಳಬೇಕು ಹಾಗೆಯೇ ಯುವ ತಂತ್ರಜ್ಞರನ್ನು ಬಳಸಿಕೊಂಡು ಗ್ರಾಹಕರ ಆಧಾರಿತ ಬೆಳವಣಿಗೆಯ ಹಂತಕ್ಕೆ ಮುಂದಡಿಯಿಡಬೇಕಿದೆ ಎಂದು ಕಾಮತ್ ಹೇಳಿದರು. ಭಾರತದ ಉತ್ಪಾದನಾ ವೆಚ್ಚ ಹಾಗೂ ಪ್ರಮಾಣವನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸಬೇಕು. ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಗಟ್ಟಿಯಾಗಿಸಿಕೊಳ್ಳಬೇಕು. ಇದು ಕೊರೋನಾ ಬಳಿಕದ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗೆ ಒಳಗಾಗಿದೆ ಎಂದರು.

ಇನ್ನೆರಡು ದಿನಗಳ ಬಳಿಕ ಶಾಶ್ವತವಾಗಿ ಬಂದ್‌ ಆಗಲಿದೆ ಈ ಬ್ಯಾಂಕ್‌, ಹಣ ಮರಳಿ ಪಡೆಯಿರಿ ಎಂದ ಆರ್‌ಬಿಐ!

ಕ್ರಿಪ್ಟೋ ಕರೆನ್ಸಿಗೆ (Cryptocurrency)ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಏನು ಹೇಳಿದ್ದರೋ ಅದನ್ನೇ ನಾನು ಪುನರುಚ್ಚರಿಸುತ್ತೇನೆ. ಒಬ್ಬ ಬ್ಯಾಂಕರ್ (Banker) ಆಗಿ ಕ್ರಿಪ್ಟೋ ಕರೆನ್ಸಿ ಯಲ್ಲಿ (Cryptocurrency) ನನಗೆ ಯಾವುದೇ ಮೌಲ್ಯ ಕಾಣಿಸುತ್ತಿಲ್ಲ ಎಂದು ಕಾಮತ್ ಹೇಳಿದರು. NaBFID ಸಂಬಂಧಿಸಿ ಅಗತ್ಯ ನೀತಿಗಳು ಹಾಗೂ ಚೌಕಟ್ಟನ್ನು ರಚಿಸಬೇಕು. ದೇಶದಲ್ಲಿ ಸುದೀರ್ಘ ಮೂಲಸೌಕರ್ಯ ಹಣಕಾಸಿನ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ವರ್ಷ ಸರ್ಕಾರ NaBFID ಯನ್ನು ಸ್ಥಾಪಿಸಿತ್ತು. 

ಈ ಆ್ಯಪ್ ಇದ್ರೆ ಸಾಕು, ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಲ್ಲೇ ಕುಳಿತು ಹಣ ಹಾಕ್ಬಹುದು

ಆಗಸ್ಟ್ 31 ರಂದು, ಆರ್ಥಿಕ ವರ್ಷ 2023 ರ ಮೊದಲ ತ್ರೈಮಾಸಿಕಕ್ಕೆ ರಾಷ್ಟ್ರೀಯ ಅಂಕಿಅಂಶ ಕಚೇರಿ (National Statistical Office) ಬಿಡುಗಡೆ ಮಾಡಿದ GDP ಸಂಖ್ಯೆಗಳು ಭಾರತೀಯ ಆರ್ಥಿಕತೆಯು 13.5 ಶೇಕಡಾ ಬೆಳವಣಿಗೆಯನ್ನು ತೋರಿಸಿದೆ. ಜಿಡಿಪಿ (GDP) ಬೆಳವಣಿಗೆ ದರವು ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank of India) ಹಣಕಾಸು ನೀತಿ ಸಮಿತಿಯ ಮುನ್ಸೂಚನೆಯ 16.2 ಶೇಕಡಕ್ಕಿಂತ ಕಡಿಮೆಯಾಗಿದೆ. ಇನ್ನು, ಭಾರತದ ಆರ್ಥಿಕತೆಯು ಕಡಿಮೆ ತಳಹದಿಯ ಕಾರಣದಿಂದಾಗಿ ಆರ್ಥಿಕ ವರ್ಷ 202ರ ಮೊದಲ ತ್ರೈಮಾಸಿಕ (Q1) ರಲ್ಲಿ 20.1 ಶೇಕಡಾ GDP ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು 2029 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡಆರ್ಥಿಕತೆಯಾಗುವ (3rd Largest Economy)ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ವರದಿ ಹೇಳಿದೆ. 


 

Follow Us:
Download App:
  • android
  • ios