Asianet Suvarna News Asianet Suvarna News

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕ ಡಿ.31ಕ್ಕೆ ವಿಸ್ತರಿಸಿದ ಕೇಂದ್ರ!

  • IT ರಿಟರ್ನ್ಸ್ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿದ ಕೇಂದ್ರ
  • ಡಿಸೆಂಬರ್ 31ರ ವರೆಗೆ ಐಟಿ ರಿಟರ್ನ್ಸ್ ಸಲ್ಲಿಕಿಗೆ ಅವಕಾಶ
  • ಹೊಸ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ
Income Tax Return ITR Filing Deadline For FY21 22 Extended to december 31 ckm
Author
Bengaluru, First Published Sep 9, 2021, 7:59 PM IST
  • Facebook
  • Twitter
  • Whatsapp

ನವದೆಹಲಿ(ಸೆ.09): ಆದಾಯ ತೆರಿಗೆ ಇಲಾಖೆ ಹೊಸ ವೆಬ್‌ಸೈಟ್ ಕೇಂದ್ರ ಸರ್ಕಾರಕ್ಕೆ ಇನ್ನಿಲ್ಲದ ತಲೆನೋವು ತಂದಿದೆ. ಸರಳ ಹಾಗೂ ಸುಲಭವಾಗಿ ಆದಾಯ ತೆರಿಗೆ ಸಲ್ಲಿಕೆ ಹಾಗೂ IT ರಿಟರ್ನ್ಸ್ ಸಲ್ಲಿಕೆಗೆ ಈ ವೆಬ್‌ಸೈಟ್ ಲಾಂಚ್ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ಕೇಂದ್ರ ಸರ್ಕಾರ ರಿಟರ್ನ್ಸ್ ಸಲ್ಲಿಕೆ ಅಂತಿಮ ಗಡುವ ವಿಸ್ತರಿಸುತ್ತಲೇ ಬಂದಿತ್ತು. ಇದೀಗ ಸೆಪ್ಟೆಂಬರ್ ಗಡುವನ್ನು ಇದೀಗ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ.

ಆದಾಯ ತೆರಿಗೆ ಕಾಯ್ದೆಯ ಅಡಿಯ ಹಲವು E ಫಾರ್ಮ್ ಫೈಲಿಂಗ್ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

ಪ್ರತಿ ವರ್ಷ IT ರಿಟರ್ನ್ಸ್ ಸಲ್ಲಿಕೆ ಜುಲೈ ತಿಂಗಳಲ್ಲಿ ಅಂತ್ಯವಾಗಲಿದೆ. ಆದರೆ ಈ ಬಾರಿ ಕೊರೋನಾ ವೈರಸ್ ಹಾಗೂ ಪೋರ್ಟಲ್ ತಾಂತ್ರಿಕ ದೋಷದಿಂದ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ದಿನಾಂಕವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ.

 

ಆದಾಯ ತೆರಿಗೆ ಇಲಾಖೆ  196 ರ ಕಾಯ್ದೆ ಅಡಿಯಲ್ಲಿ( AY 2021-22) ಆದಾಯ ತೆರಿಗೆ ರಿಟರ್ನ್ಸ್ (ITRs) ಮತ್ತು ಆಡಿಟ್ ವರದಿಗಳನ್ನು ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ.  ತೆರಿಗೆದಾರರು ಸೂಚಿಸಿದ  ಸಮಸ್ಯೆಗಳನ್ನು ಪರಿಗಣಿಸಿ, CBDT ಯು AY 21-22 ಗೆ ITR ಗಳು ಮತ್ತು ಆಡಿಟ್ ವರದಿಗಳನ್ನು ಸಲ್ಲಿಸಲು ಅಂತಿಮ ದಿನಾಂಕಗಳನ್ನು ವಿಸ್ತರಿಸುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಸೆ.15ರೊಳಗೆ IT ಪೋರ್ಟಲ್ ತಾಂತ್ರಿಕ ದೋಷ ನಿವಾರಿಸಿ, ಇನ್ಫೋಸಿಸ್‌ಗೆ ಅಂತಿಮ ಗಡುವು ನೀಡಿದ ನಿರ್ಮಲಾ ಸೀತಾರಾಮನ್!

ಇನ್ಫೋಸಿಸ್ ಸಂಸ್ಥೆ ಆದಾಯ ತೆರಿಗೆ ಇಲಾಖೆ ಪೋರ್ಟಲ್  ಅಭಿವೃದ್ಧಿಪಡಿಸಿದೆ. ನಿಗದಿತ ಸಮಯದಲ್ಲಿ ತಾಂತ್ರಿಕ ದೋಷ  ಸರಿಪಡಿಸ ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಕರಿಗೆ ಕೇಂದ್ರ ಸರ್ಕಾರ ನೊಟೀಸ್ ನೀಡಿತ್ತು. ಖುದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಹಾಜರಾದ ಇನ್ಫೋಸಿಸ್ ನಿರ್ದೇಶಕ ತಾಂತ್ರಿಕ ದೋಷ ನಿವಾರಿಸುವ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ 15 ದಿನದ ಕಾಲಾವಕಾಶ ನೀಡಿದೆ.

ಜೂನ್ 7 ರಂದು ನೂತನ ಆದಾಯ ತೆರಿಗೆ ಇಲಾಖೆ ಪೋರ್ಟಲ್ ಲಾಂಚ್ ಮಾಡಲಾಗಿತ್ತು. ಆದರೆ ಬಳಕೆದಾರರು ಪೋರ್ಟಲ್ ಬಳಕೆಯಲ್ಲಿ ಹಲವು ತಾಂತ್ರಿಕ ದೋಷ ಎದುರಿಸಿದ್ದರು. ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

Follow Us:
Download App:
  • android
  • ios