Asianet Suvarna News Asianet Suvarna News

ನೀವು ಪಿಂಚಣಿ ಪಡಯುತ್ತಿದ್ದೀರಾ? ಹಾಗಾದ್ರೆ ನೀವು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು, ಹೇಗೆ? ಇಲ್ಲಿದೆ ಮಾಹಿತಿ

ಕೇವಲ ವೇತನ ಪಡೆಯೋರು ಮಾತ್ರವಲ್ಲ, ಪಿಂಚಣಿ ಪಡೆಯೋರು ಕೂಡ ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಪಿಂಚಣಿಯನ್ನು ವೇತನದಿಂದ ಬಂದ ಆದಾಯ ಎಂದು ಪರಿಗಣಿಸಿ ತೆರಿಗೆ ವಿಧಿಸುವ ಕಾರಣ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ. ಹಾಗಾದ್ರೆ ಪಿಂಚಣಿ ಆದಾಯದ ಐಟಿಆರ್ ಸಲ್ಲಿಕೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 
 

Income Tax Guide On Pension How To File Pension Income In ITR anu
Author
First Published Mar 31, 2023, 5:01 PM IST

Business Desk:ನೀವು ನಿಮ್ಮ ವೃತ್ತಿಯಿಂದ ನಿವೃತ್ತರಾಗಿದ್ದರೂ ಕೂಡ ಪಿಂಚಣಿ ಪಡೆಯುತ್ತಿದ್ದರೆ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆ ಪಿಂಚಣಿಯನ್ನು ವೇತನದಿಂದ ಬಂದ ಆದಾಯ ಎಂದು ಪರಿಗಣಿಸಿ ತೆರಿಗೆ ವಿಧಿಸುತ್ತದೆ. ತೆರಿಗೆ ವಿಧಿಸುವ ಉದ್ದೇಶದಿಂದ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಾಗೂ 80 ವರ್ಷದೊಳಗಿನ ವ್ಯಕ್ತಿಯನ್ನು ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. ಇನ್ನು 80 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಯನ್ನು ಸೂಪರ್ ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ 3ಲಕ್ಷ ರೂ. ತನಕ ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆದಿದ್ದರು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ ಆದಾಯ 2.5ಲಕ್ಷ ರೂ.ಗಿಂತ ಕಡಿಮೆ ಇರೋರು ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆಯುತ್ತಾರೆ. ಹಾಗಾದ್ರೆ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಪಿಂಚಣಿ ಆದಾಯವನ್ನು ಸಲ್ಲಿಕೆ ಮಾಡೋದು ಹೇಗೆ? ಪಿಂಚಣಿಯಲ್ಲಿರುವ ವಿವಿಧ ವಿಧಗಳು ಹಾಗೂ ಅವುಗಳ ಮೇಲೆ ವಿಧಿಸುವ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ.

ಸರ್ಕಾರಿ ಪಿಂಚಣಿ: ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಡೆದಿರುವ ಪಿಂಚಣಿ. ಇದಕ್ಕೆ ಆದಾಯ ತೆರಿಗೆ ರಿಟರ್ನ್ಸ್ 'ವೇತನ' ವರ್ಗದ ಅಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಕುಟುಂಬ ಪಿಂಚಣಿ: ಮೃತಪಟ್ಟ ಸರ್ಕಾರಿ ನೌಕರನ ವಾರಸುದಾರರು ಪಡೆಯುವ ಪಿಂಚಣಿ. ಐಟಿಆರ್ ನಲ್ಲಿ 'ಇತರ ಮೂಲಗಳಿಂದ ಬಂದ ಆದಾಯ' ಸೆಕ್ಷನ್ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ಸ್ಲ್ಯಾಬ್ ದರದ ಆಧಾರದಲ್ಲಿ ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಲಾಗುತ್ತದೆ. 
ಖಾಸಗಿ ವಲಯದ ಪಿಂಚಣಿ: ಖಾಸಗಿ ಕಂಪನಿಗಳಿಂದ ಪಡೆದ ಪಿಂಚಣಿಯನ್ನು ಐಟಿಆರ್ ನಲ್ಲಿ 'ವೇತನದಿಂದ ಬಂದ ಆದಾಯ' ಶೀರ್ಷಿಕೆಯಡಿಯಲ್ಲಿ ನಮೂದಿಸಬೇಕಾಗುತ್ತದೆ. ಪಿಂಚಣಿ ಆದಾಯದಿಂದ ಉದ್ಯೋಗದಾತರು ಟಿಡಿಎಸ್ ಕಡಿತಗೊಳಿಸುತ್ತಾರೆ. 

ಯುಪಿಐ ಬಳಕೆದಾರರಿಗೆ ಉಚಿತ ನಿಜ, ಆದರೆ ಈ 9 ವಿಷಯಗಳು ನಿಮಗೆ ತಿಳಿದಿರಲಿ!

ಪಿಂಚಣಿ ಆದಾಯಕ್ಕೆ ಐಟಿಆರ್ ಫೈಲ್ ಮಾಡೋದು ಹೇಗೆ?
-ನಿಮ್ಮ ಆದಾಯಕ್ಕೆ ಅನ್ವಯಿಸುವಂತೆ ಅರ್ಜಿ ನಮೂನೆ 16 ಅಥವಾ 16A ಬಳಸಿ. ಆನ್ ಲೈನ್ ನಲ್ಲಿ ನಿಮ್ಮ ರಿಟರ್ನ್ಸ್ ಫೈಲ್ ಮಾಡಲು incometax.gov.in ವೆಬ್ ಸೈಟ್ ಗೆ ಭೇಟಿ ನೀಡಿ.
-ಐಟಿಆರ್ ಪೋರ್ಟಲ್ ಗೆ ಲಾಗಿನ್ ಆಗಿ. ಆ ಬಳಿಕ ನಿಮ್ಮ ಪಿಂಚಣಿ ಹಾಗೂ ಇತರ ಆದಾಯದ ಮೂಲಗಳನ್ನು ಆಧರಿಸಿ ನಿಮ್ಮ ಆದಾಯ ತೆರಿಗೆಯನ್ನು ಲೆಕ್ಕ ಹಾಕಿ. 
-ಅರ್ಜಿ ನಮೂನೆ 26AS ಬಳಸಿ ಟಿಡಿಎಸ್ ಕಡಿತ ಹಾಗೂ ನಿವ್ವಳ ತೆರಿಗೆ ಪಾವತಿಯನ್ನು ಹೊಂದಿಕೆ ಮಾಡಿ.
-ಐಟಿಆರ್ ಅರ್ಜಿಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಅಂತಿಮ ದಿನಾಂಕದೊಳಗೆ ನಿಮ್ಮ ತೆರಿಗೆ ರಿಟರ್ನ್ಸ್ ಫೈಲ್ ಮಾಡಿ.

ತೆರಿಗೆ ಪ್ರಯೋಜನಗಳು:
ಪಿಂಚಣಿದಾರರು ಸೆಕ್ಷನ್ 80C,80CCC,80CCD ಅಡಿಯಲ್ಲಿ ಪ್ರಾವಿಡೆಂಟ್ ಫಂಡ್, ಲೈಫ್ ಇನ್ಯುರೆನ್ಸ್ ಪ್ರೀಮಿಯಂ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಹಾಗೂ ಎಲ್ಐಸಿಯ ವರ್ಷಾಶನ ಯೋಜನೆಯಲ್ಲಿ ಮಾಡಿದ ಹೂಡಿಕೆಗೆ ಹಳೆಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದು. ಈ ಸೆಕ್ಷನ್ ಗಳ ಅಡಿಯಲ್ಲಿ ಒಟ್ಟು ಕಡಿತದ ಮಿತಿ 1,50,000ರೂ. ಆದರೆ, ಪಿಂಚಣಿದಾರ ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಬಂದರೆ ಆಗ ಈ ವಿನಾಯ್ತಿಗಳು ಸಿಗೋದಿಲ್ಲ. 

ಏ.1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ?ಇಲ್ಲಿದೆ ಮಾಹಿತಿ

ಹೊಸ ಹಾಗೂ ಹಳೆಯ ತೆರಿಗೆ ವ್ಯವಸ್ಥೆಗೆ 80CCD(2) ಅಡಿಯಲ್ಲಿ ಉದ್ಯೋಗದಾತ ಸಂಸ್ಥೆ ಮಾಡಿರುವ ಕೊಡುಗೆಗೆ ತೆರಿಗೆ ಕಡಿತದ ಪ್ರಯೋಜನ ಸಿಗುತ್ತದೆ. ಒಂದು ವೇಳೆ ಉದ್ಯೋಗದಾತ ಸಂಸ್ಥೆ ಸಾರ್ವಜನಿಕ ವಲಯದ್ದಾಗಿದ್ದರೆ ರಾಜ್ಯ ಸರ್ಕಾರ ಅಥವಾ ಇತರ ಘಟಕಗಳು ವೇತನದ ಶೇ.10ರಷ್ಟನ್ನು ಕಡಿತಗೊಳಿಸುತ್ತವೆ. ಒಂದು ವೇಳೆ ಉದ್ಯೋಗದಾತ ಸಂಸ್ಥೆ ಕೇಂದ್ರ ಸರ್ಕಾರದ್ದಾಗಿದ್ದರೆ ಆಗ ಕಡಿತದ ಮಿತಿ ವೇತನದ ಶೇ.14ರಷ್ಟಾಗಿರುತ್ತದೆ. 
 

Follow Us:
Download App:
  • android
  • ios