ನವದೆಹಲಿ[ಮೇ.06]: ಅಪನಗದೀಕರಣ ನಿರ್ಧಾರದಿಂದಾಗಿ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗಲಿದೆ ಎಂಬ ನಿರೀಕ್ಷೆ ಏಕೋ ಹುಸಿಯಾಗತೊಡಗಿದೆ. ಆದಾಯ ತೆರಿಗೆ ಇ-ಫೈಲಿಂಗ್‌ ಮಾಡುವವರ ಸಂಖ್ಯೆ 2019ನೇ ಹಣಕಾಸು ವರ್ಷದಲ್ಲಿ 6.6 ಲಕ್ಷದಷ್ಟುಕುಸಿತ ಕಂಡಿದೆ.

2017-18ನೇ ಸಾಲಿನಲ್ಲಿ 6.74 ಕೋಟಿ ಮಂದಿ ಇ-ಫೈಲಿಂಗ್‌ ಮಾಡಿದ್ದರು. 2018-2019ನೇ ಸಾಲಿನಲ್ಲಿ ಇದು 6.68 ಕೋಟಿಗೆ ಇಳಿಕೆಯಾಗಿದೆ ಎಂದು ತೆರಿಗೆ ಇಲಾಖೆಯ ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ಅಂಕಿ-ಅಂಶಗಳು ಇವೆ.

ಮತ್ತೊಂದೆಡೆ, ಇ-ಫೈಲಿಂಗ್‌ಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ ಮಾ.31ರವರೆಗೆ ಶೇ.15ರಷ್ಟುಹೆಚ್ಚಾಗಿದ್ದು, 8.45 ಕೋಟಿಗೆ ಏರಿಕೆಯಾಗಿದೆ. ಈ ಸಂಖ್ಯೆ 2016ರ ಮಾಚ್‌ರ್‍ನಲ್ಲಿ ಕೇವಲ 5.2 ಕೋಟಿಯಷ್ಟಿತ್ತು. ಇ-ಫೈಲಿಂಗ್‌ಗೆ ನೋಂದಣಿ ಮಾಡಿದವರಲ್ಲಿ ಶೇ.79ರಷ್ಟುಮಂದಿ ಮಾತ್ರ ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.