Asianet Suvarna News

PFI ಸಂಘಟನೆಗೆ ನೀಡಿದ್ದ ಸೌಲಭ್ಯ ರದ್ದು; ಆದಾಯ ತೆರಿಗೆ ಇಲಾಖೆ ಮಹತ್ವದ ನಿರ್ಧಾರ!

 • ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ನೀಡಿದ್ದ ಸೌಲಭ್ಯ ರದ್ದು
 • ಮಹತ್ವದ ನಿರ್ಧಾರ ತೆಗೆದುಕೊಂಡ ಆದಾಯ ತೆರಿಗೆ ಇಲಾಖೆ
 • ವಿದೇಶದಿಂದ ದೇಣಿಗೆ ಸಂಗ್ರಹಕ್ಕೆ ಬಿತ್ತು ಬ್ರೇಕ್
   
Income Tax Department canclled Popular front of India section 12AA benefits  ckm
Author
Bengaluru, First Published Jun 15, 2021, 6:10 PM IST
 • Facebook
 • Twitter
 • Whatsapp

ನವದೆಹಲಿ(ಜೂ.15): ಭಾರತೀಯ ಆದಾಯ ತೆರಿಗೆ ಇಲಾಖೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಗೆ ನೀಡಿದ್ದ ಕೆಲ ಸೌಲಭ್ಯಗಳನ್ನು ಆದಾಯ ತೆರಿಗೆ ಇಲಾಖೆ ರದ್ದು ಪಡಿಸಿದೆ.

ಹಿಂದೂ ನಾಯಕರ ಹತ್ಯೆಗೆ PFI ಸದಸ್ಯರ ಸಂಚು!..

ನಿಗದಿತ ಸಮುದಾಯದ ನಿಯಮ ಉಲ್ಲಂಘನೆ ಸೆಕ್ಷನ್ 13(1)(b) ನಿಯಮ ಉಲ್ಲಂಘನೆ, ಭಯೋತ್ಪಾದನೆ ಚುಟವಟಿಕೆಯಲ್ಲಿ ಭಾಗಿ, ಮನಿ ಲಾಂಡರಿಂಗ್ ಸೇರಿದಂತೆ ಹಲವು ನಿಯಮಗಳನ್ನು PFI ಸಂಘಟನೆ ಉಲ್ಲಂಘಿಸಿದೆ. PFI ಟ್ರಸ್ಟ್ ಹೇಳಿರುವ ದ್ಯೇಯೋದ್ದೇಶದಲ್ಲಿ ನಡೆಯುತ್ತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸೆಕ್ಷನ್ 12AA(3) ಅಡಿಯಲ್ಲಿ ಸೌಲಭ್ಯವನ್ನು ರದ್ದು ಮಾಡಿದೆ. 

PFI ಸಂಘಟನೆಗೆ ನೀಡಲಾಗಿದ್ದ 80G ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ರದ್ದು ಮಾಡಿದೆ. ಇದರಿಂದ PFI ಸಂಘಟನೆ ವಿದೇಶಗಳಿಂದ ದೇಣಿಗೆ ಸಂಗ್ರಹ ಮಾಡುವಂತಿಲ್ಲ.  ಇದರ ಜೊತೆಗೆ ಸಂಘಟನೆಗೆ ನೀಡಿದ್ದ ಕೆಲ ಆದಾಯ ತೆರಿಗೆ ಸೌಲಭ್ಯಗಳು ರದ್ದಾಗಿದೆ.  

ಸಿಎಎ ಗದ್ದಲಕ್ಕೆ ಹಣ ಪೂರೈಕೆ: ಪಿಎಫ್‌ಐಗೆ ಇ.ಡಿ ದಾಳಿ ಬಿಸಿ

ಪಿಎಫ್ಐ ಸಂಧಟನೆ  ವಿದೇಶದಿಂದ ಹಣ ಸಂಗ್ರಹಿಸಿ ಭಾರತದಲ್ಲಿ ಭಯೋತ್ಪಾದನಾ ಚಟುವಟಿಗೆ ಬಳಸಿದ ಪ್ರಕರಣ ತನಿಖೆ ನಡೆಯತ್ತಿದೆ. ಇದರ ಜೊತೆಗೆ ಜಾರಿ ನಿರ್ದೇಶನಾಲಯ ಈಗಾಗಲೇ ವಿಶೇಷ ನ್ಯಾಯಾಲಯಕಕ್ಕೆ ಪಿಎಫ್ಐ ಸಂಘಟನೆಯ ಮನಿ ಲಾಂಡರಿಂಗ್ ಕೇಸ್ ಕುರಿತು ವರದಿ ಸಲ್ಲಿಸಿದೆ. ಈ ಪ್ರಕರಣ ಪಿಎಫ್ಐ ಸಂಘಟನೆಗೆ ತೀವ್ರ ಹಿನ್ನಡೆ ತಂದಿದೆ.

ವಿದೇಶದಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ ಹಾಗೂ ಅದನ್ನು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ 2013ರಲ್ಲಿ ವಿಶೇಷ NIA ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ PFI ಹಾಗೂ SDPI ತಮ್ಮ ಕಾರ್ಯಕರ್ತರಿಗೆ ಸ್ಫೋಟಕ ಹಾಗೂ ಶಸ್ತಾಸ್ತ್ರಗಳ ತರಬೇತಿ ನೀಡಲು ಹಾಗೂ ಭಯೋತ್ಪಾದನಾ ಚಟುವಟಿಕೆಗೆಗಾಗಿ ಶಿಬಿರ ಆಯೋಜಿಸಿದೆ ಎಂದು ಉಲ್ಲೇಖಿಸಿದೆ. ಧರ್ಮಗಳ ನಡುವೆ ದ್ವೇಷ ಉತ್ತೇಜಿಸುವ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಶಿಬಿರ ಆಯೋಜಿಸಿದೆ ಎಂದು ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

Follow Us:
Download App:
 • android
 • ios