ಲಖನೌ(ಫೆ.17): ದೇಶದ ವಿವಿಧ ಭಾಗಗಳು ಮತ್ತು ವಿವಿಧ ಹಿಂದೂ ಸಂಘಟನೆಗಳ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪಿಎಫ್‌ಐ ಸಂಘಟನೆಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ಮೂಲದ ಅನ್ಷದ್‌ ಬದ್ರುದ್ದೀನ್‌ ಮತ್ತು ಫಿರೋಜ್‌ ಖಾನ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ ಭಾರೀ ಪ್ರಮಾಣದ, ತೀವ್ರ ಸಾಮರ್ಥ್ಯದ ಸ್ಫೋಟಕ ಪದಾರ್ಥಗಳು, ಪೆನ್‌ಡ್ರೈವ್‌, ಪಾನ್‌ಕಾರ್ಡ್‌, ಡಿಎಲ್‌, ಆಧಾರ್‌ ಕಾರ್ಡ್‌ ವಶಪಡಿಸಿಕೊಳ್ಳಲಾಗಿದೆ. ಈ ಬಂಧನದೊಂದಿಗೆ ವಸಂತ ಪಂಚಮಿಯಂದು ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೌರತ್ವ ಕಾಯ್ದೆ ಜಾರಿಗೆ ದಿನಾಂಕ ಫಿಕ್ಸ್ ಮಾಡಿದ ಅಮಿತ್ ಶಾ!

ಈ ಬಗ್ಗೆ ಮಂಗಳವಾರ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರಶಾಂತ್‌ ಕುಮಾರ್‌, ‘ದೇಶಾದ್ಯಂತ ಸರಣಿ ವಿಧ್ವಂಸಕ ಕೃತ್ಯಕ್ಕಾಗಿ ಪಿಎಫ್‌ಐ ಭಾರೀ ಪಿತೂರಿ ಮಾಡಿರುವ, ಇದಕ್ಕಾಗಿ ಕೆಲ ವ್ಯಕ್ತಿಗಳು ಉತ್ತರಪ್ರದೇಶ ಪ್ರವೇಶಿಸಿರುವ ಮಾಹಿತಿ ಸಿಕ್ಕಿತ್ತು. ಜೊತೆಗೆ ತಮ್ಮ ಕೃತ್ಯಗಳಿಗಾಗಿ ಯುವಕರ ನೇಮಕ ಮಾಡಿಕೊಳ್ಳುತ್ತಿರುವ ಮತ್ತು ಭಾರೀ ಪ್ರಮಾಣದ ಸ್ಫೋಟಕ ಪದಾರ್ಥಗಳನ್ನು ಸಂಗ್ರಹಿಸುತ್ತಿರುವ ಸುಳಿವೂ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಅದು ಫಲ ಕೊಟ್ಟಿರಲಿಲ್ಲ. ಆದರೆ ಮಂಗಳವಾರ ಮತ್ತೆ ಇಬ್ಬರು ಶಂಕಿತ ಉಗ್ರರ ಬಗ್ಗೆ ಖಚಿತ ಮಾಹಿತಿ ಸಿಕ್ಕು ದಾಳಿ ನಡೆಸಲಾಯ್ತು. ಈ ವೇಳೆ ಇಬ್ಬರು ಪಿಎಫ್‌ಐ ಕಾರ್ಯಕರ್ತರು ಸಿಕ್ಕಿಬಿದ್ದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಹಥ್ರಾಸ್: ಐವರು PFI ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ ED!

ಭರ್ಜರಿ ಸೆರೆ: ಬಂಧಿತ ಅನ್ಷದ್‌ ಬದ್ರುದ್ದೀನ್‌, ಪಿಐಎಫ್‌ನ ಹಿಟ್‌ ಸ್ವಾ$್ಕಡ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥನಾಗಿದ್ದ. ಈತ ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್‌ ಮತ್ತು ಬಾಂಬ್‌ ತಯಾರಿಯಲ್ಲಿ ಪ್ರವೀಣನಾಗಿದ್ದ. ಅದೇ ರೀತಿ ಫಿರೋಜ್‌ ಕೂಡ ಬ್ಲ್ಯಾಕ್‌ಬೆಲ್ಟ್‌ ಮತ್ತು ಬಾಂಬ್‌ ತಯಾರಿ ಪ್ರವೀಣನಾಗಿದ್ದ ಎಂದು ಮೂಲಗಳು ತಿಳಿಸಿವೆ.