Asianet Suvarna News Asianet Suvarna News

ಭಾರತದಲ್ಲಿ ಸೆಕೆಂಡ್‌ಗೆ ಇಬ್ಬರು ಬಡವರ ಸೃಷ್ಟಿ!

ಪ್ರತಿ ವರ್ಷ ದಾವೋಸ್‌ನಲ್ಲಿ ನಡೆಯುವ ಜಾಗತಿಕ ಆರ್ಥಿಕ ಶೃಂಗದಲ್ಲಿ ವಿವಿಧ ದೇಶಗಳಲ್ಲಿ ಆರ್ಥಿಕ ಅಸಮಾನತೆಯ ಪ್ರಮಾಣ ಎಷ್ಟಿದೆಯೆಂದು ಆಕ್ಸ್‌ಫಾಮ್‌ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ವರದಿ ಮಂಡಿಸುತ್ತದೆ. ಈ ಬಾರಿ ಮಂಡಿಸಿದ 2018ನೇ ಸಾಲಿನ ವರದಿಯಲ್ಲಿ ಭಾರತದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಗಳಿಕೆಯ ಅಂತರ ಇನ್ನಷ್ಟುಹೆಚ್ಚಿರುವುದು ಕಂಡುಬಂದಿದೆ.

In Each Second Two People Becoming Beggars In India
Author
Bangalore, First Published Jan 23, 2020, 3:50 PM IST
  • Facebook
  • Twitter
  • Whatsapp

ವೈದ್ಯಕೀಯ ವೆಚ್ಚವೇ ದೊಡ್ಡ ಸಮಸ್ಯೆ

ಭಾರತದಲ್ಲಿ ಮಧ್ಯಮ ವರ್ಗದವರು ಅಥವಾ ಬಡವರು ಇನ್ನಷ್ಟುಬಡವರಾಗಲು ಪ್ರಮುಖ ಕಾರಣ ವೈದ್ಯಕೀಯ ವೆಚ್ಚ. ನಮ್ಮ ದೇಶವು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮದ ರಾಜಧಾನಿ ಎನಿಸಿಕೊಳ್ಳುತ್ತಿದ್ದರೂ ಇಲ್ಲಿ ಉತ್ತಮ ಆರೋಗ್ಯ ಸೇವೆ ಶ್ರೀಮಂತರಿಗೆ ಮಾತ್ರ ಲಭಿಸುತ್ತಿದೆ. ಬಡವರಿಗೆ ಅಪಾಯಕಾರಿ ರೋಗ ಬಂದರೆ ಅವರು ಚಿಕಿತ್ಸೆ ಪಡೆಯಲು ಸಾಲಸೋಲ ಮಾಡಿ ಕಡುಬಡವರಾಗುತ್ತಿದ್ದಾರೆ. ಜನಸಾಮಾನ್ಯರಿಗೆ ಆರೋಗ್ಯ ಸೇವೆ ನೀಡಲು ಜಿಡಿಪಿಯಲ್ಲಿ ಅತ್ಯಂತ ಕಡಿಮೆ ವೆಚ್ಚ ಮಾಡುವ ದೇಶ ಎಂಬ ಹಣೆಪಟ್ಟಿಭಾರತಕ್ಕಿದೆ. ಆಫ್ರಿಕಾದ ಬಡ ದೇಶಗಳಿಗಿಂತ ನಮ್ಮಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಿದೆ. ಜಗತ್ತಿನಲ್ಲಿ ಹೆರಿಗೆಯ ವೇಳೆ ಮರಣ ಹೊಂದುವ ಒಟ್ಟು ತಾಯಂದಿರಲ್ಲಿ ಶೇ.17ರಷ್ಟುಮಹಿಳೆಯರು ಭಾರತೀಯರು. 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಒಟ್ಟು ಸಾವಿನ ಪ್ರಮಾಣದಲ್ಲಿ ಭಾರತದ ಮಕ್ಕಳ ಸಂಖ್ಯೆ ಶೇ.21ರಷ್ಟಿದೆ.

ಭಾರತದ ಆರ್ಥಿಕ ಪ್ರಗತಿ ಶೇ.4.8ಕ್ಕೆ ಕುಸಿತ: ಐಎಂಎಫ್‌

ಆಕ್ಸ್‌ಫಾಮ್‌ ನೀಡಿದ ಚಿತ್ರಣವಿದು

ಭಾರತದ ಅತಿ ಶ್ರೀಮಂತ ವ್ಯಕ್ತಿ ಮುಕೇಶ್‌ ಅಂಬಾನಿ. ಜಗತ್ತಿನಲ್ಲೇ ಇವರು 19ನೇ ಅತಿ ಶ್ರೀಮಂತ. ಮುಂಬೈನಲ್ಲಿ ಇವರು 570 ಅಡಿಯ, 27 ಮಹಡಿಯ ಮನೆ ಹೊಂದಿದ್ದಾರೆ. ಇದು ಜಗತ್ತಿನಲ್ಲೇ ಅತ್ಯಂತ ದುಬಾರಿಯಾದ ಖಾಸಗಿ ನಿವಾಸ.

ಬಿಹಾರದ ಪಾಟ್ನಾದಲ್ಲಿ 32 ವರ್ಷದ ಪ್ರತಿಮಾ ಎಂಬಾಕೆ ಸ್ಲಮ್‌ನಲ್ಲಿ ವಾಸಿಸುತ್ತಿದ್ದಾಳೆ. ಈಕೆ ತನ್ನ ಹೆರಿಗೆ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ, ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ಅವಳಿ ಮಕ್ಕಳನ್ನು ಕಳೆದುಕೊಂಡಳು.

ಸರ್ಕಾರ ಏನು ಮಾಡಬೇಕು?

- ದೇಶದ ಎಲ್ಲ ಬಡವರಿಗೆ ಉಚಿತ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಇತರ ಸೇವೆಗಳು ಸಿಗುವಂತೆ ಮಾಡಬೇಕು.

- ತಮ್ಮ ಮನೆ ಹಾಗೂ ಮಕ್ಕಳಿಗಾಗಿ ಮಹಿಳೆಯರು ಉಚಿತವಾಗಿ ದುಡಿಯುವ ಸಮಯ ಕಡಿತವಾಗುವಂತೆ ನೋಡಿಕೊಳ್ಳಬೇಕು.

- ಲಾಬಿಗೆ ಮಣಿದು ಶ್ರೀಮಂತರಿಗೆ ವಿಧಿಸುವ ತೆರಿಗೆಯನ್ನು ಇಳಿಕೆ ಮಾಡುವುದು ಬಿಟ್ಟು ಏರಿಕೆ ಮಾಡಬೇಕು.

ಏಕಾಏಕಿ 29 ವರ್ಷಗಳಷ್ಟು ಹಿಂದಕ್ಕೆ ಹೋದ ಚೀನಾ: ಡ್ರ್ಯಾಗನ್ ತಾಕತ್ತು ಇಷ್ಟೇನಾ?

ಉದಾರೀಕರಣದ ನಂತರ ಅಸಮಾನತೆ ಹೆಚ್ಚಳ

1990ರ ದಶಕದಲ್ಲಿ ಭಾರತವು ಉದಾರೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡ ನಂತರ ದೇಶದಲ್ಲಿ ಬಡತನ ಇಳಿಕೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ನಂತರದ 30 ವರ್ಷಗಳಲ್ಲೇ ಬಡತನ ಮತ್ತು ಆರ್ಥಿಕ ಅಸಮಾನತೆ ಅತಿ ಹೆಚ್ಚಾಗಿದೆ ಎಂದು ಆಕ್ಸ್‌ಫಾಮ್‌ ವರದಿ ಹೇಳಿದೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಹಾಗೇ ಉಳಿಯುತ್ತಿದ್ದಾರೆ.

ಆರ್ಥಿಕ ಅಸಮಾನತೆ ಅತಿ ಕಡಿಮೆ ಇರುವ ಟಾಪ್‌ 5 ದೇಶಗಳು

1. ಐಸ್‌ಲ್ಯಾಂಡ್‌

2. ಆಸ್ಪ್ರೇಲಿಯಾ

3. ಸ್ವಿಜರ್‌ಲೆಂಡ್‌

4. ಲಕ್ಸೆಂಬರ್ಗ್‌

5. ಬೆಲ್ಜಿಯಂ

ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

ಆರ್ಥಿಕ ಅಸಮಾನತೆ ಅತಿ ಹೆಚ್ಚಿರುವ ಟಾಪ್‌ 5 ದೇಶಗಳು

1. ಉಕ್ರೇನ್‌

2. ಮಾಳವಿ

3. ಇಥಿಯೋಪಿಯಾ

4. ಕಾಂಗೋ

5. ಬುರುಂಡಿ

ಸಂಪತ್ತಿನ ಅಸಮಾನತೆ ಹೇಗೆ ಹೆಚ್ಚುತ್ತಿದೆ?

1%: ಭಾರತದಲ್ಲಿ ಶೇ.10ರಷ್ಟುಜನರು ದೇಶದಲ್ಲಿ 2017ರಲ್ಲಿ ಸೃಷ್ಟಿಯಾದ ಸಂಪತ್ತಿನಲ್ಲಿ ಶೇ.77ರಷ್ಟುಸಂಪತ್ತನ್ನು ಹೊಂದಿದ್ದಾರೆ. ಶೇ.73ರಷ್ಟುಸಂಪತ್ತು ಶೇ.1ರಷ್ಟುಶ್ರೀಮಂತರ ಬಳಿ ಸಂಗ್ರಹವಾಗಿದೆ. ಈ ಅವಧಿಯಲ್ಲಿ ದೇಶದ ಬಡವರ ಸಂಪತ್ತಿನಲ್ಲಿ ಶೇ.1ರಷ್ಟುಮಾತ್ರ ಹೆಚ್ಚಳವಾಗಿದೆ.

ಆರ್ಥಿಕ ಸಂಕಷ್ಟ:ಹಣಕಾಸು ಸಚಿವಾಲಯ ನಿರ್ಣಯವಾಗುವುದು ಇಷ್ಟ!

70: ಭಾರತದಲ್ಲಿ 119 ಶತಕೋಟ್ಯಧಿಪತಿಗಳಿದ್ದಾರೆ. 2000ನೇ ಇಸ್ವಿಯಲ್ಲಿ ಇವರ ಸಂಖ್ಯೆ ಕೇವಲ 9 ಇತ್ತು. 2017ರಲ್ಲಿ ಇವರ ಸಂಖ್ಯೆ 101ಕ್ಕೇರಿತ್ತು. 2018ರಿಂದ 2022ರ ನಡುವೆ ಇನ್ನೂ 70 ಶತಕೋಟ್ಯಧಿಪತಿಗಳು ಭಾರತದಲ್ಲಿ ಸೃಷ್ಟಿಯಾಗಲಿದ್ದಾರೆ.

10 ಪಟ್ಟು: ಒಂದು ದಶಕದಲ್ಲಿ ಭಾರತದ ಶತಕೋಟ್ಯಧಿಪತಿಗಳ ಆಸ್ತಿ 10 ಪಟ್ಟು ಏರಿಕೆಯಾಗಿದೆ. ಇವರ ಬಳಿಯಿರುವ ಒಟ್ಟು ಸಂಪತ್ತು ಭಾರತದ 2018-19ನೇ ಸಾಲಿನ ಬಜೆಟ್‌ಗಿಂತ (24.4 ಲಕ್ಷ ಕೋಟಿ ರು.) ಹೆಚ್ಚು.

6.3 ಕೋಟಿ: ಪ್ರತಿ ವರ್ಷ ಭಾರತದಲ್ಲಿ 6.3 ಕೋಟಿ ಜನರು ಅನಾರೋಗ್ಯದ ಚಿಕಿತ್ಸೆಯ ವೆಚ್ಚ ಭರಿಸಲಾಗದೆ ಬಡವರಾಗುತ್ತಿದ್ದಾರೆ. ಪ್ರತಿ ಸೆಕೆಂಡ್‌ಗೆ ಇಬ್ಬರು ಬಡವರು ಭಾರತದಲ್ಲಿ ಹೊಸತಾಗಿ ಸೃಷ್ಟಿಯಾಗುತ್ತಿದ್ದಾರೆ.

941 ವರ್ಷ: ಅಂದಾಜಿನ ಪ್ರಕಾರ ಭಾರತದ ಗ್ರಾಮೀಣ ಪ್ರದೇಶದ ಕನಿಷ್ಠ ವೇತನದ ವ್ಯಕ್ತಿಯೊಬ್ಬ ಗಾರ್ಮೆಂಟ್ಸ್‌ ಉದ್ದಿಮೆಯೊಂದರ ಸಿಇಒ ಒಂದು ವರ್ಷಕ್ಕೆ ಪಡೆಯುವಷ್ಟುಆದಾಯ ಗಳಿಸಲು 941 ವರ್ಷ ದುಡಿಯಬೇಕು!

Follow Us:
Download App:
  • android
  • ios