ಬರೋಬ್ಬರಿ 29 ವರ್ಷಗಳಷ್ಟು ಹಿಂದಕ್ಕೆ ಹೋದ ಚೀನಾ| ಹೂಂಕರಿಸಿ ಸುಸ್ತಾಗಿ ಆಳ ನಿದ್ರೆಗೆ ಜಾರಿದ ಚೀನಿ ಡ್ರ್ಯಾಗನ್| ನಿರಂತರ ಜಿಡಿಪಿ ಕುಸಿತದಿಂದ ಬಳಲಿ ಬೆಂಡಾದ ಚೀನಾ| ಕಳೆದ ವರ್ಷ ಚೀನಾದ ಜಿಡಿಪಿ ಬೆಳವಣಿಗೆ ಶೇ.6.1 ರಷ್ಟು ದಾಖಲು| 1990ರ ನಂತರದ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾದ ಚೀನಾ ಜಿಡಿಪಿ| ಅಮೆರಿಕದೊಂದಿಗಿನ ವಾಣಿಜ್ಯ ಯುದ್ಧದಿಂದಾಗಿ ಚೀನಾಗೆ ಭಾರೀ ನಷ್ಟ|

ಬೀಜಿಂಗ್(ಜ.17): ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವುದಾಗಿ ಬೀಗುತ್ತಿದ್ದ ಚೀನಾ, ನಿರಂತರ ಜಿಡಿಪಿ ಕುಸಿತದಿಂದ ಬಳಲಿ ಬೆಂಡಾಗಿದೆ.

ಕಳೆದ ವರ್ಷ ಚೀನಾದ ಜಿಡಿಪಿ ಬೆಳವಣಿಗೆ ಶೇ.6.1 ರಷ್ಟು ದಾಖಲಾಗಿದ್ದು, ಇದು 29 ವರ್ಷಗಳಲ್ಲಿ ಅತಿ ಕಡಿಮೆ ವಾರ್ಷಿಕ ಬೆಳವಣಿಗೆಯ ದರವಾಗಿದೆ.

3 ದಶಕಗಳ ಕನಿಷ್ಠಕ್ಕೆ ಕುಸಿದ ಚೀನಾ ಜಿಡಿಪಿ!

ಈ ಕುರಿತು ಮಾಹಿತಿ ನೀಡಿರುವನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್, ಚೀನಾದ ಜಿಡಿಪಿ ಕುಂಠಿತ ಆಘಾತಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.

Scroll to load tweet…

ದುರ್ಬಲ ದೇಶೀಯ ಬೇಡಿಕೆ ಮತ್ತು ಅಮೆರಿಕ ಜೊತೆಗಿನ ವಾಣಿಜ್ಯ ಯುದ್ಧ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ರಾಷ್ಟ್ರಕ್ಕೆ ಭಾರೀ ನಷ್ಟವನ್ನುಂಟುಮಾಡಿದೆ ಎನ್ನಲಾಗಿದೆ.

ಚೀನಾ ಮತ್ತು ಅಮೆರಿಕ ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ಬಳಿಕ ಹೊಸ ದತ್ತಾಂಶದ ಮಾಹಿತಿ ಹೊರ ಬಿದ್ದಿದೆ. ಅಮೆರಿಕದೊಂದಿಗಿನ 18 ತಿಂಗಳ ಸುದೀರ್ಘ ವ್ಯಾಪಾರ ಹೋರಾಟದಲ್ಲಿ ಚೀನಾ ಭಾರೀ ನಷ್ಟ ಎದುರಿಸಿರುವುದು ಸ್ಪಷ್ಟವಾಗಿದೆ.

ಶತಮಾನದ ಮಿಲನ: ಜಗತ್ತಿಗೆ ಕೇಳಿಸಿದ ಅಮೆರಿಕ-ಚೀನಾ ಹೊಸ ಘೋಷಣೆ! 

ಈ ಅವಧಿಯಲ್ಲಿ ಚೀನಾಗೆ ಪರಸ್ಪರ ರಫ್ತು ಮಾಡುವ ಅರ್ಧ ಟ್ರಿಲಿಯನ್ ಡಾಲರ್ ಮೌಲ್ಯದ ಶೇ.25 ರಷ್ಟು ಸುಂಕದ ಹೊಡೆತ ಬಿದ್ದಿದೆ ಎಂದು ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ಚೀನಾ ಕಳೆದ ವರ್ಷ ಶೇ. 6.1ರಷ್ಟು ಜಿಡಿಪಿ ದಾಖಲಿಸಿದೆ. ಇದು 1990ರ ನಂತರದ ಕಳಪೆ ಪ್ರದರ್ಶನವಾಗಿದೆ.

ಜನವರಿ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ