ಉಕ್ರೇನ್‌ ಮೇಲೆ ರಷ್ಯಾ ದಾಳಿಯ ಪರಿಣಾಮ ತೊಂದರೆ ವಿಶ್ವದಲ್ಲೇ ಅತೀ ಹೆಚ್ಚು ಸೂರ್ಯಕಾಂತಿ ಎಣ್ಣೆ ಉತ್ಪಾದಿಸುತ್ತಿದ್ದ ಉಕ್ರೇನ್‌ ಸೂರ‍್ಯಕಾಂತಿ ಎಣ್ಣೆ ಆಮದಿನಲ್ಲಿ ಶೇ.25ರಷ್ಟುಕೊರತೆ  

ಮುಂಬೈ: ಮುಂದಿನ ಹಣಕಾಸು ವರ್ಷದಲ್ಲಿ (Financial Year) ಭಾರತಕ್ಕೆ (India) ಸೂರ್ಯಕಾಂತಿ ಎಣ್ಣೆ ಆಮದಿನದಲ್ಲಿ ಶೇ.25ರಷ್ಟುಅಂದರೆ 4- 6 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆಯ ಪೂರೈಕೆಯಲ್ಲಿ ಕೊರತೆಯುಂಟಾಗಲಿದೆ ಎಂದು ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ ಗುರುವಾರ ತಿಳಿಸಿದೆ. ವಿಶ್ವದ ಅತ್ಯಂತ ದೊಡ್ಡ ಸೂರ್ಯಕಾಂತಿ (sunflower oil) ಎಣ್ಣೆ ಉತ್ಪಾದನಾ ದೇಶವಾದ ಉಕ್ರೇನ್‌(Ukraine) ಮೇಲೆ ರಷ್ಯಾ (Russia) ದಾಳಿ ನಡೆಸಿರುವ ಕಾರಣ ಈ ಪರಿಸ್ಥಿತಿ ಬಂದೊದಗಿದೆ. ಭಾರತದಲ್ಲಿ ಪ್ರತಿ ವರ್ಷವು 230-240 ಲಕ್ಷ ಟನ್‌ ಖಾದ್ಯ ತೈಲ ಬಳಕೆಯಾಗುತ್ತಿದ್ದು, ಇದರಲ್ಲಿ ಸೂರ್ಯಕಾಂತಿ ತೈಲದ ಪಾಲು ಶೇ.10 ರಷ್ಟಿದೆ. ಶೇ.60 ರಷ್ಟುಸೂರ್ಯಕಾಂತಿ ಎಣ್ಣೆಯನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ.

ಭಾರತಕ್ಕೆ ಶೇ.70 ರಷ್ಟುಕಚ್ಚಾ ಸೂರ್ಯಕಾಂತಿ ಎಣ್ಣೆಯು ಉಕ್ರೇನಿನಿಂದ (22-23 ಲಕ್ಷ ಟನ್‌) ಹಾಗೂ ಶೇ.20 ರಷ್ಟುರಷ್ಯಾದಿಂದ ಆಮದಾಗುತ್ತದೆ. ಉಳಿದ ಶೇ.10 ರಷ್ಟುಭಾಗ ಅಜೆಂರ್‍ಟೀನಾ ಇನ್ನಿತರ ದೇಶಗಳಿಂದ ಆಮದಾಗುತ್ತದೆ. ಪ್ರಸ್ತುತ ಉಕ್ರೇನ್‌ ಯುದ್ಧ ಪೀಡಿತವಾಗಿದ್ದರೆ, ರಷ್ಯಾದ ಮೇಲೆ ವಿವಿಧ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಿವೆ. ಇದು ಭಾರತದ ದೇಶೀಯ ಖಾದ್ಯ ತೈಲ (edible oil) ಉತ್ಪಾದನಾ ಯೋಜನೆಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Russia Ukraine Crisis:ಭಾರತದ ಅಡುಗೆಮನೆ ಮೇಲೂ ಪರಿಣಾಮ ಬೀರಲಿದೆ ಈ ಸಂಘರ್ಷ! ಯಾವೆಲ್ಲ ಕ್ಷೇತ್ರಕ್ಕಿದೆ ಈ ರಾಷ್ಟ್ರಗಳ ನಂಟು?

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಬಳಿಕ ಸೂರ್ಯಕಾಂತಿ ಎಣ್ಣೆಯನ್ನು ಉಕ್ರೇನ್‌ ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ ಹಿನ್ನೆಲೆ ಭಾರತ ಈಗ ದಾಖಲೆಯ ಭಾರಿ ಬೆಲೆ ನೀಡಿ ರಷ್ಯಾದಿಂದ ಸೂರ್ಯಕಾಂತಿ ಎಣ್ಣೆ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧದ ಕಾರಣದಿಂದ ಉಕ್ರೇನ್‌ ಸರಬರಾಜು ಸ್ಥಗಿತಗೊಳಿಸಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಏರಿದ್ದರಿಂದ ಭಾರತವು ಏಪ್ರಿಲ್‌ನಲ್ಲಿ ದಾಖಲೆಯ ಹೆಚ್ಚಿನ ಬೆಲೆಗೆ 45,000 ಟನ್‌ಗಳಷ್ಟು ರಷ್ಯಾದ ಸೂರ್ಯಕಾಂತಿ ಎಣ್ಣೆಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಈ ಉದ್ಯಮದ ಅಧಿಕಾರಿಗಳು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ತಾಳೆ ಎಣ್ಣೆಯ (palm oil) ಪೂರೈಕೆಯನ್ನು ಸ್ಥಗಿತಗೊಳಿಸಿರುವ ಇಂಡೋನೇಷ್ಯಾದ (Indonesia) ನಿರ್ಧಾರ ಹಾಗೂ ದಕ್ಷಿಣ ಅಮೆರಿಕಾದಲ್ಲಿ (South America) ಸೋಯಾಬೀನ್ ಬೆಳೆಯಲ್ಲಿ ಉಂಟಾದ ಕುಸಿತದಿಂದ ವಿಶ್ವದ ಅತಿದೊಡ್ಡ ಖಾದ್ಯ ತೈಲ ಆಮದುದಾರ ದೇಶವಾಗಿರುವ ಭಾರತಕ್ಕೆ ಹೊಡೆತ ಉಂಟಾಗಿದ್ದು, ಹೀಗಾಗಿ ಈಗ ರಷ್ಯಾದ ಸೂರ್ಯಕಾಂತಿ ಎಣ್ಣೆ ಭಾರತದ ಈ ಕೊರತೆಯನ್ನು ಪೂರೈಸಲಿದೆ.

ಉಕ್ರೇನ್‌ನಿಂದ ಪೂರೈಕೆ ಸ್ಥಗಿತ : ಅತ್ಯಧಿಕ ಬೆಲೆಗೆ ರಷ್ಯಾದಿಂದ ಎಣ್ಣೆ ಖರೀದಿಸಿದ ಭಾರತ

ಉಕ್ರೇನ್‌ನಲ್ಲಿ ಹಡಗು ಲೋಡ್ ಮಾಡಲು ಸಾಧ್ಯವಾಗದ ಕಾರಣ, ಖರೀದಿದಾರರು ರಷ್ಯಾದಿಂದ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜೆಮಿನಿ ಎಡಿಬಲ್ಸ್ (Gemini Edibles) ಮತ್ತು ಫ್ಯಾಟ್ಸ್ ಇಂಡಿಯಾ ಪ್ರೈವೇಟ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಚೌಧರಿ (Pradeep Chowdhry) ಹೇಳಿದ್ದಾರೆ. ಏಪ್ರಿಲ್‌ನಲ್ಲಿ 12,000 ಟನ್‌ಗಳಷ್ಟು ರಷ್ಯಾದ ಸೂರ್ಯಕಾಂತಿ ಎಣ್ಣೆಯನ್ನು (sunflower oil) ಆಮದು ಮಾಡಿಕೊಳ್ಳಲು ಇದು ಒಪ್ಪಂದ ಮಾಡಿಕೊಂಡಿದೆ.

ಸಂಸ್ಕರಣಾಗಾರರು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಪ್ರತಿ ಟನ್‌ಗೆ $2,150 ಡಾಲರ್‌ ದಾಖಲೆ ಬೆಲೆಗೆ ಖರೀದಿಸಿದ್ದಾರೆ. ಇದರಲ್ಲಿ ವೆಚ್ಚ, ವಿಮೆ ಮತ್ತು ಸರಕು ಸಾಗಣೆ ವೆಚ್ಚವೂ ಸೇರಿದೆ.(CIF), ಯುದ್ಧ ಆರಂಭವಾಗುವುದಕ್ಕೂ ಮೊದಲು ಇಷ್ಟೇ ಮೊತ್ತದ ಎಣ್ಣೆ ಸಾಗಣೆಗೆ ಉಂಟಾಗುತ್ತಿದ್ದ ವೆಚ್ಚ $1,630 ಡಾಲರ್ ಎಂದು ವಿತರಕರು ಹೇಳಿದ್ದಾರೆ.

ರಷ್ಯಾ (Russia)-ಉಕ್ರೇನ್(Ukraine) ಸಂಘರ್ಷ ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ರಷ್ಯಾದೊಂದಿಗೆ ಮಾತ್ರವಲ್ಲ ಉಕ್ರೇನ್ ಜೊತೆಗೂ ವ್ಯಾಪಾರ (Trade) ಸಂಬಂಧ ಹೊಂದಿರೋ ಕಾರಣ ಭಾರತದ (India) ಆರ್ಥಿಕತೆ (Economy) ಮೇಲೆ ಕೂಡ ಈ ಯುದ್ಧ ಪರಿಣಾಮ ಬೀರಿದೆ.