Asianet Suvarna News Asianet Suvarna News

ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವ ನಂ.1: ಐಎಂಎಫ್‌ ವರದಿ!

* ಬೇರೆಲ್ಲಾ ದೇಶ ಹಿಂದಿಕ್ಕಿ ಅತಿವೇಗದಲ್ಲಿ ಅಭಿವೃದ್ಧಿ

* ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವ ನಂ.1

* ಈ ವರ್ಷ 9.5% ಬೆಳವಣಿಗೆ: ಐಎಂಎಫ್‌ ವರದಿ

IMF Predicts India To Be Fastest Growing Economy Expects 9 5pc Growth in 2021 pod
Author
Bangalore, First Published Oct 14, 2021, 7:23 AM IST

ವಾಷಿಂಗ್ಟನ್‌/ನವದೆಹಲಿ(ಅ.14): ಕೊರೋನಾದಿಂದ(Coronavirus) ದೇಶದ ಆರ್ಥಿಕತೆಗೆ(Economy) ಭಾರಿ ಹೊಡೆತ ಬಿದ್ದಿದ್ದರೂ, ಭಾರತವು 2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವೇಗದಿಂದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎನ್ನಿಸಿಕೊಳ್ಳಲಿದೆ. ಭಾರತದIndia) ಜಿಡಿಪಿ(GDP) ಬೆಳವಣಿಗೆ ದರ 2021ರಲ್ಲಿ ಶೇ.9.5 ಹಾಗೂ 2022ರಲ್ಲಿ ಶೇ.8.5 ಇರಲಿದೆ. ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಭಾರತ ಮೀರಿಸಲಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ (IMF) ಹೇಳಿದೆ.

ತನ್ನ ಆರ್ಥಿಕ ಅಭಿವೃದ್ಧಿ(Economic Development) ಮುನ್ನೋಟದಲ್ಲಿ ಈ ಮಾಹಿತಿಯನ್ನು ಅದು ದಾಖಲಿಸಿದೆ. ‘ಭಾರತವು ಕೊರೋನಾ 2ನೇ ಅಲೆಯ(Second Wave Of Covid 19) ಹಿನ್ನಡೆಯಿಂದ ಹೊರಬಂದಿದೆ’ ಎಂದು ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌Gita Gopinath) ಶಹಬ್ಬಾಸ್‌ಗಿರಿ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ(BJP) ಈ ವರದಿಯನ್ನು ಸ್ವಾಗತಿಸಿದ್ದು, ‘ನರೇಂದ್ರ ಮೋದಿ(Narendra Modi) ಸರ್ಕಾರವು ಹಾಕಿದ ಸುಭದ್ರ ಆರ್ಥಿಕ ಅಡಿಪಾಯದ ಪರಿಣಾಮ ಈಗ ಕಾಣುತ್ತಿದೆ’ ಎಂದು ಹರ್ಷಿಸಿದೆ. ಭಾರತದ ಆರ್ಥಿಕತೆಯು ಇತ್ತೀಚೆಗೆ ಕೊರೋನಾ ಹೊಡೆತಕ್ಕೆ ಸಿಲುಕಿ ಶೇ.7.3ರಷ್ಟುಸಂಕುಚಿತ ಆಗಿದ್ದು ಇಲ್ಲಿ ಗಮನಾರ್ಹ.

ಎಲ್ಲರನ್ನೂ ಹಿಂದಿಕ್ಕಲಿದೆ ಭಾರತ:

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ವಿಶ್ವದ ಆರ್ಥಿಕತೆ ಬೆಳವಣಿಗೆ ವೇಗಕ್ಕಿಂತ ಭಾರತದ ವೇಗ ಹೆಚ್ಚಿದೆ. ವಿಶ್ವದ ಜಿಡಿಪಿ 2021ರಲ್ಲಿ ಶೇ.5.9 ಹಾಗೂ 2022ರಲ್ಲಿ ಶೇ.4.9ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ. ಆದರೆ ಭಾರತದ ದರ ಶೇ.9.5 ಮತ್ತು ಶೆ.8.5ರಷ್ಟಿರಲಿದೆ ಎಂದು ಐಎಂಎಫ್‌ ತಿಳಿಸಿದೆ.

ಇದೇ ವೇಳೆ, ಅಮೆರಿಕದ ಆರ್ಥಿಕತೆ 2021ರಲ್ಲಿ ಶೇ.6 ಹಾಗೂ 2022ರಲ್ಲಿ ಶೇ.5.2ರ ದರದಲ್ಲಿ, ಚೀನಾ(China) ಜಿಡಿಪಿ 2021ರಲ್ಲಿ ಶೇ.8 ಹಾಗೂ 2022ರಲ್ಲಿ ಶೇ.5.6ರ ದರದಲ್ಲಿ ಅಭಿವೃದ್ಧಿ ಕಾಣಲಿದ್ದು, ಭಾರತಕ್ಕಿಂತ ಹಿಂದೆ ಬೀಳಲಿವೆ ಎಂದು ಅದು ವಿವರಿಸಿದೆ.

ಭಾರತಕ್ಕೆ ಕೊರೋನಾ 2ನೇ ಅಲೆಯು ಜುಲೈನಲ್ಲಿ ಹೊಡೆತ ನೀಡಿತ್ತು. ಆದರೆ ದೇಶವು ಈಗ ಅತಿ ಕಠಿಣ ಕೊರೋನಾದ 2ನೇ ಅಲೆಯಿಂದ ಹೊರಬಂದಿದೆ. ಕೊರೋನಾ ಲಸಿಕೆ ದರದಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಇದು ಖಂಡಿತವಾಗಿಯೂ ಭಾರತದ ಆರ್ಥಿಕತೆಗೆ ವರವಾಗಲಿದೆ. ಆದರೆ ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆ ಪ್ರಕ್ರಿಯೆ ತೀವ್ರಗೊಳ್ಳಬೇಕು. ಅಭಿವೃದ್ಧಿಶೀಲ ದೇಶಗಳ ಲಸಿಕಾಕರಣಕ್ಕೆ ಶ್ರೀಮಂತ ದೇಶಗಳು ನೆರವಾಆಗಬೇಕು. ಆಗ ಅಲ್ಲಿ ಕೂಡ ಆರ್ಥಿಕ ಪ್ರಗತಿ ಆಗುತ್ತದೆ.

- ಗೀತಾ ಗೋಪಿನಾಥ್‌, ಐಎಂಎಫ್‌ ಮುಖ್ಯ ಆರ್ಥಿಕ ಆರ್ಥಿಕ ತಜ್ಞೆ

Follow Us:
Download App:
  • android
  • ios