Asianet Suvarna News Asianet Suvarna News

Cinema Snack : ಸಿನಿಮಾಸ್‌ನಲ್ಲಿ ಅಗ್ಗದ ಸ್ನ್ಯಾಕ್ಸ್ ತಿನ್ಬೇಕೆಂದ್ರೆ ಈ ತಪ್ಪು ಮಾಡ್ಬೇಡಿ

ಸಿನಿಮಾ ಥಿಯೇಟರ್ ಗೆ ಹೋಗಿ ಪಾಪ್ ಕಾರ್ನ್, ಬರ್ಗರ್ ತಿನ್ನುತ್ತಾ ಸಿನಿಮಾ ನೋಡೋರಿಗೆ ಖುಷಿ ಸುದ್ದಿಯೊಂದಿದೆ. ಜಿಎಸ್ಟಿ ಕೌನ್ಸಿಲ್ ಆಹಾರದ ಮೇಲಿನ ಜಿಎಸ್ಟಿ ದರವನ್ನು ಇಳಿಕೆ ಮಾಡಿದೆ. ಆದ್ರೆ ಥಿಯೇಟರ್ ಗೆ ಹೋಗುವ ಮುನ್ನ ಜನರು ಕೆಲ ವಿಷ್ಯ ನೆನಪಿಟ್ಟುಕೊಳ್ಳಬೇಕಿದೆ.
 

If You Want To Pay Less For Cinema Snack Dont Buy Popcorn With Movie Ticket roo
Author
First Published Jul 13, 2023, 2:39 PM IST

ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರ ಟ್ವಿಟರ್ ಫೋಸ್ಟ್ ವೈರಲ್ ಆಗಿತ್ತು. ಅದ್ರಲ್ಲಿ ವ್ಯಕ್ತಿ, ಹೊರಗೆ 30 ರೂಪಾಯಿಗೆ ಸಿಗುವ ಪಾಪ್ ಕಾರ್ನನ್ನು 460 ರೂಪಾಯಿಗೆ ಖರೀದಿ ಮಾಡಿದ್ದಾಗಿ ಬಿಲ್ ತೋರಿಸಿದ್ದ. ಮಾಲ್ ಗಳಲ್ಲಿ ಸಿನಿಮಾ ಟಿಕೆಟ್ ಗಿಂತ ಅಲ್ಲಿನ ಆಹಾರ ದುಬಾರಿ ಎಂಬುದು ಎಲ್ಲರಿಗೂ ತಿಳಿದ ವಿಷ್ಯ. ಒಮ್ಮೆ ಮಾಲ್ ಗೆ ಹೋಗಿ ಸಿನಿಮಾ ನೋಡಿದ್ರೆ ಎರಡು ಸಾವಿರಕ್ಕಿಂತ ಹೆಚ್ಚಿನ ಹಣ ಖರ್ಚಾಗೋದ್ರಲ್ಲಿ ಅನುಮಾನವಿಲ್ಲ. ಆದ್ರೀಗ ಸಿನಿಮಾ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವ ಮಂದಿಗೆ ಖುಷಿ ಸುದ್ದಿಯೊಂದಿದೆ.

ಸಿನಿಮಾ ಹಾಲ್ (Cinema Hall) ನಲ್ಲಿ ಸಿಗುವ ದುಬಾರಿ ಬೆಲೆಯ ಆಹಾರ (Food) ದಿಂದ ಕೊಂಚ ರಿಲೀಫ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್, ಥಿಯೇಟರ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯ ವಸ್ತುಗಳ ಮೇಲಿನ ಜಿಎಸ್‌ಟಿ (GST) ಯನ್ನು ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಥಿಯೇಟರ್‌ಗಳಲ್ಲಿ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿ ದರಗಳಲ್ಲಿ ಶೇಕಡಾ 13 ರಷ್ಟು ಕಡಿತವಾಗಿದ್ದು, ಬೆಲೆ ಕಡಿಮೆಯಾಗಲಿದೆ.  ಸಿನಿಮಾ ಹಾಲ್‌ಗಳಲ್ಲಿ ಪಾಪ್‌ಕಾರ್ನ್, ಪೆಪ್ಸಿ, ನ್ಯಾಚೋಸ್, ಬರ್ಗರ್ ಇತ್ಯಾದಿಗಳನ್ನು ಖರೀದಿಸುವುದು ಮೊದಲಿಗಿಂತ ಅಗ್ಗವಾಗಲಿದೆ. ಆದರೆ ಜಿಎಸ್‌ಟಿ ಮಂಡಳಿಯ ನಿರ್ಧಾರದಲ್ಲಿ ತಿರುವಿದ್ದು, ಅದನ್ನು ಪ್ರತಿಯೊಬ್ಬರೂ ತಿಳಿದಿರಬೇಕಾದ ಅಗತ್ಯವಿದೆ.

ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಪರಿಣಾಮ, ಜೂನ್ ತಿಂಗಳಲ್ಲಿ ಶೇ.4.81ಕ್ಕೆ ಏರಿಕೆಯಾದ ಚಿಲ್ಲರೆ ಹಣದುಬ್ಬರ

ಯಾರಿಗೆ ಸಿಗಲಿದೆ ರಿಯಾಯಿತಿ? : ಚಿತ್ರಮಂದಿರಗಳಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿಯನ್ನು  ಜಿಎಸ್‌ಟಿ ಕೌನ್ಸಿಲ್ ಕಡಿಮೆ ಮಾಡಿದೆ. ಆದ್ರೆ ಇದು ಎಲ್ಲರಿಗೂ ಸಿಗೋದಿಲ್ಲ. ನೀವು ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್ ಗೆ ಹೋಗಿ ಆಹಾರ ಮತ್ತು ಪಾನೀಯವನ್ನು ಖರೀದಿಸಿದಾಗ ಮಾತ್ರ ನಿಮಗೆ ಆಹಾರದ ಬೆಲೆ ಅಗ್ಗವಾಗಲಿದೆ. ಅದೇ ನೀವು ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡಿದ್ರೆ ಅಥವಾ ಆನ್ಲೈನ್ ಮೂಲಕ ಆಹಾರ ಮತ್ತು ಪಾನೀಯಗಳ ಕಾಂಬೋ ಖರೀದಿ ಮಾಡುವ ಅಭ್ಯಾಸ ಹೊಂದಿದ್ದರೆ ನಿಮಗೆ ಬೆಲೆಯಲ್ಲಿ ರಿಯಾಯಿತಿ ಸಿಗುವುದಿಲ್ಲ. ಸಿನಿಮಾ ಟಿಕೆಟನ್ನು ನೀವು ಆನ್ಲೈನ್ ನಲ್ಲಿ ಬುಕ್ ಮಾಡಿದ್ರೆ ನಿಮಗೆ ಕಾಂಬೋ ಆಫರ್ ಸಿಗುತ್ತದೆ. ಅದನ್ನು ನೀವು ಪಡೆದಿದ್ದಲ್ಲಿ ನಿಮಗೆ ಆಹಾರದ ಮೇಲೆ ರಿಯಾಯಿತಿ ಸಿಗುವುದಿಲ್ಲ ಎಂದು ಕೌನ್ಸಿಲ್ ಹೇಳಿದೆ. ಹಾಗಾಗಿ ನೀವು ಸಿನಿಮಾ ಟಿಕೆಟ್ ಬುಕ್ ಮಾಡುವಾಗ ಇದನ್ನು ನೆನಪಿಟ್ಟುಕೊಳ್ಳುವುದು ಉತ್ತಮ. ಸಿನಿಮಾ ಥಿಯೇಟರ್ ನಲ್ಲಿ ಆಹಾರ ಅಗ್ಗವಾಗಿ ಸಿಗ್ಬೇಕು ಅಂದ್ರೆ ಏನು ಮಾಡ್ಬೇಕು? : ಮುಂದಿನ ಬಾರಿ ನೀವು ಚಿತ್ರಮಂದಿರಕ್ಕೆ ಹೋದಾಗ, ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್‌ ಬುಕ್ ಮಾಡಿದ್ರೆ ಕಾಂಬೊ ಆಫರ್‌ ಆಯ್ಕೆ ಮಾಡಬೇಡಿ. ಹೀಗೆ ಮಾಡಿದರೆ ಜಿಎಸ್‌ಟಿ ಕಡಿತದ ಲಾಭ ಸಿಗುವುದಿಲ್ಲ. 

ಕೇವಲ 999ಕ್ಕೆ ಜಿಯೋ ಕಂಪನಿಯಿಂದ ಮೊಬೈಲ್‌: 400 ಮಂದಿಗೆ ಗಿಫ್ಟ್‌

ಥಿಯೇಟರ್ ಕೌಂಟರ್‌ಗಳಲ್ಲಿ ಮಾರಾಟವಾಗುವ ಆಹಾರ ಮತ್ತು ಪಾನೀಯ ವಸ್ತುಗಳ ಮೇಲೆ ಮಾತ್ರ ಶೇಕಡಾ 5 ಜಿಎಸ್‌ಟಿ ದರ ಅನ್ವಯಿಸುತ್ತದೆ ಎಂದು ಜಿಎಸ್ಟಿ ಕೌನ್ಸಿಲ್ ಸ್ಪಷ್ಟಪಡಿಸಿದೆ. ನೀವು ಆನ್ಲೈನ್ ನಲ್ಲಿ ಟಿಕೆಟ್ ಹಾಗೂ ಆಹಾರ ಮತ್ತು ಪಾನೀಯವನ್ನು ಕಾಂಬೋದಲ್ಲಿ ಬುಕ್ ಮಾಡಿದ್ರೆ ನೀವು ಶೇಕಡಾ 18ರಜಿಎಸ್ಟಿಯಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಸಿನಿಮಾ ಟಿಕೆಟ್ ಜಿಎಸ್ಟಿ ದರ ಬದಲಾಗಿಲ್ಲ. ಬರೀ ಆಹಾರದ ಮೇಲಿನ ಜಿಎಸ್ಟಿ ಮಾತ್ರ ಬದಲಾಗಿದೆ ಎಂಬುದು ನೆನಪಿಡಿ.  ಥಿಯೇಟರ್‌ಗಳಲ್ಲಿ ಅಗ್ಗದ ಪಾಪ್‌ಕಾರ್ನ್, ಪಿಜ್ಜಾ, ನೊಚೋಸ್ ಅಥವಾ ತಂಪು ಪಾನೀಯಗಳನ್ನು ಕುಡಿಯಲು ಬಯಸಿದ್ದರೆ ಇನ್ಮುಂದೆ ಕೌಂಟರ್ ಗೆ ಹೋಗಿ ಖರೀದಿ ಮಾಡಿ. ಆಗ ನಿಮ್ಮ ಸಿನಿಮಾ ಟಿಕೆಟ್ ಬೇರೆ, ಆಹಾರದ ಬಿಲ್ ಬೇರೆ ಆಗುತ್ತದೆ. ಇದ್ರಿಂದ ನೀವು ಹಣ ಉಳಿಸಿ ಸಿನಿಮಾ ಎಂಜಾಯ್ ಮಾಡಬಹುದು. 
 

Follow Us:
Download App:
  • android
  • ios