Asianet Suvarna News Asianet Suvarna News

ಕೇವಲ 999ಕ್ಕೆ ಜಿಯೋ ಕಂಪನಿಯಿಂದ ಮೊಬೈಲ್‌: 400 ಮಂದಿಗೆ ಗಿಫ್ಟ್‌

ರಿಲಯನ್ಸ್‌ ಕಂಪನಿಯು ಕೇವಲ 999ಕ್ಕೆ ಜಿಯೋ 4ಜಿ ಫೋನ್‌ ‘ಜಿಯೋ ಭಾರತ್‌’ ಬಿಡುಗಡೆ ಮಾಡಿದೆ. ಈ ಮೂಲಕ 2ಜಿ ಮುಕ್ತ ಭಾರತ್‌ ಅಭಿಯಾನ ಆರಂಭಿಸಿದೆ. ಈ ಪ್ರಯುಕ್ತ ಕರ್ನಾಟಕದ 400 ಮಂದಿಗೆ ಹೆಚ್ಚುವರಿ ಕೊಡುಡೆಯಾಗಿ (ಕಾಂಪ್ಲಿಮೆಂಟರಿ) ಜಿಯೋ ಭಾರತ್‌ ಮೊಬೈಲ್‌ಗಳನ್ನು ವಿತರಿಸಿದೆ. 

reliance launches a new feature phone called jio bharat for just rs 999 gvd
Author
First Published Jul 13, 2023, 7:57 AM IST

ಬೆಂಗಳೂರು (ಜು.13): ರಿಲಯನ್ಸ್‌ ಕಂಪನಿಯು ಕೇವಲ 999ಕ್ಕೆ ಜಿಯೋ 4ಜಿ ಫೋನ್‌ ‘ಜಿಯೋ ಭಾರತ್‌’ ಬಿಡುಗಡೆ ಮಾಡಿದೆ. ಈ ಮೂಲಕ 2ಜಿ ಮುಕ್ತ ಭಾರತ್‌ ಅಭಿಯಾನ ಆರಂಭಿಸಿದೆ. ಈ ಪ್ರಯುಕ್ತ ಕರ್ನಾಟಕದ 400 ಮಂದಿಗೆ ಹೆಚ್ಚುವರಿ ಕೊಡುಡೆಯಾಗಿ (ಕಾಂಪ್ಲಿಮೆಂಟರಿ) ಜಿಯೋ ಭಾರತ್‌ ಮೊಬೈಲ್‌ಗಳನ್ನು ವಿತರಿಸಿದೆ. 

ಬುಧವಾರ ರಾಜ್ಯಾದ್ಯಂತ ಇರುವ ಜಿಯೋ ಸೆಂಟರ್‌ಗಳು ಮತ್ತು ಜಿಯೋ ಪಾಯಿಂಟ್‌ಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ 400ಕ್ಕೂ ಹೆಚ್ಚು ಮಂದಿಗೆ ಕಾಂಪ್ಲಿಮೆಂಟರಿ ಜಿಯೋ ಭಾರತ್‌ ಮೊಬೈಲ್‌ಗಳನ್ನು ಹಂಚಿಕೆ ಮಾಡಿದೆ. ಈ ಮೂಲಕ ದೇಶದಲ್ಲಿರುವ ಸುಮಾರು 250 ಮಿಲಿಯನ್‌ 2ಜಿ ಗ್ರಾಹಕರನ್ನು ತನ್ನತ್ತ ಸೆಳೆದು ಕಡಿಮೆ ಬೆಲೆಗೆ ಜಿಯೋ 4ಜಿ ಮತ್ತು 5ಜಿ ನೆಟ್‌ವರ್ಕ್ ಬಳಕೆಯ ಮೊಬೈಲ್‌ ವಿತರಿಸುವ ಗುರಿ ಹೊಂದಿದೆ.

ಸೋಪು, ಎಣ್ಣೆ, ಉಪ್ಪು ಕೊಂಡರಷ್ಟೇ ಪಡಿತರ: ಶಾಸಕ ಮುನಿರಾಜು ಕಿಡಿ

ಇಂಟರ್‌ನೆಟ್‌ನಲ್ಲಿ ಕಾರ್ಯನಿರ್ವಹಿಸುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಫೋನ್‌ಗಳಲ್ಲಿ ಜಿಯೋ ಭಾರತ್‌ ವಿ2 ಅತ್ಯಂತ ಕಡಿಮೆ ಬೆಲೆಯದ್ದಾಗಿದೆ. ಕೇವಲ 999ಕ್ಕೆ ಲಭ್ಯವಿರುವ ಜಿಯೋ ಭಾರತ್‌ ವಿ2 ಮಾಸಿಕ ಯೋಜನೆಯು ಅಗ್ಗವಾಗಿದೆ. 28 ದಿನಗಳ ಅವಧಿ ಹೊಂದಿರುವ ಯೋಜನೆಗೆ ಗ್ರಾಹಕರು 123 ಪಾತಿಸಬೇಕಾಗುತ್ತದೆ. ಇದು 14 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳನ್ನು ಒದಗಿಸುತ್ತದೆ. ಅಲ್ಲದೇ .1234 ಬೆಲೆಯ ವಾರ್ಷಿಕ ಯೋಜನೆ ಲಭ್ಯವಿದೆ. ಜಿಯೋ ಮೊದಲ ಹಂತದಲ್ಲಿ 10 ಲಕ್ಷ ಫೋನ್‌ಗಳನ್ನು ಬಿಡುಗಡೆ ಮಾಡಲಿದ್ದು, ದೇಶದ ಎಲ್ಲ ಜಿಯೋ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ಚಾ.ನಗರ ಜಿಲ್ಲಾ ಕೇಂದ್ರದಲ್ಲಿ ಈಗ ಜಿಯೋ ಟ್ರೂ 5ಜಿ ಲಭ್ಯ: ರಿಲಯನ್ಸ್‌ ಜಿಯೋ ಟ್ರೂ 5ಜಿ ಈಗ ಚಾಮರಾಜನಗರ ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 250ಕ್ಕೂ ಹೆಚ್ಚು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಲಭ್ಯವಿದೆ. ಅಲ್ಲದೆ, ಈ ನಗರಗಳು ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳು ಸಹ ಈಗ ಜಿಯೋ ಟ್ರೂ 5ಜಿ ಪ್ರಯೋಜನ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಜಿಯೋ ತಿಳಿಸಿದೆ.

ಈ ಎಲ್ಲ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಜಿಯೋ ಬಳಕೆದಾರರನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್‌+ ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ. ಎಲ್ಲ ಪ್ರಮುಖ ಸ್ಥಳಗಳು, ಪ್ರವಾಸಿ ತಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಮಾರುಕಟ್ಟೆಗಳು, ವಸತಿ ಪ್ರದೇಶಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಸರ್ಕಾರಿ ಕಟ್ಟಡಗಳು ಹಾಗೂ ಪ್ರಮುಖ ವಾಣಿಜ್ಯ ಸಂಸ್ಥೆಗಳಲ್ಲೂ ಜಿಯೋ 5ಜಿ ಲಭ್ಯವಿದೆ ಎಂದು ತಿಳಿಸಿದೆ.

Flower Show 2023: ಆ.4ರಿಂದ 15ರವರೆಗೆ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ

ಚಾಮರಾಜನಗರ ಸೇರಿದಂತೆ ಜಿಲ್ಲಾ ಕೇಂದ್ರಗಳು ಮತ್ತು ಕರ್ನಾಟಕದಾದ್ಯಂತ 250ಕ್ಕೂ ಹೆಚ್ಚು ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಸೇವಾ ಪೂರೈಕೆದಾರ ಜಿಯೋ ಆಗಿದೆ. 2023ರ ಡಿಸೆಂಬರ್‌ ಅಂತ್ಯದ ವೇಳೆಗೆ ದೇಶದ ಪ್ರತಿ ಪಟ್ಟಣ ಮತ್ತು ತಾಲೂಕುಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ಜಿಯೋ ಯೋಜಿಸಿದೆ.

Follow Us:
Download App:
  • android
  • ios