ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ; ಡಾಲರ್ ಬಲವಾಗುತ್ತಿದೆ: Nirmala Sitharaman

ರೂಪಾಯಿ ಕುಸಿಯುತ್ತಿದೆ ಎಂದು ನೋಡುವುದಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂಬಂತೆ ನೋಡುತ್ತೇನೆ ಎಂದು ಅಮೆರಿಕದಲ್ಲಿರುವ ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

i look at it not as rupee sliding but dollar strengthening says nirmala sitharaman ash

ಡಾಲರ್‌ (Dollar) ಎದುರು ಭಾರತದ ರೂಪಾಯಿ (Rupee) ಮೌಲ್ಯ ಇತ್ತೀಚೆಗೆ ಕುಸಿಯುತ್ತಲೇ ಇದೆ. ದಾಖಲೆಯ ಕನಿಷ್ಠ ಮೌಲ್ಯಕ್ಕೆ ಇಳಿಯುತ್ತಲೇ ಇದೆ. ಆದರೆ, ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಪ್ರತಿಕ್ರಿಯೆ ನೀಡಿರುವುದು ಹೇಗೆ ಗೊತ್ತಾ..?  ರೂಪಾಯಿ ಕುಸಿಯುತ್ತಿದೆ ಎಂದು ನೋಡುವುದಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂಬಂತೆ ನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಮೆರಿಕ (United States) ಭೇಟಿಯಲ್ಲಿರುವ ಕೇಂದ್ರ ಹಣಕಾಸು ಸಚಿವೆ (Union Finance Minister) ಸುದ್ದಿಸಂಸ್ಥೆಯೊಂದರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ. 

ರೂಪಾಯಿ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌,   ನಾನು ಅದನ್ನು ರೂಪಾಯಿ ಕುಸಿಯುತ್ತಿದೆ ಎಂದು ನೋಡುವುದಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂಬಂತೆ ನೋಡುತ್ತೇನೆ  ಎಂದು ಹೇಳಿದರು. ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್, 24 ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ಇದನ್ನು ಓದಿ: Rupee Value: ಮಾರ್ಚ್‌ ವೇಳೆ ರೂಪಾಯಿ ಬೆಲೆ ಡಾಲರ್‌ ಮುಂದೆ 84-85 ಆಗುವ ಆತಂಕ; ವರದಿ

ಈ ವೇಳೆ ಮಾತನಾಡಿದ ಅವರು "ಡಾಲರ್ ನಿರಂತರವಾಗಿ ಬಲಗೊಳ್ಳುತ್ತಿದೆ. ಆದ್ದರಿಂದ ನಿಸ್ಸಂಶಯವಾಗಿ, ಇತರ ಎಲ್ಲಾ ಕರೆನ್ಸಿಗಳು ಬಲಗೊಳ್ಳುತ್ತಿರುವ ಡಾಲರ್ ವಿರುದ್ಧ ಪರ್ಫಾಮ್‌ ಮಾಡುತ್ತಿದೆ. ನಾನು ತಾಂತ್ರಿಕತೆಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ಭಾರತದ ರೂಪಾಯಿ ಬಹುಶಃ ಈ ಡಾಲರ್ ದರ ಏರಿಕೆಯನ್ನು ತಡೆದುಕೊಂಡಿದೆ ಎಂಬುದು ವಾಸ್ತವದ ವಿಷಯವಾಗಿದೆ. ಭಾರತೀಯ ರೂಪಾಯಿಯು ಇತರ ಅನೇಕ ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ನಾನು ಭಾವಿಸುತ್ತೇನೆ" ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದರು. 

ರೂಪಾಯಿ ಮೌಲ್ಯವನ್ನು ಸರಿಪಡಿಸಲು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದ್ದರಿಂದ ಚಂಚಲತೆಯನ್ನು ತಡೆಯುವ ಏಕೈಕ ವ್ಯಾಯಾಮದಲ್ಲಿ ಆರ್‌ಬಿಐ ತೊಡಗಿಸಿಕೊಂಡಿದೆ, " ಎಂದು ಕೇಂದ್ರ ಹಣಕಾಸು ಸಚಿವೆ ಹೇಳಿದರು. ರೂಪಾಯಿ ತನ್ನದೇ ಆದ ಮಟ್ಟವನ್ನು ಕಂಡುಕೊಳ್ಳುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ ಎಂದೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಇದನ್ನೂ ಓದಿ: ಡಾಲರ್‌ ಮುಂದೆ ಸಾರ್ವತ್ರಿಕ ಕುಸಿತ ಕಂಡ ರೂಪಾಯಿ: ಡಾಲ್‌ಗೆ ರೂ 82.33

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ 82.68 ಕ್ಕೆ ಕುಸಿದಿತ್ತು. ಇನ್ನೊಂದೆಡೆ,  G20 ಭಾರತದ ಅಧ್ಯಕ್ಷತೆ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್‌, "ಸಾಕಷ್ಟು ಸವಾಲುಗಳಿರುವ ಸಮಯದಲ್ಲಿ ನಾವು ಅಧ್ಯಕ್ಷ ಸ್ಥಾನವನ್ನು ತೆಗೆದುಕೊಳ್ಳುತ್ತಿದ್ದೇವೆ, ನಾವು ಇಡೀ ವಿಷಯವನ್ನು ಹೇಗೆ ಉತ್ತಮವಾಗಿ ನ್ಯಾವಿಗೇಟ್ ಮಾಡಬಹುದು ಎಂಬುದನ್ನು ನೋಡಲು ನಾವು ಸದಸ್ಯತ್ವದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ" ಎಂದೂ ಹೇಳಿದರು. "ನಾವು G20 ಮೇಜಿನ ಮೇಲೆ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ವಿಷಯಗಳನ್ನು ತರಲು ಬಯಸುತ್ತೇವೆ ಇದರಿಂದ ಸದಸ್ಯರು ಅದನ್ನು ಚರ್ಚಿಸಬಹುದು ಮತ್ತು ಜಾಗತಿಕವಾಗಿ ಚೌಕಟ್ಟು ಅಥವಾ ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳತ್ತ ಬರಬಹುದು" ಎಂದು ಸಹ ಕೇಂದ್ರ ವಿತ್ತ ಸಚಿವೆ ಹೇಳಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪ್ರಶಂಸೆ ಪಡೆದ ಭಾರತದ ಡಿಜಿಟಲ್ ಸಾಧನೆಗಳ ಕುರಿತು ಮಾತನಾಡಿದ ಹಣಕಾಸು ಸಚಿವರು, ಅನೇಕ ಜಿ 20 ಸದಸ್ಯರು ಭಾರತವು ಆಧಾರ್ ಇತ್ಯಾದಿಗಳಂತಹ ಡಿಜಿಟಲ್ ಯಶಸ್ಸನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು. "ಇಂದು ವಿಶ್ವ ಬ್ಯಾಂಕ್ ಅಧ್ಯಕ್ಷರೊಂದಿಗಿನ ನನ್ನ ಭೇಟಿಯ ಸಂದರ್ಭದಲ್ಲಿಯೂ ಅವರು ಸ್ವತಃ ಈ ಬಗ್ಗೆ ಹೇಳಿದರು. ಭಾರತದಲ್ಲಿ ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಸಾಮಾನ್ಯ ಜನರು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ನಾವು ಪ್ರದರ್ಶಿಸಬೇಕು. ಅಲ್ಲದೆ ಅದನ್ನು ವಿಶ್ವದ ಇತರ ಭಾಗಗಳಿಗೆ ಕೊಂಡೊಯ್ಯಲು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಂತೋಷವಾಗುತ್ತದೆ'' ಎಂದು ಅವರು ಹೇಳಿದ ಬಗ್ಗೆಯೂ ಅಮೆರಿಕದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಇದನ್ನೂ ಓದಿ: ಡಾಲರ್ ಎದುರು ಮುಂದುವರಿದ ರೂಪಾಯಿ ಮೌಲ್ಯ ಕುಸಿತ, ಕಾರಣವೇನು?

Latest Videos
Follow Us:
Download App:
  • android
  • ios