Asianet Suvarna News Asianet Suvarna News

ಮುಂಬೈನಲ್ಲಿ 70 ಕೋಟಿ ರೂ. ದುಬಾರಿ ಅಪಾರ್ಟ್ ಮೆಂಟ್ ಖರೀದಿಸಿದ ಡಿಮಾರ್ಟ್ ಸಿಇಒ ನೊರೋನ್ಹಾ

*ಮುಂಬೈನ ಬಾಂದ್ರಾದಲ್ಲಿ ಎರಡು ಅಪಾರ್ಟ್ ಮೆಂಟ್ ಗಳನ್ನು ಖರೀದಿಸಿರುವ ನೊರೋನ್ಹಾ
*ಈ ಎರಡು ಅಪಾರ್ಟ್ ಮೆಂಟ್ ಗಳ ಒಟ್ಟು ಕಾರ್ಪೆಟ್ ಏರಿಯಾ 8640 ಚದರ ಅಡಿಗಳು
*10 ಕಾರ್ ಪಾರ್ಕ್ ಮಾಡುವಷ್ಟು ಪಾರ್ಕಿಂಗ್ ಏರಿಯಾ

DMart CEO  buys Rs 70 crore home in Mumbai from Rustomjee
Author
First Published Sep 19, 2022, 9:06 PM IST

ಮುಂಬೈ (ಸೆ.19): ಡಿಮಾರ್ಟ್ ರಿಟೇಲ್ ಚೈನ್ ಸಿಇಒ ಇಗ್ನಷಿಯಸ್ ನವಿಲ್ ನೊರೋನ್ಹಾ ಮುಂಬೈನ ಬಾಂದ್ರಾದಲ್ಲಿ (ಪೂರ್ವ) 66 ಕೋಟಿ ರೂ. ಮೌಲ್ಯದ ಎರಡು ಅಪಾರ್ಟ್ ಮೆಂಟ್ ಗಳನ್ನು ಖರೀದಿಸಿದ್ದಾರೆ. ಇದಕ್ಕೆ ಅವರು 3.30 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಕೂಡ ಪಾವತಿಸಿದ್ದಾರೆ. ಮೌಲ್ಯದ ಆಧಾರದಲ್ಲಿ ನೋಡಿದರೆ ಇದು ಮುಂಬೈ ರಿಯಲ್ ಎಸ್ಟೇಟ್ ಕ್ಷೇತ್ರದ ಬೃಹತ್ ವಹಿವಾಟುಗಳಲ್ಲಿ ಒಂದಾಗಿದೆ. ನೊರೋನ್ಹಾ ಭಾರತದ ಶ್ರೀಮಂತ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಇವರು ಬುಕ್ ಮಾಡಿರುವ ಅಪಾರ್ಟ್ ಮೆಂಟ್ ಅನ್ನು ರಿಯಲ್ ಎಸ್ಟೇಟ್ ಕಂಪನಿ ರುಸ್ತೋಮ್ ಜೀ ಗ್ರೂಪ್ ನಿರ್ಮಿಸುತ್ತಿದ್ದು, ಇದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಸಮೀಪವಿದೆ. ಈ ಎರಡು ಅಪಾರ್ಟ್ ಮೆಂಟ್ ಗಳ ಒಟ್ಟು ಕಾರ್ಪೆಟ್ ಏರಿಯಾ 8640 ಚದರ ಅಡಿಗಳಾಗಿವೆ. ಇದರ ಜೊತೆಗೆ 912 ಚದರ ಅಡಿಗಳ ಡೆಕ್ ಹಾಗೂ ಟೆರೆಸ್ ಏರಿಯಾ ಕೂಡ ಇದೆ. ಇದು ನೊರೋನ್ಹಾ ಅವರ ಅಪಾರ್ಟ್ ಮೆಂಟ್ ನ ಒಟ್ಟು ಗಾತ್ರವನ್ನು 9,552 ಚದರ ಅಡಿಗಳಿಗೆ ವಿಸ್ತರಿಸಿದೆ. ಅಷ್ಟೇ ಅಲ್ಲದೆ, ನೊರೋನ್ಹಾ ಇದರಲ್ಲಿ 10 ಕಾರ್ ಪಾರ್ಕ್ ಮಾಡುವಷ್ಟು ಪಾರ್ಕಿಂಗ್ ಏರಿಯಾವನ್ನು ಕೂಡ ಹೊಂದಲಿದ್ದಾರೆ. 

ಈ ಆಸ್ತಿಯನ್ನು ನೊರೋನ್ಹಾ ಹಾಗೂ ಅವರ ಪತ್ನಿ ಕಾಜಲ್ ನೊರೋನ್ಹಾ ಜಂಟಿಯಾಗಿ ಖರೀದಿಸಿದ್ದಾರೆ.  ವರದಿಯೊಂದರ ಪ್ರಕಾರ ನೊರೋನ್ಹಾ 4,522 ಚದರ ಅಡಿ ಕಾರ್ಪೆಟ್ ಏರಿಯಾದ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. ಇದು ಕಟ್ಟಡದ 24ನೇ ಅಂತಸ್ತಿನಲ್ಲಿದ್ದು,  34.86 ಕೋಟಿ ರೂ. ಮೌಲ್ಯದಾಗಿದೆ. ಇನ್ನು ನೊರೋನ್ಹಾ ಪತ್ನಿ  4,117 ಚದರ ಅಡಿ ವಿಸ್ತೀರ್ಣದ ಇನ್ನೊಂದು ಅಪಾರ್ಟ್ ಮೆಂಟ್ ಅನ್ನು 25ನೇ ಅಂತಸ್ತಿನಲ್ಲಿ ಖರೀದಿಸಿದ್ದಾರೆ. ಇದರ ಮೌಲ್ಯ 31.38ಕೋಟಿ ರೂ. ಆಗಿದೆ. ಬಾಂದ್ರಾ ಪೂರ್ವ ಮಾರುಕಟ್ಟೆಯಲ್ಲಿ ವಹಿವಾಟುಗಳ ಗಾತ್ರ ಹೊಸ ಮಟ್ಟಕ್ಕೆ ತಲುಪಿದೆ. ದಶಕಗಳಿಂದೀಚೆಗೆ ಇಲ್ಲಿಯ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. 

ರಷ್ಯಾ-ಉಕ್ರೇನ್ ಸಂಘರ್ಷದ ಪ್ರಯೋಜನ ಪಡೆದ ಭಾರತ; ತೈಲ ಆಮದಿನಿಂದ 35,000 ಕೋಟಿ ರೂ. ಲಾಭ

ಇನ್ನು ಡಿಮಾರ್ಟ್ ರಿಟೇಲ್ ಚೈನ್ ನ ಅವೆನ್ಯೂ  ಸೂಪರ್ ಮಾರ್ಟ್ಸ್ ಷೇರುಗಳ ಬೆಲೆ  ಕಳೆದ ವರ್ಷ ಏರಿಕೆಯಾದ ಬೆನ್ನಲ್ಲೇ ನೊರೋನ್ಹಾ ಭಾರತದ ಅತ್ಯಂತ ಶ್ರೀಮಂತ ವೃತ್ತಿಪರ ಮ್ಯಾನೇಜರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವೆನ್ಯೂ  ಸೂಪರ್ ಮಾರ್ಟ್ಸ್ ನಲ್ಲಿ ನೊರೋನ್ಹಾ ಶೇ.2ರಷ್ಟು ಷೇರುಗಳನ್ನು ಹೊಂದಿದ್ದಾರೆ.  ಡಿಮಾರ್ಟ್ ಕಂಪನಿಯ ಸಂಸ್ಥಾಪಕ  ರಾಧಾಕಿಶನ್ ದಮನಿ 2002ರಲ್ಲಿ ನವಿಲ್ ಅವರನ್ನು ಸಿಒಇ ಆಗಿ ನೇಮಿಸಿದ್ದರು. ಮುಂಬೈ ಮೂಲದ ನೊರೋನ್ಹಾ ಮ್ಯಾನೇಜ್ ಮೆಂಟ್ ಪದವಿ ಗಳಿಸಿದ್ದಾರೆ. ಈ ಹಿಂದೆ ನೊರೋನ್ಹಾ ಹಿಂದುಸ್ತಾನ್ ಯುನಿಲಿವರ್ ನಲ್ಲಿ ಕೆಲಸ ಮಾಡಿದ್ದರು. 2007ರಲ್ಲಿ ಅವೆನ್ಯೂ ಸೂಪರ್ ಮಾರ್ಟ್ ಸಿಇಒ ಆದರು. 

ಅಗ್ಗದಲ್ಲಿ ಮನೆ ಕಟ್ಟಬೇಕೆಂದ್ರೆ ಈ ಐಡಿಯಾ ಬಳಸಿ

ಕಳೆದ ವರ್ಷ ಐಷಾರಾಮಿ ಬಂಗಲೆ ಖರೀದಿಸಿದ್ದ ದಮನಿ 
ಬರೋಬ್ಬರಿ 1,001 ಕೋಟಿ ರೂಪಾಯಿ ನೀಡಿ  ಡಿ ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮನಿ ಕಳೆದ ವರ್ಷ ಆಗಸ್ಟ್ ನಲ್ಲಿ ಬಂಗಲೆ ಖರೀದಿಸಿದ್ದರು. ದಕ್ಷಿಣ ಮುಂಬೈನಲ್ಲಿರುವ ಈ ಮಲಬಾರ್ ಹಿಲ್ ಬಂಗಲೆ, 1.5 ಎಕರೆ ಪ್ರದೇಶದಲ್ಲಿದೆ. ಒಟ್ಟು 60,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 2 ಅಂತಸ್ತು ಹೊಂದಿದೆ. ರಾಧಾಕಿಶನ್ ದಮನಿ ಹಾಗೂ ಸಹೋದರ ಗೋಪಾಲಕೃಷ್ಣ ದಮನಿ ಜೊತೆಯಾಗಿ ಈ ಬಂಗಲೆ ಖರೀದಿಸಿದ್ದರು. ದು ದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಡೆದ ಅತೀ ದುಬಾರಿ ವ್ಯವಹಾರ ಎಂಬ ಹೆಗ್ಗಳಿಕೆ ಗಳಿಸಿತ್ತು. ಈ ಬಂಗಲೆ ಮಾರುಕಟ್ಟೆ ಬೆಲೆ 724 ಕೋಟಿ ರೂಪಾಯಿ. ಇನ್ನು 30.03 ಕೋಟಿ ರೂಪಾಯಿಯನ್ನು ಕೇವಲ ಸ್ಟಾಂಪ್ ಡ್ಯೂಟಿಗೆ  ನೀಡಲಾಗಿದೆ. 
 

Follow Us:
Download App:
  • android
  • ios