ಬ್ಯುಸಿನೆಸ್ ಅಂದಾಗ ಹೂಡಿಕೆ, ಗಳಿಕೆ, ಪ್ರಚಾರ, ಸ್ಥಳ ಎಲ್ಲವೂ ಮಹತ್ವ ಪಡೆಯುತ್ತದೆ. ಕೆಲವೊಂದು ವ್ಯವಹಾರ ಋತುವನ್ನು ಅವಲಂಭಿಸಿರುತ್ತದೆ. ನೀವು ಇವೆಲ್ಲವನ್ನೂ ಅಳೆದು ತೂಗಿ, ಲೆಕ್ಕ ಹಾಕಿ ವ್ಯಾಪಾರ ಶುರು ಮಾಡಿದ್ರೆ ನಷ್ಟವಾಗೋದು ಬಲು ಅಪರೂಪ.
ಚಳಿಗಾಲ ಮುಗಿದು ಬೇಸಿಗೆ ಶುರುವಾಗ್ತಿದೆ. ತಣ್ಣನೆ ಆಹಾರ ಸೇವನೆ ಮಾಡೋಕೆ ಬಯಕೆಯಾಗ್ತಿದೆ. ಅದ್ರಲ್ಲೂ ಬೇಸಿಗೆ ಬಿಸಿಯಲ್ಲಿ ಐಸ್ ಕ್ರೀಂ ಸಿಕ್ಕಿದ್ರೆ ಅದ್ರ ಮಜವೇ ಬೇರೆ. ಕಡಿಮೆ ಸಮಯದಲ್ಲಿ ನೀವೂ ಒಂದು ವ್ಯವಹಾರ ಶುರು ಮಾಡ್ಬೇಕು ಎಂದುಕೊಂಡಿದ್ರೆ ಐಸ್ ಕ್ರೀಂ ಪಾರ್ಲರ್ ಬೆಸ್ಟ್ ಆಯ್ಕೆಯಾಗಿದೆ. ನೀವು ಕಡಿಮೆ ಸಮಯದಲ್ಲಿ ಕಡಿಮೆ ಬಂಡವಾಳದಲ್ಲಿ ಇದನ್ನು ಶುರು ಮಾಡಬಹುದು. ಬೇಸಿಗೆಯಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಐಸ್ ಕ್ರೀಂಗೆ ಈಗ ಚಳಿಗಾಲದಲ್ಲೂ ಡಿಮ್ಯಾಂಡ್ ಇದೆ. ಹಾಗಾಗಿ ನೀವು ಐಸ್ ಕ್ರೀಂ ಪಾರ್ಲರನ್ನು ಆರಾಮವಾಗಿ ಶುರು ಮಾಡಬಹುದು. ನಾವಿಂದು ಐಸ್ ಕ್ರೀಂ ತಯಾರಿಕೆ ಹಾಗೂ ಮಾರಾಟದಿಂದ ಬರುವ ಲಾಭದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ,
ಸ್ವಂತ ಐಸ್ ಕ್ರೀಂ (Ice Cream) ಪಾರ್ಲರ್ ಲಾಭವೇನು? : ದೊಡ್ಡ ಕಂಪನಿಗಳು ಐಸ್ ಕ್ರೀಮ್ ಪಾರ್ಲರ್ (Parlor) ಫ್ರ್ಯಾಂಚೈಸಿ ನೀಡುತ್ತವೆ. ಆದರೆ ಸ್ವಂತ ಪಾರ್ಲರ್ ತೆರೆದರೆ ಅದು ಅಗ್ಗವಾಗಿರುತ್ತದೆ. ಹಾಗೆ ನೀವು ಒಂದೇ ಸ್ಥಳದಲ್ಲಿ ಅನೇಕ ಬ್ರಾಂಡ್ ಐಸ್ ಕ್ರೀಮ್ ಮಾರಾಟ (Sale) ಮಾಡಬಹುದು. ನೀವೇ ಸ್ವತಃ ಐಸ್ ಕ್ರೀಂ ತಯಾರಿಸಿ ನೀಡಬಹುದು. ಇದ್ರಿಂದ ನಿಮ್ಮ ಐಸ್ ಕ್ರೀಂ ಮಾರಾಟ ಹೆಚ್ಚಾಗುತ್ತದೆ. ನೀವು ಐದು ಲಕ್ಷ ರೂಪಾಯಿ ಹೂಡಿಕೆಯಲ್ಲಿ ಈ ಪಾರ್ಲರ್ ಆರಂಭಿಸಬಹುದು.
ಐಸ್ ಕ್ರೀಮ್ ತಯಾರಿಸಲು ಬೇಕಾಗುವ ವಸ್ತು : ಐಸ್ ಕ್ರೀಮ್ ತಯಾರಿಸಲು ಹಾಲು, ಹಾಲಿನ ಪುಡಿ, ಕ್ರೀಮ್, ಸಕ್ಕರೆ, ಬೆಣ್ಣೆ ಮತ್ತು ಮೊಟ್ಟೆಯಂತಹ ವಸ್ತುಗಳು ಬೇಕಾಗುತ್ತವೆ. ಇವೆಲ್ಲವೂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಈ ಎಲ್ಲಾ ವಸ್ತುಗಳ ಜೊತೆಗೆ, ನಿಮಗೆ ಕಲರ್ ಪೌಡರ್ ಮತ್ತು ಫ್ಲೇವರ್ ಪೌಡರ್ ಬೇಕಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಿಂದ 436ರೂ. ಕಡಿತವಾಗಿದೆಯಾ? ಏಕೆ ಗೊತ್ತ?
ಐಸ್ ಕ್ರೀಮ್ ತಯಾರಿಸುವ ಯಂತ್ರ : ಐಸ್ ಕ್ರೀಮ್ ತಯಾರಿಸಲು ಹಲವು ರೀತಿಯ ಯಂತ್ರಗಳ ಅವಶ್ಯಕತೆಯಿದೆ. ಫ್ರಿಜ್,ಮಿಕ್ಸರ್, ಥರ್ಮಾಕೋಲ್ ಐಸ್ ಕೂಲರ್ ಬಾಕ್ಸ್, ತಂಪಾದ ಕಂಡೆನ್ಸರ್, ಉಪ್ಪು ನೀರಿನ ಟ್ಯಾಂಕ್ ಇತ್ಯಾದಿಯನ್ನು ನೀವು ಖರೀದಿ ಮಾಡ್ಬೇಕು. ಈ ಎಲ್ಲ ವಸ್ತುಗಳ ಖರೀದಿಗೆ ನಿಮಗೆ 2 ಲಕ್ಷ ರೂಪಾಯಿ ಖರ್ಚಾಗಬಹುದು. ಸ್ವಯಂಚಾಲಿತ ಐಸ್ ಕ್ರೀಮ್ ಯಂತ್ರ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಯಂತ್ರದ ಮೂಲಕ ನೀವು ಐಸ್ ಕ್ರೀಮ್ ಅನ್ನು ತ್ವರಿತವಾಗಿ ತಯಾರಿಸಬಹುದು. ಸ್ವಯಂಚಾಲಿತ ಯಂತ್ರದ ಬೆಲೆಗಳು ಒಂದು ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತವೆ.
ಕಂಪನಿ ನೋಂದಣಿ : ವ್ಯವಹಾರ ಶುರು ಮಾಡುವ ಮೊದಲು ಕಂಪನಿ ಹೆಸರನ್ನು ನೋಂದಾಯಿಸಬೇಕು. ಹಾಗೆಯೇ ಐಸ್ ಕ್ರೀಂ ಆಹಾರದಲ್ಲಿ ಸೇರುವುದ್ರಿಂದ ನೀವು FSSAI ನಿಂದ ಪರವಾನಗಿ ಪಡೆಯಬೇಕು.
ಮಾರಾಟ ಮತ್ತು ಪ್ರಚಾರ : ನೀವು ಯಾವ ಪ್ರದೇಶದಲ್ಲಿ ಐಸ್ ಕ್ರೀಂ ಮಳಿಗೆ ಶುರು ಮಾಡಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಹಾಗೆ ನಿಮ್ಮ ಬಳಿ ಸಿಗವು ಪ್ಲೇವರ್ ಮಹತ್ವ ಪಡೆಯುತ್ತದೆ. ನೀವು ರುಚಿಯಾದ ಐಸ್ ಕ್ರೀಂ ತಯಾರಿಸ್ತಿದ್ದರೆ ಗ್ರಾಹಕರು ನಿಮ್ಮ ಅಂಗಡಿಗೆ ಬರೋದು ಹೆಚ್ಚಾಗುತ್ತದೆ. ನೀವು ಸ್ಥಳೀಯವಾಗಿ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಐಸ್ ಕ್ರೀಂ ಪಾರ್ಲರ್ ಬಗ್ಗೆ ಪ್ರಚಾರ ಮಾಡಬಹುದು.
ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಇಲ್ಲಿವೆ ಸರಳ ವಿಧಾನಗಳು
ಹೀಗೂ ವ್ಯವಹಾರ ಮಾಡ್ಬಹುದು : ನಿಮಗೆ ಐಸ್ ಕ್ರೀಂ ತಯಾರಿಕೆ ತಿಳಿದಿದೆ, ಯಂತ್ರಗಳನ್ನು ಬಳಕೆ ಮಾಡ್ತೀರಿ ಆದ್ರೆ ಪಾರ್ಲರ್ ತೆಗೆಯೋದು ಕಷ್ಟ ಎನ್ನುವಂತಿದ್ದರೆ ನೀವು ಹೊಟೇಲ್ ಅಥವಾ ಸ್ಥಳೀಯ ಅಂಗಡಿಗೆ ಐಸ್ ಕ್ರೀಂ ಮಾರಾಟ ಮಾಡಿ ಹಣ ಗಳಿಸಬಹುದು. ಒಂದ್ವೇಳೆ ಐಸ್ ಕ್ರೀಂ ತಯಾರಿ ಕಷ್ಟ ಎನ್ನುವವರು ನೀವಾಗಿದ್ದರೆ ಪ್ರಸಿದ್ಧ ಕಂಪನಿ ಐಸ್ ಕ್ರೀಂಗಳನ್ನು ನಿಮ್ಮ ಶಾಪ್ ನಲ್ಲಿಟ್ಟು ಮಾರಾಟ ಮಾಡಬಹುದು. ಒಟ್ಟಿನಲ್ಲಿ ನೀವು ಐಸ್ ಕ್ರೀಂ ಹೇಗೆ ಮಾರಾಟ ಮಾಡಿದ್ರೂ ಲಾಭ ಹೆಚ್ಚೇ. ಆದ್ರೆ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡ್ಬೇಕಾಗುತ್ತದೆ.
