Asianet Suvarna News Asianet Suvarna News

ನಿಮ್ಮ ಬ್ಯಾಂಕ್ ಖಾತೆಯಿಂದ 436ರೂ. ಕಡಿತವಾಗಿದೆಯಾ? ಏಕೆ ಗೊತ್ತ?

ಇತ್ತೀಚೆಗೆ ನಿಮ್ಮ ಬ್ಯಾಂಕ್ ಖಾತೆಯಿಂದ  436ರೂ. ಕಡಿತವಾಗಿರಬಹುದು. ಏಕೆ ಹಣ ಕಡಿತ ಮಾಡಲಾಗಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗೆ ಈ ಹಣ ಕಡಿತ ಮಾಡಲಾಗಿದೆ. 
 

Rs 436 Deducted From Your Bank Account Know How To Stop It
Author
First Published Mar 2, 2023, 5:37 PM IST

ನವದೆಹಲಿ (ಮಾ.2): ಇಂದು ಬಹುತೇಕ ಎಲ್ಲರ ಬಳಿ ಬ್ಯಾಂಕ್ ಖಾತೆ ಇದೆ. ತಿಂಗಳ ವೇತನ ಪಡೆಯುವ ವ್ಯಕ್ತಿಯಿಂದ ಹಿಡಿದು ರೈತನ ತನಕ ಎಲ್ಲರೂ ಬ್ಯಾಂಕ್ ಖಾತೆ ಹೊಂದಿದ್ದಾರೆ. ಸರ್ಕಾರದ ಯೋಜನೆಗಳ ಫಲಾನುಭವಿಯಾಗಲು ಬ್ಯಾಂಕ್ ಖಾತೆ ಹೊಂದಿರೋದು ಈಗ ಕಡ್ಡಾಯವಾದ ಕಾರಣ ಗ್ರಾಮೀಣ ಭಾಗದ ಜನರು ಕೂಡ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಬ್ಯಾಂಕ್ ಖಾತೆಯಿಂದ ಕೆಲವೊಮ್ಮೆ ಹಣ ಕಡಿತ ವಾಗಿರುವ ಬಗ್ಗೆ ನಮ್ಮ ಮೊಬೈಲ್ ಗೆ ಸಂದೇಶ ಬಂದಿರುತ್ತದೆ. ಆದರೆ, ಏಕೆ ಹಣ ಕಡಿತ ಮಾಡಲಾಗಿದೆ ಎಂಬ ಮಾಹಿತಿ ಮಾತ್ರ ತಿಳಿದಿರೋದಿಲ್ಲ. ಇತ್ತೀಚೆಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಕೂಡ 436ರೂ. ಕಡಿತವಾಗಿದೆಯಾ? ಇದು ಏಕೆ ಎಂದು ತಿಳಿದಿಲ್ಲವೆ? ಹಾಗಾದ್ರೆ ಇಲ್ಲಿದೆ ಉತ್ತರ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ಪ್ರೀಮಿಯಂಗಾಗಿ ಈ ಹಣ ಕಡಿತಗೊಳಿಸಲಾಗಿದೆ. ಎಸ್ ಬಿಐ, ಅಂಚೆ ಕಚೇರಿ ಅಥವಾ ಇತರ ಯಾವುದೇ ಬ್ಯಾಂಕ್ ಗಳಲ್ಲಿ ನೀವು ಖಾತೆ ಹೊಂದಿದ್ದು, ಈ  ವಿಮಾ ಯೋಜನೆ ಪಡೆದಿದ್ದು, ಅದರ ಪ್ರೀಮಿಯಂ ಭರಿಸಲು ಅಟೋ ಡೆಬಿಟ್ ಸೌಲಭ್ಯ ಸಕ್ರಿಯಗೊಳಿಸಿದ್ದರೆ ನಿಮ್ಮ ಖಾತೆಯಿಂದ ವಾರ್ಷಿಕ ಪ್ರೀಮಿಯಂ ಪಾವತಿಗೆ ಹಣ ಕಡಿತವಾಗಿರುತ್ತದೆ. 

ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ 
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY)ಕೇಂದ್ರ ಸರ್ಕಾರದ (Central government) ಸುರಕ್ಷಾ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ನೀವು ವಾರ್ಷಿಕ ಕೇವಲ 436ರೂ. ಪ್ರೀಮಿಯಂ (Premium) ಪಾವತಿಸಿದ್ರೆ ಸಾಕು, 2 ಲಕ್ಷ ರೂ. ತನಕ ವಿಮೆ (Insurance) ಕವರೇಜ್ ಲಭಿಸುತ್ತದೆ. 18ರಿಂದ 50 ವರ್ಷದೊಳಗಿನವರು ಈ ಯೋಜನೆಯ ಫಲಾನುಭವಿಯಾಗಬಹುದು. ಈ ಯೋಜನೆಯನ್ನು ಪ್ರತಿವರ್ಷ ನವೀಕರಣಗೊಳಿಸೋದು ಕಡ್ಡಾಯ. ಜೂನ್ ನಿಂದ ಮೇ ತನಕ  ಈ ಯೋಜನೆ ಸಿಂಧುತ್ವ (Validity) ಹೊಂದಿರುತ್ತದೆ. ಹೀಗಾಗಿ ಮೇ 31ರೊಳಗೆ 436ರೂ. ಪ್ರೀಮಿಯಂ ಪಾವತಿಸಿ ಈ ಯೋಜನೆಯನ್ನು ನವೀಕರಿಸಬೇಕು.

ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ 5 ದಿನ ಮಾತ್ರ ಕೆಲಸ?

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ  
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಕೂಡ ಕೇಂದ್ರ ಸರ್ಕಾರದ ವಿಮಾ (Insurance) ಯೋಜನೆಯಾಗಿದೆ. ಈ ಯೋಜನೆಯ ಫಲಾನುಭವಿ ಅಪಘಾತದಲ್ಲಿ (accident) ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ಸಿಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಆಕಸ್ಮಿಕವಾಗಿ ಮರಣ ಹೊಂದಿದ್ರೆ 2ಲಕ್ಷ ರೂ., ಭಾಗಶಃ ಅಂಗವೈಕಲ್ಯ ಹೊಂದಿದರೆ 1ಲಕ್ಷ ರೂ. ಆರ್ಥಿಕ ನೆರವನ್ನು ಆ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಈ ಯೋಜನೆಯ ಮೂಲಕ ನೀಡುತ್ತದೆ. ಈ ಯೋಜನೆಗೆ ವಾರ್ಷಿಕ 20ರೂ. ಪ್ರೀಮಿಯಂ ಅನ್ನು ಮೇ 31ರೊಳಗೆ ಪಾವತಿಸಬೇಕು. 

ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಇಲ್ಲಿವೆ ಸರಳ ವಿಧಾನಗಳು

ಸ್ವಯಂ ಡೆಬಿಟ್ ಸೌಲಭ್ಯ
ನೀವು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಚಂದಾದಾರರಾಗಿದ್ದರೆ, ಈ ಎರಡೂ ಯೋಜನೆಗಳಿಗೆ ಪ್ರೀಮಿಯಂ ಅನ್ನು ನೀವು ಖುದ್ದಾಗಿ ಪಾವತಿಸಬೇಕಾದ ಅಗತ್ಯವಿಲ್ಲ. ಬದಲಿಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಮೊತ್ತ ಆಟೋ ಡೆಬಿಟ್ (Auto debit) ಆಗುತ್ತದೆ. ಈ ಎರಡೂ ಯೋಜನೆಗಳ ಪ್ರೀಮಿಯಂ ಮೇ 31ರೊಳಗೆ ಭರಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಖಾತೆಯಿಂದ ಹಣ ಕಡಿತವಾಗೋದನ್ನು ತಪ್ಪಿಸಬೇಕೆಂದ್ರೆ ಅಗತ್ಯ ಕ್ರಮಗಳನ್ನು ಅನುಸರಿಸಿ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ಸಾಧ್ಯವಾಗದಿದ್ರೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಪಾಲಿಸಿ ಅದರಷ್ಟಕ್ಕೆ ರದ್ದುಗೊಳ್ಳುತ್ತದೆ. 
 

Follow Us:
Download App:
  • android
  • ios