ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಇಲ್ಲಿವೆ ಸರಳ ವಿಧಾನಗಳು

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರೋರು ಬ್ಯಾಲೆನ್ಸ್ ಚೆಕ್ ಮಾಡಲು ಅಂಚೆ ಕಚೇರಿಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಸುಲಭವಾಗಿ ನೋಡಬಹುದು. ಎಸ್ಎಂಎಸ್, ಇ-ಪಾಸ್ ಬುಕ್, ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 
 

How to check Post Office savings account balance A step by step guide anu

Business Desk:ದೇಶದ ಗ್ರಾಮೀಣ ಭಾಗದ ಜನರು ಉಳಿತಾಯಕ್ಕೆ ಇಂದಿಗೂ ಅಂಚೆ ಕಚೇರಿಯ ಉಳಿತಾಯ ಖಾತೆ ನೆಚ್ಚಿಕೊಂಡಿದ್ದಾರೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಕೆವೈಸಿ ದಾಖಲೆಗಳ ಜೊತೆಗೆ ಕನಿಷ್ಠ 500ರೂ. ಪ್ರಾರಂಭಿಕ ಠೇವಣಿ ಇಡುವುದು ಅಗತ್ಯ. ಈ ಖಾತೆಯನ್ನು ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕ ಕೂಡ ತೆರೆಯಬಹುದು. ಅಂಚೆ ಕಚೇರಿ ಉಳಿತಾಯ ಖಾತೆಗೆ ಪ್ರಸ್ತುತ ವಾರ್ಷಿಕ ಶೇ.4ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು ವಾರ್ಷಿಕ 10,000ರೂ. ತನಕದ ಬಡ್ಡಿಗೆ ಯಾವುದೇ ತೆರಿಗೆಯಿಲ್ಲ. ಇತ್ತೀಚಿನ ದಿನಗಳಲ್ಲಿ ಅಂಚೆ ಇಲಾಖೆ ಕೂಡ ಡಿಜಿಟಲೀಕರಣಕ್ಕೆ ತೆರೆದುಕೊಂಡಿದೆ. ಗ್ರಾಹಕರು ಆನ್ ಲೈನ್ ನಲ್ಲಿ ಖಾತೆ ಬ್ಯಾಲೆನ್ಸ್ ಚೆಕ್ ಮಾಡಬಹುದು, ಮಿನಿ ಸ್ಟೇಟ್ಮೆಂಟ್ ಪಡೆಯಬಹುದು ಹಾಗೂ ಹಣ ಕೂಡ ವರ್ಗಾವಣೆ ಮಾಡಬಹುದು. ಇನ್ನು ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಕನಿಷ್ಠ 500ರೂ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೆ ಅವರ ಖಾತೆಯಿಂದ ಅಂಚೆ ಇಲಾಖೆ 100ರೂ. ಕಡಿತಗೊಳಿಸುತ್ತದೆ. ಹಾಗಾದ್ರೆ ಆನ್ ಲೈನ್  ಹಾಗೂ ಅಪ್ ಲೈನ್ ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಇ-ಪಾಸ್ ಬುಕ್ ಸೌಲಭ್ಯ
ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಕೇಂದ್ರ ಸರ್ಕಾರ 2022ರಲ್ಲಿ ಎಲೆಕ್ಟ್ರಾನಿಕ್ ಪಾಸ್ ಬುಕ್ ಸೌಲಭ್ಯ ಪರಿಚಯಿಸಿತು. ಇ-ಪಾಸ್ ಪುಸ್ತಕದ ಮೂಲಕ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1: ಅಧಿಕೃತ ವೆಬ್ ಸೈಟ್ www.indiapost.gov.in ಭೇಟಿ ನೀಡಿ.
ಹಂತ 2: ಅಂಚೆ ಕಚೇರಿ ಉಳಿತಾಯ ಯೋಜನೆ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಇ-ಪಾಸ್ ಬುಕ್ ಆಯ್ಕೆ ಆರಿಸಿ.
ಹಂತ 4: ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
ಹಂತ 5: ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿ.

ಆರ್ ಡಿ ಖಾತೆಗೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತೆ? ಇಲ್ಲಿದೆ ಮಾಹಿತಿ

ಎಸ್ ಎಂಎಸ್
ಎಸ್ ಎಂಎಸ್ ಮೂಲಕ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಮೊದಲಿಗೆ ಖಾತೆದಾರರು ನೋಂದಣಿ ಮಾಡಿಸಬೇಕು. ಇದಕ್ಕಾಗಿ ‘register’ ಎಂದು ಟೈಪ್ ಮಾಡಿ ನಿಮ್ಮ ಅಂಚೆ ಕಚೇರಿ ಚಾಲ್ತಿ ಅಥವಾ ಉಳಿತಾಯ ಖಾತೆ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ  7738062873 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ನೋಂದಣಿಯಾದ ಬಳಿಕ ನೀವು ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ಚೆಕ್ ಮಾಡಲು ಮತ್ತೆ  7738062873 ಸಂಖ್ಯೆಗೆ 'balance'ಎಂದು ಟೈಪ್ ಮಾಡಿ ಕಳುಹಿಸಬೇಕು. ಇನ್ನು ಮಿನಿ ಸ್ಟೇಟ್ಮೆಂಟ್ಸ್ ಪರಿಶೀಲಿಸಲು 7738062873 ಸಂಖ್ಯೆಗೆ 'mini'ಎಂದು ಟೈಪ್ ಮಾಡಿ ಕಳುಹಿಸಬೇಕು.

ಮಿಸ್ಡ್ ಕಾಲ್ ಸೇವೆ
ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಪಡೆಯಲು ಅಂಚೆ ಕಚೇರಿ ಉಳಿತಾಯ ಖಾತೆ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8424054994 ಸಂಖ್ಯೆಗೆ ಕರೆ ಮಾಡಿ. ಒಮ್ಮೆ ಮೊಬೈಲ್ ಸಂಖ್ಯೆ ನೋಂದಣಿಯಾದ ಬಳಿಕ 8424054994 ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಮಿನಿ ಸ್ಟೇಟ್ಮೆಂಟ್ ಹಾಗೂ ಖಾತೆ ಬ್ಯಾಲೆನ್ಸ್ ಮಾಹಿತಿ ಸಿಗುತ್ತದೆ.

ಐಪಿಪಿಬಿ ಮೊಬೈಲ್ ಅಪ್ಲಿಕೇಷನ್
ಐಪಿಪಿಬಿ ಮೊಬೈಲ್ ಅಪ್ಲಿಕೇಷನ್ ಮೂಲಕ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:
ಹಂತ 1: ಪ್ಲೇಸ್ಟೋರ್ ಗೆ ತೆರಳಿ IPPB Mobile App ಡೌನ್ ಲೋಡ್ ಮಾಡಿ.
ಹಂತ 2: ಖಾತೆ ಸಂಖ್ಯೆ ಹಾಗೂ ಗ್ರಾಹಕರ ಗುರುತಿನ ಸಂಖ್ಯೆ ನಮೂದಿಸಿ.
ಹಂತ 3: ಪರಿಶೀಲನೆ ಉದ್ದೇಶಕ್ಕೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
ಹಂತ 4: ಅಪ್ಲಿಕೇಷನ್ ಗೆ ಲಾಗಿನ್ ಆಗುವ ಮೂಲಕ ಎಂಪಿಐಎನ್ ಸೆಟ್ ಮಾಡಿ ಹಾಗೂ ಖಾತೆ ಬ್ಯಾಲೆನ್ಸ್ ಪರಿಶೀಲಿಸಿ.

ಎಲ್ಐಸಿ ಈ ಪಾಲಿಸಿಯಲ್ಲಿ ತಿಂಗಳಿಗೆ 833ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ ಒಂದು ಕೋಟಿ ರೂ.!

ಫೋನ್ ಬ್ಯಾಂಕಿಂಗ್ 
ಖಾತೆ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 155299 ಸಂಖ್ಯೆಗೆ ಕರೆ ಮಾಡಿ ಹಾಗೂ ಐವಿಆರ್ ಎಸ್ ಕಮಾಂಡ್ ಗಳನ್ನು ಫಾಲೋ ಮಾಡಿ. ಹಾಗೆಯೇ ಭಾಷೆ ಹಾಗೂ ಉಳಿತಾಯ ಕಾತೆ ಮಾಹಿತಿ ಆಯ್ಕೆ ಮಾಡಿ. ಆ ಬಳಿಕ 'get balance' ಆಯ್ಕೆ ಆರಿಸಿ ಖಾತೆ ಬ್ಯಾಲೆನ್ಸ್ ಪರಿಶೀಲಿಸಿ. 

Latest Videos
Follow Us:
Download App:
  • android
  • ios