Business Ideas: ಹೆಚ್ಚಿನ ಲಾಭ ಬೇಕಂದ್ರೆ ಈ ವ್ಯವಹಾರ ಶುರು ಮಾಡಿ

ಸದಾ ಬೇಡಿಕೆಯಲ್ಲಿರಬೇಕು, ವ್ಯವಹಾರದಲ್ಲಿ ಲಾಭ ಬೇಕು ಅಂತಹ ಬ್ಯುಸಿನೆಸ್ ಹುಡುಕೋರೇ ಹೆಚ್ಚು. ನೀವೂ ಇಂಥ ವ್ಯಾಪಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಪೇಪರ್ ಪ್ಲೇಟ್ ಬ್ಯುಸಿನೆಸ್ ಒಳ್ಳೆ ಆಯ್ಕೆ. ಕಡಿಮೆ ಬಂಡವಾಳದ ಜೊತೆ ಇದ್ರಲ್ಲಿ ಲಾಭವೂ ಹೆಚ್ಚು. 
 

Paper Plate Business

ಇತ್ತೀಚಿನ ದಿನಗಳಲ್ಲಿ ಯೂಸ್ ಅಂಡ್ ಥ್ರೋ ಪ್ಲೇಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳಲ್ಲಿ ಈ ಪ್ಲೇಟ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗ್ತಿದೆ. ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕರ ಎಂಬ ಸಂಗತಿ ತಿಳಿದ್ಮೇಲೆ ಜನರು ಪ್ಲಾಸ್ಟಿಕ್ ಪ್ಲೇಟ್ ಬದಲು ಪೇಪರ್ ಪ್ಲೇಟ್ ಆಯ್ಕೆ ಮಾಡಿಕೊಳ್ತಿದ್ದಾರೆ. ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ನೀವು ಪೇಪರ್ ಪ್ಲೇಟ್ ಬ್ಯುಸಿನೆಸ್ ಶುರು ಮಾಡಬಹುದು.

ಇದು ವರ್ಷದ 12 ತಿಂಗಳೂ ನಡೆಯುವ ವ್ಯವಹಾರ (Business) ವಾಗಿದೆ. ಮದುವೆ ಸಮಾರಂಭ, ರೆಸ್ಟೋರೆಂಟ್‌ಗಳು, ಫುಟ್ ಸ್ಟಾಲ್‌, ಕ್ಯಾಂಟೀನ್‌, ಕಚೇರಿ, ಸಭೆ, ಪಾರ್ಟಿ ಸೇರಿದಂತೆ ಮನೆಯಲ್ಲೂ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗ್ತಿದೆ. ಕೊರೊನಾ (Corona) ಸಂದರ್ಭದಲ್ಲಿ ಈ ಪೇಪರ್ ಪ್ಲೇಟ್ (Paper) ಬಳಸುವಂತೆ ವೈದ್ಯರೇ ಸಲಹೆ ನೀಡಿದ್ದಿದೆ. ಪೇಪರ್ ಪ್ಲೇಟ್ (Plate) ಮಾತ್ರವಲ್ಲ ನೀವು ಕಪ್ ಕೂಡ ತಯಾರಿಸಿ ಮಾರಾಟ ಮಾಡಬಹುದು. ಪ್ಲೇಟ್ ನಲ್ಲಿಯೇ ಅನೇಕ ವಿಧಗಳಿವೆ. ಪೇಪರ್ ಪ್ಲೇಟ್ ವ್ಯಾಪಾರವನ್ನು ಪ್ರಾರಂಭಿಸುವುದು ತುಂಬಾ ಸುಲಭ. ನಿಮ್ಮ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದಕ್ಕೆ ದೊಡ್ಡ ಜಾಗದ ಅಗತ್ಯವಿಲ್ಲ.  ಕೆಲಸವನ್ನು 10 x 10 ರ ಸಣ್ಣ ಕೋಣೆಯಲ್ಲಿ ನೀವು ಮಾಡಬಹುದು. ಆದ್ರೆ ಈ ರೂಮ್ ಗೆ ಕರೆಂಟ್ ವ್ಯವಸ್ಥೆ ಮಾಡಿಕೊಳ್ಳಬೇಕು. 

ಪೇಪರ್ ಪ್ಲೇಟ್ ವ್ಯವಹಾರಕ್ಕೆ ನೋಂದಣಿ ಅಗತ್ಯವೇ? : ಪೇಪರ್ ಪ್ಲೇಟ್ ವ್ಯಾಪಾರವನ್ನು ಸಣ್ಣ ಕೈಗಾರಿಕೆ ವರ್ಗಕ್ಕೆ ಸೇರಿಸಲಾಗಿದೆ. ಹಾಗಾಗಿ ನೀವು ಪರವಾನಗಿ ಪಡೆಯಬೇಕಾಗುತ್ತದೆ. ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಅಥವಾ ಎನ್ ಒಸಿ ತೆಗೆದುಕೊಳ್ಳಬೇಕಾಗುತ್ತದೆ.  ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನದಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. 

Ration Card ನಲ್ಲಿ ಮಕ್ಕಳ ಹೆಸರು ಸೇರಿಸೋದು ಸುಲಭ

ಪೇಪರ್ ಪ್ಲೇಟ್ ವ್ಯವಹಾರ ಶುರು ಮಾಡಲು ಹೂಡಿಕೆ : ಪೇಪರ್ ಪ್ಲೇಟ್ ತಯಾರಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದು ನೀವು ಯಾವ ಯಂತ್ರವನ್ನು ಬಳಸಿದ್ದೀರಿ ಎಂಬುದನ್ನು ಅವಲಂಭಿಸಿರುತ್ತದೆ. ಇದ್ರಲ್ಲಿ ಹಸ್ತಚಾಲಿತ ಹಾಗೂ ಸ್ವಯಂ ಚಾಲಿತ ಯಂತ್ರವಿದೆ. 25 ಸಾವಿರ ರೂಪಾಯಿ ಒಳಗೆ ನೀವು ವ್ಯವಹಾರ ಶುರು ಮಾಡಲು ಬಯಸಿದ್ರೆ ನೀವು ಮ್ಯಾನ್ಯುವಲ್ ಯಂತ್ರವನ್ನು ಖರೀದಿ ಮಾಡಿ. 50 ಸಾವಿರ ರೂಪಾಯಿ ಹೂಡಿಕೆ ಮಾಡಲು ಸಿದ್ಧರಾಗಿದ್ದವರು ಸ್ವಯಂಚಾಲಿತ ಯಂತ್ರವನ್ನು ಬಳಸಿ. ಪೇಪರ್ ಪ್ಲೇಟ್ ತಯಾರಿಸಲು ಕಾಗದದ ಹಾಳೆಯ ರೋಲ್ ಅಗತ್ಯವಿರುತ್ತದೆ. ಈ ರೋಲ್ ಗಳು ವಿಭಿನ್ನ ವಿನ್ಯಾಸಗಳಲ್ಲಿ ಮತ್ತು ವಿಭಿನ್ನ ಗುಣಮಟ್ಟದಲ್ಲಿ ಬರುತ್ತವೆ. ವಿನ್ಯಾಸ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ಇರುತ್ತದೆ. ಪ್ರತಿ ಕಿಲೋಗ್ರಾಂ ಪೇಪರ್ ಶೀಟ್ ರೋಲ್ ನಿಮಗೆ ಕನಿಷ್ಠ 30 ರಿಂದ 40 ರೂಪಾಯಿಗಳಿಗೆ ಸಿಗುತ್ತದೆ.  ಒಂದು ಕಿಲೋಗ್ರಾಂನಲ್ಲಿ 100 ಪ್ಲೇಟ್ ಆರಾಮವಾಗಿ ಮಾಡಬಹುದು.

ಎಸ್ ಬಿಐಯಲ್ಲಿವೆ 6 ವಿಧದ ಉಳಿತಾಯ ಖಾತೆಗಳು; ಯಾರು, ಯಾವುದರಲ್ಲಿ ಹೂಡಿಕೆ ಮಾಡಬಹುದು?

ಪೇಪರ್ ಪ್ಲೇಟ್ ವ್ಯವಹಾರದಲ್ಲಿ ಲಾಭ : ನೀವು ಚಿಲ್ಲರೆ ವ್ಯಾಪಾರ ಅಥವಾ ಸಗಟು ವ್ಯಾಪಾರ ಇದ್ರಲ್ಲಿ ಯಾವುದಾದ್ರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಯಾವ ರೀತಿ ವ್ಯವಹಾರ ಮಾಡ್ತಿದ್ದೀರಿ ಎನ್ನುವುದ್ರ ಮೇಲೆ ಲಾಭ ಅಡಗಿದೆ. ಒಂದು ಪೇಪರ್ ಪ್ಲೇಟ್ ತಯಾರಿಸಲು ನಿಮಗೆ 80 ಪೈಸೆಯಷ್ಟು ಖರ್ಚು ಬರುತ್ತದೆ. 100 ಪ್ಲೇಟ್‌ಗಳ ಪ್ಯಾಕೆಟ್‌ಗೆ 80 ರೂಪಾಯಿ. ಚಿಲ್ಲರೆ ವ್ಯಾಪಾರದಲ್ಲಿ ಪೇಪರ್ ಪ್ಲೇಟ್ ಮಾರಾಟ ಮಾಡ್ತಿದ್ದರೆ ನೀವು ಒಂದು ಪ್ಲೇಟ್ ಗೆ ಒಂದು ರೂಪಾಯಿಯಂತೆ ಮಾರಾಟ ಮಾಡಬಹುದು. ನೀವು ಬೇರೆ ಬೇರೆ ಗಾತ್ರದ ಪ್ಲೇಟ್ ಜೊತೆ ಕಪ್ ಕೂಡ ತಯಾರಿಸುತ್ತಿದ್ದರೆ ಆಗ ನಿಮಗೆ ಬರುವ ಲಾಭ ಹೆಚ್ಚಿರುತ್ತದೆ. ಪೇಪರ್ ಪ್ಲೇಟ್ ಗೆ ಎಲ್ಲೆಡೆ ಬೇಡಿಕೆ ಇರುವ ಕಾರಣ ನೀವು ಈ ವ್ಯವಹಾರವನ್ನು ಆರಾಮವಾಗಿ ಶುರು ಮಾಡಬಹುದು.  

Latest Videos
Follow Us:
Download App:
  • android
  • ios