Asianet Suvarna News Asianet Suvarna News

SBI Tax Savings FD: 5 ವರ್ಷದ FD ತೆರೆಯಿರಿ, ತೆರಿಗೆ ಉಳಿಸಿ; ಆನ್ ಲೈನ್ ನಲ್ಲಿ ಎಫ್ ಡಿ ಖಾತೆ ತೆರೆಯೋದು ಹೇಗೆ?

*ಆನ್ ಲೈನ್ ನಲ್ಲೇ  ಸುಲಭವಾಗಿ SBI ತೆರಿಗೆ ಉಳಿತಾಯ FD ತೆರೆಯಬಹುದು
*ವಾರ್ಷಿಕ ಗರಿಷ್ಠ ಠೇವಣಿ ಮೊತ್ತ 1,50,000ರೂ. 
*ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ 

How to open SBI tax-saving FD scheme online to save tax details here
Author
Bangalore, First Published Mar 24, 2022, 1:33 PM IST

Business Desk:ತೆರಿಗೆ ಭಾರ ತಗ್ಗಿಸಿಕೊಳ್ಳಲು ಆದಾಯದ ಒಂದಿಷ್ಟು ಭಾಗವನ್ನು ಹೂಡಿಕೆ ಮಾಡೋದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಕೂಡ ತೆರಿಗೆ ಉಳಿಸೋ  5 ವರ್ಷಗಳ ಅವಧಿಯ ಸ್ಥಿರ ಠೇವಣಿಗಳನ್ನು (fixed deposits) ಪರಿಚಯಿಸಿವೆ. ಅವುಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಕೂಡ ಒಂದು. ಈ  ತೆರಿಗೆ ಉಳಿಸೋ ಸ್ಥಿರ ಠೇವಣಿ ಖಾತೆ ತೆರೆಯೋದು ಹೇಗೆ? ಅರ್ಹತೆಗಳೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರು ಈ ಖಾತೆ ತೆರೆಯಬಹುದು?
ಕಾಯಂ ಖಾತಾ ಸಂಖ್ಯೆ (PAN) ಹೊಂದಿರೋ ಯಾವುದೇ ಭಾರತೀಯ ನಿವಾಸಿ ಅಥವಾ ಹಿಂದು ಅವಿಭಜಿತ ಕುಟುಂಬದ ಸದಸ್ಯ ಎಸ್ ಬಿಐ ತೆರಿಗೆ ಉಳಿತಾಯ ಎಫ್ ಡಿಯಲ್ಲಿ ಹೂಡಿಕೆ ಮಾಡಬಹುದು. ಇತ್ತೀಚೆಗೆ ಎಸ್ ಬಿಐ ತೆರಿಗೆ ಉಳಿತಾಯ ಎಫ್ ಡಿ ಬಗ್ಗೆ ಟ್ವೀಟ್ ಮಾಡಿದ್ದು, 'ಎಸ್ ಬಿಐ ತೆರಿಗೆ ಉಳಿತಾಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿ ನಿಮ್ಮ ಉಳಿತಾಯವನ್ನು ಬೆಳೆಸಿ' ಎಂದು ಸಲಹೆ ನೀಡಿದೆ.

IT Raid:ಹೀರೋ ಮೋಟೋಕಾರ್ಪ್ ಅಧ್ಯಕ್ಷರಿಗೂ ಐಟಿ ದಾಳಿ ಬಿಸಿ; ನಿವಾಸ,ಕಚೇರಿ ಸೇರಿ 25 ಸ್ಥಳಗಳಲ್ಲಿ ಶೋಧ

ಕನಿಷ್ಠ ಠೇವಣಿ ಎಷ್ಟು?
ಎಸ್ ಬಿಐ ತೆರಿಗೆ ಉಳಿತಾಯ ಯೋಜನೆ  2006 ಸ್ಥಿರ ಠೇವಣಿ ಪ್ಲ್ಯಾನ್ ನಲ್ಲಿ ಕನಿಷ್ಠ 1,000 ರೂ. ಠೇವಣಿ ಅಥವಾ ಅದಕ್ಕಿಂತ ಹೆಚ್ಚೂ ಇಡಬಹುದು. ಆದ್ರೆ ವಾರ್ಷಿಕ ಗರಿಷ್ಠ ಠೇವಣಿ ಮೊತ್ತ 1,50,000ರೂ. ಕನಿಷ್ಠ ಹೂಡಿಕೆ ಅವಧಿ 5 ವರ್ಷ ಹಾಗೂ ಗರಿಷ್ಠ ಅವಧಿ 10 ವರ್ಷ. ಎಸ್ ಬಿಐ ಸಾಮಾನ್ಯ ಹೂಡಿಕೆದಾರರು ಠೇವಣಿಯಲ್ಲಿನ ಹೂಡಿಕೆ ಮೇಲೆ ಶೇ.5.5 ಬಡ್ಡಿದರ ಗಳಿಸುತ್ತಾರೆ. ಎಸ್ ಬಿಐ ನೆಟ್ ಬ್ಯಾಂಕಿಂಗ್ ಬಳಕೆದಾರರು ತೆರಿಗೆ ಉಳಿತಾಯ ಸ್ಥಿರ ಠೇವಣಿಯಲ್ಲಿ ಕೆಲವೇ ನಿಮಿಷಗಳಲ್ಲಿ ಹೂಡಿಕೆ ಮಾಡಬಹುದು.

ಆನ್ ಲೈನ್ ನಲ್ಲಿ ಖಾತೆ ತೆರೆಯೋದು ಹೇಗೆ?
ಹಂತ 1:SBI ನೆಟ್ ಬ್ಯಾಂಕಿಂಗ್‌ ಗೆ ಲಾಗ್ ಇನ್ ಆಗಿ.
ಹಂತ 2: ‘Fixed deposit’ಆಯ್ಕೆಯಡಿಯಲ್ಲಿ e-TDR/ eSTDR FD ಮೇಲೆ ಕ್ಲಿಕ್ ಮಾಡಿ.
ಹಂತ 3: ಆದಾಯ ತೆರಿಗೆ ಉಳಿತಾಯ ಯೋಜನೆಯಡಿಯಲ್ಲಿ e-TDR/ eSTDR ಮೇಲೆ ಕ್ಲಿಕ್ ಮಾಡಿ.
ಹಂತ 4: Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5: ಖಾತೆ, ಮೊತ್ತ ಹಾಗೂ ಟರ್ಮ್ಸ್ ಹಾಗೂ ಷರತ್ತುಗಳನ್ನು ಸ್ವೀಕರಿಸಿ ಆ ಬಳಿಕ  Submit ಮೇಲೆ ಕ್ಲಿಕ್ ಮಾಡಿ.

ಎಷ್ಟು ತೆರಿಗೆ ಉಳಿತಾಯ?
ಒಂದು ಹಣಕಾಸು ಸಾಲಿನಲ್ಲಿ ಎಸ್ ಬಿಐ ತೆರಿಗೆ ಉಳಿತಾಯ ಸ್ಥಿರ ಠೇವಣಿಯಲ್ಲಿ 1.5ಲಕ್ಷ ರೂ. ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಆದ್ರೆ, ಪ್ರತಿಯೊಬ್ಬರೂ ಒಂದು ವಿಷಯ ನೆನಪಿಡಬೇಕು, ಅದೇನಪ್ಪ ಅಂದ್ರೆ ನೀವು ಹೂಡಿಕೆ ಮಾಡಿದ ಹಣದ ಮೇಲಿನ ಬಡ್ಡಿಗೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಅನ್ವಯ  ತೆರಿಗೆ ವಿಧಿಸಲಾಗುತ್ತದೆ.
ಒಂದು ಹಣಕಾಸು ಸಾಲಿನಲ್ಲಿ ಒಂದೇ ಬ್ಯಾಂಕಿನಲ್ಲಿ ನಿಮ್ಮ ಎಫ್ ಡಿ ಗಳ ಮೇಲಿನ ಬಡ್ಡಿ ಪಾವತಿ 10,000 ರೂ. ಮೀರಿದ್ರೆ ಆಗ ಬ್ಯಾಂಕ್ ಟಿಡಿಎಸ್ (TDS) ಕಡಿತ ಮಾಡುತ್ತದೆ. ಹೀಗಾಗಿ TDS ತಪ್ಪಿಸಲು ಅರ್ಜಿ ನಮೂನೆ 15ಜಿ (15G)ಅಥವಾ ಅರ್ಜಿ ನಮೂನೆ 15 ಎಚ್ (15H) ಸಲ್ಲಿಕೆ ಮಾಡಬೇಕು. 

ತೆರಿಗೆ ಉಳಿತಾಯ ಎಫ್ ಡಿ ಮೇಲೆ ಸಾಲ ಸೌಲಭ್ಯ
ಠೇವಣಿದಾರ ಮೃತಪಟ್ಟ ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಸಂದರ್ಭದಲ್ಲೂ ಠೇವಣಿ ತೆರೆದ ದಿನಾಂಕದಿಂದ 5 ವರ್ಷದೊಳಗೆ ಯಾವುದೇ ಠೇವಣಿಯನ್ನು ನಗದೀಕರಿಸುವಂತಿಲ್ಲ. ಐದು ವರ್ಷಗಳ ಲಾಕ್ ಇನ್ ಅವಧಿಯಲ್ಲಿ ಸಾಲ ಸೌಲಭ್ಯ ಸಿಗೋದಿಲ್ಲ.

Bank Strike ಬ್ಯಾಂಕ್ ನಲ್ಲಿ ಕೆಲಸ ಕಾರ್ಯಗಳಿದ್ದರೆ ಈ ವಾರದಲ್ಲೇ ಮುಗಿಸಿಕೊಳ್ಳಿ

ಠೇವಣಿದಾರ ಮೃತಪಟ್ಟರೆ?
ಠೇವಣಿದಾರ ಮೃತಪಟ್ಟ ಸಂದರ್ಭದಲ್ಲಿ ನಾಮಿನಿ ಅಥವಾ ಕಾನೂನಾತ್ಮಕ ವಾರಸುದಾರರು ಮೆಚ್ಯುರಿಟಿ ಬಳಿಕ ಅಥವಾ ಅದಕ್ಕೂ ಮುನ್ನ ಠೇವಣಿ ಹಿಂಪಡೆಯಬಹುದು. ಒಂದು ವೇಳೆ ಜಂಟಿ ಖಾತೆ ಹೊಂದಿದ್ದು, ಒಬ್ಬರು ಮೃತಪಟ್ಟರೆ ಇನ್ನೊಬ್ಬ ಖಾತೆದಾರ ಠೇವಣಿಯನ್ನು ಅವಧಿಗೂ ಮುನ್ನ ಹಿಂಪಡೆಯಬಹುದು. ಠೇವಣಿಯ ಅವಧಿಗೆ ಪ್ರಸ್ತುತವಿರೋ ಬಡ್ಡಿದರವನ್ನು ಬ್ಯಾಂಕ್ ಪಾವತಿಸುತ್ತದೆ. ಇಂಥ ಸಂದರ್ಭಗಳಲ್ಲಿ ಯಾವುದೇ ದಂಡ ವಿಧಿಸೋದಿಲ್ಲ.


 

Follow Us:
Download App:
  • android
  • ios