Money Making Ideas: ದುಡ್ಡು ಮಾಡೋದು ಹೇಗೆ? ಇಲ್ಲಿವೆ ಹತ್ತಾರು ದಾರಿಗಳು

ಇಂದು ಅನೇಕರು ಉದ್ಯೋಗದ ಜೊತೆಗೆ ಹೆಚ್ಚುವರಿ ಆದಾಯ ಗಳಿಸಲು ಅಥವಾ ಗೃಹಿಣಿಯರು ಕುಟುಂಬಕ್ಕೆ ನೆರವಾಗಲು ಪಾರ್ಟ್ ಟೈಂ ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಅಂಥವರಿಗೆ ಹೆಚ್ಚುವರಿ ಹಣ ಗಳಿಸಲು ಅನೇಕ ಮಾರ್ಗಗಳಿವೆ. ಅಂಥ 11 ಮಾರ್ಗಗಳ ಮಾಹಿತಿ ಇಲ್ಲಿದೆ. 
 

How to make money 11 Ways to Make Extra Money anu

Business Desk:ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡಿದರೂ ಕಡಿಮೇನೆ. ಆದಾಯಕ್ಕೆ ಒಂದೇ ಮೂಲವನ್ನು ನಂಬಿಕೊಂಡು ಕುಳಿತರೆ ಸಾಲದು. ಉದ್ಯೋಗದ ಜೊತೆಗೆ ಹೆಚ್ಚುವರಿ ಆದಾಯ ನೀಡುವ ಇನ್ನೊಂದು ಕೆಲಸದ ಅವಶ್ಯಕತೆಯೂ ಇರುತ್ತದೆ. ಗೃಹಸಾಲ, ಮಕ್ಕಳ ಶೈಕ್ಷಣಿಕ ವೆಚ್ಚ ಹೀಗೆ ಹಣಕಾಸಿನ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಬಿಡುವಿನ ವೇಳೆಯಲ್ಲಿ ಇನ್ನೊಂದು ಪಾರ್ಟ್ ಟೈಂ ಕೆಲಸಕ್ಕಾಗಿ ಅನೇಕರು ಹುಡುಕುತ್ತಿರುತ್ತಾರೆ. ಇನ್ನು ಗೃಹಿಣಿಯರು ಕೂಡ ತಮ್ಮ ಬಿಡುವಿನ ವೇಳೆಯಲ್ಲಿ ಒಂದಿಷ್ಟು ಗಳಿಕೆ ಮಾಡಿ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಬಯಸುತ್ತಾರೆ. ಇಂಥವರಿಗೆ ಗೌರವಯುತ ಗಳಿಕೆಯನ್ನು ನೀಡುವ ಅನೇಕ ಉದ್ಯೋಗಗಳು ಲಭ್ಯವಿವೆ. ಇಂಥ ಉದ್ಯೋಗಗಳಿಗೆ ದಿನದ ಸ್ವಲ್ಪ ಸಮಯವನ್ನು ಮೀಸಲಿಡುವ ಮೂಲಕ ಒಂದಿಷ್ಟು ಗಳಿಕೆ ಮಾಡಬಹುದು. ಹಾಗಾದ್ರೆ ಹೆಚ್ಚುವರಿ ಹಣ ಗಳಿಸಲು ಯಾವೆಲ್ಲ ಮಾರ್ಗಗಳಿವೆ? ಉತ್ತಮ ಆದಾಯ ನೀಡಬಲ್ಲ ಪಾರ್ಟ್ ಟೈಂ ಉದ್ಯೋಗಗಳು ಯಾವುವು? ಇಲ್ಲಿದೆ ಮಾಹಿತಿ.

ಹೆಚ್ಚುವರಿ ಹಣ ಗಳಿಕೆಗೆ ಇಲ್ಲಿವೆ 11 ಮಾರ್ಗಗಳು
1. ಡಾಟಾ ಎಂಟ್ರಿ: ಡಾಟಾ ಎಂಟ್ರಿ ಉದ್ಯೋಗಕ್ಕೆ ಸಾಕಷ್ಟು ಬೇಡಿಕೆಯಿದೆ. ಹಾಗೆಯೇ ಈ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳು ಕೂಡ ಇವೆ. ನೀವು ವೇಗವಾಗಿ ಕೀಬೋರ್ಡ್ ಬಳಕೆ ಮಾಡಬಲ್ಲಿರಾದರೆ ಈ ಪಾರ್ಟ್ ಟೈಂ ಉದ್ಯೋಗ ಮಾಡಬಹುದು. ಡಾಟಾ ಎಂಟ್ರಿಗೆ ಡೆಡ್ ಲೈನ್ ನಲ್ಲಿ ಕೆಲಸ ಮಾಡೋದು ಅಗತ್ಯ. ಆರೋಗ್ಯ, ಬ್ಯಾಂಕಿಂಗ್, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಡಾಟಾ ಎಂಟ್ರಿ ಉದ್ಯೋಗಗಳು ಲಭ್ಯವಿವೆ. ಆದರೆ, ಡಾಟಾ ಎಂಟ್ರಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಜಾಹೀರಾತುಗಳು ಕಾಣಿಸುತ್ತವೆ. ಆದರೆ, ಅವುಗಳಿಗೆ ಅರ್ಜಿ ಸಲ್ಲಿಸುವ ಅಥವಾ ಸಂಪರ್ಕಿಸುವ ಮುನ್ನ ಆ ಸಂಸ್ಥೆಯ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರೋದು ಅಗತ್ಯ.

2.ಫ್ರೀಲ್ಯಾನ್ಸಿಂಗ್ : ಇದು ಪಾರ್ಟ್ ಟೈಂ ಉದ್ಯೋಗಕ್ಕೆ ಪ್ರಯತ್ನಿಸುತ್ತಿರೋರಿಗೆ ಒಂದು ಉತ್ತಮ ಅವಕಾಶವಾಗಿದೆ.  ಇದರಲ್ಲಿ ನೀವು ಅನೇಕ ಸಂಸ್ಥೆಗಳಿಗೆ ಕೆಲಸ ಮಾಡಲು ಕೂಡ ಅವಕಾಶ ಸಿಗುತ್ತದೆ. ಏಕೆಂದ್ರೆ ನೀವು ಒಂದು ಸಂಸ್ಥೆಗೆ ಬದ್ಧವಾಗಿರಬೇಕಾದ ಅಗತ್ಯವಿಲ್ಲದ ಕಾರಣ ಈ ಕ್ಷೇತ್ರದಲ್ಲಿ ನಿಮಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ. ಐಟಿ, ಫೋಟೋಗ್ರಾಫಿ, ಎಚ್ ಆರ್, ಪತ್ರಿಕೋದ್ಯಮ, ಭಾಷಾಂತರ  ಹೀಗೆ ವಿವಿಧ ಕ್ಷೇತ್ರಗಳಲ್ಲಿ ಫ್ರೀಲ್ಯಾನ್ಸರ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ.

3.ಕಾಪಿ ರೈಟಿಂಗ್: ಬರವಣಿಗೆ ಕೌಶಲ್ಯ ಉತ್ತಮವಾಗಿದ್ದು, ಭಾಷೆ ಮೇಲೆ ಹಿಡಿತ ಹೊಂದಿರೋರಿಗೆ ಕಾಪಿ ರೈಟಿಂಗ್ ಉತ್ತಮ ಆದಾಯ ಮೂಲವನ್ನು ಒದಗಿಸಬಲ್ಲದು. ಬ್ಲಾಗ್ಸ್, ವೆಬ್ ಸೈಟ್, ಜಾಹೀರಾತುಗಳು, ಇ-ಮೇಲ್, ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು, ಮನೋರಂಜನ ಮಾಧ್ಯಮಕ್ಕೆ ಸ್ಕ್ರಿಪ್ಟ್ ರೈಟಿಂಗ್ ಮುಂತಾದ ಕೆಲಸಗಳನ್ನು ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು.

ಮಕ್ಕಳ ಭವಿಷ್ಯಕ್ಕೆ ಯಾವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡೋದು ಬೆಸ್ಟ್? ಇಲ್ಲಿದೆ ಮಾಹಿತಿ

4.ಡಾಗ್ ವಾಕಿಂಗ್: ಇಂದು ನಗರಗಳಲ್ಲಿ ಡಾಗ್ ವಾಕಿಂಗ್ ಕೆಲಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಡಾಗ್ ವಾಕಿಂಗ್ ಅಂದರೆ ನಾಯಿ ಅಥವಾ ಸಾಕು ಪ್ರಾಣಿಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ಕೆಲಸ. ಮಾಲೀಕರು ಇಲ್ಲದ ಸಮಯದಲ್ಲಿ ಅಥವಾ ಅವರಿಗೆ ಯಾವುದಾದರೂ ತುರ್ತು ಕೆಲಸವಿರುವಾಗ ಅವರ ನಾಯಿಯನ್ನು ನೋಡಿಕೊಳ್ಳುವುದು. ಇದಕ್ಕಾಗಿ ಇಂದು ಅನೇಕ ಡಾಗ್ ಕೇರ್ ಸೆಂಟರ್ ಗಳು ಕೂಡ ಲಭ್ಯವಿವೆ. ಅಲ್ಲಿ ಕೂಡ ಡಾಗ್ ವಾಕರ್ ಗಳಿಗೆ ಬೇಡಿಕೆಯಿದೆ.

5.ವಸ್ತುಗಳ ಆನ್ ಲೈನ್ ಮಾರಾಟ: ಇಂದು ಆನ್ ಲೈನ್ ಮಾರ್ಕೆಟಿಂಗ್ ಸಾಕಷ್ಟು ಜನಪ್ರಿಯತೆ ಗಳಿಸಿದೆ. ನೀವು ಯಾವುದಾದರೊಂದು ಒಂದು ಅಥವಾ ಅನೇಕ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು. ಮನೆಯಲ್ಲೇ ಸಿದ್ಧಪಡಿಸಿದ ತಿನಿಸು, ಆಹಾರ ಸಾಮಗ್ರಿಗಳಿಂದ ಹಿಡಿದು ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

6.ಆನ್ ಲೈನ್ ಟ್ಯೂಟರ್: ಇಂದು ಆನ್ ಲೈನ್ ಕ್ಲಾಸ್ ಗಳಿಗೆ ಬೇಡಿಕೆ ಹೆಚ್ಚಿದೆ. ನೀವು ಡ್ರಾಯಿಂಗ್, ಸಂಗೀತ ಅಥವಾ ನೃತ್ಯದಲ್ಲಿ ಪರಿಣತಿ ಹೊಂದಿದ್ದರೆ ಆನ್ ಲೈನ್ ತರಗತಿಗಳನ್ನು ನಡೆಸುವ ಮೂಲಕ ಒಂದಿಷ್ಟು ಆದಾಯ ಗಳಿಸಬಹುದು. ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಕ್ರಾಫ್ಟ್ ಸೇರಿದಂತೆ ವಿವಿಧ ವಿಷಯಗಳನ್ನು ಮನೆಯಲ್ಲೇ ಕುಳಿತು ಆನ್ಲೆನ್ ನಲ್ಲಿ ಕಲಿಸುವ ಮೂಲಕ ಹಣ ಗಳಿಸಬಹುದು.

7.ಅಫಿಲಿಯೇಟ್ ಮಾರ್ಕೆಟಿಂಗ್: ಇದರಲ್ಲಿ ನೀವು ಇನ್ನೊಬ್ಬ ವ್ಯಕ್ತಿ ಅಥವಾ ಕಂಪನಿಯ ಉತ್ಪನ್ನವನ್ನು ಪ್ರಚಾರ ಮಾಡುವ ಮೂಲಕ ಆದಾಯ ಗಳಿಸಬಹುದು. ನೀವು ಆ ಉತ್ಪನ್ನವನ್ನು ಮಾರಾಟ ಮಾಡಿದಂತೆ ಕಂಪನಿ ನಿಮಗೆ ಕಮೀಷನ್ ನೀಡುತ್ತದೆ.

8.ಮನೆ ಬಾಡಿಗೆ ನೀಡಿ: ನೀವು ಸ್ವಂತ ಮನೆ ಹೊಂದಿದ್ದರೆ ನಿಮಗೆ ತುರ್ತಾಗಿ ಹೆಚ್ಚುವರಿ ಹಣದ ಅಗತ್ಯವಿದ್ದರೆ ನಿಮ್ಮ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡುವ ಮೂಲಕ ಹಣ ಗಳಿಸಬಹುದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂದು ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿದೆ.

ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗುವ ಭಾರತೀಯರ ಆದಾಯ ಗಳಿಕೆಯಲ್ಲಿ ಶೇ.120 ಹೆಚ್ಚಳ: ವಿಶ್ವ ಅಭಿವೃದ್ಧಿ ವರದಿ

9.ಆನ್ ಲೈನ್ ಕೋರ್ಸ್ ಗಳು: ಇಂದು ಆನ್ ಲೈನ್ ಕೋರ್ಸ್ ಗಳಿಗೆ ಬೇಡಿಕೆ ಹೆಚ್ಚಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿ ಆನ್ ಲೈನ್ ಕೋರ್ಸ್ ಗಳನ್ನು ಪ್ರಾರಂಭಿಸುವ ಮೂಲಕ ಕೂಡ ಆದಾಯ ಗಳಿಸಬಹುದು.

10.ವರ್ಚುವಲ್ ಅಸಿಸ್ಟೆಂಟ್ : ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಆಡ್ಮಿನಿಸ್ಟೇಟಿವ್ ಸೇವೆಗಳನ್ನು ನೀಡುವವರಿಗೆ ಕೂಡ ಇಂದು ಬೇಡಿಕೆ ಇದೆ. ಹೀಗಾಗಿ ವರ್ಚುವಲ್ ಅಸಿಸ್ಟೆಂಟ್ ಕಾರ್ಯದ ಮೂಲಕ ಕೂಡ ನೀವು ಉತ್ತಮ ಆದಾಯ ಗಳಿಸಬಹುದು.

11.ಆರ್ಟ್ ವರ್ಕ್ ಹಾಗೂ ಡಿಸೈನ್ಸ್ ಆನ್ ಲೈನ್ ಮಾರಾಟ
ನೀವು ಚಿತ್ರಕಲೆಯಲ್ಲಿ ಪರಿಣತಿ ಹೊಂದಿದ್ದರೆ ನಿಮ್ಮ ಪೇಟಿಂಗ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಿ ಹಣ ಗಳಿಸಬಹುದು. ಹಾಗೆಯೇ ಕಲಾಕೃತಿಗಳನ್ನು ಕೂಡ ಆನ್ ಲೈನ್ ಮಾರಾಟ ಮಾಡಿ ಆದಾಯ ಗಳಿಸಬಹುದು.

Latest Videos
Follow Us:
Download App:
  • android
  • ios