ಮಕ್ಕಳ ಭವಿಷ್ಯಕ್ಕೆ ಯಾವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡೋದು ಬೆಸ್ಟ್? ಇಲ್ಲಿದೆ ಮಾಹಿತಿ
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಮಾಡಲು ಬಯಸುವ ಪೋಷಕರು ಸರ್ಕಾರದ ಕೆಲವು ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ಹೊಂದಿರೋದು ಉತ್ತಮ. ಕೆಲವು ಸರ್ಕಾರಿ ಯೋಜನೆಗಳು ಮಕ್ಕಳಿಗೆ ಸುಭದ್ರ ಭವಿಷ್ಯ ಒದಗಿಸುವ ಉದ್ದೇಶದಿಂದಲೇ ರೂಪಿಸಲ್ಪಟ್ಟಿದ್ದಾರೆ. ಇನ್ನೂ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸಬಹುದು.
Business Desk: ಮಕ್ಕಳ ಶಿಕ್ಷಣ, ವಿವಾಹ ಸೇರಿದಂತೆ ಅವರ ಭವಿಷ್ಯಕ್ಕಾಗಿ ಪೋಷಕರು ಒಂದಿಷ್ಟು ಉಳಿತಾಯ ಮಾಡಲೇಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಅನುವಾಗುವ ಅನೇಕ ಯೋಜನೆಗಳಿವೆ. ಸರ್ಕಾರ ಕೂಡ ಮಕ್ಕಳಿಗೆ ಅನೇಕ ವಿಧದಲ್ಲಿ ಪ್ರಯೋಜನ ಒದಗಿಸುವಂತಹ ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ ಕೂಡ. ಪೋಷಕರು ತಮ್ಮ ಹೂಡಿಕೆ ಗುರಿಗಳಿಗೆ ಹೊಂದಿಕೆಯಾಗುವ, ರಿಸ್ಕ್ ಕಡಿಮೆಯಿರುವ ಹಾಗೂ ತೆರಿಗೆ ಪ್ರಯೋಜನಗಳನ್ನು ಒಳಗೊಂಡಿರುವ ಯೋಜನೆಗಳನ್ನು ಆಯ್ಕೆ ಮಾಡಬಹುದು. ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಪೋಷಕರು ಆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಹೊಂದಿರೋದು ಅಗತ್ಯ. ಆ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ ಪಡೆಯಬಹುದು? ತೆರಿಗೆ ಪ್ರಯೋಜನ ಸಿಗುತ್ತದೆಯೇ? ಎಂಬ ಬಗ್ಗೆ ಪರಿಶೀಲಿಸೋದು ಅಗತ್ಯ. ಹಾಗೆಯೇ ಮಕ್ಕಳ ಪ್ರಸಕ್ತ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಯಾವ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಿದ್ದೀರಾ ಎಂಬ ಆಧಾರದಲ್ಲಿ ಅವಧಿಯನ್ನು ನಿಗದಿಪಡಿಸಿಕೊಳ್ಳುವುದು ಉತ್ತಮ. ಹಾಗಾದ್ರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀವು ಹೂಡಿಕೆ ಮಾಡಬಹುದಾದ ಸರ್ಕಾರದ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
ಸುಕನ್ಯಾ ಸಮೃದ್ಧಿ ಯೋಜನೆ (SSY)
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದಲೇ ರೂಪಿಸಿದೆ. ಹೆಣ್ಣು ಮಗುವಿನ ಶಿಕ್ಷಣ ಹಾಗೂ ಮದುವೆ ವೆಚ್ಚಗಳಿಗೆ ಉಳಿತಾಯ ಮಾಡಲು ಇದು ಪೋಷಕರಿಗೆ ಪ್ರೋತ್ಸಾಹ ನೀಡುತ್ತದೆ. 2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಈ ಯೋಜನೆಯಡಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಆಕೆ ಹೆಸರಲ್ಲಿ ಉಳಿತಾಯ ಖಾತೆ ತೆರೆಯಬಹುದು. ಎರಡು ಹೆಣ್ಣು ಮಕ್ಕಳಿದ್ರೆ ಅವರಿಬ್ಬರ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯ್ತಿ ಕೂಡ ಇದೆ.
Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು, ಆಕರ್ಷಕ ಬಡ್ಡಿದರವನ್ನು ಒದಗಿಸುತ್ತದೆ. ಹೆತ್ತವರು ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ಇದರ ಮೇಲಿನ ಬಡ್ಡಿ ಗಳಿಕೆ ತೆರಿಗೆ ವಿನಾಯ್ತಿ ಹೊಂದಿದೆ. 2023ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಬಡ್ಡಿದರವನ್ನು ಶೇ.7.1ಕ್ಕೆ ನಿಗದಿಗೊಳಿಸಲಾಗಿದೆ. ಪಿಪಿಎಫ್ ಖಾತೆಯಲ್ಲಿ ಹೂಡಿಕೆದಾರರು ವಾರ್ಷಿಕ ಕನಿಷ್ಠ 500ರೂ. ಹಾಗೂ ಗರಿಷ್ಠ 1,50,000ರೂ. ಹೂಡಿಕೆ ಮಾಡಬಹುದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದರಲ್ಲಿ ಹೂಡಿಕೆ ಮಾಡಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಐದು ವರ್ಷಗಳ ಅವಧಿಯ ಯೋಜನೆಯಾಗಿದ್ದು, ಸ್ಥಿರ ಬಡ್ಡಿದರ ಹೊಂದಿದೆ. ಎನ್ ಎಸ್ ಸಿ ಯೋಜನೆಯಲ್ಲಿ ಮಾಡಿದ ಠೇವಣಿಗೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 80ಸಿ ( section 80C) ಅಡಿಯಲ್ಲಿ ತೆರಿಗೆ ಕಡಿತದ (tax deduction) ಸೌಲಭ್ಯವಿದೆ. ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ ಗರಿಷ್ಠ 1.5ಕ್ಷ ರೂ.ಗೆ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿದೆ. 10 ವರ್ಷ ಪೂರ್ಣಗೊಂಡ ಅಪ್ರಾಪ್ತರ ಹೆಸರಿನಲ್ಲಿ ಕೂಡ ಖಾತೆ ತೆರೆಯಲು ಅವಕಾಶವಿದೆ.
ಭಾರತದ ಮೊದಲ ಆ್ಯಪಲ್ ಸ್ಟೋರ್ ಸಿಬ್ಬಂದಿ ಸ್ಯಾಲರಿ ಮಾಹಿತಿ ಕೇಳಿದರೆ ತಲೆ ತಿರುಗುತ್ತೆ!
ಕಿಸಾನ್ ವಿಕಾಸ್ ಪತ್ರ (KVP)
ಕಿಸಾನ್ ವಿಕಾಸ್ ಪತ್ರ ಸ್ಥಿರ ಆದಾಯ ಹೂಡಿಕೆ ಯೋಜನೆಯಾಗಿದೆ. 124 ತಿಂಗಳ ಸ್ಥಿರ ಅವಧಿ ಬಳಿಕ ಈ ಯೋಜನೆಯ ಹೂಡಿಕೆ ಮೊತ್ತ ದುಪ್ಪಟ್ಟು ಆಗುತ್ತದೆ. ಈ ಯೋಜನೆಯಲ್ಲಿ ಗಳಿಸಿದ ಅದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಯಾವುದೇ ಟಿಡಿಎಸ್ ಕಡಿತವಿಲ್ಲ.