Asianet Suvarna News Asianet Suvarna News

Personal Finance : ಮ್ಯೂಚುವಲ್ ಫಂಡ್ ಇರುವವರು ಇದನ್ನು ತಿಳಿದಿರಿ

ಹೂಡಿಕೆ ಮಾಡೋದು ಈಗ ಅನಿವಾರ್ಯ. ಅನೇಕರು, ಅನೇಕ ರೀತಿಯಲ್ಲಿ ಹೂಡಿಕೆ ಮಾಡ್ತಾರೆ. ಅದ್ರಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು. ಅದ್ರಲ್ಲಿ ಹೂಡಿಕೆ ಮಾಡುವ ಜನರು, ಆಧಾರ್ ಜೊತೆ ಮ್ಯೂಚುವಲ್ ಫಂಡ್ ಲಿಂಕ್ ಮಾಡ್ಬೇಕೆಂಬ ಸಂಗತಿ ತಿಳಿದಿರಬೇಕು.
 

How To Link Mutual Fund With Aadhaar Card
Author
Bangalore, First Published May 9, 2022, 5:09 PM IST

ಆಧಾರ್ ಕಾರ್ಡ್ (Aadhaar Card ) ಬಗ್ಗೆ ಮತ್ತೆ ಹೇಳ್ಬೇಕಾಗಿಲ್ಲ. ಆಧಾರ್ ಮಕ್ಕಳಿಂದ ವೃದ್ಧರವೆರೆಗೆ ಎಲ್ಲರಿಗೂ ಅತ್ಯಗತ್ಯ. ಭಾರತ (India)ದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆ. ಸರ್ಕಾರ (Government) ದ ಯೋಜನೆಗಳ ಲಾಭ ಪಡೆಯಲು ಆಧಾರ್ ನಂಬರ್ ನೀಡ್ಬೇಕಾಗುತ್ತದೆ. ಸರ್ಕಾರದ ಕೆಲಸಕ್ಕೆ ಮಾತ್ರವಲ್ಲ ಖಾಸಗಿ ಶಾಲೆಗಳಲ್ಲಿ ಕೂಡ ಆಧಾರ್ ಕಾರ್ಡ್ ಕೇಳುತ್ತಾರೆ. ಇಷ್ಟೇ ಅಲ್ಲ ಅನೇಕ  ಖಾಸಗಿ ಕಂಪನಿಗಳು ತಮ್ಮ ಸೇವೆ ನೀಡಲು ಗ್ರಾಹಕರಿಂದ ದಾಖಲೆ ರೂಪದಲ್ಲಿ ಆಧಾರ್ ಕೇಳಲಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿಯೊಬ್ಬರೂ ಆಧಾರ್ ಪಡೆಯುವುದು ಅನಿವಾರ್ಯ. ಹಾಗೆ ಆಧಾರ್ ಕಾರ್ಡ್ ಅನ್ನು ಇತರ ಹಲವು ದಾಖಲೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯ. ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡ್ಬೇಕು. ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಮಾಡ್ಬೇಕಾಗುತ್ತದೆ. ಹಾಗೆಯೇ ಮೊಬೈಲ್ ಜೊತೆ ಆಧಾರ್ ಲಿಂಕ್ ಆಗಿರಬೇಕು. ಇವೆಲ್ಲದರ ಜೊತೆ ಉಳಿತಾಯದ ಉತ್ತಮ ಆಯ್ಕೆಗಳಲ್ಲಿ ಒಂದಾಗಿರುವ ಮ್ಯೂಚುವಲ್ ಫಂಡ್‌ (Mutual Fund ) ಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಸಹ ಪ್ರಯೋಜನಕಾರಿಯಾಗಿದೆ. ಇಂದು ನಾವು ಮ್ಯೂಚುವಲ್ ಫಂಡ್ ಜೊತೆ ಆಧಾರ್ ಲಿಂಕ್ ಹೇಗೆ ಮಾಡುವುದು ಎಂಬುದನ್ನು ಹೇಳ್ತೇವೆ. ಹಾಗೆ ಅದ್ರಿಂದ ಪ್ರಯೋಜನವೇನು ಎಂಬುದನ್ನು ಹೇಳ್ತೇವೆ. 

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರು ನೀವಾಗಿದ್ದರೆ ಆಧಾರ್ – ಪಾನ್ ಗೆ ಸಂಬಂಧಿಸಿದ ವಿಷ್ಯವನ್ನು ನೀವು ತಿಳಿದಿರಬೇಕು. ನಿಮ್ಮ ಮ್ಯೂಚುವಲ್ ಫಂಡನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೊತೆ ನೀವು ಲಿಂಕ್ ಮಾಡ್ಬೇಕಾಗುತ್ತದೆ. ಇದು ಕಡ್ಡಾಯವಾಗಿದೆ. ಒಂದ್ವೇಲೆ ನೀವು ಮ್ಯೂಚುವಲ್ ಫಂಡ್ ಜೊತೆ ಆಧಾರ್ ಲಿಂಕ್ ಮಾಡದೆ ಹೋದ್ರೆ ಮುಂದೆ ತೊಂದರೆಗೊಳಗಾಗಬೇಕಾಗುತ್ತದೆ.  ಆಧಾರ್ ಜೊತೆ ಮ್ಯೂಚುವಲ್ ಪಂಡ್ ಲಿಂಕ್ ಆಗದೆ ಹೋದ್ರೆ ಹೂಡಿಕೆ ಮಾಡಿದ ಹಣವನ್ನು ನಂತರ ಹಿಂಪಡೆಯುವುದು ಕಷ್ಟವಾಗುತ್ತದೆ. 
ಆದಾಯ ತೆರಿಗೆಯ ನಿಯಮಗಳ ಪ್ರಕಾರ, ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವ ಮೊದಲು ನೀವು ಆಧಾರ್ ಮತ್ತು ಪಾನ್ ಅನ್ನು ಲಿಂಕ್ ಮಾಡುವುದು ಬಹಳ ಮುಖ್ಯ. ಆಧಾರ್ – ಪಾನ್ ಹಾಗೂ ಮ್ಯೂಚುವಲ್ ಪಂಡ್ ಈ ಮೂರನ್ನೂ ಲಿಂಕ್ ಮಾಡ್ಬೇಕಾಗುತ್ತದೆ. ಆಧಾರ್ ಜೊತೆ ಮ್ಯೂಚುವಲ್ ಫಂಡ್ ಲಿಂಕ್ ಮಾಡುವುದು ಸರಳ. 

ಇದನ್ನೂ ಓದಿ: PERSONAL FINANCE:ಇಂದಿನ ಅಮ್ಮಂದಿರು ಈ 5 ಆರ್ಥಿಕ ಸಲಹೆಗಳನ್ನು ಪಾಲಿಸಿದ್ರೆ ಸಾಕು, ಬದುಕು ಬಂಗಾರ!

ಆಧಾರ್ ಸಂಖ್ಯೆಯೊಂದಿಗೆ ಆನ್‌ಲೈನ್ ಮ್ಯೂಚುವಲ್ ಫಂಡ್ ಲಿಂಕ್ ಮಾಡುವ ಪ್ರಕ್ರಿಯೆ : 
ಮೊದಲು ಮ್ಯೂಚುಯಲ್ ಫಂಡ್‌ಗಳ ರಿಜಿಸ್ಟ್ರಾರ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. https://eiscweb.camsonline.com/plkyc ಈ ಸೈಟ್‌ಗೆ ಭೇಟಿ ನೀಡಬೇಕು. ಒಟಿಪಿ  ಜನರೇಟ್ ವಿಧಾನವನ್ನು ಆಯ್ಕೆ ಮಾಡಬೇಕು. ನಂತರ ಸೈನ್ ಇನ್ ಬಟನ್ ಕ್ಲಿಕ್ ಮಾಡಬೇಕು.  ಆಧಾರ್ ಸೀಡಿಂಗ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅರ್ಜಿ ಭರ್ತಿ ಮಾಡುವಾಗ ಪಾನ್ ಕಾರ್ಡ್ ಸಂಖ್ಯೆ ಕೇಳಲಾಗುತ್ತದೆ. ಅದನ್ನು ನಮೂದಿಸಬೇಕು. ಸಂಪೂರ್ಣ ಆಧಾರ್ ದೃಢೀಕರಣವು ಮೊಬೈಲ್ ಒಟಿಪಿ  ಮೂಲಕ ಬರುತ್ತದೆ. ಆಗ ನಿಮ್ಮ ಆಧಾರ್, ಮ್ಯೂಚುವಲ್ ಫಂಡ್ ಜೊತೆ ಲಿಂಕ್ ಆಗಿದೆ ಎಂದರ್ಥ. ಈ ಬಗ್ಗೆ ನಿಮ್ಮ ಮೊಬೈಲ್ ಗೆ ಅಭಿನಂದನೆ ಎಸ್ ಎಂಎಸ್ ಬರುತ್ತದೆ.

ಇದನ್ನೂ ಓದಿ: Business Idea : ಈ ಬ್ಯುಸಿನೆಸ್‌ ಮಾಡಿದ್ರೇ ಲಾಭ ಖಚಿತ, ಹೂಡಿಕೆ ಕೂಡ ಸ್ವಲ್ಪವೇ ಸಾಕು

ಎಸ್ ಎಂಎಸ್ ಮೂಲಕ ಲಿಂಕ್ : ಆನ್ಲೈನ್ ನಲ್ಲಿ ಲಿಂಕ್ ಮಾಡಲು ಆಗ್ತಿಲ್ಲ ಎನ್ನುವವರು ಸುಲಭವಾಗಿ ಎಸ್ ಎಂಎಸ್ ಮೂಲಕ, ಆಧಾರ್ ಜೊತೆ ಮ್ಯೂಚುವಲ್ ಫಂಡ್ ಲಿಂಕ್ ಮಾಡ್ಬಹುದು. ಇದಕ್ಕಾಗಿ ನೀವು 9212993399 ಸಂಖ್ಯೆಗೆ ಎಸ್ ಎಂಎಸ್ ಕಳುಹಿಸಬೇಕು. ಎಸ್ ಎಂಎಸ್  ಕಳುಹಿಸಿದ ನಂತರ  ನಿಮ್ಮ ಸಂಖ್ಯೆಗೆ ದೃಢೀಕರಣ ಸಂದೇಶವೂ ಬರುತ್ತದೆ. 

Follow Us:
Download App:
  • android
  • ios