Asianet Suvarna News Asianet Suvarna News

Instagram Followers ಜಾಸ್ತಿಯಾಗಬೇಕು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ

ಇನ್ಸ್ಟಾಗ್ರಾಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಅದ್ರಲ್ಲಿ ಗಳಿಕೆ ಕೂಡ ಆಗ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಜಾಸ್ತಿ ಮಾಡಿ, ಹೆಚ್ಚು ಹಣ ಗಳಿಸಬೇಕೆಂದ್ರೆ ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕಾಗುತ್ತದೆ.
 

How To Increase Instagram Followers
Author
First Published Nov 11, 2022, 3:51 PM IST

ಸಾಮಾಜಿಕ ಜಾಲತಾಣಗಳು ಗಳಿಕೆಗೆ ಅವಕಾಶ ನೀಡ್ತಿವೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಒಂದು ಫೋಟೋಕ್ಕೆ ಒಂದು ಪೋಸ್ಟ್ ಗೆ ಸಾವಿರಾರು ರೂಪಾಯಿ ಗಳಿಸುವವರಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅನೇಕರು ಸಣ್ಣ ಫೋಟೋ, ವಿಡಿಯೋ ಹಾಕಿದ್ರೂ ಸಾವಿರ ಸಾವಿರ ಲೈಕ್ಸ್, ಕಮೆಂಟ್ ಬರುತ್ತದೆ. ಅದೇ ಕೆಲವರು ಚೆಂದದ ವಿಡಿಯೋ ಹಾಕಿದ್ರೂ ಲೈಕ್ಸ್ ಬರೋದು ಕಷ್ಟ. ಫಾಲೋವರ್ಸ್ ಆಗೋದಿಲ್ಲ. ಇದು ಕೆಲವರಲ್ಲಿ ನಿರಾಸೆ ಮೂಡಿಸುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಫಾಲೋವರ್ಸ್ ಆಗೋದಿಲ್ಲ, ಇನ್ಸ್ಟಾಗ್ರಾಮ್ ನಲ್ಲಿ ಹಣಗಳಿಸಲು ಸಾಧ್ಯವಾಗ್ತಿಲ್ಲ ಎನ್ನುವವರಿಗೆ ಒಂದಿಷ್ಟು ಟಿಪ್ಸ್ ಇಲ್ಲಿದೆ. 

ಇನ್ಸ್ಟಾಗ್ರಾಮ್ (Instagram) ನಲ್ಲಿ ಹಣ ಗಳಿಸಲು ಈ ಟಿಪ್ಸ್ ಫಾಲೋ ಮಾಡಿ :

ವೃತ್ತಿಪರ (Professional) ಖಾತೆ ತೆರೆಯಿರಿ : ಇನ್ಸ್ಟಾಗ್ರಾಮ್ ನ ವೈಯಕ್ತಿಕ ಖಾತೆಯಲ್ಲಿ ನೀವು ಫಾಲೋವರ್ಸ್ (Followers) ಹೊಂದೋದು ಕಷ್ಟ. ಖಾತೆಯಲ್ಲಿ ಹೆಚ್ಚಿನ ಅನುಯಾಯಿಗಳನ್ನು ಬಯಸಿದರೆ ಇದಕ್ಕಾಗಿ ನೀವು ಇನ್ಸ್ಟಾಗ್ರಾಮ್ ಖಾತೆಯನ್ನು ವೃತ್ತಿಪರ ಖಾತೆಗೆ ಬದಲಾಯಿಸಬೇಕು. ವೃತ್ತಿಪರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಮಗೆ ಹೆಚ್ಚುವರಿ ವೈಶಿಷ್ಟ್ಯ ಸಿಗುತ್ತದೆ. ಇನ್‌ಸ್ಟಾಗ್ರಾಮ್ ಖಾತೆಯನ್ನು ವೃತ್ತಿಪರ ಖಾತೆಗೆ ಬದಲಾಯಿಸುವುದರಿಂದ ಫಾಲೋವರ್ಸ್ ತ್ವರಿತವಾಗಿ ಹೆಚ್ಚಾಗುತ್ತಾರೆ. ವೃತ್ತಿಪರ ಖಾತೆಯಾಗಿ ಬದಲಿಸಿದ ನಂತ್ರ ನೀವು ಇನ್ಸ್ಟಾಗ್ರಾಮ್ ನಲ್ಲಿ ಸಾಧ್ಯವಾದಷ್ಟು ಪೋಸ್ಟ್ (Posts) ಹಾಕಬೇಕು. ಹೆಚ್ಚೆಚ್ಚು ಪೋಸ್ಟ್ ಹಾಕ್ತಾ ಹೋದಂತೆ ಹೆಚ್ಚೆಚ್ಚು ಜನರು ನಿಮ್ಮ ಖಾತೆಯನ್ನು ಫಾಲೋ ಮಾಡಲು ಶುರು ಮಾಡ್ತಾರೆ.

Work from Home Ideas: ಕೌಶಲ್ಯ ಬಳಸಿ ಮನೆಯಲ್ಲೇ ಗಳಿಸಿ

ವಿಷ್ಯಗಳ ಆಯ್ಕೆ ಬಗ್ಗೆ ಗಮನವಿರಲಿ : ಇನ್ಸ್ಟಾಗ್ರಾಮ್ ನಲ್ಲಿ ನೀವು ಯಾವ ವಿಷ್ಯ ಹಾಕ್ತಿರಿ ಎನ್ನುವುದು ಮುಖ್ಯವಾಗುತ್ತದೆ. ಅನೇಕ ಬಾರಿ ನೀವು ಹಾಕುವ ವಿಷ್ಯಕ್ಕೆ ಹೆಚ್ಚು ಮಹತ್ವವಿರುವುದಿಲ್ಲ. ಹಾಗಾಗಿ ಜನರು ಅದಕ್ಕೆ ಮಾನ್ಯತೆ ನೀಡಲು ಹೋಗೋದಿಲ್ಲ. ನೀವು  ಪೋಸ್ಟ್ ಪ್ರಕಟಿಸುವ ಮೊದಲು ಟ್ರೆಂಡಿಂಗ್ ವಿಷಯವನ್ನು ಆಯ್ಕೆ ಮಾಡಬೇಕು. ಹೀಗೆ ಮಾಡಿದ್ರೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ. ಜನರು ಯಾವ ರೀತಿಯ ವಿಷಯವನ್ನು ಇಷ್ಟಪಡುತ್ತಾರೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಪ್ರಸಿದ್ಧಿ ಪಡೆದ ಹಾಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಜನರು ಏನು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ನೀವು ಸ್ಟಡಿ ಮಾಡ್ಬೇಕು. ನೀವು ಟ್ರೆಂಡಿಂಗ್ (Trending)  ಹಾಡುಗಳನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡ್ತಾ ಹೋದಂತೆ ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಾಗೋದ್ರಲ್ಲಿ ಎರಡು ಮಾತಿಲ್ಲ. 

ಕೊಲಾಬರೇಷನ್ (Collaboration) ಪೋಸ್ಟ್ ಹಾಕಿ : ಕೊಲಾಬರೇಷನ್ ಪೋಸ್ಟ್ ಎಂದರೆ ಬೇರೆಯವರ ಫೋಸ್ಟ್  ಗೆ ನಿಮ್ಮ ಪೋಸ್ಟ್ ಲಿಂಕ್ ಮಾಡೋದು. ನೀವು ಇನ್ಸ್ಟಾಗ್ರಾಮ್ ಪ್ರಭಾವಿಗಳೊಂದಿಗೆ ವಿವಿಧ ವಿಷಯಗಳಲ್ಲಿ ಕೊಲಾಬರೇಷನ್ (Collaboration) ಪೋಸ್ಟ್ ಹಾಕ್ಬೇಕು. ಪ್ರಭಾವಿಗಳ ಪ್ರಸಿದ್ಧ ಪೋಸ್ಟ್ ಕೊಲಾಬರೇಷನ್ ಮಾಡೋದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ. ಇದಲ್ಲದೆ ನೀವು ಇನ್ಸ್ಟಾಗ್ರಾಮ್   ಬೂಸ್ಟ್ ಅನ್ನು ಪೋಸ್ಟ್ ಮಾಡುವ ಮೂಲಕ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು.

ಕಡಿಮೆ ಬಂಡವಾಳ, ಹೆಚ್ಚಿನ ಆದಾಯ ಬೇಕೆಂದರೆ ಈ ಬ್ಯುಸಿನೆಸ್ ಮಾಡಬಹುದು ನೋಡಿ!

ಸಾಮಾಜಿಕ ಜಾಲತಾಣ (Social media) ಬಳಕೆ ಮಾಡಿ : ಇನ್ಸ್ಟಾಗ್ರಾಮ್ ಹೊರತುಪಡಿಸಿ ನೀವು ಬೇರೆಲ್ಲ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಬಹುದು. ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಇನ್ಸ್ಟಾ ಲಿಂಕ್ ಪೋಸ್ಟ್ ಮಾಡಿ ನೀವು ಪ್ರಮೋಷನ್ ಮಾಡ್ಬೇಕು. ನಿಮ್ಮ ಪ್ರೊಫೈಲ್ ಅನ್ನು ನೀವು ಸಾಧ್ಯವಾದಷ್ಟು ಪ್ರಚಾರ ಮಾಡಬೇಕು. ಇದ್ರಿಂದ ಇನ್ನಷ್ಟು ಜನರು ನಿಮ್ಮ ಇನ್ಟ್ರಾಗ್ರಾಮ್ ಫಾಲೋ ಮಾಡುವ ಸಾಧ್ಯತೆಯಿರುತ್ತದೆ. ಫೇಸ್ಬುಕ್ (Facebook), ಟ್ವಿಟರ್, ವಾಟ್ಸ್ ಅಪ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ನೀವು ನಿಮ್ಮ ಫೋಸ್ಟ್ ಲಿಂಕ್ ಹಾಕಿ. 

Follow Us:
Download App:
  • android
  • ios