Asianet Suvarna News Asianet Suvarna News

ಕಡಿಮೆ ಬಂಡವಾಳ, ಹೆಚ್ಚಿನ ಆದಾಯ ಬೇಕೆಂದರೆ ಈ ಬ್ಯುಸಿನೆಸ್ ಮಾಡಬಹುದು ನೋಡಿ!

ವ್ಯಾಪಾರ ಕ್ಷೇತ್ರಕ್ಕೆ ಧುಮುಕಿದ ಮೇಲೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜನರನ್ನು ತಲುಪೋದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಗ್ರಾಹಕರ ಸಂಖ್ಯೆ ಹೆಚ್ಚಾಗ್ಬೇಕು, ವ್ಯಾಪಾರ ಲಾಭ ಕಾಣ್ಬೇಕು ಅಂದ್ರೆ ಕೆಲ ಮಾರ್ಗವನ್ನು ಅನುಸರಿಸಬೇಕು. 
 

How To Support A Small Business
Author
First Published Nov 9, 2022, 3:16 PM IST

ಕೊರೊನಾ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಕೊರೊನಾ ಕಾರಣಕ್ಕೆ ಅನೇಕರು ನೌಕರಿ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೆಲಸ ಬಿಟ್ಟು ಹವ್ಯಾಸವನ್ನು ವೃತ್ತಿ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವಂತ ವ್ಯಾಪಾರಕ್ಕೆ ಜನರು ಒಲವು ತೋರಿಸುತ್ತಿದ್ದಾರೆ. ಜನರ ಆಲೋಚನೆ ಜೊತೆಗೆ ಸಂಪಾದಿಸುವ ವಿಧಾನ ಕೂಡ ಬದಲಾಗಿದೆ. ಈ ಹಿಂದೆ ದೊಡ್ಡ ವ್ಯಾಪಾರಕ್ಕೆ ಮಾತ್ರ ಹೆಚ್ಚು ಮಾನ್ಯತೆ ನೀಡಲಾಗ್ತಿತ್ತು. ಆದ್ರೀಗ ಸಣ್ಣ ವ್ಯಾಪಾರವನ್ನು ಕೂಡ ದೊಡ್ಡ ವ್ಯಾಪಾರದ ಮಟ್ಟದಲ್ಲಿಯೇ ನೋಡಲಾಗ್ತಿದೆ. ಅದ್ರಲ್ಲಿ ಹೆಚ್ಚೆಚ್ಚು ಪ್ರಗತಿ ಸಾಧಿಸಲು ಜನರು ಪ್ರಯತ್ನ ನಡೆಸ್ತಿದ್ದಾರೆ.

ಸಣ್ಣ ವ್ಯಾಪಾರ (Small Business)ದಲ್ಲಿ ನೀವು ತೊಡಗಿದ್ದು, ಅದನ್ನು ಯಶಸ್ವಿಗೊಳಿಸುವ ಪ್ರಯತ್ನದಲ್ಲಿದ್ದರೆ ನೀವು ಕೆಲ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಕೊರೊನಾ (Corona), ಡಿಜಿಟಲ್ ಫ್ಲಾಟ್ಫಾರ್ಮ್ ದೊಡ್ಡದಾಗಿ ತೆರೆಯಲು ಸಹಾಯ ಮಾಡಿದೆ. ಹಾಗೆಯೇ ನಮ್ಮ ಉದ್ಯಮದಲ್ಲಿ ಪ್ರಗತಿಕಾಣಲು ನಾವು ಸಾಮಾಜಿಕ ಜಾಲತಾಣಗಳ ಸಹಾಯ ಪಡೆಯಬಹುದು. ನಾವಿಂದು ಸಣ್ಣ ಉದ್ಯಮದಲ್ಲೂ ಯಶಸ್ಸು ಸಿಗಬೇಕೆಂದ್ರೆ ನೀವು ಏನೆಲ್ಲ ಮಾಡ್ಬೇಕು ಎಂಬುದನ್ನು ಹೇಳ್ತೇವೆ.

ಪ್ರಾಮಾಣಿಕ ವಿಮರ್ಶೆ (Review) : ಮೊದಲನೇಯದಾಗಿ ನೀವು ಯಾವುದೇ ಉದ್ಯಮ ಶುರು ಮಾಡಿರಿ, ಅದಕ್ಕೊಂದು ವೆಬ್ಸೈಟ್ ತೆರೆಯಿರಿ. ಈ ವೆಬ್ಸೈಟ್ (Website) ನಲ್ಲಿ ನೀವು ಮಾಡ್ತಿರುವ ಉದ್ಯೋಗದ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಿ. ಇದ್ರ ಜೊತೆಗೆ ಬಳಕೆದಾರರಿಗೆ ಏನು ಲಾಭವಾಗಿದೆ ಎಂಬುದನ್ನು ತಿಳಿಸಲು ವಿಮರ್ಶೆ ಕಾಲಂ ಓಪನ್ ಮಾಡಿ. ಈ ವಿಮರ್ಶೆ ಕಾಲಂನಲ್ಲಿ ಗ್ರಾಹಕ (Customer) ರು ಪ್ರಾಮಾಣಿಕವಾಗಿ ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಿ. ನಿಮ್ಮ ಉತ್ಪನ್ನ (Product) ಅತ್ಯುತ್ತಮವಾಗಿದ್ದರೆ ಗ್ರಾಹಕರು ಫುಲ್ ಮಾರ್ಕ್ಸ್ ನೀಡ್ತಾರೆ. ಸಾಮಾನ್ಯವಾಗಿ ಜನರು ಯಾವುದೇ ವಸ್ತುವನ್ನು ಖರೀದಿಸುವ ಮೊದಲು ಅಥವಾ ಸೇವೆ ಪಡೆಯುವ ಮೊದಲು ರಿವ್ಯೂ ನೋಡ್ತಾರೆ. ಹಾಗಾಗಿ ನಿಮ್ಮ ವೆಬ್ಸೈಟ್ ನಲ್ಲಿ ರಿವ್ಯೂ ಮಹತ್ವದ ಪಾತ್ರವಹಿಸುತ್ತದೆ. ವಿಮರ್ಶೆ ಚೆನ್ನಾಗಿದ್ದರೆ ಗ್ರಾಹಕರು ತಾನಾಗಿಯೇ ನಿಮ್ಮ ಬಳಿ ಬರ್ತಾರೆ.

ಸಾಮಾಜಿಕ ಜಾಲತಾಣದ (Social Media) ಸದುಪಯೋಗ : ಸಾಮಾಜಿಕ ಜಾಲತಾಣಗಳು ವೈಯಕ್ತಿಕ ಫೋಟೋ, ವಿಡಿಯೋ ವೀಕ್ಷಣೆಗೆ ಸೀಮಿತವಾಗಿಲ್ಲ. ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳು ನಿಮ್ಮ ಉತ್ಪನ್ನಗಳ ವ್ಯಾಪಾರಕ್ಕೆ ಅವಕಾಶ ನೀಡಿವೆ. ಹಾಗಾಗಿ ನೀವು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ಸ್ಟಾ, ಫೇಸ್ಬುಕ್, ವಾಟ್ಸ್ ಅಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಬ್ಯುಸಿನೆಸ್ ಖಾತೆ ತೆರೆದು, ಜನರಿಗೆ ನಿಮ್ಮ ಉತ್ಪನ್ನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು. ಇದ್ರಿಂದ ಉಚಿತ ಪ್ರಚಾರವನ್ನು ನೀವು ಪಡೆಯಬಹುದು. ಲಕ್ಷಾಂತರ ಮಂದಿಯನ್ನು ನೀವು ಸಾಮಾಜಿಕ ಜಾಲತಾಣದ ಮೂಲಕ ತಲುಪಬಹುದು.  

ಎಸ್ ಬಿಐ ಎಟಿಎಂ ಫ್ರಾಂಚೈಸಿ: ಒಮ್ಮೆ 5ಲಕ್ಷ ರೂ. ಹೂಡಿಕೆ ಮಾಡಿದ್ರೆ ಸಾಕು, ತಿಂಗಳಿಗೆ 70 ಸಾವಿರ ರೂ. ಆದಾಯ!

ಆನ್ಲೈನ್ ಕಂಪನಿಗಳ (Online Company) ನೆರವು : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮಾರಾಟಕ್ಕೆ ಹೆಚ್ಚು ಬೇಡಿಕೆಯಿದೆ. ನೀವು ತಯಾರಿಸಿದ ಉತ್ಪನ್ನಗಳನ್ನು ನೀವು ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು. ಅನೇಕ ಕಂಪನಿಗಳು ವಸ್ತುಗಳನ್ನು ಮಾರಾಟ ಮಾಡಲು ನಿಮಗೆ ವೇದಿಕೆ ನೀಡ್ತಿವೆ. ನೀವು ಅಮೆಜಾನ್, ಪ್ಲಿಫ್ಕಾರ್ಟ್ ಸೇರಿದಂತೆ ದೊಡ್ಡ ಕಂಪನಿಗಳ ಮೂಲಕ ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು. 

Government Schemes: ಹಿರಿಯ ನಾಗರಿಕರಿಗೆ ಈ ಯೋಜನೆ ಅಡಿ ಸರ್ಕಾರ ನೀಡುತ್ತೆ ಪಿಂಚಣಿ

ಸ್ನೇಹಿತರು, ಸಂಬಂಧಿಕರ (Relative) ಸಹಕಾರ : ಕಂಪನಿಯ ವ್ಯಾಪ್ತಿಯನ್ನು ಹೆಚ್ಚಿಸಲು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬೇಕು. ನಿಮ್ಮ ಕಂಪನಿಯಿಂದ ಖರೀದಿಸಿದ ವಸ್ತುಗಳ ಬಗ್ಗೆ ಸಾಮಾಜಿಕ ಜಾಲತಾಣ (Social Media) ಹಾಗೂ ಇತರ ಮಾಧ್ಯಮಗಳ ಮೂಲಕ ಅಭಿಪ್ರಾಯ ಹಂಚಿಕೊಳ್ಳುವಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಮನವಿ ಮಾಡಿ. ಅವರು ನಿಮ್ಮ ಉತ್ಪನ್ನಗಳನ್ನು ಇಷ್ಟಪಟ್ಟರೆ ಅವರು ಇತರರಿಗೆ ಶಿಫಾರಸ್ಸು ಮಾಡ್ತಾರೆ. ಅನೇಕ ಬಾರಿ ಬಾಯಿಂದ ಬಾಯಿಗೆ ವರ್ಗಾವಣೆಯಾಗಿಯೇ ನಿಮ್ಮ ಉತ್ಪನ್ನ ಪ್ರಸಿದ್ಧಿ ಪಡೆದಿರುತ್ತದೆ.  

Follow Us:
Download App:
  • android
  • ios