Online Business : ಒಂದು ದಿನದಲ್ಲಿ ಒಂದು ಲಕ್ಷ ರೂಪಾಯಿ ಗಳಿಸೋದು ಹೇಗೆ?
ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿ ಒಂದು ಲಕ್ಷದವರೆಗೆ ಹಣ ಗಳಿಸುವವರಿದ್ದಾರೆ. ಆದ್ರೆ ಇದು ಎಲ್ಲರಿಂದಲೂ ಸಾಧ್ಯವಿಲ್ಲ. ನೀವು ಹೆಚ್ಚಿನ ಬಂಡವಾಳವಿಲ್ಲದೆ, ಮನೆಯಲ್ಲೇ ಕುಳಿತು ಕೋಟ್ಯಾಂತರ ರೂಪಾಯಿ ಗಳಿಸಬಹುದು. ಅದ್ರ ವಿವರ ಇಲ್ಲಿದೆ.
ಒಂದು ದಿನದಲ್ಲಿ ಒಂದು ಲಕ್ಷ ರೂಪಾಯಿ ಗಳಿಕೆ ಮಾಡ್ಬಹುದು ಎಂಬ ಮಾತನ್ನು ಕೇಳಿದ್ರೆ ನೀವು ನಗ್ಬಹುದು. ಹಾಗಾಗಿದ್ರೆ ನಮ್ಮ ದೇಶದಲ್ಲಿ ಬಡವರೇ ಇರ್ತಾ ಇರಲಿಲ್ಲ. ಎಲ್ಲರೂ ಆರಾಮವಾಗಿ ಒಂದು ಲಕ್ಷ ಗಳಿಕೆ ಮಾಡ್ತಿದ್ದರು ಎನ್ನಬಹುದು. ಈಗಿನ ಕಾಲದಲ್ಲಿ ಹಣ ಬಹಳ ಮುಖ್ಯ. ದಿನದಲ್ಲಿ ಸಾವಿರ, ಐದು ನೂರು ರೂಪಾಯಿ ಗಳಿಸಲು ಸಾಕಷ್ಟು ಕಷ್ಟಪಡಬೇಕು. ಹಾಗಿರುವಾಗ ಒಂದೇ ದಿನದಲ್ಲಿ ಒಂದು ಲಕ್ಷ ಗಳಿಕೆ ವಿಧಾನ ಹೇಳ್ತೇವೆ ಅಂದ್ರೆ ನೀವು ನಂಬೋದಿಲ್ಲ ಎಂಬುದು ನಮಗೆ ಗೊತ್ತು. ಹಾಗಂತ ಈ ಆರ್ಟಿಕಲ್ ಮಿಸ್ ಮಾಡಿಕೊಳ್ಳಬೇಡಿ. ಒಂದೇ ಒಂದು ದಿನದಲ್ಲಿ ಲಕ್ಷ ರೂಪಾಯಿ ಗಳಿಸಲುವ ವಿಧಾನವೊಂದಿದೆ. ಅದು ಯಾವುದು ಅಂತಾ ನಾವಿಂದು ನಿಮಗೆ ಹೇಳ್ತೇವೆ.
ಆನ್ಲೈನ್ (Online) ಇಬುಕ್ ಮಾರಾಟ : ಅಚ್ಚರಿಯಾದ್ರೂ ಇದು ಸತ್ಯ. ಭಾರತದಲ್ಲಿಯೂ ಜನರು ಇ ಬುಕ್ (E book) ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇಂದೇ ಇ ಬುಕ್ ಸೇಲ್ ಮಾಡಿ ಹಣ ಗಳಿಸ್ತೇನೆ ಅಂದ್ರೆ ಸಾಧ್ಯವಿಲ್ಲ. ಇದಕ್ಕೆ ಸ್ವಲ್ಪ ಕಷ್ಟಪಡೋದು ಅನಿವಾರ್ಯ.
ಇನ್ಪೋಸಿಸ್ ಆರಂಭಿಸಲು ಪತಿಗೆ 10,000 ರೂ. ಸಾಲ ಕೊಟ್ಟಿದ್ದರಂತೆ ಸುಧಾ ಮೂರ್ತಿ!
ನೀವು ಇಷ್ಟೊಂದು ಹಣ ಗಳಿಕೆ ಮಾಡ್ಬೇಕು ಅಂದಾದ್ರೆ ಒಂದೊಳ್ಳೆ ಟಾಪಿಕ್ ಮೇಲೆ ಇ ಬುಕ್ ಸಿದ್ಧಪಡಿಸಬೇಕು. ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯವಾಗುವ ಪುಸ್ತಕವನ್ನು ನೀವು ಸಿದ್ಧಪಡಿಸಬೇಕಾಗುತ್ತದೆ. ಓದುಗರು ನಿಮಗಿಂತ ಬುದ್ಧಿವಂತಾಗಿರ್ತಾರೆ. ದುಡ್ಡು ಮಾಡುವ ಆಸೆಗೆ ಯಾವುದ್ಯಾವುದೋ ವಿಷ್ಯವನ್ನು ಅಥವಾ ಬೇರೆಯಬರ ವಿಷ್ಯವನ್ನು ಕದ್ದು ಬರೆಯಲು ಹೋಗಬೇಡಿ. ಆರಂಭದಲ್ಲಿ ನಿಮಗೆ ಇಂಥ ಇ ಬುಕ್ ನಿಂದಲೂ ಹಣ ಸಿಗಬಹುದು. ಆದ್ರೆ ದಿನ ಕಳೆದಂತೆ ಓದುಗರು ನಿಮ್ಮ ಮೇಲೆ ಭರವಸೆ ಕಳೆದುಕೊಳ್ಳುತ್ತಾರೆ. ಇದ್ರಿಂದ ನಿಮ್ಮ ಪುಸ್ತಕವನ್ನು ಅವರು ಖರೀದಿ ಮಾಡೋದಿಲ್ಲ. ಇದ್ರಿಂದ ನಿಮಗೆ ಹಣ ಬರೋದು ನಿಲ್ಲುತ್ತದೆ.
ಹಾಗಾಗಿ ಯಾವಾಗ್ಲೂ ನಿಮ್ಮ ಲೇಖನಿ ಮೇಲೆ, ನಿಮ್ಮ ಬುದ್ಧಿವಂತಿಕೆ ಮೇಲೆ ಮಾತ್ರ ಭರವಸೆಯಿಡಿ. ನೀವು ಬೇರೆ ಮೂಲಗಳಿದ ಮಾಹಿತಿ ಸಂಗ್ರಹಿಸಿ ನಂತ್ರ ನಿಮ್ಮದೇ ಶೈಲಿಯಲ್ಲಿ ಅದನ್ನು ಓದುಗರಿಗೆ ನೀಡಲು ಶುರು ಮಾಡಿ.
ಒಂದು ದಿನದಲ್ಲಿ ಲಕ್ಷಾಂತರ ರೂಪಾಯಿ ಗಳಿಸಲು ನೀವು ನಿಮ್ಮ ಮೂರು ತಿಂಗಳನ್ನು ತೆಗೆದಿಡಬೇಕಾಗುತ್ತದೆ. ಮೂರು ತಿಂಗಳ ನಂತ್ರ ನಿಮ್ಮ ಗಳಿಕೆ ಕೋಟಿ ದಾಟಬಹುದು. ಮೊದಲೇ ಹೇಳಿದಂತೆ ಮೊದಲು ಒಳ್ಳೆ ಟಾಪಿಕ್ ಮೇಲೆ ಇ ಬುಕ್ ಸಿದ್ಧಪಡಿಸಿ. ನಂತ್ರ ಅದ್ರ ಬಗ್ಗೆ ಫೇಸ್ಬುಕ್ ಆಡ್, ಗೂಗಲ್ ಆಡ್, ಇನ್ಸ್ಟಾಗ್ರಾಮ್ ನಲ್ಲಿ ಪ್ರಚಾರ ಮಾಡಬೇಕು.
ಶಾರುಖ್ ಜೊತೆ ಒಂದೇ ಸಿನೆಮಾ ಮಾಡಿ ಎಲ್ಲವನ್ನೂ ತೊರೆದು ಫೋರ್ಬ್ಸ್ ಶ್ರೀಮಂತನ ಮದುವೆಯಾದ ಜನಪ್ರಿಯ ಮಾಡೆಲ್
ಇನ್ನೊಂದು ವಿಷ್ಯವೆಂದ್ರೆ, ನೀವು ಹೆಚ್ಚು ಹಣ ಗಳಿಸಬೇಕೆಂದ್ರೆ ಬುಕ್ ಬೆಲೆಯನ್ನು ಕಡಿಮೆ ಇಡಬೇಕು. ಆಗ ಜನರು ಅದನ್ನು ಖರೀದಿ ಮಾಡುತ್ತಾರೆ. ನೀವು ನಿಮ್ಮ ಇ ಬುಕ್ ಬೆಲೆಯನ್ನು 250 ರೂಪಾಯಿಗಿಂತ ಹೆಚ್ಚಿಗೆ ಇಡಬೇಡಿ. ಮೂರು ತಿಂಗಳಲ್ಲಿ 4 ಸಾವಿರ ಬುಕ್ ಮಾರಾಟ ಮಾಡಿದ್ರೂ ನಿಮ್ಮ ಗಳಿಕೆ ಒಂದು ಕೋಟಿಯಾಗಿರುತ್ತದೆ. ಅದೇ 500 ರೂಪಾಯಿ ಇಟ್ಟರೆ ನೀವು 20,000 ಜನರಿಗೆ ಮಾರಾಟ ಮಾಡಿದ್ರೆ ಸಾಕು. ನೀವು ಇ ಬುಕ್ ಗೆ ಏನು ಹೆಸರು ಇಡುತ್ತೀರಿ ಎಂಬುದು ಇಲ್ಲಿ ಬಹಳ ಮಹತ್ವ ಪಡೆಯುತ್ತದೆ. ಮೂರೇ ತಿಂಗಳಲ್ಲಿ ನೀವು ಇದನ್ನು ಸಾಧಿಸಿದ್ರೆ ನಿಮ್ಮ ದಿನದ ಗಳಿಕೆ ಒಂದು ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಭಾರತದಲ್ಲಿ 135 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ ಬಹುತೇಕರು ಆನ್ಲೈನ್ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಓದುಗರನ್ನು ಗಮನದಲ್ಲಿಟ್ಟುಕೊಂಡು ನೀವು ಇ ಬುಕ್ ತಯಾರಿಸಿ.